ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ಸತ್ಯ ದರ್ಶನ” ಡಾ.ಗೀತಾ ದಾನಶೆಟ್ಟಿ ಅವರ ಲೇಖನ

ವಿಚಾರ ಸಂಗಾತಿ ಡಾ.ಗೀತಾ ದಾನಶೆಟ್ಟಿ “ಸತ್ಯ ದರ್ಶನ” ಜೀವನ ಒಂದು ಹೋರಾಟ.ಹುಟ್ಟು ಸಾವಿನ ನಡುವೆ ಸಿಗುವ ಅವಕಾಶವೇ ಬದುಕು.ಈ ಬದುಕು ಬರಡಾಗಬಾರದು.ದಿವ್ಯಮಯವಾಗಬೇಕು.ಅದಕ್ಕಾಗಿ ಒಂದಿಷ್ಟು ಸದ್ಗುಣಗಳ ಸಂಪಾದನೆ ತುಂಬಾ ಅಗತ್ಯ.ನಿಸರ್ಗದಿಂದ ನಾವೆಲ್ಲ ಶರೀರ,ಮನ, ಮತಿಯನ್ನು ಸಮಾನವಾಗಿ ಪಡೆದುಕೊಂಡಿದ್ದೇವೆ.ಆದರೆ ಅದನ್ನು ಸದ್ಭವಕ್ಕೆ ಮಾಡಿಕೊಳ್ಳುವ ಸಾಮರ್ಥ್ಯ ಎಲ್ಲರಿಗೂ ಸಮಾನವಾಗಿಲ್ಲ. ಕೆಲವರು ತಮ್ಮ ಮನಸ್ಸಿಗೆ ತೋಚಿದಂತೆ ವರ್ತಿಸಿ ಅನ್ಯಾಯ,ಸತ್ಯದ ದಾರಿಯಲ್ಲೇ ನಡೆಯುತ್ತಾರೆ.ಇದರಿಂದ ಢಾಂಬಿಕತೆ ಅನಾವರಣಗೊಂಡು ಮೂಢ ಆಚರಣೆಗಳು ಅಟ್ಟಹಾಸ ಮೆರೆಯುತ್ತಿವೆ.ದ್ವೇಷ ಅಸೂಯೆ, ಹೋಗೆ ಕಾರುತ್ತಿವೆ ಅಪಮೌಲ್ಯಗಳ ವೈಭವಿಕರಣ ಹೆಚ್ಚುತ್ತಿದೆ.ಜಾಗತಿಕ ಮಟ್ಟದಲ್ಲಿ ಶಾಂತಿ ತನ್ನ ಮೌಲ್ಯವನ್ನು ಕಳೆದುಕೊಂಡು ಎಲ್ಲೆಡೆ ಬರೀ ಹಿಂಸೆ ತಾಂಡವಾಡುತ್ತಿದೆ.ಹೀಗಿರುವಾಗ ಮನುಷ್ಯರ ಮನಸುಗಳು ಮಲಿನವಾಗದೆ ಇರಲು ಸಾಧ್ಯವೇ?ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳದೆ,ಸಮಯ ಗತಿಸಿದ ನಂತರದಲ್ಲಿ ಬದುಕು ವ್ಯರ್ಥವಾಯಿತೆಂದು ಗೋಳಿಟ್ಟರೆ ಏನು ಪ್ರಯೋಜನ?ಜಗತ್ತಿನಲ್ಲಿ ಅತ್ಯಂತ ವಿಶಿಷ್ಟಪೂರ್ಣ ಸಂಸ್ಕೃತಿ ಹೊಂದಿದ ಭಾರತ, ಆಧ್ಯಾತ್ಮದ ತವರೂರು ಎನಿಸಿದೆ. ವಿಜ್ಞಾನಕ್ಕೆ ನಿಲುಕದ ಅದೆಷ್ಟೋ ವಿಷಯಗಳನ್ನು ಆಧ್ಯಾತ್ಮ ತಿಳಿಸಬಲ್ಲುದಾಗಿದೆ.ಆಧ್ಯಾತ್ಮದ ಆತ್ಮೋನ್ನತಿಯಿಂದ ಸತ್ಯದರ್ಶನವಾಗುತ್ತದೆ.ಅದೇ ಸಾಕ್ಷಾತ್ಕಾರ.ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಿಗೂ ಜಾಗೃತಿ ಪ್ರಜ್ಞೆ ಅಗತ್ಯವಾಗಿದೆ.ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನಮ್ಮ ಜೀವನ ಯೋಗಮಯವಾದಗ ಮಾತ್ರ ಅಧ್ಯಾತ್ಮದ ಉನ್ನತಿ ಸಾಧ್ಯ.ಬೆಲೆ ಕಟ್ಟಲಾಗದ ಈ ಬದುಕು ದೇವರು ನೀಡಿದ ಅತ್ಯಮೂಲ್ಯ ಆಸ್ತಿ.ಇದು ಸುಂದರವಾಗಬೇಕಾದರೆ ಮೌಲ್ಯವನರಿತು ನಡೆಯಬೇಕು.ಪ್ರೀತಿ,ದಯೆ, ಕರುಣೆ,ಸಹನೆ,ಸಹಾನುಭೂತಿ,ನ್ಯಾಯ ಮತ್ತು ಸಮಾನತೆ ಇವುಗಳು ಬದುಕಿಗೆ ನಿಜವಾದ ಅರ್ಥ ಕೊಡುತ್ತವೆ.ಪ್ರಸ್ತುತ ಸಮಾಜದಲ್ಲಿ ಸತ್ಯಕ್ಕಿಂತ ಸುಳ್ಳಿನ ಆಕರ್ಷಣೆ ಹೆಚ್ಚಾಗುತ್ತಿರುವುದು ವಿಷಾಧನೀಯ.ಹಣ,ಅಧಿಕಾರ,ಪ್ರತಿಷ್ಠೆ,ಮತ್ತು ಸ್ವಾರ್ಥಗಳ ನಡುವೆ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ಪ್ರಾಮಾಣಿಕತೆಗಿಂತ ಪ್ರದರ್ಶನಕ್ಕೆ, ಗುಣಕ್ಕಿಂತ ಬಿರುದಿಗೆ,ವ್ಯಕ್ತಿತ್ವಕ್ಕಿಂತ ಬಾಹ್ಯ ಆಡಂಬರಕ್ಕೆ ಹೆಚ್ಚಿನ ಮಹತ್ವ ದೊರೆಯುತ್ತಿದೆ.ಇಂತಹ ಸಂದರ್ಭದಲ್ಲಿ ಸತ್ಯದ ದರ್ಶನ ಪ್ರತಿಯೊಬ್ಬರ ಬದುಕಿನ ಅನಿವಾರ್ಯ ಅಗತ್ಯವಾಗಿದೆ.ಸತ್ಯವು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಿ,ಮನುಷ್ಯನ ಅಂತರಂಗವನ್ನು ಶುದ್ಧಗೊಳಿಸುತ್ತದೆ. ಸತ್ಯವೆಂಬುದು ಹೊರಗಡೆ ಹುಡುಕುವ ವಸ್ತುವಲ್ಲ.ಅದು ನಮ್ಮ ಅಂತರಂಗದಲ್ಲಿ ಅಡಗಿರುವ ಬೆಳಕು. ಡಾ.ಗೀತಾ ದಾನಶೆಟ್ಟಿ

“ಸತ್ಯ ದರ್ಶನ” ಡಾ.ಗೀತಾ ದಾನಶೆಟ್ಟಿ ಅವರ ಲೇಖನ Read Post »

ಕಾವ್ಯಯಾನ

ಶ್ರೀ ಸೋಮನಾಥ ಡಿ. ಅವರ ಕವಿತೆ “ಗೋವಾ ಕಡಲರಾಣಿ”

ಕಾವ್ಯಸಂಗಾತಿ ಶ್ರೀ ಸೋಮನಾಥ ಡಿ. “ಗೋವಾ ಕಡಲರಾಣಿ” ಬಹುದಿನಗಳ‘ಮನದ ಮುಂದಣ’ ಆಸೆಗೆಕಾಲ ಕೂಡಿ ಬಂತುಕಡಲ ರಾಣಿ ಗೋವಾಕೆ ಹೊರಟೆನಸುಕಿನ ಜಾವದಿವಿಶಾಲ ಕಡಲಿನ ಮರಳುಹಾಸಿಗೆಯಲಿಅವರಿಟ್ಟ ಹೆಜ್ಜೆಗುರುತುಗಳಮೇಲೆ ಕುಳಿತೆನು. ಅವರು ತಡರಾತ್ರಿ ಕುಡಿದುತಿಂದುಂಡು ತೆರಳಿರಬೇಕುನಲಿದು ನರ್ತಿಸಿ ತೆಪ್ಪೆಜ್ಜೆಳಿಟ್ಟರಬೇಕು..ಚೆಲ್ಲಿದ್ದ ಪದಾರ್ಥಗಳನುಭಕ್ಷಿಸಿ ಮಲಗಿದ್ದ ನಾಯಿಗಳುಕುಕ್ಕಿ ಹೆಕ್ಕುತ್ತ ಹಾರುತ್ತಿರುವಕಾಗೆಗಳುಜನಗಳ ಹೊತ್ತು ಕಡಲನ್ನು ತಿರುಗಿದಣಿದು ನಿಂತ ಬೋಟುಗಳುಮತ್ತು ನಾನು ಅಲ್ಲಿದ್ದೆವುಭೋರ್ಗರೆದು ಕರೆವ ಕಡಲಿಗೆಮುಂಜಾವು ಸಾಕ್ಷಿಯಾಗಿತ್ತು! ನೀಲ ಗಗನನೀಲಿ ಕಡಲೊಡಗೂಡಿಮುತ್ತಿನ ಸರಮಾಲೆಯಾಗಿಮುತ್ತಿಕ್ಕಿದ ಗೋವಾ!ಅಹಾ ಅಹಾ! ವ್ಹಾ ವ್ಹಾ!ಕಣ್ಗೆಲ್ಲ ಶೃಂಗಾರದ ಓಗರಎಲ್ಲೆಲ್ಲೂ ಮನೋಹರಹೊತ್ತೇರುತ್ತಿದ್ದಂತೆಯೆಯುವ-ನವ ಮನಗಳ ಸಾಗರಬಲು ಸುಂದರ! ಗಾಳಿಗೆ ಸೋಕಿದ ಅಲೆಗಳುತಳುಕು ಬಳುಕಿನಲಿತೀವ್ರವಾಗಿ ಬಂದಪ್ಪಳಿಸಿತೀರದಲಿ ಹಾಲುಕ್ಕಿಸುವ ನಿನಾದಮುಸ್ಸಂಜೆಯಾಗುತ್ತಿದ್ದಂತೆತಂಪಾದ ಮರಳಿನಲಿಮನಸ್ಸು ಮರುಳಾಗುತ್ತವೆಅರಳುತ್ತವೆ ಕೆರಳತ್ತವೆ..ಹೆಂಡ-ಹೆಣ್ಣಿನಲಿತೇಲಿ-ತೇಲಿ ಹೋಗುತ್ತವೆ..ವಾರಧಿ ಮಾತ್ರ ಲೆಕ್ಕಿಸದೇಅರ್ಭಟಿಸಿ ಬೊಬ್ಬಿಡುತ್ತಭೋರ್ಗರೆಯುತ್ತಒಂದೇ ಸಮನೇ ದಡಮುಟ್ಟುವಆಟ ಆಡುತ್ತಿದೆ.! ನೀಲಿ ಡಾಲ್ಫಿನ್ ವೀಕ್ಷಣೆಗೆತಕ್ಷಣ ಕುಳಿತಿತು ಮನವುಎತ್ತ ನೋಡಿದಡತ್ತ ನೀರೇ ನೀರುಆಳದ ಅಲೆಗಳ ಬೃಹತ್ತೇರು..ತೇಲುವ ದೋಣಿ ಹೊಯ್ದಾಡುತಿತ್ತುಡಾಲ್ಫಿನ್ ಕಣ್ಣಿಗೆ ಕಾಣದಾಗಿತ್ತುಭಯವು ಮಾತ್ರ ಆವರಿಸಿತ್ತುನಿರಾಸೆಯಲಿ ದೋಣಿ ಮರಳುವಹೊತ್ತಿಗೆ ತಕ್ಷಣ ಜಿಗಿದವು ಡಾಲ್ಫಿನ್ನುನನಗಾಯಿತು ಸ್ವರ್ಗಕೆ ಮೂರೆ ಗೇಣು!! ತೀರದಂಚಿನಲಿ ಬೆಳ್ಳಿ ನೀರುತುಟಿಯಂಚಿನಲಿ ಹೀರುವ ಬೀರುಗ್ರಂಥಾಲಯದಂತೆಯೇಒಪ್ಪ-ಓರಣವಾಗಿಟ್ಟ ಬಾರು ‌‌‌ವಿಶ್ವ-ವಿದ್ಯಾಲಯಗಳೇನು?ವಿಷಯಂಗಳ ವಿದ್ಯಾಲಯವೇ ‌ಹುಟ್ಟಿ ತೊಳಗಿ-ಬೆಳಗುತ್ತಿದೆಮೋಹದ ಮಾಯೆ ಅಲ್ಲಿ ಮಡುಗಟ್ಟಿದೆ. ಗದ್ದೆಯಲ್ಲಿ ಗುದ್ದಲಿಯಿಂದಗುದ್ದಾಡಿ ದಣಿದು ಬಂದವರಂತೆಕೈ-ಕಾಲು ಮೈ-ತಲೆಗಳಮಸಾಜು ಬೇರೆ ಕೇಡುಅದು ನೆಪ ಮಾತ್ರವಿರಬೇಕುಅಲ್ಲಿ ಹೆಣ್ಣು-ಗಂಡಿನ ತನು-ಮನವೆಲ್ಲಕಾಮಸ್ಪರ್ಶಕ್ಕೆ-ಪ್ರೇಮಪಾಶಕೆಹಾತೊರೆದಿದೆಬೇಂದ್ರೆ ಅಜ್ಜ ಹೇಳಿದಕುರುಡು ಕಾಂಚಾಣ ಕುಣಿ-ಕುಣಿದಿದೆ! ಕಿರಿಯರು-ಹಿರಿಯರುಕರಿಯರು-ಬಿಳಿಯರುಈ ದೇಶ-ಹೊರದೇಶವೆಂಬವರ್ಣ-ಬೇಧವಿರದಲೇಧಾವಿಸಿ ಕೂಡಿದ ಕೂಟನುಗ್ಗಿ ಬರುವ ಧೈತ್ಯೆಲೆಗಳಿಗೆಒಪ್ಪಿ-ಅಪ್ಪಿಕೊಳ್ಳುವ ಆಟನವರಸಗಳ ಒಲವಿನ ಮಾಟಮೋಜು-ಮಸ್ತಿಯ ಚೆಲ್ಲಾಟ!! ಜಾತಿ-ಧರ್ಮ ಮತ-ಪಂಥಸಿದ್ಧಾಂತಗಳ ವಾದವಿಲ್ಲಹೋರಾಟ-ಹಾರಾಟಚಿರಾಟಗಳ ಪರಿವಿಲ್ಲಕಾವ್ಯ-ಕಥೆಗಳ ಸೊಲ್ಲಿಲ್ಲಬರೀ ಮೋಹದ ನಾದವಿದೆಕಾಮದ ಹಸಿವಿದೆಕ್ಷಣಿಕ ಸುಖ-ಸ್ವರ್ಗವೇತೇಲಾಡಿ ಹೊಯ್ದಾಡಿದೆ. ಒಂದಂತೂ ಸತ್ಯ‘ಸಾಸಿವೆಯಷ್ಟು ಸುಖಕ್ಕೆಸಾಗರದಷ್ಟು ದು:ಖವೆಂದು’ಅಲ್ಲಿ ಸಾರಿ ಹೇಳಿದಂತಿದೆ!! ಶ್ರೀ ಸೋಮನಾಥ ಡಿ

ಶ್ರೀ ಸೋಮನಾಥ ಡಿ. ಅವರ ಕವಿತೆ “ಗೋವಾ ಕಡಲರಾಣಿ” Read Post »

You cannot copy content of this page

Scroll to Top