ಕಾವ್ಯ ಸಂಗಾತಿ
ಗಂಗಾ ಚಕ್ರಸಾಲಿ
ಖಾಲಿಯಾಗುವ ಭಯ…


ನಿನ್ನ ಮಾತಿನ ಓಲಗದಲಿ
ಅದೆಷ್ಟು ಬಾರಿ ಬಾರಿಸಿದ್ದೆ
ಅವು ಕಿವಿತಮಟೆ ಬಡಿದವೆ ಹೊರತು
ಎದೆಗಾನಿಸಿಕೊಳ್ಳಲಿಲ್ಲ ನಾನು
ರೊಚ್ಚಿಗೆದ್ದು ದಿನವೂ ಸುರಿವ
ಮಳೆಯನ್ನು,ಆನಂದಿಸಲಾದೀತೆ…
ಜ್ವಾಲಾಮುಖಿಯ ಜ್ವಾಲೆ
ನಿನ್ನ ಬಿಗಿದ ಮೊಗವ ತಬ್ಬಿರಲು
ನಗೆಮಲ್ಲಿಗೆಯಾಗಿ ನಾ ನಿಂತರೆ..
ಸುಡದೇ ಹೋದೇನೇ…ಅದಕ್ಕೆ
ಒಗ್ಗರಣೆಯ ಚಟಪಟ ಸದ್ದಲ್ಲಿ
ನನ್ನ ನಾನೇ ಕಳೆದುಹೋಗುವೆ…
ರೊಚ್ಚಿ ಸುರಿವ ಮಳೆ
ಜ್ವಾಲಾಮುಖಿಯ ಜ್ವಾಲೆ
ಪ್ರಕೃತಿಯಲ್ಲಿ ಒಮ್ಮೊಮ್ಮೆ ಮಾತ್ರ..
ಆದರೆ ಅನುದಿನ ಕಿಡಿಗಳನ್ನು
ತೂರಿಬಿಡುವ ನಿನ್ನಂತೆ…
ನಾನಾಗಬೇಕೆಂದರೆ..
ಎನ್ನೊಳಗಿನ ಸಿಹಿತನ ಖಾಲಿಯಾಗುವ
ಭಯವಿದೆ ಅಷ್ಟೇ….
ಗಂಗಾ ಚಕ್ರಸಾಲಿ, ಬೆಳಗಾವಿ



