ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಪ್ರಪಂಚ ಪ್ರಾಮಾಣಿಕರನ್ನೇ ಪರೀಕ್ಷಿಸುತ್ತದೆಯಂತೆ ನಿಜವೇ
ಆ ದೇವರು ಒಳ್ಳೆಯವರನ್ನೇ ಒರೆಗೆ ಹಚ್ಚುತ್ತಾನಂತೆ ನಿಜವೇ

ಕೆಡುಕಿನ ಕೋಣಕ್ಕೆ ಮೂಗುದಾನವೇ ಇಲ್ಲವೇನೊ ಅನಸ್ತದ
ವಿಧಿ ದುಡಿವವರನ್ನೇ ದಾರಿದ್ರ್ಯಕ್ಕೆ ದೂಡುತ್ತದೆಯಂತೆ ನಿಜವೇ

ಅರ್ಧಕ್ಕಿಂತ ಹೆಚ್ಚು ಜನರಿಲ್ಲಿ ಅಡ್ಡದಾರಿಯನ್ನೇ ಹಿಡಿದಿದ್ದಾರೆ
ಸರಿ ದಾರೀಲಿ ನಡೆವವರೇ ದಿಕ್ಕುತಪ್ಪಿ ಬಂದವರಂತೆ ನಿಜವೇ

ಆಗುಹೋಗುಗಳೆಲ್ಲವೂ ಸೋಗು ಧರಿಸಿಯೇ ಜರುಗುತ್ತಲಿವೆ
ಮುಖವ ತೋರಿಸಿದವರ ಮೇಲೆ ಮೊಕದ್ದಮೆಯಂತೆ ನಿಜವೇ

ಮನುಷ್ಯತ್ವ ಹುಡುಕುವುದರಲ್ಲೇ ಮಹಾಂತ ಕಾಲಕಳೆದನಂತೆ
ವ್ಯರ್ಥ ಹುಡುಕಾಟ ಅರ್ಥ ಕಳೆದುಕೊಂಡಿದೆಯಂತೆ ನಿಜವೇ


About The Author

Leave a Reply

You cannot copy content of this page

Scroll to Top