ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮಾನವೀಯತೆಯೇ
ಮಾನವನ ನಿಜ ಧರ್ಮವಯ್ಯ,!
ಅಶಾಂತಿ ಅನೀತಿ ಅಸಹಿಷ್ಣುತೆ
ಯಾವ ರೀತಿಯ ಧರ್ಮವಯ್ಯ,!

     ದೇವಾಲಯ ಮಸ್ಜಿದ್
     ಕೆಡವುದೇ ಅಧರ್ಮವಯ್ಯ,?!
     ಧರ್ಮ ಧರ್ಮಗಳ ಮಧ್ಯೆ
     ಕಂದಕ ಸೃಷ್ಟಿಸುವುದು ಕೆಡುಕಯ್ಯ,!

ಕೆಡುಕೇ ಅಧರ್ಮ ಹಾದಿಯು
ಸಮಾಜಕ್ಕೆ ಮಾರಕ ಕಳಂಕವಯ್ಯ!,
ದುರಾಡಳಿತೆಯ ತಂತ್ರವು
ಲೋಕ ಅವಸಾನದ ಲಕ್ಷಣವಯ್ಯ,!


ಕಣ್ಣಾರೆ ಕಂಡ ಸತ್ಯವಿದು
ಮುಂದೆ ಎಚ್ಚರಿಕೆಯಿಂದ ಬಾಳಯ್ಯ,!
ಪ್ರಕೃತಿ ವಿಕೋಪವು ಇದಲ್ಲ
ಪರಮಾತ್ಮನ ತಾಳ್ಮೆಯ ಲೋಪವಯ್ಯ.!


     


About The Author

Leave a Reply

You cannot copy content of this page

Scroll to Top