ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಿನ್ನ ಸಂತೈಕೆಗಾಗಿ ಹಲುಬಿ, ಹಂಬಲಿಸಿ ಸೋತು ಹೋದೆ
ಸಿಗದ ಆದರವನ್ನು ಅರಸಿ , ಆಗ್ರಹಿಸಿ ಸೋತು ಹೋದೆ

ನಿನ್ನ ಹೆಗಲಾಗಲು,ನನ್ನ ಹಗಲಿರುಳು ನೀಡಿದೆ ನಗುತ
ನಿನ್ನ ನಜರಿಗೆ ನಾ ಬರಲು ಆಶಿಸಿ, ಆಕರ್ಷಿಸಿ ಸೋತು ಹೋದೆ

ಒಂದಲ್ಲ,ಎರಡಲ್ಲ,ಎಷ್ಟೋ ವಸಂತ ಕಳೆದೆವು ಜೊತೆಗೆ
ನಿನ್ನ ಕಣ್ಣುಗಳಲಿ ನನ್ನನು ಕನಸಿಸಿ ಸೋತು ಹೋದೆ

ನೀ ಅನ್ಯರಿಗೆ ತೋರುವ ಕಾಳಜಿ ದಿನವೂ ನೋಡುವೆ ನಲ್ಲ
ಹುಸಿ ಮಾತಲ್ಲಾದರೂ ಹಸಿಯಾಗಲು ತವಕಿಸಿ ಸೋತು ಹೋದೆ

ಬಲು ಕಷ್ಟವೇ ಇದ್ದಿರಬೇಕು ವಾಣಿ,ಪ್ರೀತಿಯನು ಪ್ರೀತಿಸುವುದು
ನಾನಿಲ್ಲದ ನಿನ್ನ ಜಗದಲಿ ನನ್ನನು ಅಂದಾಜಿಸಿ ಸೋತು ಹೋದೆ
ಗಜಲ್

About The Author

Leave a Reply

You cannot copy content of this page

Scroll to Top