ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ
“ಮುಂದೆ ಹೋಗಲು ದಾರಿ ಬಿಡಿ”


ಬಾನಂಗಳದಿ ಸ್ವಚ್ಚಂದವಾಗಿ ಹಾರಲು ಹೊದರೆ
ರೆಕ್ಕೆ ಕತ್ತರಿಸಿ ಬಿಡುವಿರಿ
ಮನಸಾರೆ ಈಜಲು ಹೋದರೆ
ಜಲದಾಳದಲ್ಲೆ ಸಿಡಿಮದ್ದು ಸಿಡಿಸುವಿರಿ
ನೆಲೆದಗಲ ಹಬ್ಬಲು ಹೋದರೆ
ಅಡ್ಡ ಬೇಲಿ ಹಾಕಿ ತಡೆಯುವಿರಿ
ಬೆಳೆದು ಹೆಮ್ಮರವಾಗಲು ಹೋದರೆ
ಬುಡಕ್ಕೆ ಬೆಂಕಿ ಹಚ್ಚುವಿರಿಅ
ಅಡೆತಡೆಯಿಲ್ಲದೆ ಓಡಬೇಕೆಂದರೆ
ಗಡಿರೇಖೆ ಹಾಕಿ ನಿಲ್ಲಿಸಿಬಿಡುವಿರಿ
ಹೀಗಾದರೆ ನಾವು ನೆಲೆ ಕಾಣುವುದು ಹೇಗೆ? ಬದುಕಿನ ಗುರಿ ಸಾಧಿಸುವುದಾದರೂ ಹೇಗೆ
ವಿಶ್ವಮಾನವನಾಗುವದಿರಲಿ
ಮಾನವತೆಯುಳ್ಳ ಮನುಷ್ಯನಾಗಲಾದರೂ
ನಮ್ಮನ್ನು ಬಿಟ್ಟು ಬಿಡಿ ,ಬಿಟ್ಟು ಬಿಡಿ
ಲಕ್ಷ್ಮೀದೇವಿ ಪತ್ತಾರ



