ಕಾವ್ಯ ಸಂಗಾತಿ
ರಶ್ಮಿ ಶಮಂತ್
“ಖಾಲಿಹಾಳೆ”


ಬದುಕು
ಬಿಳಿಯ ಖಾಲಿ ಹಾಳೆಯಾಗಿದ್ದರೆ
ಬಣ್ಣಗಳ ಬಳಿಯಬಹುದಿತ್ತು ನಮ್ಮಿಚ್ಛೆಯಂತೆ
ತುಂಬಿಹುದು ಓರೆ ಕೋರೆಯಾದ ಗೆರೆ
ಕಪ್ಪು ಬಣ್ಣದ ಚುಕ್ಕೆಗಳು
ಎಂದೆದೂ ಅಳಿಸಲಾಗದಂತ ಕಲೆಗಳು
ಊಹಿಸಲಾರದಂತಹ ತಿರುವುಗಳು
ಬರೆದಿಟ್ಟಂತೆ ನಡೆವುದಾದರೆ ಬಾಳು
ಇರುತ್ತಿರಲಿಲ್ಲ ಇಲ್ಲಾವುದೇ ಗೋಳು
ಜೀವನ ನಾವು ರಚಿಸುವ ಕಾದಂಬರಿಯಲ್ಲ
ಸುಖಾಂತ್ಯವನ್ನೇ ಬಯಸೋಣವೆಂದರೆ
ನಲಿವೊಂದೇ ತುಂಬಲಿ ಎನ್ನಲು
ಬದುಕು ನಾವೆಣಿಸಿದಂತಲ್ಲ
ಎಣಿಕೆಗೂ ಮೀರಿದ ಬ್ರಹ್ಮನ ಹೆಣಿಕೆಯಿದು
ಇರುವ ಬಣ್ಣಗಳ ಬಳಸಿ
ನೋವು ನಲಿವುಗಳ ಬೆರೆಸಿ
ಚುಕ್ಕಿಗಳ ಸೇರಿಸಿ ರಂಗೋಲಿಯಾಗಿಸಿ
ಚಿತ್ತಾರವಾಗಿಹ ವಾಸ್ತವವಿದು
ಬರೆದಂತೆ ಬದುಕಲ್ಲ
ನಿನ್ನ ಬದುಕೇ ಬರವಣಿಗೆಯಾಗುವುದಿಲ್ಲಿ
ನಿನ್ನ ಹೆಜ್ಜೆಯ ಗುರುತೇ ಮಾದರಿಯಾಗಿ
ಅಕ್ಷರವ ರೂಪ ತಾಳುವುದು
ರಶ್ಮಿ ಶಮಂತ್




Super
ಚೆನ್ನಾಗಿದೆ
Adbutha saalugalu Rashmi
Super ಕವಿತೆ
chanda ede