ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಶ್ರೀಶೈಲದಂತಹ ಆಧ್ಯಾತ್ಮಿಕ ಕ್ಷೇತ್ರದ ಅಂಚಿನಲ್ಲಿ ಇರುವುದರಿಂದಲೋ ಅಥವಾ ಮಧ್ಯಮ ವರ್ಗದ ನೌಕರರ  ಕುಟುಂಬಗಳು ಅಧಿಕವಾಗಿ ಇರುವುದರಿಂದಲೋ ಮತ್ತು ಸುನ್ನಿಪೆಂಟದಲ್ಲಿ  ಭಕ್ತಿ ಕಾರ್ಯಕ್ರಮಗಳು, ಮತ್ತು ಹಬ್ಬಗಳ ಸಂಭ್ರಗಳು ಚೆನ್ನಾಗಿ ಇರುತ್ತಿದ್ದವು. ವಿನಾಯಕಚವಿತಿಗೆ, ರಾಮನವಮಿಗೆ ಚಪ್ಪರಗಳನ್ನು ಹಾಕುವವರು. ಒಂಬತ್ತು ದಿನಗಳ ಹಬ್ಬದ ಗಡಿಬಿಡಿಯಲ್ಲಿ ನಾಟಕಗಳು, ಹರಿಕಥೆಗಳು, ಬುರ್ರಕಥೆಗಳು ಅದರಲ್ಲಿ ಭಾಗವಾಗಿದ್ದವು. ಚಿಕ್ಕಮಕ್ಕಳಿಗೆ ಹಾಡುಗಳು, ಏಕಪಾತ್ರಾಭಿನಯಗಳು, ನೃತ್ಯಸ್ಪರ್ಧೆಗಳಲ್ಲಿ ಬಹುಮಾನಗಳು ವಿತರಿಸುವವರು. ಶಿವರಾತ್ರಿಗೆ ಸಿನಿಮಾ ಹಾಲುಗಳಲ್ಲಿ ತ್ರೀ ಶೋಸ್ ಹಾಕುವವರು. ಧನುರ್ಮಾಸದಲ್ಲಿ ನಗರ ಸಂಕೀರ್ತನೆಗಳು ಚಳಿಯನ್ನು ಜಯಿಸುತ್ತವೆ. ಸಂಕ್ರಾಂತಿಗೆ ಅಘೋಷಿತ ರಂಗೋಳಿ ಸ್ಪರ್ಧೆಗಳು ನಡೆಯುತ್ತಿದ್ದವು. ಯಾರ ರಥ ಎಷ್ಟು ದೂರ ಸಾಗಿತೋ ಎಂದು ಅಳೆಯುತ್ತಿದ್ದರು. ದೊಡ್ಡ ದೊಡ್ಡ ರಂಗೋಳಿಗಳಿಗೆ ವಿಶೇಷ ಪ್ರಶಂಸೆಗಳು ದೊರೆಯುತ್ತಿದ್ದವು. ಅಕ್ಕಾತಂಗಿಯರು,ತಾಯಿ-ಆತ್ತೆಗಳು ರಂಗೊಳಿಗಳು ಹಾಕುತ್ತಿದ್ದಾರೆ  ಅಣ್ಣ-ತಮ್ಮಂದಿರು, ತುಂಟ ಮಕ್ಕಳು ಸ್ವಂತ ರಂಗೊಳಿಗಳಿಗೆ ಕಾಪಾಲಾ ಕಾಯುತ್ತಾ, ಹೊರಗಿನ ರಂಗೊಳಿಗಳನ್ನು ವಿಶ್ಲೇಷಿಸುತ್ತಾ ತಿರುಗಾಡುತ್ತಿದ್ದರು. ಸುನ್ನಿಪೆಂಟಗೆ ಸಂಬಂಧಿಸಿದವರೆಗೂ ಸತ್ಯನಾರಾಯಣಸ್ವಾಮಿ ದೇವಸ್ಥಾನ, ರಾಮಮಂದಿರಗಳು ಭಕ್ತಿ ಮತ್ತು ಆಧ್ಯಾತ್ಮಿಕ ಕೇಂದ್ರಗಳಾಗಿವೆ.
ಶ್ರೀಶೈಲದಲ್ಲಿ ಸಹಜ ಸಿದ್ಧವಾಗಿ ಕೆಲವುರು ಸಾಧುಗಳು, ಸನ್ಯಾಸಿಗಳು ಯಾವಾಗಲೂ ಕಂಡು ಬರುತ್ತಿರುತ್ತಾರೆ. ಇವರಲ್ಲದೆ, ಹೊರ ಪ್ರದೇಶಗಳಿಂದಲೂ ಕೆಲವರು ಬಂದು ಇಲ್ಲಿ ಯಾವುದೋ ಸತ್ರದಲ್ಲಿ ಊಟ ಮಾಡುತ್ತಾ, ಕಾಲ ಕಳೆಯುತ್ತಾ   ಬದುಕುವವರು ಅನೇಕರು ಇರುವವರು. ಮುಮುಕ್ಷುವುರಾದ ಸಾಧುಗಳು ಯಾರೋ, ಭಿಕ್ಷುಕುರಾದ ಸನ್ಯಾಸಿಗಳು ಯಾರೋ ಕಂಡುಹಿಡಿಯುವುದು ತುಂಬಾಕಷ್ಟ. ಉಡುಗೆ ತೊಡುಗೆಗಳಿಂದ, ಹಾವಭಾವಗಳಿಂದ, ಮಾತಿನ ಪದ್ಧತಿ ಸುಮಾರಾಗಿ ಒಂದೇ ವಿಧವಾಗಿ ಇರುತ್ತದೆ.
ಒಮ್ಮೆ ಪೂರ್ಣಾನಂದ ಸ್ವಾಮಿ ಎಂಬ ಸ್ವಾಮಿಗಳು ತಮ್ಮ ಪತ್ನಿಸಮೇತ ಶ್ರೀಶೈಲಕ್ಕೆ ಬಂದರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು, ಮತ್ತು ಸತ್ಯನಾರಾಯಣ ಸ್ವಾಮಿಯ ದೇವಸ್ಥಾನದಲ್ಲಿ ಕೆಲವು ದಿನಗಳು ಪ್ರವಚನಗಳನ್ನು ಹೇಳುತ್ತಾ ಸುಮಾರು ಮೂರುತಿಂಗಳ ಕಾಲವು ಅವರು ಸುನ್ನಿಪೆಂಟದಲ್ಲಿ ಕಳೆದರು. ಹಾಗಾಗಿ ಪೂರ್ಣಾನಂದಸ್ವಾಮಿಗಳು ಶ್ರೀಶೈಲದಲ್ಲಿದ್ದ ಮೂರುತಿಂಗಳಲ್ಲಿ ಒಂದುತಿಂಗಳು ನಮ್ಮ ಮನೆಯಲ್ಲಿಯೇ ಇದ್ದರು. ಪೂರ್ಣಾನಂದಸ್ವಾಮಿಗಳು, ತಾವು ವೇದಾಂತಂ ಲಕ್ಷ್ಮಯ್ಯನವರ ಶಿಷ್ಯರೆಂದು, ಅವರ ಊರು ಕಡಪಜಿಲ್ಲೆಯ ಮಾಮಿಡಾಲಪಲ್ಲೆ ಎಂದೋ, ಇನ್ನೂ ಯವುದೋ ಊರು ಎಂದು ಹೇಳಿದ್ದು ನೆನಪಿದೆ. ಪ್ರತಿದಿನ, ಸಾಯಂಕಾಲ ಆರರಿಂದ ಏಳರ ವರೆಗೆ ಅವರು  ಉಪದೇಶ ಮಾಡುತ್ತಿದ್ದರು. ಆಗ ಹೆಂಗಸರೆಲ್ಲ ಆ ಸಮಯಕ್ಕೆ  ಸೇರಿ ಸ್ವಲ್ಪ ಹೊತ್ತು ಕಾಲಕ್ಷೇಪ ಮಾಡುತ್ತಿದ್ದರು. ಭಾನುವಾರಗಳಲ್ಲಿ ಮಾತ್ರ ಮಧ್ಯಾಹ್ನ ಮೂರರಿಂದ ನಾಲ್ಕರವರೆಗೂ ಹೇಳುತ್ತಿದ್ದರು.
ಒಂದುದಿನ ಯಾವುದೋ ಕೆಲಸಕ್ಕೆ ನನ್ನ ತಾಯಿಯನ್ನು ಕರೆದುಕೊಂಡು ಬರಬೇಕೆಂದು ಅಪ್ಪ ಹೇಳಿದರೇ ನಾನು ದೇವಸ್ಥಾನಕ್ಕೆ ಹೋಗಿದ್ದೆ. ಇನ್ನೊಂದು ಐದು ನಿಮಿಷಗಳಲ್ಲಿ ಮುಗಿಯುತ್ತದೆ. ಕೂತ್ಕೋ ಅಂದರೆ, ನಾನೂ ಕೂತ್ಕೊಂಡು ಕೇಳುತ್ತಿದ್ದೇನೆ. ಅವರು ಶ್ಯಾಸೆದ ಬಗ್ಗೆ, ಶ್ಯಾಸೆ ಮೇಲಿನ ಧ್ಯಾಸದ ಬಗ್ಗೆ, ಮೌನವಾಗಿ ಮಾಡುವ ಧ್ಯಾನದ ಬಗ್ಗೆ ಹೇಳುತ್ತಾ  ಅಧ್ಯಾತ್ಮಿಕ ಸಂಬಂಧವಾದ ಮಾತುಗಳೇನೊ ಹೇಳಿತ್ತಿದ್ದರು.
ನಾನು ಏನೋ  ಯೋಚಿಸುತ್ತಾ ಕೂತಿದ್ದಾರೆ ನಾಗಮಣಿ ಅತ್ತೆ ನನ್ನನ್ನು ಹತ್ತಿರಕ್ಕೆ ಕರೆದು –
“ಈ ಸ್ವಾಮಿ ಇಷ್ಟೊಂದು ಮಾತುಗಳು ಹೇಳ್ತಾನೆ, ಆದರೆ, ಇವರಿಗೆ ಸಿನಿಮಾ ಹುಚ್ಚು ಹೋಗಿಲ್ಲ” ಎಂದಳು.
ವಾಸ್ತವಕ್ಕೆ ಈ ಚರ್ಚೆಯಲ್ಲಿ ಚಲನ ಚಿತ್ರಗಳ ಪ್ರಸ್ತಾವನೆ ಏಕೆ ಬಂದವೋ ನನಗೆ ಅರ್ಥವಾಗಿಲ್ಲ. ಆ ಅತ್ತೆ ಸಿನಿಮಾಗಳು ಚೆನ್ನಾಗಿ ನೋಡುತ್ತಾಳೆ. ಚೆನ್ನಾಗಿ ಫಾಲೋ ಆಗುತ್ತಾಳೆ  ಕೂಡಾ. ಇವರಿಗೆ ಸಿನಿಮಾಹುಚ್ಚು ಎಂದು ಹೇಗೆ ನಿರ್ಧರಿಸಿದ್ದಾಳೋ  ತಿಳಿಯದೆ ನಾನು ತಲೆ ಕೆಡಿಸಿಕೊಂಡಾಗ, ಅವರೇ ನನ್ನನ್ನು ಮತ್ತಿಷ್ಟೂ ಹತ್ತಿರಕ್ಕೆ ಕರೆದು-
“ಬೇಕಿದ್ದರೆ ಕೇಳು, ಅವರು ಮಾತು ಮಾತಿಗೆ ಶೋಭನ್ ಬಾಬು, ಶೋಭನ್ ಬಾಬು ಎನ್ನುತ್ತಿದ್ದಾನೆ”
ನಾನು ಸ್ವಲ್ಪ ಕಿವಿಕೊಟ್ಟು ಶ್ರದ್ಧೆ ಯಿಂದ ಕೇಳಿದಾಗ, ಹಾಗೆ ಅನಿಸಿತು, ಆದರೆ ಅದಲ್ಲ ಅಂತಲೂ ಅನಿಸಿತು. ನನಗೆ ತೆಲುಗು ಭಾಷೆಯೆಂದರೆ ಒಲವು, ಮನೆಯಲ್ಲಿದ್ದ ಪುಸ್ತಕಗಳನ್ನು(ಪೂರ್ಣಾನಂದಸ್ವಾಮಿ ಅವರವು ಕೂಡಾ) ನೋಡಿದ್ದೇನೆ. ಅದರಿಂದ ಮತ್ತಿಷ್ಟೂ ಶ್ರದ್ಧೆಯಿಂದ ಕೇಳಿದರೆ  ಆಗ  ಸ್ಫುರಿಸಿತು ಆ ಪದವು, ಅದರ ಅರ್ಥ್!
ಆ ಅತ್ತೆ ಮತ್ತೆ ಕರೆದು  “ಗಮನಿಸಿದ್ದೀಯಾ?” ಎಂದು ಕೇಳಿದಳು.
ಆಗ ನಾನು ಅವಳಿಗೆ ಹೇಳಿದೆ –
“ಅತ್ತೆ, ಅದು ನೀವು ಅಂದುಕೊಂಡಂತೆ ಶೋಭಾನ್ ಬಾಬು ಅಲ್ಲ – ಸೋಹಂ ಭಾವ – ಅಂದರೆ ನಾನೇ ದೇವರು ಎಂಬ ಭಾವನೆ ” ಎಂದು ಹೇಳಿದರೆ  ಅವಳ ಮುಖ ಸಂಪೂರ್ಣವಾಗಿ ಕಳೆಗುಂದಿತ್ತು. ನಂಬಿದಂತೆ ಕಾಣಿಸಲಿಲ್ಲ. ಮನೆಗೆ ಬಂದಮೇಲೆ ನನ್ನ ಅಕ್ಕಗೆ ಹೇಳಿದೆ. ಈಗಲೂ  ಆ ವಿಷಯವನ್ನು ನೆನೆದರೆ  ತಡೆಯಲಾರದಷ್ಟು ನಗು ಬರುತ್ತದೆ.
ಇನ್ನೊಂದು ಸಲ ಸನ್ಯಾಸಿಯೊಬ್ಬರು ಮಹದೇವಪ್ಪನವರನ್ನು ಭೇಟಿಮಾಡಿ  ತಾನು ಬಂದು ವ್ರತವನ್ನು ಸಂಕಲ್ಪಿಸಿದ್ದೇ ನೆಂದು ಅದು ಮುಗಿಯುವ ತನಕ ಅವರ ಸಹಾಯ ಬೇಕೆಂದು ಕೇಳಿದ. ಬೋಳ ಶಂಕರನಂತಹ  ಮಹದೇವಪ್ಪ ಮಾಮಾ ಆ ವ್ರತವು ಏನು, ಅದು ಮುಗಿಸಲು ಎಷ್ಟು ದಿನಗಳು ಬೇಕಾಗುತ್ತವೋ  ಅದಕ್ಕೆ  ಏನೇನು ಬೇಕಾಗುತ್ತವೋ ಏನೂ  ಕೇಳದೆ ಅವರಿಗೆ ಅಭಯ ಕೊಟ್ಟರು.  ಅಯ್ಯಪ್ಪಸ್ವಾಮಿಯ ದೇವಸ್ಥಾನದಲ್ಲಿ ಆಶ್ರಯವೂ ಕೊಡಿಸಿದರು. ಒಂದುವಾರ ಅವರಿಗೆ ಎರಡು ಸಲ ಊಟ ಕಳುಹಿಸುವ ಸರದಿ ನಮ್ಮದಾಗಿತ್ತು.
ದೇವಸ್ಥಾನದ ಈಶಾನ್ಯದ  ಮೂಲೆಯಲ್ಲಿ ಸ್ವಲ್ಪ ಖಾಲೀ ಜಾಗವಿತ್ತು. ಅಲ್ಲಿಯೇ ಅವರು ತಮ್ಮ ಚೀಲ ಇಟ್ಟುಕೊಂಡು, ಅಲ್ಲಿಯೇ ಇದ್ದ ನಲ್ಲಿಯ ಬಳಿ ಸ್ನಾನ ಮಾಡುತ್ತಿದ್ದರು. ಅವರು ಅಷ್ಟೊಂದು ಪೂಜೆ ಪುಂಸ್ಕಾರಗಳು ಮಾಡಿದಂತೆ ಕಾಣಿಸುತ್ತಿರಲಿಲ್ಲ. ಯಾವಾಗಲೂ ಮೌನವಾಗಿ ಏನೋ ಯೋಚಿಸುತ್ತಿದ್ದವನಂತೆ ಇರುವವನು. ಆಗಾಗ, ಕೆಲವೊಮ್ಮೆ ಗೋಡೆಗೆ ಒರಗಿ ಮಲಗಿದ್ದೇನೋ  ಧ್ಯಾನ ಮಾಡುತ್ತಿದ್ದಾನೋ ತಿಳಿಯದ ಸ್ಥಿತಿಯಲ್ಲಿ ಇರುತ್ತಿದ್ದ.
ಅಯ್ಯಪ್ಪಸ್ವಾಮಿ ದೇವಸ್ಥಾನ ನಮ್ಮ  ಕಾರ್ಯಕಲಾಪಕ್ಕೆ ಮುಖ್ಯವಾದ ಜಾಗಾ. ಅದು ದೊಡ್ಡ  ಜನಸಂದಣಿ ಇರುವ ದೇವಸ್ಥಾನ ವಲ್ಲ. ಆ ಪ್ರಾಜೆಕ್ಟ್ ನಲ್ಲಿ ಉದ್ಯೋಗಿಯೊಬ್ಬರು ಆ ದೇವಸ್ಥಾನಕ್ಕೆ ಧರ್ಮ ಕರ್ತ, ಪೂಜಾರಿ  ಎಲ್ಲಾ ಅವನೇ ಆಗಿ ನಡೆಸುತ್ತಿದ್ದನು. ಆ ದೇವಸ್ಥಾನ, ಅವರ ಮನೆ ಪೂಜಾ ಕೋಣೆಗೆ ತುಂಬಾ ದೊಡ್ಡದಾಗಿದಂತೆ,  ಮತ್ತು ಸಾಂಪ್ರದಾಯಿಕ ದೇವಸ್ಥಾನಗಳಿಗೆ ತುಂಬಾ ಚಿಕ್ಕದಾಗಿದಂತೆ ಕಾಣಿಸುತ್ತಿತ್ತು. ಅವರ ಮನೆ ಒಳೆಗೆಯಿಂದ ದೇವಸ್ಥಾನಕ್ಕೆ ದಾರಿಯಿತ್ತು. ದೇವಸ್ಥಾನಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ, ಪೂಜೆ, ನೈವೇದ್ಯ ಎಲ್ಲವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ಅವರ ಮಗನ  ಹೆಸರು ಮಣಿಕಂಠ. ಅದೇನೇ ಇರಲಿ, ಶನಿವಾರ ರಾತ್ರಿಯಿಂದ ಭಾನುವಾರ ರಾತ್ರಿಯ ವರೆಗೂ ಅದು ಮಕ್ಕಳ ಆಟಗಳ  ಜಾಗಾವಾಗಿತ್ತು.
ಶನಿವಾರ ಸಂಜೆ ಏಳುಗಂಟೆಗೆಲ್ಲಾ , ‘ಈಗಲಪೆಂಟ’ದಿಂದ ಒಬ್ಬ ಮಲಯಾಳ/ ತಮಿಳ ಭಜನ ತಂಡ ಬರುತ್ತಿತ್ತು. ಅಲ್ಲಿಯ ವರೆಗೂ ಅಲ್ಲಲ್ಲಿ ಆಟವಾಡುತ್ತಿದ್ದ ಮಕ್ಕಳೆಲ್ಲರು ಮನೆಗೆ  ಹೋಗಿ ಕೈಕಾಲೂ ತೊಳೆದುಕೊಂಡು ಬಂದು  ಭಜನೆಯಲ್ಲಿ ಭಾಗ ವಹಿಸುವವರು. ಘಂಟೆಸಾಲ ಅವರ ಶುಕ್ಲಾಂಬರಧರಂದಿಂದ ಪ್ರಾರಂಭವಾಗಿ “ಸುಬ್ರಹ್ಮಣ್ಯಂ ಸುಬ್ರಹ್ಮಣ್ಯಂ”, “ಚಂದ್ರಶೇಖರ, ಚಂದ್ರಶೇಖರ” ಎಂಬ ಭಜನೆಗಳ ಮೂಲಕ  “ಒನ್ರಾಮ್ ತಿರುಪ್ಪಡಿ ಶರಣಂ ಪುನ್ನಯ್ಯಪ್ಪ” ಎಂದು  ಸಾಗುವ ಸೋಪಾನದ ಗೀತೆಯೊಂದಿಗೆ ಕೊನೆಗೊಳ್ಳುವುದು.  ಸೋಪಾನಗಳ ಹಾಡು ಉಂಬಾ ಉತ್ಸಾಹದಿಂದ  ತುಂಬಿ ತುಳುಕುತ್ತಿತ್ತು. ಪ್ರತಿಯೊಂದು ಸೋಪಾನಕ್ಕೆ ಒಂದು ಚರಣವಿದೆ. ಪ್ರತಿಚರಣ ಮುಗಿಯುತ್ತಿದ್ದಂತೆ, ಪ್ರಸಾದಕ್ಕೆ ಹತ್ತಿರವಾಗುತ್ತಿದ್ದ ತೃಪ್ತಿ. ನಡುವೆ ಕಾಲಕ್ಷೇಪಕ್ಕಾಗಿ ನಾನು ಶಿವ ಶಿವ ಶಂಕರ…  ಎನ್ನುತ್ತಾ ಭಕ್ತ  ಕನ್ನಪ್ಪ ಗೀತವನ್ನು ಹಾಡುತ್ತಿದ್ದೆ.  ಆ ಭಜನ ತಂಡಕ್ಕೇ ನನ್ನ ಹೆಸರು ಶಿವ ಶಿವ ಶಂಕರ ಎಂದೇ ಗುರುತು. ಕೊನೆಗೆ ಮಂಗಳಾರತಿಯ ನಂತರ ಅರ್ಚಕರು ಬಿಸಿಬಿಸಿ ಚಕ್ಕರ ಪೊಂಗಲಿಯನ್ನು  ಚಿಕ್ಕ ಚಿಕ್ಕ  ದೊನ್ನೆಗಳಲ್ಲೋ , ಎಲೆಗಳಲ್ಲೋ  ಹಂಚುವವರು.  ಅಂದು ರಾತ್ರಿ ಆರತಿ ಮುಗಿಸಿದ ಮೇಲೆ ತಿನ್ನುವ ಆ ಪ್ರಸಾದ ಅದ್ಬುತವಾದ ರುಚಿಯಿಂದ, ಆಹಾ… ಅನ್ನಿಸುವಷ್ಟು ರುಚಿಯಾಗಿ ಇರುತ್ತಿತ್ತು. ಬಹಳಷ್ಟು ಬಾರಿ  ಆ ಪ್ರಸಾದದ ಮೇಲೆ ಅನುರಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಿದ್ದೇವೆ ಎಂದರೆ  ಅದರಲ್ಲಿ ಸ್ವಲ್ಪವಾದರೂ ಸುಳ್ಳು ಇಲ್ಲ..
ಹಾಗೆ ಆದಿವಾರದ ಬೆಳಿಗ್ಗೆ ತಮ್ಮ ತಮ್ಮ ಮನೆಗಳಲ್ಲಿ ತಾವು ತಿಂಡಿ ಮುಗಿಸಿಕೊಂಡು ಎಲ್ಲಿ ಆಟ ಆಡಬಹುದು, ಏನು ಆಡಬೇಕು ಎಂದು ಚರ್ಚಿಸಿತ್ತಿದ್ದೆವು. ಹಾಗೆ ನಾವು ಚರ್ಚಿಸಲು ಹೋಗುವ ಮೊತ್ತ ಮೊದಲಿನ ಪ್ರದೇಶ ಅಯ್ಯಪ್ಪಸ್ವಾಮಿ ದೇವಸ್ಥಾನವು.  ಆ ದಿನವೂ ಎಂದಿನಂತೆ ಎಲ್ಲರೂ ಗುಂಪು ಸೇರಿ ಯಾವಾವು ಆಟಗಳು ಆಡಬೇಕೋ ಚರ್ಚಿಕೊಳ್ಳುತ್ತಿದ್ದರೆ ಸಾಧುವು ನನ್ನನು ಆತ್ತ ಇತ್ತ  ನೋಡಿ  ಇಲ್ಲಿಬಾ ಎಂಬಂತೆ ಕೈ ಸನ್ನೆ ಮಾಡಿದ.  ನನ್ನೇ ಎಂದು ನಿರ್ಧರಿಸಿಕೊಂಡು ನಾನೇ ಅವಾರ ಕಡೆಗೆ ಹೋದ. ಅವರು ನನ್ನನ್ನು ದೇವಸ್ಥಾನದ ಹಿಂಭಾಗಕ್ಕೆ ಕರೆದೊಯ್ದು, ಮೇಲಿನ ಜೇಬಿನಿಂದ ಒಂದು ರೂಪಾಯಿ ನೋಟು ತೆಗೆದು, ‘ಒಂದು ಗಣೇಶ್ ಬೀಡಿ ಕಟ್ಟು ತೆಗೆದುಕೊಂಡು ಬಾ ಮಗು. ಹಾಗೆ ನಿನಗೂ ಬೇಕಾದರೆ,  ಐದುಪೈಸೆಗೆ ಏನಾದರೂ  ಕೊಂಡುಕೋ’  ಎಂದು ಹೇಳಿ ಆ ರೂಪಾಯನ್ನು ಕೈಯಲ್ಲಿ ಇಟ್ಟ.
ನಾನು ಏನೂ ಯೋಚಿಸದೆಯೇ  ಅಂಗಡಿಯ ಕಡೆಗೆ ಓಡಿದೆ. ಮಲ್ಲಿಕಾರ್ಜುನ ಟಾಕೀಸುಗೆ ತಿರುಗುವ ಮೂಲೆಯಲ್ಲಿ ಒಂದು ಅಂಗಡಿ ಇತ್ತು. ಅಲ್ಲೇ ನಾವು ರೂಢಿಯಾಗಿ ಸಾಮಾನುಗಳನ್ನು ತಂದುಕೊಳ್ಳುತ್ತಿದ್ದೆವು. ಆ ಅಂಗಡಿಯಲ್ಲಿ ಇಬ್ಬರು ಸಹೋದರರು ಇರುತ್ತಿದ್ದರು. ನಾವು ಅವರನ್ನು ಚಿಕ್ಕ ಶೆಟ್ಟಿ  ಮತ್ತು ದೊಡ್ಡ ಶೆಟ್ಟಿ ಎಂದು ಕರೆದುಕೊಳ್ಳುತಿದ್ದೆವು.   .ಚಿಕ್ಕ ಶೆಟ್ಟಿ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡುತ್ತಾ, ಉತ್ತಮ ಗ್ರಾಹಕರ ಪ್ರಜ್ಞೆಯನ್ನು ತೋರಿಸುವವನು. ನಾನು ಬೀಡಿ ಕೇಳಿದೊಡನೆ ಒಂದು ಕಟ್ಟು ಕೊಟ್ಟು ಏನೋ ಕೇಳುತ್ತಿದ್ದಾಗ ನಾನು ಓಡುತ್ತಾ ಬಂದುಬಿಟ್ಟೆ. ದೇವಸ್ಥಾನದಲ್ಲಿ ಗಣೇಶ್ ಬೀಡಿಗಳ ಕಟ್ಟು, ಉಳಿದ ಚಿಲ್ಲರೆ, ಸಾಧುವಿಗೆ ನೀಡಿ, ನನ್ನ ಆಟಗಳಲ್ಲಿ ನಾನು ಮುಳುಗಿಹೋದೆ.
ಒಂದು ವಾರದ ನಂತರ, ಅಪ್ಪ ಯಥಾಲಾಪವಾಗಿ  ಪಡಶಾಲೆಯಲ್ಲಿ ಇದ್ದ ನನ್ನನ್ನು ಕರೆದು “ಏನೋ ಬೀಡಿ ಸೇದುತ್ತಿದ್ದೀಯಾ?”  ಎಂದು ಸ್ವಲ್ಪ ಕಟುವಾಗಿಯೇ ಕೇಳಿದರು.  ನನ್ನ ಬಾಯಿಂದ ಮಾತು ಬರಲಿಲ್ಲ. ಅಷ್ಟರಲ್ಲಿ ಅಮ್ಮನೂ ಬಂದಳು. ವಿಷಯ ತಿಳಿದುಕೊಂಡು, “ಛ, ಚ ಅವನು ಏಕೆ ಸೇದುತ್ತಾನೆ? ” ಎಂದು ನನ್ನನ್ನು ಸಮರ್ಥಿಸಿದಳು.
ಮತ್ತೆ ತಾನೇ “ಇಷ್ಟಕ್ಕೂ ನಿಮಗೆ ಯಾರು ಹೇಳಿದರು?” ಎಂದು ಕೇಳಿದಾಗ, ಅಪ್ಪ “ಯಾರೋ ಹೇಳಿದರೆ ನಾನೇಕೆ ನಂಬುತ್ತೇನೆ,  ಯಾರ ಹತ್ರ  ಇವನು ಖರೀದಿಸಿದನೋ  ಅವನೇ, ಚಿಕ್ಕಶೆಟ್ಟಿ ಹೇಳಿದ” ಎಂದ.
ನನಗೆ ವಿಷಯವು ಅರ್ಥವಾಯಿತು. ನಾನು ಮುಗುಳ್ನಗುತ್ತಾ “ಓಹ್, ಅದಾ, ದೇವಸ್ಥಾನದಲ್ಲಿ ಸ್ವಾಮಿ ಇದ್ದಾನಲ್ಲ, ಕಳೆದ ಭಾನುವಾರ ಅವರು ಖರೀದಿಸಿಕೊಂಡು ಬಾ ಅಂತ ಹೇಳಿದರು. ಆಗ ನಾನು  ಖರೀದಿಸಿದೇ. ನಾನು ಕುಡಿಯಲು ಅಲ್ಲ.”ಎಂದೆ.
ಅಪ್ಪ ನಂಬುವಂತೆ ಕಾಣಲಿಲ್ಲ. “ನೀವು ತಪ್ಪು ಮಾಡಿದ್ದು ಅಲ್ಲದೆ, ಅಪರಾಧವನ್ನು ಇನ್ನೊಬ್ಬರಿ ಮೇಲೆ ಹಾಕುವೇ ” ಎಂದು ಅವರು ಪ್ರತಿದಾಳಿ ನಡೆಸಿದರು.
ಆ ಮಾತುಗಳಿಗೆ ನನ್ನ ಮುಖವು ಕೆಂಪಾಯಿತು. ದುಃಖವಾಯಿತು. ಕೀಚಲು ಧ್ವನಿಯಲ್ಲಿ ನಮ್ಮಮ್ಮಯೊಂದಿಗೆ, “ಬೇಕಾದರೆ ಈಗಲೇ ದೇವಸ್ಥಾನಕ್ಕೆ ಹೋಗೋಣ. ಅವರಿಂದಲೇ ಮಾತನಾಡಿಸುವೆ” ಎಂದೆ.
ನನ್ನ  ನಿರಪರಾಧತ್ವ ಮೇಲೆ ನನಗಿಂತಲೂ ಜಾಸ್ತಿ ನಂಬಿಕೆ ಇರುವ ಅಮ್ಮ ತಕ್ಷಣ-
“ಹೋಗಿ ಅವರನ್ನೇ ಕೇಳೋಣ” ಎಂದಳು.
ನನ್ನ ತಂದೆಯೂ ಅಂಗಿ ಧರಿಸುತ್ತಾ-
“ತಕ್ಷಣ ಹೋಗಿ ಮಹದೇವಪ್ಪ ಮಾಮನವರನ್ನು ಕರೆದುಕೊಂಡುಬಾ ಹೋಗು, ಇಲ್ಲಿ ಇದ್ದಂತೆ ಬರಬೇಕು. ಏಕೆ ಎಂದು ಕೇಳಿದರೆ ಬಂದಾಗಾ ಅಪ್ಪ ಹೇಳುತ್ತರಂತೆ ಎಂದು ಹೇಳು. ನಾವು ದೇವಸ್ಥಾನದ ಹೊರಗೆ ಇರುತ್ತೇವೆ” ಎಂದೆ.
ನಾನು ಮಿಂಚಿನ ವೇಗದಿಂದ ಹೋಗಿ ಹತ್ತು ನಿಮಿಷದಲ್ಲಿ ಮಹದೇವಪ್ಪ ಮಾಮಾನ ಜೊತೆ ದೇವಸ್ಥಾನಕ್ಕೆ ಬಂದೆ. ಅಪ್ಪ ಮಾಮನೊಂದಿಗೆ ಏನೋ ಮಾತಾಡಿದರು. ಮಾಮ, ಹಿಂದೆ ಅಪ್ಪ, ಆ ಹಿಂದೆ ಅಮ್ಮ, ನಾನು ದೇವಸ್ಥಾನದ ಒಳಗೆ ಹೋಗಿ ಸ್ವಾಮಿ ಕುಳಿತಿದ್ದ ಜಾಗಕ್ಕೆ ಸೇರೀದೆವು .
ನಮ್ಮ ಬರುವಿಕೆಯನ್ನು ನಿಜಕ್ಕೆ ಊಹಿಸದ ಅವರು, ‘ರಾತ್ರಿ ಊಟ ತೆಗೊಂಡು ಯಾರೋ ಭಕ್ತರು ಬರಬೇಕಾದ ಸಮಯದಲ್ಲಿ ಇವರು ಬಂದಿದ್ದರೇನು?’ ಎಂದು ಆಶ್ಚರ್ಯ ಹೋದ. ಸ್ವಲ್ಪ ತಬ್ಬಿಬ್ಬಾದ.
ಮಹದೇವಪ್ಪ ಮಾಮ ಅವು ಇವು ಮಾತಾಡಿ-
“ನೀವು ಈ ಹುಡುಗನೊಂದಿಗೆ ಹೋದ ವಾರ  ಬೀಡಿ  ತರುಸುಕೊಂಡಿದ್ದೀರಾ?” ಅಂದು ಕೇಳಿದ.
ಆಗ ಅವರು ಬಹಳ ನಿಶ್ಚಲ ಚಿತ್ತದಿಂದ ನಿಷ್ಠುರವಾಗಿ, “ನಾವು ಸಾಧು ಸಂತರು, ನಮಗೆ ಬೀಡಿ, ಚಾಡಿಗಳು ಏಕೆ ಮಗೂ .ಏನೋ ಸ್ವಾಮಿಗಳ ಸೇವಯಲ್ಲಿ ಮುಕ್ತಿನೊಂದಿ, ಆ ಮೇಲೆ ಒಂದು ಮಹಾ ಯಜ್ಞಕ್ಕೆ ಹೆಜ್ಜೆಗಳು ಹಾಕುತ್ತಿದ್ದವನು. ಅಂತಹ ಬಲಹೀನತೆಗೆ, ಕೆಟ್ಟು ವ್ಯಸನಗಳಿಗೆ ನಾವು ಬಹುದೂರ ಮಗು” ಎಂದರು.
“ಸ್ವಾಮಿಗಳು ಸುಳ್ಳು ಹೇಳುತ್ತಿದ್ದಾರೆ. ಅಂಗಡಿಯಿಂದ ನಾನು ತಂದು ಕೊಟ್ಟೆ” ಎಂದೆ ನೇರವಾಗಿ,  ಸತ್ಯವನ್ನೇ ಹೇಳುತ್ತಿದ್ದೇನೆ ಎಂಬ ಧೈರ್ಯದಿಂದ. ಅಪ್ಪ ನನ್ನನ್ನು ಕೈಹಿಡಿದು ಬೇಜಾರುದಿಂದ ಹಿಂದಕ್ಕೆ ಎಳೆಯುತ್ತಿದ್ದರೂ, ಮಹದೇವಪ್ಪ ಮಾಮಾ ಆಗಲೂ ನಿಲ್ಲದೆ-
“ಆ ಮಗು ತಾನು ತಂದು ಕೊಟ್ಟಿದೆನೆಂದು ಹೇಳುತ್ತಿದ್ದಾನಲ್ಲಾ?” ಎಂದು ಗಟ್ಟಿಯಾಗಿ ಕೇಳಿದರು.
ಅದಕ್ಕೆ ಅವರು  ಇನ್ನೂ ನಿದಾನವಾಗಿ ನಗುತ್ತಾ-
“ತಂದೆಯವರು ಹೊಡೆಯುತ್ತಾರೆ ಎಂಬ ಭಯದಿಂದ ಮಕ್ಕಳುಹಾಗೆ ಹೇಳುತ್ತಾರೆ ಮಗು! ಬೀಡಿಗಳು ಸೇದಕೂಡದೆಂದು ನಾನು ಹೇಳುತ್ತೇನೆ ಬಿಡಿರಿ. ನೀವೇನೂ   ಮಗುವನ್ನು ಶಿಕ್ಷಿಸಬೇಡಿರಿ” ಎಂದು ಅನುನಯವಾಗಿ ಹೇಳಿದನು.
ಅವರ ಮುಂದೆ ತನಗೆ ಅಪಮಾನವಾಯಿತು ಎಂದು ಅಪ್ಪ ಕೋಪದಿಂದ ಇದ್ದಾನೆ. ಸುಳ್ಳನ್ನು ನನ್ನಮೇಲೆ ತಳ್ಳುತ್ತಿದ್ದಾನೆಂದು ನಾನೂ ಅವಮಾನದಿಂದ ಫೀಲಾದೆ. ಮನೆಗೆ ಬಂದೆವು. ಅಕ್ಕಗೆ ಹೇಳಿದರೆ ಅವಳೂ ನನ್ನನ್ನು ಬೆಂಬಲಿಸಿದಳು. ಆ ಸಾಧು ಒಳ್ಳೆಯವನಲ್ಲ ಎಂದು ಅವಳ ಗೆಳೆಯರಾದ ಸತ್ಯಪ್ರಭ ಅವರು ಹೇಳಿದ್ದಾರೆಂದು ಹೇಳಿದ್ದಾಳೆ.
ಆ ರಾತ್ರಿ ನಾನು ಊಟ ಮಾಡಲಿಲ್ಲ. ಅಮ್ಮ ಬಲವಂತ ಮಾಡಿದರೂ ಒಂದು ತುತ್ತು ಅನ್ನ ತಿನ್ನಲಿಲ್ಲ. ಬೇಡವೆಂದರೂ  ಕಣ್ಣೀರು ನಿಲ್ಲಲಿಲ್ಲ. ಸ್ವಾಮಿ ಮತ್ತು ನನ್ನ ನಡುವಿನ ಜರುಗಿದ ವ್ಯವಹಾರವನ್ನು ಯಾರೂ ನೋಡಿಲ್ಲ. ಅದರಿಂದ ಸಾಕ್ಷ್ಯವಿಲ್ಲ.  ನಾನು ಅಪರಾಧವನ್ನು ಸಾಬೀತು ಪಡಿಸಲು ಸಾಧ್ಯವಿಲ್ಲ. ಅವನ ದೊಡ್ಡತನ, ಸ್ವಾಮಿ ವೇಷವು ಅವರನ್ನು ಉಳಿಸಿತು ಎಂದು ಅರ್ಥವಾಯಿತು. ಆದರೆ ನಿಯಮದ ಪ್ರಕಾರ ಸತ್ಯವೇ ಗೆಲ್ಲಬೇಕು ಅಲ್ಲವೇ. ಮತ್ತೆ ಯಾಕೆ ನಾನು ಏಕೆ ಸೋತಿದ್ದೇನೆ,  ನನ್ನ ಮಾತು ಯಾರೂ ನಂಬಲಿಲ್ಲ? ಸತ್ಯಮೇವ  ಜಯತೆ ಅನ್ನುತ್ತಾರೆ, ಅಲ್ಲವೇ? ಮತ್ತೆ ಇಲ್ಲಿ ಸತ್ಯ ಗೆಲ್ಲಲಿಲ್ಲ.ಅಲ್ಲವೇ? ಏನೂ ಓದಲು ಸಾಧ್ಯವಾಗಲಿಲ್ಲ. ಕಣ್ಮುಂದೆ, ಕಳೆದವಾರ ನಡೆದ ಘಟನೆ, ಇಲ್ಲಿಯವರೆಗೆ ನಡೆದ ಘಟನೆಗಳು ರೀಲುಗಳಂತೆ ತಿರುಗಾಡುತ್ತಿದ್ದವು.  ಬಿಕ್ಕಿಬಿಕ್ಕಿ ಅಳಬೇಕೆಂದು ಅನಿಸಿತು. ಭಾರವಾದ ಹೃದಯದಿಂದ, ಕೆಂಪೆರಿದ ಕೆನ್ನೆಗಳದಿಂದ, ಉಬ್ಬಿದ ಕಣ್ಣುಗಲಿಂದ, ತುಂಬಿದ ಕಣ್ಣೀರಿಂದ ಯಾವಾಗ ನಿದ್ರೆಗೆ ಜಾರಿದೆನೋ ತಿಳಿಯದು. ಅವಮಾನ ಭಾರ, ಮಾಡದ ತಪ್ಪಿಗೆ ಶಿಕ್ಷೆಯ ಹೊರೆ ಮನಸ್ಸನ್ನು ನೋಯಿಸುತ್ತದೆ. ನಿದ್ದೆಯಲ್ಲೂ ಗೊಂದಲವಾಗಿ ಸ್ವಾಮಿ ಮತ್ತು ಅಪ್ಪ ಒಬ್ಬರಾದಮೇಲೆ ಒಬ್ಬರು  ಕಾಣಿಸಿಕೊಳ್ಳುತ್ತಿದ್ದಾರೆ.
ಬೆಳಗಾಯಿತು. ನಾನು ಶಾಲೆಗೆ ಹೊರಟೆ. ಆದರೆ ಇವತ್ತು ನಾನು ಶಾಂತವಾಗಿ ಹೋಗಿ ಸ್ವಾಮಿಯನ್ನು ಕೇಳಲು ನಿರ್ಧರಿಸಿದೆ. ಸತ್ಯವು ಬೆಂಕಿಯಂತಲ್ಲವೇ- ಅವರೇ ಅಲ್ಲವೇ ನೇರವಾಗಿ ಕೇಳಿ ಹೇಗೆ ಸುಳ್ಳು ಹೇಳಿದರೆಂದು ಕೇಳಬೇಕೆಂದುಕೊಂಡಿದ್ದೆ. ಶಾಲೆಯಿಂದ ಬಂದ ಕೂಡಲೇ ಬ್ಯಾಗ್ ಬಿಸಾಡಿ, ತಾಯಿಗೆ ಅನುಮಾನ ಬಾರದಂತೆ  ಒಬ್ಬನೇ ಹೊರಟು ದೇವಸ್ಥಾನ ಕಡೆ ಹೋಗಿದ್ದೆ. ಒಳಗೆ ಸ್ವಾಮಿ ಕುಳಿತ ಜಾಗಕ್ಕೆ ಹೋಗಿ ನೋಡಿದರೆ…
ಆಶ್ಚರ್ಯ… ಖಾಲೀಯಾಗಿದೆ. ಅವರ ಕುರುಹುಗಳು ಯಾವು ಪತ್ತೆಯಾಗಿಲ್ಲ. ನಾನು ದೇವಸ್ಥಾನದ ಸುತ್ತಲೂ ಹುಡುಕಿದೆ. ಎಲ್ಲಿಯೂ ಇಲ್ಲ. ಯಾವುದೋ ಕಡಿಮೆ. ಅಂದುಕೊಂಡ ಕೆಲಸ ಆಗಲಿಲ್ಲ ಎಂಬ ಅತೃಪ್ತಿಯಿಂದ ಮನೆಗೆ ಬಂದೆ. ತಾಯಿ ಕಾಣಿಸಿಕೊಂಡಳು. ಎಲ್ಲಿಗೆ ಹೋದೆವೆಂದು ಕೇಳಿದಳು. ಹೇಳಿದೆ.  ಸ್ವಾಮಿ ಇಲ್ಲ ಎಂದುಕೂಡಾ ಹೇಳಿದ. ತನಗೆ  ಗೊತ್ತು ಎಂದು  ನಕ್ಕಳು. ನಿನಗೆ ಗೊತ್ತಾ ಎಂದು ಕೇಳಿದರೆ ಆಗ ಹೇಳಿದಳು.
“ನೀವು ರಾತ್ರಿಯಿಡೀ ಒಂದೇ ಸಮೇ ಕನವರಿಸುತ್ತಿದೀಯಾ. ‘ಅಪ್ಪಾ, ನಾನು ಬೀಡಿ ಸೇದಲಿಲ್ಲ. ಸ್ವಾಮಿ ಗಣೇಶ್           ಬೀಡಿ ಕಟ್ಟು ತರಲಿಕ್ಕೆ ಹೇಳಿದ. ಸ್ವಾಮಿ ಸುಳ್ಳು ಹೇಳುತ್ತಿದ್ದಾನೆ. ನನ್ನ ಮಾತುಗಳನ್ನು ನಂಬಿರಿ” ಎಂದು ಒಂದೇ ಮಾತುಗಳು. ನಿಮ್ಮ ತಂದೆ ಅದನ್ನು  ಕೇಳಿ ತುಂಬಾ ದುಃಖಿಸಿದರು. ಮುಂಜಾನೆ ಆರುಗಂಟೆಗೆ ಎದ್ದು ಮಹದೇವಪ್ಪ ಮಾಮಾ ನನ್ನು ಕರೆದು ಸ್ವಾಮಿಯನ್ನು ಗದರಿಸಿ, ಕೇಳಿದರೆ ಅವರು ‘ಹೌದುರೀ, ಇನ್ನೂ ಕೆಲವು ಹಳೆಯ ಅಭ್ಯಾಸಗಳನ್ನು ಇನ್ನೂ ಬಿಡಲು ಸಾಧ್ಯವಾಗುತ್ತಿಲ್ಲ. ನಾನು ಸತ್ಯ ಹೇಳಿದರೆ ನೀವು ಉಳಿಯಲು ಬಿಡುವುದಿಲ್ಲ ಎಂದು ಹಾಗೆ ಹೇಳಿದೆನಂತೆ. ‘‘ತಕ್ಷಣ ಖಾಲಿಮಾಡಿ ಹೋಗುತ್ತೇನೆ, ತನಗೇನೂ ಮಾಡಬೇಡ” ಎಂದು ಹೇಳಿ ಹೊರಟುಹೋದನಂತೆ”
ನಾನು ತೃಪ್ತಿಯಿಂದ ಕಣ್ಣುಮುಚ್ಚಿದೆ. ಕಣ್ಮುಂದೆ  “ಸತ್ಯಮೇವ ಜಯತೇ” ಕಾಣುತ್ತಿ


About The Author

2 thoughts on “ತೆಲುಗು ಕಥೆ “ಶೋಭನ್‌ ಬಾಬು-ಗಣೇಶ್‌ ಬೀಡಿ” ತೆಲುಗುಮೂಲ ಜಿ.ಉಮಾಮಹೇಶ್ವರ್‌ , ಕನ್ನಡಕ್ಕೆ ರಂಗನಾಥ ರಾಮಚಂದ್ರ ರಾವು”

  1. ಬಾಗೇಪಲ್ಲಿ ಕೃಷ್ಣಮೂರ್ತಿ

    ಕಾಪಲ ತೆಲುಗು ಪದ, ಛತ್ರ ಸರಿ ಸತ್ರ ತೆಲುಗು, ಚಕ್ಕರ ಪೊಂಗಲ್ ತಪ್ಪು, ಸಿಹಿ ಪೊಂಗಲ್ ಸರಿ, ಅನುವಾದ ಪಡಪದ ಆಗಿದೆ ಕನ್ನಡಡೀ ಕರಣ ಗೊಳಿಸಿ. ಅಕ್ಷರ ದೋಷಗಳಿವೆ ಸರಿಪಡಿಸಿ

    ಬಾಗೇಪಲ್ಲಿ.

Leave a Reply

You cannot copy content of this page

Scroll to Top