ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಅಂಕುಡೊಂಕಾದ ಕರಿ ನಾಗರಗಳಾಗಿ
ಉದಯರಶ್ಮಿಗೆ ಮೈಯೊಡ್ಡಿರುವ
ರಸ್ತೆಯ ಇಕ್ಕೆಲಗಳಲ್ಲಿ
ದಶದಿಕ್ಕಿಗೂ ಕಬಂಧ ಬಾಹುಗಳನ್ನು ಚಾಚಿರುವ
ಸಾಲು ಸಾಲು ಸೀಮೆಜಾಲಿಯ ಮರಗಳು
ಮೈತುಂಬಾ ಮುಳ್ಳು, ಕೆಸರು ದುರ್ನಾತ

ಅವುಗಳ ನಡುವಲ್ಲೊಂದು ಪುಟ್ಟ ರಾಯಸಕ್ಕರಿ ಮರ ತಲೆಯೆತ್ತಿ ನಿಂತು ಸೂರ್ಯನೆಡೆಗೆ ಮುಖಮಾಡಿ ಕಂಗೊಳಿಸಿ
ಚಿಗುರು ಹೂ ಮಿಡಿ ಕಾಯಿ
ಹಣ್ಣು ತೊಟ್ಟು ಹಸಿರು ಉಟ್ಟು ಸಂಭ್ರಮಿಸಿದೆ

ಅದೇ ಕೊಳಕು ಅದೇ ಕೆಸರು ಅದೇ ಗಾಳಿ ಅದೇ ಬಿಸಿಲನ್ನು ಉಂಡು
ಬರಡು ಭೂಮಿಯಲ್ಲಿ ತಂಪೆರೆದು ಅತ್ಮಾಭಿಮಾನವ ಸೂಸುತ್ತಿದೆ
ಪರಿಸರದ ಹಂಗು ತೊರೆದು

ಸುತ್ತಲಿದ್ದರೇನಂತೆ ಸೀಮೆಜಾಲಿ ಮುಳ್ಳು ಕಳ್ಳಿ ತಾನು ಮಧುಫಲವನ್ನೇ ನೀಡುವೆನೆಂದು
ಭೀಷ್ಮಪ್ರತಿಜ್ಞೆ ಮಾಡಿದೆ
ಮುಳ್ಳಿನ ನಡುವೆ ಸುಳಿವ ಹೂಗಳಿಗೆ ಅಲ್ಲಿಂದಲೇ

ಹರಕೆಯ ಕೊಟ್ಟಿದೆ

ಜಾಲಿಯ ಮರದಾಗ
ಗುಬ್ಬಿ ಗೂಡು ಕಟ್ಟಲಿ
ಕಟ್ಟಿದ ಗೂಡು ನೂರಾಗಿ
ಹಕ್ಕಿಗಳ ಬಾಳು ಹಸನಾಗಲಿ ಹಸನಾದ ಬದುಕು ಹೊನ್ನಾಗಿ ಸುಡು ಬಿಸಿಲ ಈ ನಾಡು ತಂಪಾಗಲಿ


ತೇಜಾವತಿ .ಎಚ್ .ಡಿ.

About The Author

Leave a Reply

You cannot copy content of this page

Scroll to Top