ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಅಲೆದಲೆದು ಬಳಲಿ
ಬೆಂಡಾದೆ ನಾನು,
ನಿನ್ನ ನೋವಿನ ಜ್ವಾಲೆಯಲಿ,
ತುಸು ಹೆಚ್ಚಾದರೂ
ಕೆಂಜ್ವಾಲೆಯಲಿ,
ಬೆಂದುಹೋಗಿವೆ
ಮನದ ಮಾತುಗಳೆಲ್ಲ //

ಮೌನವೊಂದು ಕಣ್ಣೀರಿಡುತ್ತಿದೆ
ಸತ್ತು ಹೋದ ಭಾವನೆಗಳ ಮುಂದೆ
ಅವು ಬದುಕಿ ಬರಲು ಸಾಧ್ಯವೇ…
ಬೂದಿಯಾದ ಮೇಲೆ
ಮತ್ತೆ!ಅದೆಷ್ಟೇ ನೀರೇರೆದು ಪೊರೆದರು
ಮಸಣದ ಬಾವಿಯೊಳಗೆ ನಲಿದಾಡುತ್ತಿವೆ
ನಿನ್ನ ಮೋಸದ ಬಲೆಯ ಕಂಡು //
ನನಗರಿವಿಲ್ಲೆದೆ ಮಾಟಗಾತಿಯ
ಮಂತ್ರಕ್ಕೆ ಮಾರಾಟವಾದವು,
ಹೃದಯದಲ್ಲಿದ್ದ ಭಾವನೆಗಳೆಲ್ಲ
ಪ್ರೀತಿಎಂಬ ಮಾರುಕಟ್ಟೆಯಲ್ಲಿ.//


ʼ

About The Author

4 thoughts on “ವಸಂತ್. ಕೆ. ಹೆಚ್. ಅವರ ಕವಿತೆ “ಮಾಟಗಾತಿ””

Leave a Reply

You cannot copy content of this page

Scroll to Top