ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ರೀ ಸೋಮನಾಥ.ಡಿ. ಅವರ “ಕಡಲ ರಾಣಿ ಗೋವಾ”

ಕಾವ್ಯ ಸಂಗಾತಿ ಶ್ರೀ ಸೋಮನಾಥ.ಡಿ. “ಕಡಲ ರಾಣಿ ಗೋವಾ” ಬಹುದಿನಗಳ‘ಮನದ ಮುಂದಣ‘ ಆಸೆಗೆಕಾಲ ಕೂಡಿ ಬಂತುಕಡಲ ರಾಣಿ ಗೋವಾಕೆ ಹೊರಟೆನಸುಕಿನ ಜಾವದಿವಿಶಾಲ ಕಡಲಿನ ಮರಳುಹಾಸಿಗೆಯಲಿಅವರಿಟ್ಟ ಹೆಜ್ಜೆಗುರುತುಗಳಮೇಲೆ ಕುಳಿತೆನು. ಅವರು ತಡರಾತ್ರಿ ಕುಡಿದುತಿಂದುಂಡು ತೆರಳಿರಬೇಕುನಲಿದು ನರ್ತಿಸಿ ತೆಪ್ಪೆಜ್ಜೆಳಿಟ್ಟರಬೇಕು..ಚೆಲ್ಲಿದ್ದ ಪದಾರ್ಥಗಳನುಭಕ್ಷಿಸಿ ಮಲಗಿದ್ದ ನಾಯಿಗಳುಕುಕ್ಕಿ ಹೆಕ್ಕುತ್ತ ಹಾರುತ್ತಿರುವಕಾಗೆಗಳುಜನಗಳ ಹೊತ್ತು ಕಡಲನ್ನು ತಿರುಗಿದಣಿದು ನಿಂತ ಬೋಟುಗಳುಮತ್ತು ನಾನು ಅಲ್ಲಿದ್ದೆವುಭೋರ್ಗರೆದು ಕರೆವ ಕಡಲಿಗೆಮುಂಜಾವು ಸಾಕ್ಷಿಯಾಗಿತ್ತು! ನೀಲ ಗಗನನೀಲಿ ಕಡಲೊಡಗೂಡಿಮುತ್ತಿನ ಸರಮಾಲೆಯಾಗಿಮುತ್ತಿಕ್ಕಿದ ಗೋವಾ!ಅಹಾ ಅಹಾ! ವ್ಹಾ ವ್ಹಾ!ಕಣ್ಗೆಲ್ಲ ಶೃಂಗಾರದ ಓಗರಎಲ್ಲೆಲ್ಲೂ ಮನೋಹರಹೊತ್ತೇರುತ್ತಿದ್ದಂತೆಯೆಯುವ–ನವ ಮನಗಳ ಸಾಗರಬಲು ಸುಂದರ! ಗಾಳಿಗೆ ಸೋಕಿದ ಅಲೆಗಳುತಳುಕು ಬಳುಕಿನಲಿತೀವ್ರವಾಗಿ ಬಂದಪ್ಪಳಿಸಿ                                                          ತೀರದಲಿ ಹಾಲುಕ್ಕಿಸುವ ನಿನಾದ                                    ಮುಸ್ಸಂಜೆಯಾಗುತ್ತಿದ್ದಂತೆ      ತಂಪಾದ ಮರಳಿನಲಿಮನಸ್ಸು ಮರುಳಾಗುತ್ತವೆಅರಳುತ್ತವೆ ಕೆರಳತ್ತವೆ..ಹೆಂಡ–ಹೆಣ್ಣಿನಲಿತೇಲಿ–ತೇಲಿ ಹೋಗುತ್ತವೆ..ವಾರಧಿ ಮಾತ್ರ ಲೆಕ್ಕಿಸದೇಅರ್ಭಟಿಸಿ ಬೊಬ್ಬಿಡುತ್ತಭೋರ್ಗರೆಯುತ್ತಒಂದೇ ಸಮನೇ ದಡಮುಟ್ಟುವಆಟ ಆಡುತ್ತಿದೆ.! ನೀಲಿ ಡಾಲ್ಫಿನ್ ವೀಕ್ಷಣೆಗೆತಕ್ಷಣ ಕುಳಿತಿತು ಮನವುಎತ್ತ ನೋಡಿದಡತ್ತ ನೀರೇ ನೀರುಆಳದ ಅಲೆಗಳ ಬೃಹತ್ತೇರು..ತೇಲುವ ದೋಣಿ ಹೊಯ್ದಾಡುತಿತ್ತುಡಾಲ್ಫಿನ್ ಕಣ್ಣಿಗೆ ಕಾಣದಾಗಿತ್ತುಭಯವು ಮಾತ್ರ ಆವರಿಸಿತ್ತುನಿರಾಸೆಯಲಿ ದೋಣಿ ಮರಳುವಹೊತ್ತಿಗೆ ತಕ್ಷಣ ಜಿಗಿದವು ಡಾಲ್ಫಿನ್ನುನನಗಾಯಿತು ಸ್ವರ್ಗಕೆ ಮೂರೆ ಗೇಣು!! ತೀರದಂಚಿನಲಿ ಬೆಳ್ಳಿ ನೀರುತುಟಿಯಂಚಿನಲಿ ಹೀರುವ ಬೀರುಗ್ರಂಥಾಲಯದಂತೆಯೇ                                                                                                  ಒಪ್ಪ–ಓರಣವಾಗಿಟ್ಟ ಬಾರು                    ‌‌‌                          ವಿಶ್ವ–ವಿದ್ಯಾಲಯಗಳೇನು?ವಿಷಯಂಗಳ ವಿದ್ಯಾಲಯವೇ            ‌                                                                        ಹುಟ್ಟಿ ತೊಳಗಿ–ಬೆಳಗುತ್ತಿದೆ                                        ಮೋಹದ ಮಾಯೆ ಅಲ್ಲಿ ಮಡುಗಟ್ಟಿದೆ. ಗದ್ದೆಯಲ್ಲಿ ಗುದ್ದಲಿಯಿಂದಗುದ್ದಾಡಿ ದಣಿದು ಬಂದವರಂತೆಕೈ–ಕಾಲು ಮೈ–ತಲೆಗಳಮಸಾಜು ಬೇರೆ ಕೇಡುಅದು ನೆಪ ಮಾತ್ರವಿರಬೇಕುಅಲ್ಲಿ ಹೆಣ್ಣು–ಗಂಡಿನ ತನು–ಮನವೆಲ್ಲಕಾಮಸ್ಪರ್ಶಕ್ಕೆ–ಪ್ರೇಮಪಾಶಕೆಹಾತೊರೆದಿದೆಬೇಂದ್ರೆ ಅಜ್ಜ ಹೇಳಿದಕುರುಡು ಕಾಂಚಾಣ ಕುಣಿ–ಕುಣಿದಿದೆ! ಕಿರಿಯರು–ಹಿರಿಯರುಕರಿಯರು–ಬಿಳಿಯರುಈ ದೇಶ–ಹೊರದೇಶವೆಂಬವರ್ಣ–ಬೇಧವಿರದಲೇಧಾವಿಸಿ ಕೂಡಿದ ಕೂಟನುಗ್ಗಿ ಬರುವ ಧೈತ್ಯೆಲೆಗಳಿಗೆಒಪ್ಪಿ–ಅಪ್ಪಿಕೊಳ್ಳುವ ಆಟನವರಸಗಳ ಒಲವಿನ ಮಾಟಮೋಜು–ಮಸ್ತಿಯ ಚೆಲ್ಲಾಟ!! ಜಾತಿ–ಧರ್ಮ ಮತ–ಪಂಥಸಿದ್ಧಾಂತಗಳ ವಾದವಿಲ್ಲಹೋರಾಟ–ಹಾರಾಟ        ಚಿರಾಟಗಳ ಪರಿವಿಲ್ಲಕಾವ್ಯ–ಕಥೆಗಳ ಸೊಲ್ಲಿಲ್ಲಬರೀ ಮೋಹದ ನಾದವಿದೆಕಾಮದ ಹಸಿವಿದೆಕ್ಷಣಿಕ ಸುಖ–ಸ್ವರ್ಗವೇ  ತೇಲಾಡಿ ಹೊಯ್ದಾಡಿದೆ. ಒಂದಂತೂ ಸತ್ಯ‘ಸಾಸಿವೆಯಷ್ಟು ಸುಖಕ್ಕೆಸಾಗರದಷ್ಟು ದು:ಖವೆಂದು‘ಅಲ್ಲಿ ಸಾರಿ ಹೇಳಿದಂತಿದೆ!!           

ಶ್ರೀ ಸೋಮನಾಥ.ಡಿ. ಅವರ “ಕಡಲ ರಾಣಿ ಗೋವಾ” Read Post »

ಕಾವ್ಯಯಾನ

ಶಾರದಜೈರಾಂ.ಬಿ ಅವರ “ಪುರುಷನಿಗೆ…”

ಕಾವ್ಯ ಸಂಗಾತಿ ಶಾರದಜೈರಾಂ.ಬಿ “ಪುರುಷನಿಗೆ…” ಕಾಯಕದಿ ನಿರತನಾಗಿಯೂಕುಟುಂಬದ ರಕ್ಷಣೆಗೆ ಬದ್ದ ಭರತನಂತೆ ನೋವನ್ನು ನುಂಗಿ ನಗೆ ಬೀರುವವಿಷಕಂಠನಂತೆಕಷ್ಟಗಳಿಗೆ ಈಡಾಗದಿರಲಿ ಎಂದುಕೆಲವೊಮ್ಮೆ ರೇಖೆ ಎಳೆವ ಲಕ್ಷ್ಮಣನಂತೆ ಎದೆಯಲ್ಲಿ ಅಳುಕಿದ್ದರು ತೋರದೆಭರವಸೆಯ ಭೀಷ್ಮನಂತೆ ಕೆಲಸವನ್ನು ಆಗುವವರೆಗೂಬಿಡದ ಭಗೀರಥನಂತೆ ಗೋಪಿಕೆಯರ ರಕ್ಷಿಸಿದ ಆಪತ್ಭಾಂದವ ಶ್ಯಾಮನಂತೆ ಸೀತೆಗಾಗಿ ಪರಿತಪಿಸಿ ಕಾಡಿಗಟ್ಟಿಹೃದಯದಿ ಧ್ಯಾನಿಸುತ್ತಾ ಕಳೆದಶ್ರೀರಾಮನಂತೆ ಪುರಾಣದ ಪುರುಷರ ಪ್ರತಿಬಿಂಬದ ಪುರಾವೆಗಳಿವೆಪ್ರತಿರೂಪವಾಗಿರುವಪುರುಷರಿಗೆಲ್ಲ ನಿಮ್ಮ ದಿನಕೆ ನಲುಮೆಯ ನನ್ನಿಗಳು…!! ಶಾರದಜೈರಾಂ.ಬಿ

ಶಾರದಜೈರಾಂ.ಬಿ ಅವರ “ಪುರುಷನಿಗೆ…” Read Post »

ಅಂಕಣ ಸಂಗಾತಿ, ಅಕ್ಷರಯಾನ

ಅಂಕಣ ಸಂಗಾತಿ ಶಿವಲೀಲಾ ಹುಣಸಗಿ ಅಕ್ಷರಯಾನ ತೇಪೆ ಬಿದ್ದ ಅಂಗಿಯೊಳಗೆ ಅಡಗಿರುವ ಅಪ್ಪನ ಅನಂತ ಪ್ರೀತಿ! ‘ಅಪ್ಪನ ಅಂಗಿ’ ಕವನಸಂಕಲನಕವಿ: ಡಾ. ಲಕ್ಷ್ಮಣ್ ವಿ.ಎ., ಧಾರವಾಡಕವಿತೆ ಎಂದರೆ ಕೇವಲ ಪದಗಳ ಜೋಡಣೆಯಲ್ಲ; ಅದು ಬದುಕಿನ ಅನುಭವಗಳ ಅಭಿವ್ಯಕ್ತಿ, ಕಾಲದ ಸಂಕಟಗಳ ಪ್ರತಿಬಿಂಬ, ಮನುಷ್ಯನ ಅಂತರಂಗದ ತಲ್ಲಣಗಳ ಅನಾವರಣ. ಕವಿಯೊಬ್ಬ ತನ್ನ ಸುತ್ತಲಿನ ಜಗತ್ತನ್ನು ಎಷ್ಟು ಸೂಕ್ಷ್ಮವಾಗಿ ಗಮನಿಸುತ್ತಾನೋ ಅಷ್ಟು ಗಾಢವಾಗಿ ಅವನ ಕವಿತೆಗಳು ಓದುಗರ ಹೃದಯವನ್ನು ತಟ್ಟುತ್ತವೆ. ಅಂತಹ ಬದುಕಿನ ಸೂಕ್ಷ್ಮ ಸಂವೇದನೆಗಳು, ಸಾಮಾಜಿಕ ಕಾಳಜಿ, ಕೌಟುಂಬಿಕ ನೆನಪುಗಳು ಮತ್ತು ಮಾನವೀಯ ಮೌಲ್ಯಗಳನ್ನು ಹೊತ್ತು ಬಂದಿರುವ ಕವನಸಂಕಲನವೇ ಡಾ. ಲಕ್ಷ್ಮಣ್ ವಿ.ಎ. ಅವರ ‘ಅಪ್ಪನ ಅಂಗಿ’.ಒಟ್ಟು ೨೬ ಕವಿತೆಗಳನ್ನು ಒಳಗೊಂಡಿರುವ ಈ ಸಂಕಲನವು ಬದುಕಿನ ಹಲವು ಮುಖಗಳನ್ನು ಪರಿಚಯಿಸುತ್ತದೆ. ಇಲ್ಲಿ ಅಪ್ಪನ ಬೆವರಿದೆ, ಅವ್ವನ ಮಮತೆಯಿದೆ, ಬಡವರ ಬದುಕಿನ ಅನಿವಾರ್ಯತೆಯಿದೆ, ಪ್ರಕೃತಿಯ ಮುನಿಸಿದೆ, ಯುದ್ಧದ ಭೀಕರತೆಯಿದೆ, ಬಾಲ್ಯದ ನೆನಪುಗಳಿವೆ. ಹೀಗೆ ವೈಯಕ್ತಿಕ ಅನುಭವಗಳಿಂದ ಆರಂಭವಾಗಿ ಸಾಮಾಜಿಕ ವಾಸ್ತವದವರೆಗೆ ಕವಿಯ ಕಾವ್ಯಯಾನ ವಿಸ್ತರಿಸುತ್ತದೆ.ವಸ್ತುವೈವಿಧ್ಯ ಮತ್ತು ಸಾಮಾಜಿಕ ಪ್ರಜ್ಞೆ.‘ಗಾಂಧಿ ಟೊಪ್ಪಿಗೆಗೆ ಮತ್ತು ಅಪ್ಪ’, ‘ಬಿಕರಿಯಾಗದ ದೇವರ ಪಟ’, ‘ನೆರೆ ದೇವರು’, ‘ಇಂತಿ, ಮಳೆ…’, ‘ನೇರ ಪ್ರಸಾರ’, ‘ಹೊಯ್ಕಾಲಿ ಮಳೆ’, ‘ಟಪಾಲು’, ‘ಅಪ್ಪನ ಅಂಗಿ’, ‘ತೊಟ್ಟಿಲ ಮಳೆ’, ‘ಖಾಯಂ ವಿಳಾಸ’, ‘ಸೆಕೆಂಡ್ ಹ್ಯಾಂಡ್ ಅಂಗಿಗಳು’ ಮುಂತಾದ ಕವಿತೆಗಳು ಕವಿಯ ವಸ್ತುವೈವಿಧ್ಯಕ್ಕೆ ಸಾಕ್ಷಿಯಾಗಿವೆ. ಬಡತನ, ಅಂಚಿನ ಜನರ ಬದುಕು, ಪ್ರಕೃತಿವಿಕೋಪ, ನಗರೀಕರಣ, ಯುದ್ಧದ ಭೀಕರತೆ, ಕೌಟುಂಬಿಕ ಸಂಬಂಧಗಳು ಹಾಗೂ ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು ಇಲ್ಲಿನ ಕವಿತೆಗಳ ಮುಖ್ಯ ಆಶಯಗಳಾಗಿವೆ. ವೈಯಕ್ತಿಕ ಅನುಭವಗಳನ್ನು ಸಾರ್ವತ್ರಿಕ ಅನುಭವಗಳನ್ನಾಗಿ ಪರಿವರ್ತಿಸುವ ಕವಿಯ ಪ್ರಯತ್ನ ಗಮನಾರ್ಹವಾಗಿದೆ. ೧) ಗಾಂಧಿ ಟೊಪ್ಪಿಗೆಗೆ ಮತ್ತು ಅಪ್ಪ ನನ್ನೂರಿನ ನೆತ್ತಿಯ ಮೇಲೆ ಹಾಯ್ದ ತುಂಡುಮೋಡವೊಂದುನಿನ್ನೂರಿಗೆ ಬರುವ ಹೊತ್ತಿಗೆ ಪುಂಡಾನೆಯಂತೆಇಡೀ ಅರಬ್ಬಿ ಸಮುದ್ರವ ತಂದು ಸೊಂಡಿಲಿನಿಂದಹೇಗೆ ಸೇಕಿಸುತಿದೆ ನೋಡು. ಗಾಂಧಿ ಟೊಪ್ಪಿಗೆ ಮತ್ತು ಅಪ್ಪನ ವ್ಯಕ್ತಿತ್ವವನ್ನು ಮೇಳೈಸಿಕೊಂಡು ಸಾಗುವ ಕವಿತೆ ಇದು. ಗಾಂಧಿ ಟೊಪ್ಪಿಗೆ ಸರಳತೆ, ತ್ಯಾಗ ಮತ್ತು ಆದರ್ಶಗಳ ಸಂಕೇತವಾದರೆ, ಅಪ್ಪ ದುಡಿಮೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯ ಪ್ರತಿರೂಪ. ಮೋಡವನ್ನು ಪುಂಡಾನೆಗೆ ಹೋಲಿಸುವ ಕವಿಯ ಕಲ್ಪನೆ ವಿಶೇಷವಾಗಿದೆ. ಪ್ರಕೃತಿಯ ಬೃಹತ್ ಚಲನೆಯ ಮೂಲಕ ಕಾಲದ ಬದಲಾವಣೆ ಮತ್ತು ಮನುಷ್ಯನ ಬದುಕಿನ ಮೌಲ್ಯಗಳನ್ನು ಕವಿ ಶೋಧಿಸುತ್ತಾರೆ. ಅಪ್ಪನ ನೆನಪು ಮತ್ತು ಗಾಂಧೀಜಿಯ ಆದರ್ಶಗಳ ನಡುವೆ ಒಂದು ಭಾವನಾತ್ಮಕ ಸೇತುವೆಯನ್ನು ಈ ಕವಿತೆ ನಿರ್ಮಿಸುತ್ತದೆ. ೨) ಬಿಕರಿಯಾಗದ ದೇವರ ಪಟ ಈ ಮಕ್ಕಳ ತಾಯಂದಿರು ತಮ್ಮ ಬಡಮೊಲೆಯಹಾಲೂಡಿಸಿ ಪೇಟೆಯ ಕಡೆಗೆ ನಡೆದಿದ್ದಾರೆಬೊಂಬೆಗಳ ಮಾರಲು. ಮಹಾನಗರದ ಅಂಚಿನಲ್ಲಿ ಬೊಂಬೆಗಳನ್ನು ಮಾರಲು ತೆರಳುವ ತಾಯಂದಿರ ಬದುಕನ್ನು ಕವಿ ಇಲ್ಲಿ ಚಿತ್ರಿಸಿದ್ದಾರೆ. ಮಕ್ಕಳನ್ನು ತೊಟ್ಟಿಲಿನಲ್ಲಿ ಬಿಟ್ಟು ದುಡಿಮೆಗೆ ಹೋಗುವ ತಾಯಂದಿರ ಅಸಹಾಯಕತೆ, ಬಡತನದ ಅನಿವಾರ್ಯತೆ ಮತ್ತು ನಗರ ಜೀವನದ ವೈರುಧ್ಯಗಳು ಕವಿತೆಯಲ್ಲಿ ಅನಾವರಣಗೊಳ್ಳುತ್ತವೆ. ದೇವರ ಪಟವೂ ಬಿಕರಿಯಾಗದ ಪರಿಸ್ಥಿತಿಯಲ್ಲಿ ಬದುಕಿನ ಬೊಂಬೆಗಳನ್ನೇ ಮಾರಬೇಕಾದ ಜನರ ಸಂಕಟ ಓದುಗರ ಮನಸ್ಸನ್ನು ಕಲಕುತ್ತದೆ. ನಗರೀಕರಣದ ಹೊಳಪಿನ ಹಿಂದೆ ಅಡಗಿರುವ ಬಡತನದ ಕತ್ತಲೆಯನ್ನು ಕವಿ ಪರಿಣಾಮಕಾರಿಯಾಗಿ ತೆರೆದಿಡುತ್ತಾರೆ. ೩) ನೆರೆ ದೇವರು ಕವಿತೆ ಒಳಗಿಳಿಯಲುಗಟ್ಟಿಯಾಗಿ ಓದಬೇಕು ಕವಿತೆಒಳಗಿವಿಗಿಳಿಯಲುತಟ್ಟಿ ಕಿಲುಬುಗಟ್ಟಿದ ಇಂದ್ರಿಯಗಳ ಮೂಲೆಮೂಲೆಗಳ ತಲುಪಿ. ಕವಿತೆಯನ್ನು ಕೇವಲ ಓದುವುದಲ್ಲ, ಅದನ್ನು ಅನುಭವಿಸಬೇಕು ಎಂಬ ಆಶಯವನ್ನು ಈ ಸಾಲುಗಳು ಸಾರುತ್ತವೆ. ಕಿಲುಬುಗಟ್ಟಿದ ಇಂದ್ರಿಯಗಳನ್ನು ತಟ್ಟಿ ಎಚ್ಚರಿಸುವ ಶಕ್ತಿ ಕಾವ್ಯಕ್ಕಿದೆ. ಕವಿತೆಯ ಒಳಾರ್ಥವನ್ನು ಅರಿಯಲು ಓದುಗನ ಸಂವೇದನಾಶೀಲ ಮನಸ್ಸು ಅಗತ್ಯ ಎಂಬುದನ್ನು ಕವಿ ಮನವರಿಕೆ ಮಾಡುತ್ತಾರೆ. ಶೀರ್ಷಿಕೆಯಲ್ಲಿರುವ ‘ನೆರೆ’ ಎಂಬ ಪದವೂ ಪ್ರವಾಹದ ಅರ್ಥದಾಚೆಗೆ ಓದುಗನ ಮನಸ್ಸನ್ನು ಆವರಿಸುವ ಕಾವ್ಯಾನುಭವದ ಸಾಧ್ಯತೆಯನ್ನು ನೆನಪಿಸುತ್ತದೆ. ೪) ಇಂತಿ, ಮಳೆ…ನೆರೆ ಸುದ್ದಿಯ ಹೊತ್ತವೃತ್ತಪತ್ರಿಕೆಯ ಪುಟಗಳೂಪ್ರವಾಹದಲಿ ತೇಲಿ ಬಂದಂತ ತೇವಜೀವ! ಮಳೆ ಮತ್ತು ಪ್ರವಾಹದ ನಡುವಿನ ಬದುಕಿನ ಸಂಘರ್ಷವನ್ನು ಚಿತ್ರಿಸುವ ಕವಿತೆ ಇದು. ವೃತ್ತಪತ್ರಿಕೆಯ ಪುಟಗಳೂ ಪ್ರವಾಹದಲ್ಲಿ ತೇಲಿ ಬಂದಂತೆ ಕಾಣುವ ಕವಿಯ ಕಲ್ಪನೆ ವಿಶಿಷ್ಟವಾಗಿದೆ. ನೆರೆ ಸಂತ್ರಸ್ತರ ಬದುಕು, ಹಸಿದ ಮಕ್ಕಳು, ಗಂಜಿ ಕೇಂದ್ರಗಳು ಮತ್ತು ನಿರಾಶ್ರಿತರ ಸಂಕಟಗಳು ಕವಿತೆಯಲ್ಲಿ ಜೀವಂತವಾಗುತ್ತವೆ. ಪ್ರಕೃತಿಯ ವಿಕೋಪದ ಹೊಡೆತ ಮೊದಲು ತಟ್ಟುವುದು ಬಡವರನ್ನೇ ಎಂಬ ಸಾಮಾಜಿಕ ಸತ್ಯವನ್ನು ಕವಿ ಮನಮುಟ್ಟುವಂತೆ ದಾಖಲಿಸಿದ್ದಾರೆ. ೫) ನೇರ ಪ್ರಸಾರಇಗೋ ಇಲ್ಲಿ ನೋಡಿಕದನದ ನೇರ ಪ್ರಸಾರಇಲ್ಲಿ ಇವನ ರುಂಡ ಅಲ್ಲಿ ಮುಂಡಎದೆಯ ಬಿಲ್ಲೆಯ ನಂಬರಿನ ಹೊರತಾಗಿ ಬೇರೇನೂಇಲ್ಲ. ಯುದ್ಧದ ಭೀಕರತೆಯನ್ನು ನೇರವಾಗಿ ಕಟ್ಟಿಕೊಡುವ ಕವಿತೆ ಇದು. ಹಿಂಸೆಯ ದೃಶ್ಯಗಳು ಮಾಧ್ಯಮಗಳಲ್ಲಿ ಮನರಂಜನೆಯಂತೆ ಬಿತ್ತರವಾಗುತ್ತಿರುವ ಕಾಲಘಟ್ಟದಲ್ಲಿ ಮನುಷ್ಯನ ಜೀವಕ್ಕೆ ಬೆಲೆ ಇಲ್ಲದಂತಾಗಿರುವ ದುರಂತವನ್ನು ಕವಿ ಪ್ರಶ್ನಿಸುತ್ತಾರೆ. ಯುದ್ಧಭೂಮಿಯಲ್ಲಿ ಮನುಷ್ಯ ತನ್ನ ಹೆಸರನ್ನೂ ಅಸ್ತಿತ್ವವನ್ನೂ ಕಳೆದುಕೊಂಡು ಕೇವಲ ಸಂಖ್ಯೆಯಾಗಿ ಉಳಿಯುವ ಸ್ಥಿತಿ ಮನಕಲಕುತ್ತದೆ. ಮಾನವೀಯತೆಯ ಪರವಾಗಿ ನಿಲ್ಲುವ ಈ ಕವಿತೆ ಯುದ್ಧೋನ್ಮಾದದ ವಿರುದ್ಧದ ಮೌನ ಪ್ರತಿಭಟನೆಯಾಗಿದೆ. ೬) ಹೊಯ್ಕಾಲಿ ಮಳೆಮೂಡಣದಿಂದ ಪಡುವಣಕೆಸಾಲುಸಾಲಾಗಿ ಬೆನ್ನಿಗೆ ಬ್ಯಾಗು ಹಾಕಿಕೊಂಡತೇಲುವ ಕರಿಮೋಡಗಳ ಮುಗಿಲುಮೊದಲ ದಿನ ಶಾಲೆಗೆ ತಡವಾಗಿಬಂದ ಕಂದನ ಕಣ್ಣ ದಿಗಿಲು. ಮಳೆಗಾಲ ಮತ್ತು ಶಾಲೆಯ ಮೊದಲ ದಿನಗಳ ಬಾಲ್ಯದ ನೆನಪುಗಳನ್ನು ಕವಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಬೆನ್ನಿಗೆ ಬ್ಯಾಗು ಹಾಕಿಕೊಂಡು ಸಾಗುವ ಮಕ್ಕಳಂತೆ ಕರಿಮೋಡಗಳನ್ನು ಕಲ್ಪಿಸಿರುವುದು ಕವಿಯ ಕಾವ್ಯಪ್ರತಿಭೆಗೆ ಸಾಕ್ಷಿ. ಶಾಲೆಗೆ ತಡವಾಗಿ ಬಂದ ಮಗುವಿನ ಕಣ್ಣಿನ ದಿಗಿಲು, ತಾಯಿಯ ಆತಂಕ ಮತ್ತು ಬಾಲ್ಯದ ಮುಗ್ಧತೆ ಈ ಕವಿತೆಯಲ್ಲಿ ಮೇಳೈಸಿವೆ. ಓದುಗರನ್ನು ತಮ್ಮ ಬಾಲ್ಯದ ಮಳೆಗಾಲದ ದಿನಗಳಿಗೆ ಕರೆದೊಯ್ಯುವ ಭಾವನಾತ್ಮಕ ಕವಿತೆ ಇದಾಗಿದೆ. ೭) ಟಪಾಲುಈಗಷ್ಟೇ ತಲುಪಿದ ಮಿಲಿಟರಿಟಪಾಲಿಗೆ ಗಂಧಕದ ಘಾಟುತೆರೆದು ಓದುವ ಧೈರ್ಯ ಯಾರಿಗೂ ಇಲ್ಲಬಣ್ಣಗಳ ಕಲಸಿ ಕುಳಿತ ಪೋರನ ಕಣ್ಣುಗಳಲಿಸಿಡಿಮದ್ದುಗಳ ಹೊಳಪು. ಮಿಲಿಟರಿ ಟಪಾಲಿನ ಮೂಲಕ ಯುದ್ಧದ ಭೀಕರತೆ ಮತ್ತು ಕುಟುಂಬದ ಆತಂಕವನ್ನು ಕವಿ ಕಟ್ಟಿಕೊಡುತ್ತಾರೆ. ಟಪಾಲು ಸಾಮಾನ್ಯವಾಗಿ ಪ್ರೀತಿಯ ಸಂದೇಶವನ್ನು ಹೊತ್ತು ತರುತ್ತದೆ. ಆದರೆ ಇಲ್ಲಿ ಅದು ಆತಂಕ, ಅನಿಶ್ಚಿತತೆ ಮತ್ತು ದುರಂತದ ಸಂಕೇತವಾಗಿದೆ. ಪತ್ರವನ್ನು ತೆರೆಯಲು ಯಾರಿಗೂ ಧೈರ್ಯವಿಲ್ಲ ಎನ್ನುವ ಸಾಲು ಕುಟುಂಬದವರ ಮನಸ್ಥಿತಿಯನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಯುದ್ಧದ ಪರಿಣಾಮ ಸೈನಿಕನೊಬ್ಬನಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಅವನನ್ನು ಕಾಯುವ ಕುಟುಂಬವೂ ಪ್ರತಿಕ್ಷಣ ಅದರ ನೋವನ್ನು ಅನುಭವಿಸುತ್ತದೆ ಎಂಬ ಮಾನವೀಯ ಸತ್ಯವನ್ನು ಈ ಕವಿತೆ ಸಾರುತ್ತದೆ. ೮) ಅಪ್ಪನ ಅಂಗಿಅಪ್ಪನಿಗಿದ್ದುದ್ದು ಒಂದೇಮೊಂಡ ತೋಳಿನ ಅಂಗಿಹತ್ತಿ ಉತ್ತುವಾಗಲೂ, ಜೋಳ ಬಿತ್ತುವಾಗಲೂಮದುವೆಗೂ ಜೈ ಮಸಣಕೂ ಸೈಅಲ್ಲಲ್ಲಿ ಗುಂಡಿ ತಪ್ಪಿದ ಬಟನ್‌ಗಳುಅದರ ಮೈತುಂಬ ಅವ್ವ ಹಾಕಿದ ತೇಪೆಗಳು. ಈ ಸಂಕಲನದ ಶೀರ್ಷಿಕೆಯನ್ನೇ ಹೊತ್ತಿರುವ ಕವಿತೆ ಅತ್ಯಂತ ಮನೋಜ್ಞವಾಗಿದೆ. ಅಪ್ಪನ ಬದುಕಿನ ಸಂಕಷ್ಟ, ಶ್ರಮ, ತ್ಯಾಗ ಮತ್ತು ಕುಟುಂಬದ ಮೇಲಿನ ಪ್ರೀತಿಯನ್ನು ಒಂದು ಅಂಗಿಯ ಮೂಲಕವೇ ಕವಿ ಅನಾವರಣಗೊಳಿಸಿದ್ದಾರೆ.ಅಪ್ಪ ಎನ್ನುವ ಜೀವ ಗಂಧದಂತೆ ತೇದು ಮಕ್ಕಳ ಬದುಕನ್ನು ಹಸನು ಮಾಡಲು ಹಗಲಿರುಳು ದುಡಿಯುತ್ತಾನೆ. ತನ್ನ ಬಣ್ಣಮಾಸಿದ ಅಂಗಿಯ ಬಗ್ಗೆ ಅವನಿಗೆ ಚಿಂತೆಯಿಲ್ಲ. ಹೊಸ ಬಟ್ಟೆಯ ಆಸೆಯೂ ಇಲ್ಲ. ತೇಪೆ ಬಿದ್ದ ಅಂಗಿಯೇ ಅವನಿಗೆ ಎಲ್ಲ ಸಮಾರಂಭಗಳಿಗೂ ಸಾಕು. ಹತ್ತಿ ಉತ್ತುವಾಗ, ಜೋಳ ಬಿತ್ತುವಾಗ, ಮದುವೆಗೂ ಮಸಣಕ್ಕೂ ಜೊತೆಯಾಗುವ ಆ ಅಂಗಿ ಅಪ್ಪನ ಬದುಕಿನ ಮೌನ ಸಾಕ್ಷಿಯಾಗಿದೆ.ಅಲ್ಲಲ್ಲಿ ಗುಂಡಿ ತಪ್ಪಿದ ಬಟನ್‌ಗಳು, ಮೈತುಂಬ ಅವ್ವ ಹಾಕಿದ ತೇಪೆಗಳು ಬಡತನದ ಗುರುತುಗಳಷ್ಟೇ ಅಲ್ಲ; ಅವು ಕುಟುಂಬದ ಪ್ರೀತಿ ಮತ್ತು ಬದುಕಿನ ಅನಿವಾರ್ಯತೆಗಳ ಸಂಕೇತಗಳು. ಅಪ್ಪನ ಅಂಗಿಯನ್ನು ಮಿಲಿಟರಿ ಸಮವಸ್ತ್ರಕ್ಕೆ ಹೋಲಿಸುವ ಕವಿಯ ದೃಷ್ಟಿಕೋನ ಅಪ್ಪನ ಕರ್ತವ್ಯನಿಷ್ಠೆ ಮತ್ತು ಶ್ರಮಜೀವಿ ವ್ಯಕ್ತಿತ್ವವನ್ನು ಎತ್ತಿಹಿಡಿಯುತ್ತದೆ.ಈ ಕವಿತೆ ಓದುಗರನ್ನು ತಮ್ಮ ತಮ್ಮ ಅಪ್ಪಂದಿರ ನೆನಪುಗಳತ್ತ ಕರೆದೊಯ್ಯುತ್ತದೆ. ಅಪ್ಪನ ತ್ಯಾಗವನ್ನು ನೆನಪಿಸಿ ಕಣ್ಣಂಚಿನಲ್ಲಿ ಹನಿಗೂಡಿಸುವ ಶಕ್ತಿ ಈ ಕವಿತೆಗಿದೆ. ‘ತೊಟ್ಟಿಲ ಮಳೆ’, ‘ಖಾಯಂ ವಿಳಾಸ’, ‘ಸೆಕೆಂಡ್ ಹ್ಯಾಂಡ್ ಅಂಗಿಗಳು’ ಮುಂತಾದ ಶೀರ್ಷಿಕೆಗಳೇ ಕವಿಯ ವಿಭಿನ್ನ ಚಿಂತನೆ ಮತ್ತು ವಸ್ತುಗ್ರಹಿಕೆಯನ್ನು ಪರಿಚಯಿಸುತ್ತವೆ. ವಿಶೇಷವಾಗಿ ‘ಸೆಕೆಂಡ್ ಹ್ಯಾಂಡ್ ಅಂಗಿಗಳು’ ಎಂಬ ಶೀರ್ಷಿಕೆಯು ಬಳಕೆಯ ವಸ್ತುಗಳ ಮೂಲಕ ಬದುಕಿನ ಮೌಲ್ಯಗಳು, ನೆನಪುಗಳು ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಶೋಧಿಸುವ ಸಾಧ್ಯತೆಯನ್ನು ತೆರೆದಿಡುತ್ತದೆ.ಈ ಸಂಕಲನದಲ್ಲಿ ಅಂಗಿ, ಟೊಪ್ಪಿಗೆ, ಟಪಾಲು, ಮಳೆ, ದೇವರ ಪಟ ಮುಂತಾದ ಸಾಮಾನ್ಯ ವಸ್ತುಗಳು ಅಸಾಮಾನ್ಯ ಅರ್ಥಗಳನ್ನು ಪಡೆದುಕೊಳ್ಳುತ್ತವೆ. ಇವು ಕೇವಲ ವಸ್ತುಗಳಾಗಿ ಉಳಿಯದೆ ಮನುಷ್ಯನ ಬದುಕಿನ ಅನುಭವಗಳನ್ನು ಹೊತ್ತ ರೂಪಕಗಳಾಗುತ್ತವೆ. ಇದೇ ಕವಿಯ ಲಕಾವ್ಯಭಾಷೆಯ ಪ್ರಮುಖ ಶಕ್ತಿ.ಕಾವ್ಯಭಾಷೆ ಮತ್ತು ಭಾವಸಂವೇದನೆಈ ಸಂಕಲನದ ಕವಿತೆಗಳಲ್ಲಿ ಸರಳತೆ ಮತ್ತು ಸಂಕೀರ್ಣ ಅರ್ಥವಂತಿಕೆ ಜೊತೆಯಾಗಿ ಸಾಗುತ್ತವೆ. ಗ್ರಾಮೀಣ ಬದುಕಿನ ಸೊಗಡು,  ಜೀವನದ ಯಾಂತ್ರಿಕತೆ, ಸಂಬಂಧಗಳ ಸೂಕ್ಷ್ಮತೆ, ಬಡತನದ ನೋವು ಮತ್ತು ಸಾಮಾಜಿಕ ಅಸಮಾನತೆಗಳು ಕವಿಯ ಕಾವ್ಯಪ್ರಜ್ಞೆಯಲ್ಲಿ ರೂಪುಗೊಂಡಿವೆ.ಕವಿಯು ಎಲ್ಲಿಯೂ ಕೇವಲ ಉಪದೇಶಕ್ಕೆ ಇಳಿಯದೆ, ಬದುಕಿನ ಚಿತ್ರಗಳ ಮೂಲಕವೇ ಓದುಗರನ್ನು ಚಿಂತನೆಗೆ ಹಚ್ಚುತ್ತಾರೆ. ಪ್ರಕೃತಿಯ ಚಿತ್ರಣದಲ್ಲಿಯೂ ಸಾಮಾಜಿಕ ಪ್ರಜ್ಞೆ, ಕೌಟುಂಬಿಕ ನೆನಪುಗಳಲ್ಲಿಯೂ ಮಾನವೀಯ ಮೌಲ್ಯಗಳು ಕಾಣಿಸಿಕೊಳ್ಳುತ್ತವೆ. ವೈಯಕ್ತಿಕ ಅನುಭವವನ್ನು ಸಾರ್ವತ್ರಿಕ ಭಾವನೆಯನ್ನಾಗಿ ಪರಿವರ್ತಿಸುವ ಗುಣ ಈ ಕವಿತೆಗಳಿಗೆ ವಿಶೇಷ ಮೆರುಗನ್ನು ನೀಡಿದೆ. ಕೃತಿಯ ಹಿಂದಿನ ಸಾಹಿತ್ಯಿಕ ನುಡಿಗಳು ಈ ಕವನಸಂಕಲನಕ್ಕೆ ಜಿ.ಎನ್. ಮೋಹನ್ ಅವರು ಬೆನ್ನುಡಿ ಬರೆದಿದ್ದಾರೆ. ಪ್ರಕಾಶ ಸುನಂದಾ ಕಡಮೆ ಅವರು ವಿಭಾ ಪ್ರಶಸ್ತಿ ಸಮಿತಿಯ ಸಂಚಾಲಕರ ಪರವಾಗಿ ಮುನ್ನುಡಿ ಬರೆದಿದ್ದಾರೆ. ಪ್ರತಿಭಾನಂದಕುಮಾರ ಸುಬ್ಬು ಹೊಲೆಯಾರ್ ಅವರು ಕೃತಿಗೆ ಶುಭ ಹಾರೈಸಿದ್ದಾರೆ. ಕೃತಿಯ ಸಾಹಿತ್ಯಿಕ ಪಯಣಕ್ಕೆ ಈ ನುಡಿಗಳು ಮತ್ತಷ್ಟು ಮೆರುಗು ನೀಡಿವೆ. ಒಟ್ಟಾರೆಹೇಳುವುದಾದರೆ,ಅಪ್ಪನ ಅಂಗಿಯೊಳಗೆ ಒಂದು ಬದುಕಿನ ಇತಿಹಾಸ. ಡಾ. ಲಕ್ಷ್ಮಣ್ ವಿ.ಎ. ಅವರ ‘ಅಪ್ಪನ ಅಂಗಿ’ ಕವನಸಂಕಲನವು ೨೬ ಕವಿತೆಗಳ ಮೂಲಕ ಬದುಕಿನ ಹಲವು ಮಗ್ಗುಲುಗಳನ್ನು ತೆರೆದಿಡುವ ಅರ್ಥಪೂರ್ಣ ಕಾವ್ಯಕೃತಿಯಾಗಿದೆ. ವೈಯಕ್ತಿಕ ನೆನಪುಗಳಿಂದ ಸಾಮಾಜಿಕ ವಾಸ್ತವದವರೆಗೆ ವಿಸ್ತರಿಸುವ ಈ ಕಾವ್ಯಯಾನ ಓದುಗರಲ್ಲಿ ಭಾವನಾತ್ಮಕ ಸ್ಪಂದನೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನೂ ಮೂಡಿಸುತ್ತದೆ.ಅಪ್ಪನ ಅಂಗಿಯ ಮೇಲಿನ ತೇಪೆಗಳು ಬಡತನದ ಗುರುತುಗಳಾಗಿರಬಹುದು;ಆದರೆ ಅವುಗಳೊಳಗೆ ಅಡಗಿರುವುದು ಪ್ರೀತಿ, ಪರಿಶ್ರಮ, ತ್ಯಾಗ ಮತ್ತು ಜವಾಬ್ದಾರಿಗಳ ಅಮೂಲ್ಯ ಸಂಪತ್ತು. ಕಾಲ ಬದಲಾದರೂ ಅಪ್ಪನ ಬೆವರಿನ ಘಮಲು ಬದಲಾಗುವುದಿಲ್ಲ. ಅಂಗಿ ಹಳೆಯದಾದರೂ ಅದರೊಳಗಿನ ಪ್ರೀತಿಗೆ ಎಂದಿಗೂ ಮುಪ್ಪಿಲ್ಲ.ಕವಿತೆ ಕವಿಯ ಅಂತರಂಗದಲ್ಲಿ ಜಿನುಗುವ ಜೀವದ್ರವ್ಯ. ಅದನ್ನು ಅಕ್ಷರಗಳ ಮೂಲಕ ಓದುಗರ ಹೃದಯಕ್ಕೆ ತಲುಪಿಸುವುದೇ ನಿಜವಾದ ಕಾವ್ಯಸಾಧನೆ. ಆ ನಿಟ್ಟಿನಲ್ಲಿ ‘ಅಪ್ಪನ ಅಂಗಿ’ ಬದುಕಿನ ಹಲವು ಮಗ್ಗುಲುಗಳನ್ನು ತೆರೆದಿಡುವ ಸಂವೇದನಾಶೀಲ ಕೃತಿಯಾಗಿ ಗಮನ ಸೆಳೆಯುತ್ತದೆ.ಅಪ್ಪನ ಅಂಗಿಯ ತೇಪೆಗಳಲ್ಲಿ ಬದುಕಿನ ಕಥೆಗಳಿವೆ; ಆ ಕಥೆಗಳಲ್ಲಿ ಮನುಷ್ಯತ್ವದ ಘಮಲಿದೆ. ಇಂತಹ ಕಾವ್ಯಾನುಭವವನ್ನು ಓದುಗರಿಗೆ ನೀಡಿದ ಕವಿ ಡಾ. ಲಕ್ಷ್ಮಣ್ ವಿ.ಎ. ಅವರಿಗೆ ಅಭಿನಂದನೆಗಳು. ಕೃತಿಯ ಸಾಹಿತ್ಯಿಕ ಪಯಣ ಯಶಸ್ವಿಯಾಗಲಿ. ಶಿವಲೀಲಾ ಹುಣಸಗಿ

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಸ್ವಾತಂತ್ರ್ಯ ಸಿಂಹಿಣಿ ಬಳ್ಳಾರಿ ಸಿದ್ದಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಲಿಂಗಾಯತ ನಾಯಕ ನಾಯಕಿಯರ ಪಾತ್ರ ಎಂಬ ಶೀರ್ಷಿಕೆಯ ಅಡಿಯಲ್ಲಿ ನಾನು ಒಂದು ಕೃತಿ ರಚನೆ ಮಾಡಬೇಕೆಂದು ಬೇರೆ ಪ್ರದೇಶಗಳ ಲಿಂಗಾಯತ ಮಹನೀಯರ ಮಹಿಳೆಯರ ಇತಿಹಾಸ ಚರಿತ್ರೆ ಓದುತ್ತಿರುವಾಗ ಕಣ್ಣಿಗೆ ಬಿದ್ದ ಸ್ವಾತಂತ್ರ್ಯ ಸಿಂಹಿಣಿ ಬಳ್ಳಾರಿ ಸಿದ್ದಮ್ಮ ಒಬ್ಬ ದಿಟ್ಟ ಹೋರಾಟಗಾರ್ತಿ. ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಅದಕ್ಕೂ ಪೂರ್ವದಲ್ಲಿ ಮಹಿಳೆಯರು ಹೋರಾಟದ ಮುಂಚೂಣಿಯಲ್ಲಿದ್ದರು. ಭಾರತವು ಸಂಪ್ರದಾಯಸ್ಥ ಸಮಾಜದ ಬುನಾದಿಯ ಮೇಲೆ ನಿಂತಿದೆ. ಪುರುಷ ಪ್ರಧಾನ ಸಮಾಜವಾದುದರಿಂದ ಮಹಿಳೆಯನ್ನು ಅಬಲೆ, ಅಶಕ್ತಳು, ಬುದ್ದಿಗೇಡಿ ಎಂದೆಲ್ಲ ಹೀಗಳೆಯುವುದನ್ನು ನೋಡಿದ್ದೇವೆ.  ಅದರೆ ಉಲ್ಲಾಳದ ರಾಣಿ ಅಬ್ಬಕ್ಕದೇವಿ,ಕಿತ್ತೂರುರಾಣಿ ಚನ್ನಮ್ಮ,ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ಕೆಳದಿ  ಸಂಸ್ಥಾನದ ರಾಣಿ ಚನ್ನಮ್ಮಾಜಿ ಹೀಗೆ ಹಲವಾರು ವೀರ ವನಿತೆಯರು ಹೆಸರುವಾಸಿಯಾಗಿದ್ದಾರೆ. ಇದರ ಹತ್ತರಷ್ಟು ಮಹಿಳೆಯರು ಪರೋಕ್ಷವಾಗಿ ಪರೋಕ್ಷ ಹೋರಾಟ ಮಾಡಿದ್ದಾರೆ. ಆದರೆ ಅವರು ಬೆಳಕಿಗೆ ಬಾರದಿರಬಹುದು. ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಮಂದಿ ಹೋರಾಡಿದ್ದಾರೆ. ಕೆಲವರು ಬೆಳಕಿಗೆ ಬಂದರೆ ಮತ್ತೆ ಕೆಲವರು ಬೆಳಕಿಗೆ ಬರಲಿಲ್ಲ. ಕೆಲವರು ಕರ್ನಾಟಕ ಏಕೀಕರಣದಲ್ಲಿ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು ಸ್ವಾತಂತ್ರ್ಯಾನಂತರ ಫಲಾಪೇಕ್ಷೆಯಿಲ್ಲದೆ ತೆರೆಯ ಮರೆಗೆ ಸರಿದದ್ದೂ ಊಂಟು. ಅಂತಹವರಲ್ಲಿ ಪ್ರಮುಖ ಮಹಿಳೆ ಎಂದರೆ ‘ಬಳ್ಳಾರಿ ಸಿದ್ದಮ್ಮ’ನವರು. ಕರ್ನಾಟಕದ ಒಬ್ಬ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕಿ ಮತ್ತು ರಾಜಕಾರಣಿ. ಮೈಸೂರು ಸಂಸ್ಥಾನದ ಪೊಲೀಸರಿಂದ ಬಂಧಿತರಾದ ಮೊದಲ ಮಹಿಳಾ ಸತ್ಯಾಗ್ರಹಿ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಬಾಲ್ಯ ಬಳ್ಳಾರಿ ಸಿದ್ದಮ್ಮನವರು  ಹಾವೇರಿ ತಾಲ್ಲೂಕಿನ ದುಂಡಸಿ ಗ್ರಾಮದ ಸಂಪ್ರದಾಯಸ್ಥ ಲಿಂಗಾಯತ ಸಮುದಾಯದ ಕುಟುಂಬದಲ್ಲಿ ೧೯೦೩ರಲ್ಲಿ ಜನಿಸಿದರು. ಇವರ ತಂದೆ ತಾಯಂದಿರು ಬಸೆಟಪ್ಪ ಮತ್ತು ಶಿವಮ್ಮ. ಬಸೆಟಪ್ಪ(ಬಸಪ್ಪ)ನವರು ಮಧ್ಯಮ ಪ್ರಮಾಣದ ಲಿಂಗಾಯತ ವ್ಯಾಪಾರಸ್ಥರು. ಈಗಾಗಲೇ ತಿಳಿಸಿರುವಂತೆ ಸಂಪ್ರದಾಯಸ್ಥ ಸಮಾಜ ಇಂತಹ ಸಮಾಜದಲ್ಲಿ ಹೆಣ್ನುಮಕ್ಕಳನ್ನು ಶಾಲೆಗೆ ಕಳುಹಿಸುವ ಪದ್ದತಿ ಇರಲಿಲ್ಲ. ಅವರ ಕಲಿಕೆ ಏನಿದ್ದರೂ ಮನೆಯ ನಾಲ್ಕು ಗೋಡೇಗಳ ಮಧ್ಯೆ. ಸಿದ್ದಮ್ಮಳಿಗೆ ಕಲಿಯಬೇಕೆಂಬ ಇಚ್ಚೆಯಿದ್ದರೂ  ತಂದೆತಾಯಂದಿರು ಅದಕ್ಕೆ ವಿರೋಧ ಮಾಡಿದರು.ಅದಕ್ಕೆ ವಿರೋಧ ಮಾಡಿದರು. ಕದ್ದುಮುಚ್ಚಿ ನಾಲ್ಕನೆಯ ಇಯತ್ತಿನ ತನಕ ವ್ಯಾಸಂಗ ಮಾಡಿದ್ದಾಯ್ತು. ಪ್ರಾಪ್ತ ವಯಸ್ಸಿಗೆ ಬರುತ್ತಲೇ ಬಳ್ಳಾರಿಯ ಮುರುಗಪ್ಪನವರೊಂದಿಗೆ ವಿವಾಹವಾಯ್ತು. ಸುಖ ದಾಂಪತ್ಯ ಮನೆಯಲ್ಲಿ ಯಾವುದಕ್ಕೊ ಕೊರತೆ ಇರಲಿಲ್ಲ. ಗಾಂಧಿಯವರ ಪ್ರಭಾವ* ರಾಷ್ಟ್ರೀಯ ಆಂದೋಲನವು ಇಡೀ ದೇಶವನ್ನು ವ್ಯಾಪಿಸಿತು. ಅದರಲ್ಲೂ ಮಹಾತ್ಮ ಗಾಂಧಿಯವರು ಪ್ರಭಾವದಿಂದಾಗಿ ೧೯೨೦ರಲ್ಲಿ ಆಸಹಕಾರ ಚಳುವಳಿ,೧೯೩೦ರಲ್ಲಿ ಉಪ್ಪಿನ ಸತ್ಯಾಗ್ರಹಗಳು ಭಾರತೀಯರಲ್ಲಿ ಸ್ವಾತಂತ್ರ್ಯದ ಕಿಚ್ಛನ್ನು ವಿದ್ಯಾವಂತರಲ್ಲದಿದ್ದರೂ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಅವರ ಮನಸ್ಸು ತುಡಿಯುತ್ತಿತ್ತು. ತಿಲಕರ ಕೇಸರಿ, ಮರಾಠಿ ಪತ್ರಿಕೆಗಳು ಹಾಗು ನೌಕಳು ಪತ್ರಿಕೆಯು ಅವರ ಮೇಲೆ ಪ್ರಬಾವ ಬೀರಿತು. ಮಹಾತ್ಮ ಗಾಂಧೀಜಿಯವರನ್ನು ನೋಡಿರದಿದ್ದರೂ ಅವರ ಪ್ರಭಾವ ಮುರುಗಪ್ಪ ದಂಪತಿಗಳ ಮೇಲೆ ಬಿದ್ದಿತು. ಸಿದ್ದಮ್ಮನವರಿಗೆ ಗಾಂಧೀಜಿಯವರನ್ನು ನೋಡಬೇಕು, ಆ ಮಹಾತ್ಮನೊಂದಿಗೆ ಮಾತನಡಬೇಕು, ಅವರ ಎಲ್ಲಿ ಇರುತ್ತಾರೆ, ಎಲ್ಲಿ ಸಿಗುತ್ತಾರೆ ಎಂಬ ಕುತೂಹಲ. ಗಾಂಧೀಜಿಯವರನ್ನು ನೋಡಬೇಕೆಂದರೆ ವಾರ್ದಾದ ಅವರ ಆಶ್ರಮಕ್ಕೆ ಹೋದರೆ ಸಿಗುತ್ತಾರೆ ಎಂದು ತಿಳಿಯಿತು.ಅಲ್ಲಿಗೆ ಹೋಗಿ ಬರಲು ಹಣ ಬೇಕು. ಕೆಲವು ಕಾಲ ಅಲ್ಲಿಯೇ ತಂಗಬೇಕು. ಇವೇ ಮುಂತಾದ ಪ್ರಶ್ನೆಗಳು ಬಂದಾಗ ಉತ್ತರ ಸಿದ್ದಮ್ಮನವರಲ್ಲಿತ್ತು. ಮನಸ್ಸಿದ್ದರೆ ಮಹಾದೇವ. ಗಾಂಧೀಜಿಯವರ ಆಶ್ರಮದಲ್ಲಿ ಸಿದ್ದಮ್ಮನವರು ಗಾಂಧೀಜಿಯವರನ್ನು ನೋಡಲೇಬೇಕು ಅವರೊಂದಿಗೆ ಮಾತನಾಡಲೇಬೇಕು ಎಂಬ ಹಂಬಲದಿಂದ ಗುಜರಾತಿನ ವಾರ್ದಾಕ್ಕೆ ತೆರಳಿದರು ಸಿದ್ದಮ್ಮನವರು. ಗಾಂಧೀಜಿಯವರನ್ನು ನೋಡಿ ಅವರೊಂದಿಗೆ ಮಾತನಾಡಿದರು. ಗಾಂಧೀಜಿಯವರ ಪ್ರಭಾವ ಸಿದ್ದಮ್ಮನವರ ಮೇಲೆ ಬಿತ್ತು. ಆಶ್ರಮದಲ್ಲಿದ್ದ ಸಮಯದಲ್ಲಿ ಸ್ವಚ್ಛತಾ ಕೆಲಸ ಅಂದರೆ ಕಸಗುಡಿಸುವುದು, ಪಾತ್ರೆ ತೊಳೆಯುವುದು, ದವಸ ದಾನ್ಯಗಳಲ್ಲಿರುವ ಕಲ್ಲು, ಕಡ್ಡಿ ತೆಗೆಯುವುದು. ಹಿತಮಿತವಾದ ಭೋಜನ. ಬೆಳಿಗ್ಗೆ ನಿತ್ಯಕರ್ಮಗಳಾದ ಮೇಲೆ ದೇವರ ಪ್ರಾರ್ಥನೆ, ಭಜನೆ ಇವೇ ಮುಂತಾದವು ಕಡ್ಡಾಯವಾಗಿತ್ತು. ದೇಶದ ನಾಯಕರಗಳಾದ ಸರ್ದಾರ್ ವಲ್ಲಭಬಾಯಿ ಪಟೇಲ್, ರಾಜಗೋಪಾಚಾರಿ, ಕಾಮರಾಜ್ ಇವರೇ ಮುಂತಾದವರನ್ನು ಕಾಣಾವ ಭಾಗ್ಯ ದೊರೆಯಿತು. ತಾನೂ ಅಂತಹ ನಾಯಕಿಯಾಗಬೇಕೆಂಬ ಹಂಬಲ ಸಿದ್ದಮ್ಮನವರಲ್ಲಿ ಮೂಡಿತು. ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂಬ ತೀರ್ಮಾನಿಸಿದರು. ಕರ್ನಾಟಕ ರಾಜ್ಯವು ಅಂದು ಹರಿದು ಹಂಚಿಹೋಗಿತ್ತು. ಒಂದೆಡೆ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಯುತ್ತಿದ್ದರೆ ಮತೋಂದೆಡೆ ಸ್ವಾತಂತ್ಯಕ್ಕಾಗಿ ಹೋರಾಟ ನಡೆಯುತ್ತಿತ್ತು. ಉತ್ತರ ಕರ್ನಾಟಕ ಭಾಗದಲ್ಲಿ ಹಳೇ ಮೈಸೂರು ಭಾಗದಲ್ಲಿ ಓತಪ್ರೇತನವಾಗಿ ಬ್ರಿಟಿಷರ ಹಾಗೂ ಆಳರಸರ ವಿರುದ್ದ ಚಳುವಳಿ ನಡೆಯುತ್ತಿತ್ತು. ಕರ್ನಾಟಕದಲ್ಲಿ ರಾಷ್ಟ್ರೀಯ ಆಂದೋಲನದಲ್ಲಿ ಮಹಿಳೆಯರೂ ಕೂಡ ಭಾಗವಹಿಸಿ ಚಳುವಳಿ ಮಾಡಿರುವ ಕೆಲವರನ್ನು ಮಾತ್ರ ಇಲ್ಲಿ ಹೆಸರಿಸಬಹುದು ಅವರುಗಳೆಂದರೆ-  ೧. ಕಮಲಾದೇವಿ ಚಟ್ಟೋಪಾಧ್ಯಾಯ(ಮಂಗಳೂರು)  ೨.ಉಮಾಬಾಯಿ ಕುಂದಪುರ(ಹುಬ್ಬಳ್ಳಿ)  ೩.ಬಳ್ಲಾರಿ ಸಿದ್ದಮ್ಮ(ಹಾವೇರಿ)  ೪.ನಾಗಮ್ಮ ಪಾಟೀಲ(ಹುಬ್ಬಳ್ಳಿ) ೫.ಯಶೋಧರಮ್ಮ  ದಾಸಪ್ಪ(ಬೆಂಗಳೂರು) ಇವರುಗಳಲ್ಲಿ ಯಶೋಧರಮ್ಮನವರು ಮತ್ತು ಬಳ್ಳಾರಿ ಸಿದ್ದಮ್ಮನವರು ಮುಂಚೂಯಲ್ಲಿದ್ದು ಚಳುವಳಿಗಾರರನ್ನು ಹರಿದುಂಬಿಸುತ್ತಿದ್ದರು. ಪೋಲಿಸರಿಗೆ ಹೆದರದೆ ಭಾಷಣ ಮಾಡುತ್ತಿದ್ದರು. ಪ್ರತಿಯೊಬ ವ್ಯಕ್ಥಿಗೂ ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಇಲ್ಲದಿದ್ದರೆ ಅದು ಕೈತಪ್ಪಿ ಹೋಗುತ್ತದೆ. ಅಂತಹ ಒಂದು ಅವಕಾಶ ಸಿದ್ದಮ್ಮನವರಿಗೆ ಲಭಿಸಿತು. ಅವೇ ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹ. ಸಿದ್ದಮ್ಮನವರು ಬಳ್ಳಾರಿ ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ನಡೆಯುತ್ತಿದ್ದ ಚಳುವಳಿಗಳು ಹರತಾಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಶ್ರೀಯುತರುಗಳಾದ ಎಸ್.ನಿಜಲಿಂಗಪ್ಪ, ಟಿ.ಸಿದ್ದಲಿಂಗಯ್ಯ, ಕೆ.ಎಸ್.ಪಾಲರು ಹಾಗೂ ಇನ್ನಿತರ ಮುಖಂಡರು ಚಳುವಳಿಯನ್ನು ಹಬ್ಬಿಸುತ್ತಿದ್ದರು. ಸಿದ್ದಮ್ಮನವರು ಈ ನಾಯಕರುಗಳಿಗೆ ಸಾತ್ ನೀಡುತ್ತಿದ್ದರು ಶಿವಪುರ ದ್ವಜಸತ್ಯಾಗ್ರಹದಲ್ಲಿ ಸಿದ್ದಮ್ಮನವರ ಪಾತ್ರ ______________________ ಇಡೀ ರಾಜ್ಯದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ದ್ವಜವನ್ನು ಸಾರ್ವಜನಿಕವಾಗಿ ಧ್ವಜಾರೋಹಣ ಮಾಡಲು ಒಂದು ಸ್ವಾಗತ ಸಮಿತಿಯನ್ನು ರಚಿಸಿಕೊಂಡರು. ಇದೊಂದು ಭಾರೀ ಪ್ರಮಾಣದ ಸಭೆಯಾದುದರಿಂದ ಹೆಚ್ಚಾಗಿ ಹಣಕಾಸಿನ ಅಗತ್ಯವಿದ್ದಿತು. ಆ ಕಾರಣದಿಂದಾಗಿಯೇ ಸಾಹುಕಾರ್ ಚನ್ನಯ್ಯನವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಹೆಚ್.ಕೆ.ವೀರಣ್ನಗೌಡರು ಕಾರ್ಯದರ್ಶಿಗಲಳು ಕೊಪ್ಪದ ಜೋಗಿಗೌಡರನ್ನು ಖಜಾಂಚಿಯನ್ನಾಗಿಯೂ ಎಂ.ಎನ್.ಜೋಯಿಸ್ರವರನ್ನು ಜೆ.ಓ.ಸಿ.ಯನ್ನಾಗಿ ನೇಮಕ ಮಾಡಿರುವುದಗಿ ಪ್ರಕಟಿಸಿದರು. ಶಿವಪುರದಲ್ಲಿ ತಿರುಮಲೇಗೌಡರ ಜಾಗದಲ್ಲಿ ಧ್ವಜಾರೋಹಣ ಮಾಡಲು ತೀರ್ಮಾನಿಸಿದರು. ಸಭೆ ನಡೆಯುವ ಒಂದು ವಾರ ಮೊದಲೇ ಹೆಚ್.ಸಿ.ದಾಸಪ್ಪ, ಯಶೋಧರ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ತಾಯಮ್ಮ ವೀರಣ್ಣಗೌಡ, ವೆಂಕಮ್ಮ ಸೀತಾರಾಮಯ್ಯ ಇಂದಿರಾಬಾಯಿ ಕೃಷ್ಣಮೂರ್ತಿ ಇನ್ನೂ ಮುಂತಾದ ನಾಯಕರು ಶಿವಪುರಕ್ಕೆ ಬಂದಿಳಿದರು. ಮಹಿಳೆಯರು ಒಂದೊಂದು ತಂಡಗಳನ್ನಾಗಿ ಮಾಡಿಕೊಂಡು ಹಳ್ಳಿಗಳಿಗೆ ತೆರಳಿ ಗ್ರಾಮಗಳ ಮಹಿಳೆಯರು ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದರು. ಸಿದ್ದಮ್ಮನವರು ಬಳ್ಳಾರಿಯಿಂದ ಶಿವಪುರದಂತಹ ಹಳ್ಳಿಗೆ ಬಂದು ಜನರನ್ನು ಹುರಿದುಂಬಿಸುತ್ತಿರುವುದನ್ನು ನೋಡಿದ ಜನ ಸ್ವಇಚ್ಛೆಯಿಂದ ಚಳುವಳಿಗೆ ಧುಮುಕಿದರು. ಹೆಚ್.ಕೆ.ವೀರಣ್ಣಗೌಡ, ಹೆಚ್.ಸಿ.ದಾಸಪ್ಪ, ಸಾಹುಕಾರ್ ಚನ್ನಯ್ಯ ಇನ್ನೂ ಮುಂತಾದವರು ಟಿ. ಸಿದ್ದಲಿಂಗಯ್ಯನವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿದರು. ಇಂದಿನ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕು ಶಿವಪುರದಲ್ಲಿ ೧೯೩೮ ಏಪ್ರಿಲ್ ೧೧, ೧೨ ಹಾಗೂ ೧೩ರಂದು ಕಾಂಗ್ರೆಸ್ ದ್ವಜವನ್ನು ಹಾರಿಸಲು ತೀರ್ಮಾನಿಸಿದರು. ಇದನ್ನು ಶಿವಪುರ ರಾಷ್ಟ್ರಕೂಟವೆಂದು ಕರೆದರು. ೧೯೩೮ ಏಪ್ರಿಲ್ ೧೧ನೇ ತಾರೀಖು ಶಿವಪುರದಲ್ಲಿ ಮೂವತ್ತು ಸಾವಿರ ಜನ ಸೇರಿದರು. ಜಿಲ್ಲಾ ಮ್ಯಾಜಿಸ್ಟ್ರೇಟರಾದ ಜಿ.ಎಂ.ಮೇಕ್ರಿಯವರು ಶಿವಪುರ ಸುತ್ತಮುತ್ತ ಧ್ವಜಾರೋಹಣ ಮಾಡದಂತೆ ನಿಷೇಧಾಜ್ನೆಯನ್ನು ಜಾರಿಗೆ ತಂದತು. ೧೧ನೇ ತಾರೀಖು ಟಿ. ಸಿದ್ದಲಿಂಗಯ್ಯನವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಟಿ ಸಿದ್ದಲಿಂಗಯ್ಯನವರು ಧ್ವಜಾರೋಹಣ ಮಾಡಲಾಗಿ ಅವರನ್ನು ಬಂಧಿಸಿ ಜಿಲ್ಲಾ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ಸ್ತ್ರೀ ಮುಖಂಡರು ವೇದಿಕೆಯ ಮೇಲೆ ಕುಳಿತಿದ್ದರು. ಸಿದ್ದಲಿಂಗಯ್ಯನವರು ತರುವಾಯ ಹೆಚ್.ಸಿ.ದಾಸಪ್ಪನವರು, ಎಂ.ಎಸ್.ಜೋಯಿಸ್, ಯಶೋಧರ ದಾಸಪ್ಪನವರು, ನಂತರ ಬಳ್ಳಾರಿ ಸಿದ್ದಮ್ಮನವರು ಧ್ವಜಾರೋಹಣ ಮಾಡಿದರು. ಇವರುಗಳನ್ನು ಬಂಧಿಸಿ ಮಂಡ್ಯದ ಜಿಲ್ಲಾ ನ್ಯಾಯಾಲಯಕ್ಕೆ ಕರೆದೂಯ್ದರು. ಬಳ್ಳಾರಿ ಸಿದ್ದಮ್ಮನವರಿಗೆ ಶಿಕ್ಷೆಯಾಯಿತು. ಏಪ್ರಿಲ್ ೧೩ನೇ ತಾರೀಖು ಸಾಯಂಕಾಲ ಶಿವಪುರ ರಾಷ್ಟ್ರಕೂಟ ಚಳುವಳಿ ಸಮಾಪ್ತವಾಯಿತು. ವಿದುರಾಶ್ವತ್ಥ ಧ್ವಜಸತ್ಯಾಗ್ರಹದಲ್ಲಿ ಸಿದ್ದಮ್ಮನವರು ___________________ ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹವು ಚಳುವಳಿಗಾರರಿಗೆ ಸ್ಫೂರ್ತಿಯಾಯಿತು. ತಮ್ಮ ತಮ್ಮ ಪಟ್ಟಣಗಳಲ್ಲಿ ಧ್ವಜಾರೋಹಣ ಮಾಡಲು ಜನ ಮುಂದಾದರು. ಅದೇರೀತಿ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ವಿದುರಾಶ್ವತ್ಥ ಎಂಬಲ್ಲಿ ಧ್ವಜಸತ್ಯಾಗ್ರಹ ಏರ್ಪಾಡಯಿತು. ಈಗಾಗಲೇ ತಿಳಿಸಿರುವಂತೆ ಶಿವಪುರ ರಾಷ್ಟ್ರಕೂಟದ ಪ್ರಭಾವದಿಂದಾಗಿ ಬಳ್ಳಾರಿ ಸಿದ್ದಮ್ಮನವರು ಸೇರಿದಂತೆ ಕೆಲವು ಮಹಿಳಾ ಮುಖಂಡರು ವಿದುರಾಶ್ವತ್ಥಕ್ಕೆ ಬಂದಿಳಿದು ಧ್ವಜಾರೋಹಣ ಮಾಡಿದರು. ಜಿಲ್ಲಾ ಮ್ಯಾಜಿಸ್ಟ್ರೇಟರ ಆಜ್ನೆಯಂತೆ ಪೋಲಿಸರು ಚಳುವಳಿಕಾರರ ಮೇಲೆ ಗುಂಡು ಹಾರಿಸಿದರು. ಕೆಲವರು ಅಸುನೀಗಿದರು. ಗರ್ಭಿಣಿ ಸ್ತ್ರೀಯೊಬ್ಬಳು ಈ ಗೋಲಿಬಾರ್ನಲ್ಲಿ ಅಸುನೀಗಿದಳು ಎಂದು ಸುಳ್ಳು ಸುದ್ದಿ ಹರಡಿತು. ಜನ ರೊಚ್ಚಿಗೆದ್ದು ದಾಂದಲೆ ನಡೆಸಿದರು. ಇದು ರಾಷ್ಟೀಯ ಸುದ್ದಿಯಾಯಿತು. ಮಹಾತ್ಮ ಗಾಂಧಿಯವರಿಗೆ ಈ ವಿಷಯದ ಸತ್ಯಾಂಶವನ್ನು ತಿಳಿದು ಬರುವಂತೆ ಆಚಾರ್ಯ ಕೃಪಲಾನಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಕಳುಹಿಸಿಕೊಟ್ಟರು. ೧೯೮೧ ರಲ್ಲಿ ಇಂತಹ ದಿವ್ಯ ಜ್ಯೋತಿ ಬಯಲಲ್ಲಿ ಬಯಲಾಯಿತು. ಉತ್ಕಟ ರಾಷ್ಟ್ರ ಪ್ರೇಮ ದೇಶಾಭಿಮಾನ ಹೊಂದಿದ ಸರಳ ಸಜ್ಜನಿಕೆಯ ಈ ತಾಯಿ ಇಂದಿನ ರಾಜಕೀಯ ವ್ಯವಸ್ಥೆಗೆ ಮಾದರಿ. ಸಾವಿಲ್ಲದ ಶರಣೆ ಬಳ್ಳಾರಿ ಸಿದ್ದಮ್ಮ ______________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Read Post »

You cannot copy content of this page

Scroll to Top