ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಯಾರು ಯಾವಾಗ ಈ ನೆಲಕೆ ವಿದಾಯ ಹೇಳುವರೋ ಗೊತ್ತಿಲ್ಲ
ಯಾವ್ಯಾವ ಕ್ಷಣಗಳನು ಹೇಗೆ ಕಳೆವರೋ ಗೊತ್ತಿಲ್ಲ

ಬಾಲ್ಯದಾ  ಚಣಗಳ ಮರೆವರೋ ಗೊತ್ತಿಲ್ಲ
ಅಮ್ಮನಾ ಮಡಿಲು ಮೀರಿ ಬೆಳೆವರೋ ಗೊತ್ತಿಲ್ಲ

ಯೌವನದ ಉತ್ಸಾಹದಲಿ    ಎಲ್ಲವನೂ ಸಾಧಿಸುವರೋ ಗೊತ್ತಿಲ್ಲ
ಉಲ್ಲಾಸದ ಚಣಗಳೊಂದಿಗೇಮಾಗುವರೋ  ಗೊತ್ತಿಲ್ಲ

ಮಾಗಿದಾ ಹಾಗೆಲ್ಲ  ದಿನವಿಡೀ  ದುಡಿವರೋ ಗೊತ್ತಿಲ್ಲ
ಮರೆಯಾದ ಸಂತೋಷವ ಅರಸುವರೋ ಗೊತ್ತಿಲ್ಲ

ದುಡಿತದಲೆ ದಿನ  ಕಳೆದು ಬಿಡುವರೋ  ಗೊತ್ತಿಲ್ಲ
ಸಂತಸವ ಮರೆತು ಬದುಕುವರೋ ಗೊತ್ತಿಲ್ಲ

ಕಾಣೆಯಾದ ಆಪ್ತೇಷ್ಟರ ನಲ್ಮೆ ಹುಡುಕುವರೋ  ಗೊತ್ತಿಲ್ಲ
ಹಮ್ಮು ಬಿಮ್ಮುಗಳಲ್ಲಿ ಅವಿತ ಅಕ್ಕರೆಯ ತಡಕಾಡುವರೋ ಗೊತ್ತಿಲ್ಲ

ಬದುಕ ಪ್ರೀತಿಯು ಬತ್ತದಂತೆ ಕಾಯ್ದು ಉಳಿಸುವರೋ ಗೊತ್ತಿಲ್ಲ
‘ಜಯೂ’ನ ಒಲವ ಒರತೆಯನು ಹೇಗೆ ಚಿಮ್ಮಿಸುವರೋ ಗೊತ್ತಿಲ್ಲ!


About The Author

Leave a Reply

You cannot copy content of this page

Scroll to Top