ಕಾವ್ಯ ಸಂಗಾತಿ
ಪರವಿನಬಾನು ಯಲಿಗಾರ
“ಸ್ನೇಹವೆಂದರೆ”


ಸ್ನೇಹವೆಂದರೆ ಅದು
ದೈವ ಬೆಸೆದ ಬಂಧ ,
ಜಾತಿ , ಗೋತ್ರ , ಮತ ,
ಪಂಥ ಕೇಳದ ಅನುಬಂಧ.
ಕೃಷ್ಣ – ಸುಧಾಮ , ಕರ್ಣ – ದುರ್ಯೋದನ
ಚಿರ ಸ್ನೇಹಕೆ ಹೆಸರಾದವರು
ಸ್ನೇಹ ಎನ್ನುವ ಆಮ್ಲಜನಕ
ನಮ್ಮನ್ನು ಬದುಕುಳಿಸುತ್ತದೆ
ಸುಮಾರು ಬಾರಿ.
ಸ್ನೇಹದ ನೌಕೆ ತೇಲುತಿರಲು
ಬಾಳ ಸಾಗರದಿ,
ತೀರ ಸೇರುವ ಭರವಸೆ
ಇರುವುದು ಯಾವಾಗಲೂ.
ಸ್ನೇಹ ಒಂದು ಭಾವದ ಕೊಳಲ ದನಿ
ಸದಾ ಕೇಳುವುದು ಇಂಪಾದ ನಿನಾದ
ಸ್ನೇಹ ವೀಣೆ ಮಿಡಿಯುತಿರೆ
ಅಪಸ್ವರದ ಭಯವೆಲ್ಲಿ.
ಯಾವ ರಕ್ತ ಸಂಭಂದ ಇರದಿದ್ದರು
ನೋವಿಗೆ ಮರುಗುವ
ಕರುಳ ಬಂಧವೆ ಅಲ್ಲದೆ ಇದ್ದರು
ಕರುಣೆ ತೋರುವುದೆ ಸ್ನೇಹ…..
ಪರವಿನಬಾನು ಯಲಿಗಾರ



