ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್
(ಮೂರಕ್ಷರದ ಕಾಫಿಯ ನಲ್ಲಿ ರವಿ, ರವೊಫ್ ನ್ನು ಹೊಂದಿಸಿದ ಕಾಫಿಯಾನ ಗಜಲ್.)


ಜೀವನದಿ ಒಮ್ಮೆ ಪ್ರೇಮವೆಂಬ ಸುಳಿಗೊಮ್ಮೆ ಬೀಳಿರಿ
ವಿರಹದ ಬಗ್ಗೆ ಹೇಗೆಂದು ನಂತರ ನೀವಯೇ ಹೇಳಿರಿ
ಮನೋರಮೆಯ ಒಮ್ಮೆ ಏಕಾಂತದಿ ಭೇಟಿಮಾಡಿ
ಅಗಲಿಗೆಯ ಸಮಯದಿ ನೋವಾದರೆ ತಾಳ್ಮೆ ತಾಳಿರಿ
ಒಳ್ಳೆಯ ಗಂಡ ಚಂದದ ಪತ್ನಿ ಎಲ್ಲವೂ ಮಾತಷ್ಟೇ
ದಕ್ಕಿದ ಹೆಣ್ಣ ಚಂದ ಹೆಂಡತಿಯಾಗಿಸಿ ಬಾಳ ಬಾಳಿರಿ
ಹೊಂದಿಕೆಯ ಬಾಳಲಿ ನಿಜ ಸುಖವಿದೆ ತಿಳಿದಿರಲಿ
ಸುಪ್ರೇಮ ಲೋಕವನು ಮಹಾರಾಜನಂತೆ ಅಳಿರಿ
ಬತ್ತದ ಗದ್ದೆಯಲಿ ನಡೆದಂತೆ ಜೀವನ ಜಾರಬಹುದು
ಕೆಸರಲಿ ಬಿದ್ದರೂ ಸ್ವ ಸಂಬಾಳಿಸಿಕೊಂಡು ಏಳಿರಿ
ಕೃಷ್ಣಾ! ಗೀತೆಯ ವಾಕ್ಯದಂತೆ ಜಾಗೃತ ಜಾಗೃತರಾಗಿರಿ
ಭುವಿಯ ಸುಖದಲಿ ಸ್ವರ್ಗ ಸುಖವ ಕೂಡಿ ಕಳೀರಿ.
ಬಾಗೇಪಲ್ಲಿ



