ಎಸ್ ವಿ ಹೆಗಡೆ ಅವರಕವಿತೆ “ಬೇಲಿ”
ಕಾವ್ಯ ಸಂಗಾತಿ ಎಸ್ ವಿ ಹೆಗಡೆ “ಬೇಲಿ” ಸುತ್ತಲೂ ಕಟ್ಟಿದ ಬೇಲಿತಮ್ಮ ಸ್ವತ್ತಿನ ಸುತ್ತ ಮುತ್ತ. ಹೊರಗಿನವರ ಕಣ್ಣಿಗೆಗೋಡೆ, ಸರಹದ್ದು, ಪಾಗಾರ. ಒಳಗಿದ್ದವರಿಗೆಬಂಧನ, ಗಡಿ, ಸಂಕೋಲೆ. ಬೇಲಿಯ ಒಳಗಿದ್ದೇಮೆಂದು ತಿನ್ನುವ ಹಸು ಕರುಬೇಲಿ ದಾಟಿ ಹೋಗಬೇಕೆಂದುಎಣಿಸಲೇ ಇಲ್ಲ. ಯಾರ್ಯಾರೋ ಮಾಡಿಟ್ಟಬೇಲಿಯ ಗುಟ್ಟ ಕಿತ್ತು ಬಿದ್ದರೂದಾಟಿ ದೂರ ಹೋಗಲಾಗಲಿಲ್ಲ. ಕಾಡು ಕಡಿದ ಮಾನವರಹಸಿರು ಗದ್ದೆ ತೋಟದ ಬೇಲಿಯಹಾರಿ, ನುಸುಳಿ ಒಳ ನುಗ್ಗುವವನ್ಯ ಜೀವಿಗಳು ರೈತರಿಗೆ ಕಾಟ ದೇಶದ ಗಡಿ ದಾಟಿ ಬಂದುಬಿಡಾರ ಹೂಡುವ ಹುನ್ನಾರಸ್ವಾಗತಕ್ಕೆ, ಹೊರದಬ್ಬುವದಕ್ಕೆರಾಜಕೀಯ ಆಟ. ಜಾತಿ, ಧರ್ಮದ ಬೇಲಿಸಂಕೋಲೆಯ ಹರಿದುಕಂಕಣ ಕಟ್ಟಿದವರಕುರಿತು ಹೋರಾಟ ಕಂಪನಿಗಳ ಗೋಡೆಯೊಳಗೆದುಡ್ಡಿಗಾಗಿ ದಿನವಿಡೀ ದುಡಿದುಮುದುಡಿ ಹೋಗುವವೃತ್ತಿ ನಿರತರ ಪರದಾಟ ಬೇಲಿಯ ಬಿಟ್ಟುಮನ ಬಂದಂತೆಹಾರುವ ಹಕ್ಕಿ,ಈಜುವ ಮೀನುಕಂಡ ಕನಸುನನಸಾಗಲಿಲ್ಲ. ಹುಟ್ಟಿದಾಗಿನಿಂದಯಾರೋ ಹಾಕಿದಅಥವಾ ತಾವೇ ಕಟ್ಟಿದಬೇಲಿಗಳ ಒಳಗೆಸಾಗಿದ ಜೀವನಕೊನೆಗೂ ಮುಕ್ತಾಯಬೇಲಿಯ ಒಳಗಿನಸ್ಮಶಾನ. ಎಸ್ ವಿ ಹೆಗಡೆ
ಎಸ್ ವಿ ಹೆಗಡೆ ಅವರಕವಿತೆ “ಬೇಲಿ” Read Post »

