ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಪ್ರೊ.ಸರಸ್ವತಿ ಕಳಸದ ಅವರ ಕವಿತೆ “ಮರಳಿನ ಮನ”

ಕಾವ್ಯ ಸಂಗಾತಿ ಪ್ರೊ.ಸರಸ್ವತಿ ಕಳಸದ “ಮರಳಿನ ಮನ” ಮನೆಯ ಅಡಿಯೇ ಮಗುಚಿರಲುಮಣ್ಣು ದೂಳು ಮಂಜು ಮಸುಕುಕಂಗಳಲ್ಲಿ ಕಮರಿದ ಬಾಲ್ಯಪುಟ್ಟ ನೆತ್ತಿ ಹೊತ್ತ ಗಾರೆಬಾರದ ಕನಸ ಹೂಗುಚ್ಚಕೇಳಿದೆ ಪ್ರಶ್ನೆ ನನಗೇಕೆಎಂಬತ್ತರ ಸಾರ? //ಎಡ ಬಲ ಭವ್ಯ ಬಂಗಲೇ – ಶಾಲೆನಡುವೆ ನಡಮುರಿದ ನಾನುಕಾಲು ನೆಕ್ಕಿ ನನ್ನೊಂದಿಗೆ ನಿಂತನಾಯಿಮರಿಯ ತಬ್ಬಿನಾ ನೀ ಒಂದೇ ಎಂದುರಸ್ತೆಬದಿ ನಿದ್ರೆಗೆ ಜಾರುವೆನುಕಾಲುರಸ್ತೆಯಲ್ಲೊಂದು ಪ್ರಶ್ನೆ ಇಟ್ಟುಕೊಡಬಲ್ಲಿರಾ ನನ್ನ ಸೂರ್ಯೋದಯ? ಬಿರುಕೊಡೆದ ನೆಲದ ಮೇಲೆಕಾಯ್ದ ತಲೆ ಕಾವಲಿಯಾಗಿಹಸಿವು-ಅನ್ನ-ಅರಿವೆ ಹೋರಾಟದಲ್ಲಿಅಕ್ಸರ-ಅರಿವು ಮರುಭೂಮಿಯಾಗಿದೆಕೇಳುವೆನು ಓದುಗರೇಬರುವಿರಾ ತಾವು ಓಯಾಸಿಸ್‌ ಆಗಿ?ಅಪ್ಪನ ಹೆಗಲು ಜಗದ ಮುಗಿಲುಆದರಿಲ್ಲಿ ಸೇಂದಿಯಲ್ಲಿ ಸಂದಿಹಿಡಿದಅಪ್ಪನಿಗೆ ನಾ ಜಾಗದ ಹೆaಗಲುನೀಳ ನೀರವ ಕೃ಼ಷ್ಣಾಂಧಕಾರಅಮ್ಮನ ಗುಮ್ಮಿದ್ದ ಬಾಸುಂಡೆಯ ಚಿತ್ತಾರಸ್ಮಶಾನ ಮೌನದಲಿಮಾಸಿದ ಸೀರೆಯಂಚಲ್ಲಿ ಕಣ್ಣೀರ ಕಡಲುನನ್ನೊಡಲಿಗೆ ಹಚ್ಚಿತ್ತು ಜೀವದಾ ಕಿಚ್ಚುಹೇಳಿ ಹಗುರವಾಗಬೇಕು ನಾನುಕೇಳುವಿರಾ ವ್ಯಥೆಯ ಕಥೆಯಾಕೊಡುವಿರಾ ಹರುಷದ ಜೊತೆಯಾ? ಪ್ರೊ.ಸರಸ್ವತಿ ಕಳಸದ

ಪ್ರೊ.ಸರಸ್ವತಿ ಕಳಸದ ಅವರ ಕವಿತೆ “ಮರಳಿನ ಮನ” Read Post »

ಕಾವ್ಯಯಾನ

ಕೆ. ವಾಣಿಶ್ರೀ ಅಶೋಕ್ ಐತಾಳ್ ಕವಿತೆ “ದೀಪಗಳಾಗೋಣ ಬನ್ನಿ..!”

ಕಾವ್ಯ ಸಂಗಾತಿ ಕೆ. ವಾಣಿಶ್ರೀ ಅಶೋಕ್ ಐತಾಳ್ “ದೀಪಗಳಾಗೋಣ ಬನ್ನಿ..!” ಎದೆಯ ಗುಡಿಯಲೊಂದು ಪ್ರೀತಿಯ ಪ್ರಣತಿ ಹಚ್ಚಿ,ಮಮತೆಯ  ಚೆಂಬೆಳಕಲಿ ಜಗವ ನೋಡೋಣ ಬನ್ನಿ..!ಹೊಂಗನಸಿನ ಆಕಾಶ ಬುಟ್ಟಿಯ ಹೊಸೆದು ಆಗಸಕೆ ಎಸೆದುಹೊಸತನದಿ ದೀಪಾವಳಿಯ ಆಚರಿಸೋಣ ಬನ್ನಿ..! ಜ್ಞಾನದ ಸುರುಬತ್ತಿ, ಹೊತ್ತಲಿ ಮನದಂಗಳದಿ,ಮೌಢ್ಯದ ಅಂದತ್ವ ತೊಲಗಿ ಛವಿಯಾಗಲಿ ಬದುಕು..!ನಲಿವಿನ ಪಟಾಕಿಯ ಚಟಪಟನೆ ಹೊಡೆಸುತ ಬೆಳಕಿನ ಹೂದಾನಿಯಂತೆ , ಸಂತಸವೇ ಮಳೆಯಾಗಬೇಕು. ತಿರುಚಕ್ರದಂತೆ  ಹುರುಪಿರಲಿ, ಮಂಥನವಿರಲಿ ,  ನೆಲಗುಮ್ಮನಂತೆ  ಮಾತಿರಲಿ, ದಿನದಿನದಿ,ಕೇಪು,ಮಾತಾಪಿನ ಚುರುಕು  ಕೃತಿಯಲಿರಲಿ,ಉತ್ಸಾಹದ ಆಟಮ್ ಬಾಂಬ್ ಆಗಿರಿ ಮುದದಿ, ಚಿಂತೆ, ಕಂತೆಗಳೆಲ್ಲ ಉರಿದು ಹೋಗಲಿ ಬಿಡಿಊರ ಹಂಗಿರದೆ ಉರಿವ ಹನುಮನ ಬಾಲದಂತೆ..!ಬದುಕು ಚಿಕ್ಕದು, ಬಣ್ಣದ ಬೆಂಕಿ ಪೊಟ್ಟಣ ನೋಡಿಯಶಸ್ಸು ಮಾತ್ರ ಬಾನಿಗಂಟಲಿ ರಾಕೇಟಿನಂತೆ..! ಅಲ್ಲಲ್ಲಿ ಕೇಳಲಿ  ಸಾಧನೆಯ ಆನೆಪಟಾಕಿಯ ಶಬ್ದಅಶರೀರದಿ ಆರೋಗ್ಯತೈಲ ಖಾಲಿಯಾಗದಿರಲಿ,ಕಲಿಗಳಾಗೋಣ, ಕಲಿಯೋಣ, ಸಾವಿರಾರು ದೀಪಗಳ ಬೆಳಗುತಲಿ,   ನಾವೇ ದೀಪಗಳಾಗೋಣ ಬನ್ನಿ..! ಕೆ. ವಾಣಿಶ್ರೀ ಅಶೋಕ್ ಐತಾಳ್

ಕೆ. ವಾಣಿಶ್ರೀ ಅಶೋಕ್ ಐತಾಳ್ ಕವಿತೆ “ದೀಪಗಳಾಗೋಣ ಬನ್ನಿ..!” Read Post »

ಕಾವ್ಯಯಾನ

ವಸಂತ್. ಕೆ. ಹೆಚ್. ಅವರ ಕವಿತೆ “ಮಾಟಗಾತಿ”

ಕಾವ್ಯ ಸಂಗಾತಿ ವಸಂತ್. ಕೆ. ಹೆಚ್. “ಮಾಟಗಾತಿ” ಅಲೆದಲೆದು ಬಳಲಿಬೆಂಡಾದೆ ನಾನು,ನಿನ್ನ ನೋವಿನ ಜ್ವಾಲೆಯಲಿ,ತುಸು ಹೆಚ್ಚಾದರೂಕೆಂಜ್ವಾಲೆಯಲಿ,ಬೆಂದುಹೋಗಿವೆಮನದ ಮಾತುಗಳೆಲ್ಲ // ಮೌನವೊಂದು ಕಣ್ಣೀರಿಡುತ್ತಿದೆಸತ್ತು ಹೋದ ಭಾವನೆಗಳ ಮುಂದೆಅವು ಬದುಕಿ ಬರಲು ಸಾಧ್ಯವೇ…ಬೂದಿಯಾದ ಮೇಲೆಮತ್ತೆ!ಅದೆಷ್ಟೇ ನೀರೇರೆದು ಪೊರೆದರುಮಸಣದ ಬಾವಿಯೊಳಗೆ ನಲಿದಾಡುತ್ತಿವೆನಿನ್ನ ಮೋಸದ ಬಲೆಯ ಕಂಡು //ನನಗರಿವಿಲ್ಲೆದೆ ಮಾಟಗಾತಿಯಮಂತ್ರಕ್ಕೆ ಮಾರಾಟವಾದವು,ಹೃದಯದಲ್ಲಿದ್ದ ಭಾವನೆಗಳೆಲ್ಲಪ್ರೀತಿಎಂಬ ಮಾರುಕಟ್ಟೆಯಲ್ಲಿ.// ವಸಂತ್. ಕೆ. ಹೆಚ್. ʼ

ವಸಂತ್. ಕೆ. ಹೆಚ್. ಅವರ ಕವಿತೆ “ಮಾಟಗಾತಿ” Read Post »

ಕಾವ್ಯಯಾನ, ಗಝಲ್

ಹನಿಬಿಂದು ಅವರ ಗಜಲ್

ಕಾವ್ಯ ಸಂಗಾತಿ ಹನಿಬಿಂದು ಗಜಲ್ ದಣಿದ ದೇಹಕ್ಕೆ ಅಪ್ಪುಗೆಯ ರುಚಿಯು ಬೇಕಿದೆಕುಣಿವ ಹೃದಯಕ್ಕೆ ಸಾಂತ್ವನದ ಸವಿಯು ಬೇಕಿದೆ ಮೌನದ ಮೆರವಣಿಗೆಯಲಿ ಸಾವಿನ ಸಾಗಾಟ ಸಾಗಿದೆದೇಶದುದ್ದಕ್ಕೂ ಹರಿವ ಹಸಿರು ರಕ್ತದ ನದಿಯು ಬೇಕಿದೆ ಡಂಗುರ ಬಾರಿಸುತ್ತಿವೆ ಮೆದುಳು ಕೈ ಕಾಲುಗಳು ಸೇರಿಸರ್ವೆಡೆ ಸಿಂಗಾರಗೊಳಿಸುವ ಪಾತರಗಿತ್ತಿಯು ಬೇಕಿದೆ ಮನದನಿಯೇ ನೋಡಿ ಹಾಡಲು  ಪರಿಸರದ ಗೀತೆಯಸಣ್ಣತನವ ಬಿಟ್ಟ ಪ್ರೀತಿ ಮೆರೆವ ಮಾನವತೆಯು ಬೇಕಿದೆ  ಬೆಳೆಯುತ್ತಿರುವ ಮರಕ್ಕೆ ನೀರುಣಿಸುವ ನಿತ್ಯ ಪ್ರೇಮದಿಕಳೆ ಹೆಚ್ಚಿಸುವ ಹನಿ ಬಿಂದುವಿನ ಮುತ್ತಿನೊರತೆಯು ಬೇಕಿದೆ ಹನಿಬಿಂದು

ಹನಿಬಿಂದು ಅವರ ಗಜಲ್ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರ ಅವರ ಕವಿತೆ ” ನನ್ನ ಬಾಲ್ಯ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರ ” ನನ್ನ ಬಾಲ್ಯ” ಬಾಲ್ಯದ ಆಟಸುಂದರ ಸುದಿನದ ನೋಟಮರೆಯಲಾಗದ ಮೋಜಿನಾಟಆ ಬಾಲ್ಯಕ್ಕೆ ಯಾರಿಹರು ಸರಿಸಾಟಿ!?, ಮಣ್ಣಿನಲಿ ಆಟೋಟನೀರಿನಲಿ ಮುಳುಗಿ ಈಜಾಟಚಕ್ರ ಉರುಳಿಸಿ ಓಡುತ ಬಿದ್ದಾಟಆ ಬಾಲ್ಯಕೆ ಯಾರಿಹರು ಸರಿಸಾಟಿ!?, ಹಿರಿಯರ ಅನುಸರಿಸುತಪ್ರಕೃತಿಯ ಮಡಿಲಲಿ ಬೆರೆತು ನಲಿದಗೆಳೆತನದ ಸಹಪಾಠಿ ಜೊತೆ ಅಕ್ಷರ ಕಲಿತಆ ಬಾಲ್ಯಕೆಂದೂ ಯಾರಿಹರು ಸರಿಸಾಟಿ!?. ———— ಹಮೀದ್ ಹಸನ್ ಮಾಡೂರ.

ಹಮೀದ್ ಹಸನ್ ಮಾಡೂರ ಅವರ ಕವಿತೆ ” ನನ್ನ ಬಾಲ್ಯ” Read Post »

You cannot copy content of this page

Scroll to Top