ಕಾವ್ಯ ಸಂಗಾತಿ
ಡಾ.ರೇಖಾ ಉದಯ
ಗಜಲ್


ಇಲ್ಲೊಂದಿಷ್ಟು ಸಹಿಸಲಾಗದ್ದನ್ನು ಸಹಿಸಬೇಕಿದೆ ನೋಡು
ಕೆಲವೊಂದಿಷ್ಟು ಕೇಳಲಾಗದ್ದನ್ನು ಕೇಳಿಸಬೇಕಿದೆ ನೋಡು
ಅವರಿವರ ಡೊಂಬರಾಟದ ಹೋರಾಟಗಳಾಗಾಗ ನೋಡುತ್ತಿರು
ಮೂರು ಮಂಗಗಳು ಉದಾಹರಣೆ ತಿಳಿಸಬೇಕಿದೆ ನೋಡು
ನ್ಯಾಯ ಪ್ರಾಮಾಣಿಕತೆಗಳ ಮೂಟೆ ಕಟ್ಟಿ ಮೂಲೆ ಸೇರಿವೆ
ಬಕೆಟ್ ಹಿಡಿದು ಬದುಕುವವರಿಗೆ ಬಿಸಿ ಮುಟ್ಟಿಸಬೇಕಿದೆ ನೋಡು
ಇಲ್ಲಿ ತಿಳಿದು ತಿಳಿಯದಂತಿಹರು ಅನೇಕಾನೇಕ ಬುದ್ಧಿವಂತರು
ಕತ್ತಲೆಯಲ್ಲಿ ಅಡಗಿದವರಿಗೆ ಜ್ಞಾನದ ಕಿಡಿ ಹೊತ್ತಿಸಬೇಕಿದೆ ನೋಡು
ಮತ್ತೊಮ್ಮೆ ಅವತಾರವೆತ್ತಬೇಕಿದೆ ಶ್ರೀಹರಿ ಭೂಗರ್ಭದಲ್ಲಿ ರೇಖೂ
ಮುಂದಿನ ಪೀಳಿಗೆಗಾದರೂ ಸಂಸ್ಕಾರಗಳ ಕಲಿಸಬೇಕಿದೆ ನೋಡು
ರೇಖಾಕ್ಷರ



