ಕಾವ್ಯ ಸಂಗಾತಿ
ಡಿ. ಪಿ.ಯಮನೂರ್ ಸಾಬ್
“ನನ್ನ ಮನೆ”


ನನ್ನ ಮನೆ ಅದು ಮನೆ ಅಲ್ಲ
ಅದು ಸ್ಮಶಾನ ಮೌನ ತಾಳಿದ ಮನೆ
ಅಲ್ಲಿ ನನಗೆ ಅಕ್ಕರೆಯಿಂದ ಉಣಬಡಿಸುತ್ತಿದ್ದ
ನನ್ನ ತಾಯಿ ಇಲ್ಲ
ಮಮತೆಯಿಂದ ಸತ್ಕರಿಸುತ್ತಿದ್ದ
ನನ್ನ ಅಜ್ಜಿ ಇಲ್ಲ ನನ್ನ ಸಹೋದರ
ಸಹೋದರಿಯರ ಗುದ್ದಾಟದ
ಗದ್ದಲವಿಲ್ಲ,
ಮನೆಯಲ್ಲಿ ಬೈದು ಬದ್ದಿ ಹೇಳುವ
ಹಿರಿಯರಿಲ್ಲ,
ನಾನು ದುಃಖದಲ್ಲಿರುವಾಗ
ಕರೆದು ಸಂತೈಸುವರಿಲ್ಲ
ನನಗೆ ನನ್ನೋರು ಯಾರೂ ಇಲ್ಲ
ಅದಕ್ಕೆ ನಾನು ಮನೆಗೆ ಹೋಗುವುದಿಲ್ಲ
ಯಾಕಂದ್ರೆ ಅದು ನನ್ನ ಮನೆಯಲ್ಲ
ಅದು ಸ್ಮಶಾನಮೌನ ತಾಳಿದ ಮನೆ
ಅಲ್ಲಿರುವುದಕ್ಕಿಂತ ಬೀದಿಯ ಒಂದು
ಚೌಕದಲ್ಲಿರುವುದೇ ಲೇಸು.
ಡಿ. ಪಿ.ಯಮನೂರ್ ಸಾಬ್ ಹೂವಿನಹಡಗಲಿ




ಕಥೆ ಸೂಪರ್