ಕಾವ್ಯ ಸಂಗಾತಿ
ಡಾ.ಗೀತಾ ದಾನಶೆಟ್ಟಿ
ಉಯ್ಯಾಲೆ


ಒಲವಿನ ಉಯ್ಯಾಲೆಯಲಿ
ಪ್ರೀತಿಯ ಮಳೆಯಾಗಿ
ಭಾವಕುಸುಮ ಅರಳಿದೆ
ತೂಗು ಉಯ್ಯಾಲೆಯಲಿ
ಮೈಮನ ಮಿಂದೇಳುತ
ಕನಸುಗಳು ಕನವರಿಸಿವೆ
ತಣ್ಣನೆಯ ಗಾಳಿಯಲಿ
ಜೀವ ಭಾವಗಳು ಬೆಸೆದು
ಹೃದಯ ರಾಗ ಹಾಡಿದೆ
ಏಕಾಂತದ ಉಯ್ಯಾಲೆಯಲಿ
ನಯನಗಳು ಲಾಸ್ಯವಾಡಿ
ಸಂತಸದ ಹೊನಲು ಹರಿದಿದೆ
ಬದುಕಿನ ಉಯ್ಯಾಲೆಯಲಿ
ಏರಿಳಿತಗಳ ತಿರುವಿನಲಿ
ಅರುಣರಾಗ ಮೂಡಿದೆ
ಡಾ.ಗೀತಾ ದಾನಶೆಟ್ಟಿ



