ಕಥಾ ಸಂಗಾತಿ
ದಯಾನಂದ ಪಾಟೀಲರ
“ಹೆತ್ತಪ್ಪನ ಕೂಗು…..”


ಅದೊಂದು ಸಣ್ಣ ಹಳ್ಳಿ ಶಿವಳ್ಳಿ ಸುಂದರ ಹಾಗೂ ಹಸಿರು ತುಂಬಿದ ವನ ಸಿರಿ. ಕೋಗಿಲೆಯ ಇಂಪು ಪಕ್ಷಿಗಳ ಕೂಗು ನವಿಲುಗಳ ಕುಣಿತ ಹೀಗೆ ಹೇಳುತ್ತಾ ಹೋದರೆ ಕೊನೆಯೆ ಇಲ್ಲ. ಶಿವಳ್ಳಿ ಗ್ರಾಮದ ಮುಖಂಡ ಅವನೇ ಶಿವಲಿಂಗ ಹೆಸರಿಗೆ ತಕ್ಕಂತೆ ಇದ್ದ ಯಾವುದೇ ಸಮಸ್ಯೆ ಇರಲಿ ಪರಿಹಾರ ಸಿಗುವತನಕ ಹಠ ಬಿಡುತ್ತಿರಲಿಲ್ಲ ಇವನ ನಿಸ್ವಾರ್ಥ ಸೇವೆ ಕಂಡು ದೇವತಾ ಮನುಷ್ಯ ಎಂದು ಕರೆಯುತ್ತಿದ್ದರು. ಜಾತಿ ಧರ್ಮ ನೋಡದೇ ಸಾವು ನೋವು, ಮದುವೆ ಮನೆಯ ವಾಸ್ತು ಶಾಂತಿ ಎಲ್ಲವನ್ನು ಹೆಗಲು ಮೇಲೆ ಇಟ್ಟುಕೊಂಡು ಪೂರ್ಣ ಮಾಡುತ್ತಿದ್ದ ಕೆಲಸದ ವೈಖರಿ ನೋಡಿ ಹತ್ತಳ್ಳಿಗೆ ಜನಪ್ರಿಯನಾಗಿದ್ದ ಶಿವಲಿಂಗನಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು ಇದ್ದರು. ಇಬ್ಬರು ಮಕ್ಕಳಿಗೆ ತಕ್ಕಮಟ್ಟಿಗೆ ಶಿಕ್ಷಣ ಪಡೆದಿದ್ದರೂ ನೂರಾರು ಏಕರೆ ಗದ್ದೆ ಇರುವುದರಿಂದ ಕೃಷಿಯಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಸಂತೋಷ ಕಂಡಿದ್ದರು. ತಂದೆಗೆ ಮಕ್ಕಳ ದುಡಿಮೆ ನೋಡಿ ಹೆಮ್ಮೆ ಹಾಗೂ ಅಭಿಮಾನ ಪಡುತ್ತಿದ್ದರು. ಮಕ್ಕಳು ದೊಡ್ಡವರಾದರು. ಮಕ್ಕಳಿಗೆ ಮದುವೆ ಮಾಡಿದರು ಕೆಲವು ವರುಷಗಳ ನಂತರ ಮಕ್ಕಳಿಗೆ ಮಕ್ಕಳು ಹುಟ್ಟಿದವು. ಮೊಮ್ಮಕ್ಕಳನ್ನು ಎತ್ತಿಕೊಂಡು ಆನಂದದ ಕ್ಷಣ ಅನುಭವಿಸುತ್ತಿದ್ದ ಶಿವಲಿಂಗ ಒಂದು ಕಡೆ ಗ್ರಾಮಸ್ಥರ ಪ್ರೀತಿ ಮತ್ತೊಂದು ಕಡೆ ಮಕ್ಕಳ ಮಮತೆ ಆಕಾಶಕ್ಕೆ ಎರಡೇ ಎರಡು ಗೇಣು ಎಂಬ ಭಾವನೆ ಅಡಕವಾಗಿತ್ತು. ತನ್ನ ಹೆಂಡತಿ ರಾಮಕ್ಕ ದೈವಭಕ್ತೆ ಗಂಡನಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೆಲಸವನ್ನು ಮಾಡುತ್ತಿದ್ದಳು. ಮಕ್ಕಳಿಗೆ ತಾಯಿಯಾಗಿ ಮೊಮ್ಮಕ್ಕಳಿಗೆ ಅಜ್ಜಿಯಾಗಿ ಮನೆತನದ ಆಗು ಹೋಗುಗಳನ್ನು ತಾನೇ ಯಜಮಾನಿಯಾಗಿ ತೊಂದರೆಯಾಗದಂತೆ ಸಮಸ್ಯೆಗೆ ಮದ್ದು ನೀಡುವ ಕಲೆ ರಾಮಕ್ಕನಿಗೆ ಒಲಿದು ಬಂದಿತು. ಶಿವಲಿಂಗ ರಾಮಕ್ಕ ಜೋಡಿ ನೋಡಿ ಜನ ಇದ್ದರ ಇಂಗ ಇರಬೇಕ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಆದರೆ ಆ ಸ೦ತೋಷ ಬಹಳ ದಿನ ಉಳಿಯಲಿಲ್ಲ ರಾಮಕ್ಕನ ಆಕಾಲಿಕ ಸಾವು ಶಿವಲಿಂಗನಿಗೆ ಆಘಾತ ಜೊತೆ ಬರಸಿಡಿಲು ಕಂಡು ಎದೆ ಹೊಡೆದು ಹೋಗಿತ್ತು. ನನ್ನ ಬಾಳಿಗೆ ನೆರಳಾಗಿ ಬಂದ ಹೆಂಡತಿ ಸತ್ತು ಹೋದಳು ನಾನು ಇಂದು ಅನಾಥನಾದೆ ಬಿಕ್ಕಿ ಬಿಕ್ಕಿ ಅತ್ತ ಆದರೆ ಏನು? ಮಾಡೋದು ಸತ್ತವರು ಮರಳಿ ಬರುವುದಿಲ್ಲ. ರಾಮಕ್ಕನ ಪ್ರೀತಿ ಮುಗ್ಧತೆ ಕಂಡು ಅದೇ ಗುಂಗಿನಲ್ಲಿ ಕಾಲ ಕಳೆಯುತ್ತಿದ್ದ. ಮಕ್ಕಳು ಸೊಸೆಂದಿರು ಮನೆಗೊಂದು ಮೂರು ಬಾಗಿಲು ಎಂಬಂತೆ ಬೇರೆ ಬೇರೆಯಾದರು ಶಿವಲಿಂಗ ವ್ಯಕ್ತಿಯಾಗಿ ಶಕ್ತಿಯಾಗಿ ಬೆಳೆದ. ತಾನು ಇಂದು ದಿಕ್ಕು ಇಲ್ಲದ ಬಿಕಾರಿಯಾಗಿ ನಿಂತಿದ್ದಾನೆ. ಸೊಸೆಂದಿರು ಊಟದಲ್ಲಿ ಸಹ ಪಾಲು ಮಾಡಿಕೊಂಡಿದ್ದಾರೆ ಮುಂಜಾನೆ ಒಬ್ಬರು ರಾತ್ರಿ ಒಬ್ಬರು ಮಕ್ಕಳು ಶಿವಲಿಂಗನನ್ನು ಪಾಲು ಮಾಡಿದ್ದರು ಇದೆಂಥ ಪರಿಸ್ಥಿತಿ ಬಂತು ನಾಯಿಕ್ಕಿಂತ ಕಡೆ, ಆಸ್ತಿ ಪಾಸ್ತಿ ಮಾಡಿ ಮಕ್ಕಳನ್ನು ಮುದ್ದಾಗಿ ಬೆಳೆಸಿ ಇಂದು ಮಕ್ಕಳು ಬೀದಿಗೆ ತಳ್ಳಿದರು ಇಂಥ ನಾಯಿ ಬದುಕು ಯಾರಿಗೂ ಬರುವುದು ಬೇಡ ಆಕಾಶ ಕಡೆಗೆ ನೋಡುತ್ತಾನೆ. ತಂದೆ ತಾಯಿಗಳು ಹತ್ತು ಮಕ್ಕಳನ್ನು ಪೋಷಣೆ ಮಾಡುತ್ತಾರೆ. ಆದರೆ ಮಕ್ಕಳಿಗೆ ತಂದೆ ತಾಯಿ ಭಾರ ಎಂದು ವೃದ್ಧಾಶ್ರಮಕ್ಕೆ ಹಾಗೂ ಮನೆಯಿಂದ ಹೊರಗೆ ಹಾಕುತ್ತಾರೆ. ಶಿವಲಿಂಗನ ತಲೆಯಲ್ಲಿ ಓಡುವ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ ತಾನು ನಿಂತ ಭೂಮಿ ಬಾಯಿ ತೆರೆದು ಬಾ…ಬಾ ಎಂದು ಕರೆಯುತ್ತಿದೆ. ತಂದೆಯೆಂದರೆ ಸ್ವಾಭಿಮಾನಿ ತಂದೆಯಂದರೆ ಹಠವಾದಿ ದಯಾಮಾಯಿ ಎಂದು ಕರೆಯುವ ನಾವು ಇದೇ ನಾ ನಾವು ನೀಡುವ ಕೊಡುಗೆ ನಾ ? ಇದ್ದಾಗ ಆಹಾರ ಆಶ್ರಯ ನೀಡದೇ ಪ್ರೀತಿ ಮಾನವೀಯತೆ ಮಾಡದೇ ಹಣ ಅಧಿಕಾರ ಗಳಿಕೆ ಮಾಡಿದರೆ ಏನು? ಉಪಯೋಗ ಹೇಳಿ? ಕಾಲ ಚಕ್ರ ಹೀಗೆ ತಿರುಗುತ್ತ ಇರುತ್ತದೆ. ಇಂಥ ಘಟನೆಗಳಿಗೆ ಕೊನೆ ಇಲ್ಲವೆ?
ಲೇಖಕರು: ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ



