ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಅಮ್ಮನ ಮಡಿಲ ಅಗಲಿ
ಶಾಲೆಯಂಗಳದಿ ಕಾಲಿಟ್ಟಾಗ
ನನ್ನಂತೆ ಅಳುವ ಅವನ ನೋಡಿ
ಸಮಾನ ದುಃಖಿಗಳೆಂದು..
ಗೆಳೆಯರನ್ನು ಕೂಡಿಸುತ್ತಾ ಹೋದೆವು
ಗೆಳೆತನದ ಅರ್ಥ ತಿಳಿದೆವು…

ಶಾಲೆ.. ಕಾಲೇಜುಗಳಲ್ಲಿ
ಪಾಠಗಳಿಗಿಂತಲೂ…
ನಮ್ಮನ್ನು ಹಿಡಿದಿಟ್ಟಿದ್ದು
ಇದೇ ಬಾಂಧವ್ಯವಲ್ಲವೇ..
ಅದನ್ನು ಗುಣಿಸಿ ಗುಣಿಸಿ
ವಿಶಾಲಾರ್ಥವ ನೀಡಿದೆವು…

ಅದೇಕೋ.. ಜವಾಬ್ದಾರಿಯ
ಮೂಸೆಯೊಳಗೆ..
ಒತ್ತಡ,ಸಮಯದಭಾವ ಪದಗಳ ನೂಕಿ
ಸ್ನೇಹ ಬಂಧವನು ಕಳೆಯುತ್ತಾ..
ಅದರ ಸೊಗಸನು ಮನದ ಮೂಲೆಗೆ ತಳ್ಳಿಬಿಟ್ಟೆವು…

ಇಳಿವಯಸ್ಸಿನ ಸಂಜೆಯೊಳು
ಅದೇ ಬಾಲ್ಯಾವಸ್ಥೆಯ ಸ್ನೇಹದ ನೆನಪು
ಮನಸ್ಸಿಗೆ ರಂಗು ತುಂಬಲು ಹಾತೊರೆಯುತ್ತದೆ..
ಆದರೆ ಭಾಗಾಕಾರದ ಲೆಕ್ಕದಲಿ..ನಾವು ಶೇಷವಾಗಿರುತ್ತೇವೆ ಅಷ್ಟೇ…
ಸ್ನೇಹವೂ ಒಂದು ಲೆಕ್ಕ..ಅಲ್ಲವೇ…


About The Author

Leave a Reply

You cannot copy content of this page

Scroll to Top