ಕಾವ್ಯ ಸಂಗಾತಿ
ಡಾ. ಲತಾ ಎ ಆರ್ ಬಾಳೆಹೊನ್ನೂರು
“ಭರವಸೆ”.


ಕಣ್ಣಿನ ನೋಟದಲ್ಲಿ ನೀಡಿದೆ ಭರವಸೆ
ದೇವರಲಿ ನೀಡಿ ಬೇಡಿದೆ ಬೊಗಸೆ
ಹೃದಯದಲಿ ನೀನೆಂದು ಸ್ಥಿರ ಮನಸೇ
ನಿತ್ಯ ನೂತನ ನೆನಪೆoದು ನನಸೇ
ಅಲೆ ಅಲೆಯಾಗಿ ಚಿಮ್ಮಿಸಿದೆ ಬಿಸಿ ಉಸಿರೇ
ಬಾಳ ಬದುಕಲ್ಲಿ ನಮ್ಮಿಬ್ಬರ ಬೆರಸೇ
ಸಂಸಾರದ ರಥ ನಡೆಸುವ ಕನಸೇ
ತುಂಬುವುದು ಸಂತಸದ ಹೊಸ ಹಸಿರೇ
ಬೆಚ್ಚನೆಯ ಗೂಡಲ್ಲಿ ಸುಂದರ ಲೋಕವದು
ಅನುಭವದ ಸವಿಸ್ತಾರ ಕೇಳುವುದು
ಜೀವನ ಚಕ್ರ ನಿಲ್ಲದೆ ಉರುಳುವುದು
ಸುಮಧುರ ಪ್ರೀತಿ ಅಳಿಯದೆ ಉಳಿಯುವುದು
ಅನನ್ಯ ಅವಿಸ್ಮರಣೀಯ ಕಂಡ ಬೆರಗು
ಬೇಕಿಲ್ಲ ಜಂಜಾಟದ ಯಾವ ಕೊರಗು
ನೆಮ್ಮದಿಯ ಗೂಡಲ್ಲಿ ಕೈ ಹಿಡಿದು ಸಾಗು
ದೊರಕಿದೆ ಹೊಸತನದ ಹೊಸ ಮೆರಗು
ಡಾ. ಲತಾ ಎ ಆರ್ ಬಾಳೆಹೊನ್ನೂರು.



