ಕಾವ್ಯ ಸಂಗಾತಿ
ಕಾವ್ಯ ಸುಧೆ ಅವರ ಕವಿತೆ
“ತೊಟ್ಟಿಲು”


ಹಳ್ಳಿ ಮನೆಗಳಲ್ಲೂ ತೊಟ್ಟಿಲು,ಅದನ್ನು ತೂಗುವ ಕೈಗಳೂ ಕಾಣೆಯಾಗಿರುವ ಇಂದಿನ ದಿನಮಾನದಲ್ಲಿ ಹೀಗೊಂದು……. ಹೈ ಟೆಕ್ ತೊಟ್ಟಿಲು !
ಸೆನ್ಸರ್ ಇರುವ ತೊಟ್ಟಿಲದು ಸ್ಮಾರ್ಟ್ ಗೂಡು
ಸ್ವಿಂಗ್ ಮೋಟಾರು ಮೂಲಕ ಜೋಲಿ ಆಡು
ಲಾಲಿ ಹಾಡು ಪ್ಲೇ ಆಗೋ ಬ್ಲೂಟೂತ್ ಸ್ಪೀಕರ್
ಲೈಟ್ ಡಿಮ್ ಆಗಿರೋ ನೈಟ್ ಮೋಡ್ ಫೀಚರ್
ಬೇಬಿ ಅತ್ತ ಕೂಡಲೇ ನೋಟಿಫಿಕೇಷನ್ ಶುರು
ಬಿಸಿಯೋ ತಣ್ಣಗೋ 2 ಇನ್ 1 ಟೆಂಪರೇಚರು
ಫೋನ್ ವೈಫೈ ಮೂಲಕ ಮಾಹಿತಿ ಕೊಡು
ವಿಡಿಯೋ ಕಾಲ್ ನಲ್ಲಿ ಮುದ್ದು ಮುಖ ನೋಡು
ರೋಬೋ ಕೈ ತೂಗಾಡಿಸಿ ಮಲಗಿಸುವುದು,
ರಿದಮ್ ಪ್ರಕಾರ ಲಾಲಿ ಬದಲಾಯಿಸುವುದು.
ತಂತ್ರಜ್ಞಾನದ ಜೊತೆ ತಾಯಿ ಪ್ರೀತಿ ಸೇರು,
ತೊಟ್ಟಿಲು 2.0 ಆದರೂ ಮಾಯೆ ಹಸಿರು…!!.
ಕಾವ್ಯ ಸುಧೆ.




ಹೆಸರಿನ ಮಾಯೆ