ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಎನಿತೊ‌ ಮಾತುಗಳು
ಮೌನದಲಿ‌ ಕರಗಿ
ನಿಂತು ಹೋಗಿದೆ
ಬಂಧವದು ಸೊರಗಿ

ಎದೆಯ ಭಾವಗಳು
ಆಡದೆಯೆ ಉಳಿದು
ದೂರವಾದ ಹೃದಯ
ಅಳುತಿದೆ ಮನದಿ

ಕಾರಣವೆ ಇರದ
ನೋವಿನ ಸರಮಾಲೆ
ಯಾರದೇನೋ ಶಾಪವು
ತಿಳಿಯದಾವ ಲೀಲೆ

ದಾಟದ ಸಾಗರವು
ಎದೆಗಳ ನಡುವೆ
ಮುಗಿದು ಹೋದ ಮೇಲೆ
ಮಾತವು ಬರಿ ಸಪ್ಪೆ

ಕಡಿದ ಬಂಧವನು
ಜೋಡಿಸುವದೇ ತಂತು
ದಾರಿ ಕಾಣದ ಮನ
ಮರುಗುತಿದೆ ಇಂತು


About The Author

Leave a Reply

You cannot copy content of this page

Scroll to Top