ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಬಾನಂಗಳದಿ ಸ್ವಚ್ಚಂದವಾಗಿ ಹಾರಲು ಹೊದರೆ
 ರೆಕ್ಕೆ ಕತ್ತರಿಸಿ ಬಿಡುವಿರಿ

ಮನಸಾರೆ ಈಜಲು  ಹೋದರೆ
ಜಲದಾಳದಲ್ಲೆ ಸಿಡಿಮದ್ದು ಸಿಡಿಸುವಿರಿ

 ನೆಲೆದಗಲ  ಹಬ್ಬಲು ಹೋದರೆ
 ಅಡ್ಡ ಬೇಲಿ ಹಾಕಿ ತಡೆಯುವಿರಿ

ಬೆಳೆದು ಹೆಮ್ಮರವಾಗಲು ಹೋದರೆ
ಬುಡಕ್ಕೆ ಬೆಂಕಿ ಹಚ್ಚುವಿರಿಅ

 ಅಡೆತಡೆಯಿಲ್ಲದೆ ಓಡಬೇಕೆಂದರೆ
ಗಡಿರೇಖೆ ಹಾಕಿ ನಿಲ್ಲಿಸಿಬಿಡುವಿರಿ

ಹೀಗಾದರೆ ನಾವು ನೆಲೆ ಕಾಣುವುದು ಹೇಗೆ? ಬದುಕಿನ ಗುರಿ ಸಾಧಿಸುವುದಾದರೂ  ಹೇಗೆ

ವಿಶ್ವಮಾನವನಾಗುವದಿರಲಿ
ಮಾನವತೆಯುಳ್ಳ ಮನುಷ್ಯನಾಗಲಾದರೂ
ನಮ್ಮನ್ನು ಬಿಟ್ಟು ಬಿಡಿ ,ಬಿಟ್ಟು ಬಿಡಿ


ಲಕ್ಷ್ಮೀದೇವಿ ಪತ್ತಾರ

About The Author

Leave a Reply

You cannot copy content of this page

Scroll to Top