ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದಾರಿ ದೀಪ :                                                               
ಅವಳು…..!ಅವಳು…..! ಕೇವಲ ನನ್ನ ಗೆಳತಿ… ಪ್ರಾಣಸಖಿ ಮಾತ್ರವಾಗಿರಲಿಲ್ಲ….! ಆ ಪ್ರಿಯಾ ನನ್ನ ದಾರಿ ದೀಪ ಸಹ ಆಗಿದ್ದಳು….! ದಾರಿ ತಪ್ಪಿ ಹೆಜ್ಜೆ ಹಾಕುವ ವೇಳೆ ಎಲ್ಲಾ ಎಚ್ಚರಿಕೆಯ ‘ ಗಂಟೆ’ ಬಾರಿಸಿ ನನ್ನನ್ನು ಎಚ್ಚರಿಸುತ್ತಿದ್ದಳು..!ಹೆಚ್ಚಿನ ಮಾತುಕತೆ ಇಲ್ಲಾದೇ ಇದ್ದರೂ, ‘ಮೋರಿ ಕಟ್ಟೆ’ಯ ಮೇಲೆ ಕುಳಿತುಕೊಂಡ ವೇಳೆ, ನನ್ನ ಮುಖ ನೋಡಿ ಹೇಳುತ್ತಿದ್ದ ಎಲ್ಲಾ ‘ಭವಿಷ್ಯ’ಗಳು ಸತ್ಯವಾಗುತ್ತಿತ್ತು…! ಆದರೂ ನಾನು ಅವಳನ್ನು ನಂಬಲಿಲ್ಲ…!ನಾನು ನನ್ನ ಲೋಕದಲ್ಲಿಯೇ ಮುಳುಗಿ ಬಿಟ್ಟೆ….!!   .                            
       ದಿನ… ವಾರ… ತಿಂಗಳು…. ವಷ೯…. ಎಂದು ಸಮಯ ಸಾಗಿದ್ದು ನನಗೆ ತಿಳಿಯಲೇ ಇಲ್ಲ…! ಏಕೆಂದರೆ ನಾನು ‘ಗಂಟೆ’ ನೋಡಿ ಕೆಲಸ ಮಾಡುವ ವ್ಯಕ್ತಿವಾಗಿರುವುದಿಲ್ಲ…! ಕೆಲಸ ಮುಗಿಸಿ ಗಂಟೆ      ನೋಡುವ ಪಾಳು ಜನ್ಮ….! ಕಾಲಿಗೆ ಹಾಕಿಕೊಂಡಿರುವ ಚಪ್ಪಲಿ ಸವೆದು ಹೋಗುತ್ತಿದ್ದರೂ, ಮನದಲ್ಲಿ ಕಂಡ ಕನಸುಗಳನ್ನು ನನಸು ಮಾಡುಲು ಓಡುತ್ತಿರುವ ಬ್ರೇಕ್ ಇಲ್ಲಾದ ಗಾಡಿ….!                                                          
       ಈ ವೇಳೆಗೆ ಪ್ರಿಯಾ ನನ್ನ ಬಾಳಿನಿಂದ ದೂರವಾಗಿ ಬಿಟ್ಟಳು…! ನಾನು ಸಾಗುತ್ತಿದ್ದ ಹಾದಿಯಲ್ಲಿ ಬೆಳಕು ಇರಲಿಲ್ಲ…!ಹಗಲು ಕಂಡ ಬಾವಿಯಲ್ಲಿಯೇ ರಾತ್ರಿ ಬೀಳುತ್ತಿದ್ದೆ…! ಆದರೂ ನನಗೆ ಬುದ್ಧಿ ಬರುತ್ತಿರಲಿಲ್ಲ…! ನನ್ನ ದಡ್ಡ ಕೆಲಸಗಳಿಂದ ಬಹು ಬೇಗಾನೆ ‘ಪೆದ್ದ ಶಿಖಾಮಣಿ’ ಎಂಬ ಬಿರುದು ನನಗೆ ಸಿಕ್ಕಿ ಬಿಟ್ಟಿತ್ತು…!ನಾನು ಮತ್ತು ಪ್ರಿಯಾ ನಡುವೆ ಯಾವುದೇ ಭೇಟಿ ಮತ್ತು ಮಾತುಕತೆ ಇಲ್ಲಾದಿದ್ದರೂ ಕೆಲ ದಿನಗಳಿಂದ ಕನಸಿನಲ್ಲಿ ಬಂದು, ಕೆಲ ನೀತಿ ಕಥೆಗಳನ್ನು ಹೇಳುತ್ತಾ, ನನಗೆ ಜ್ಞಾನೋದಯವಾಗಲು ಪ್ರಯತ್ನ ಮಾಡುತ್ತಿದ್ದಳು….!                                          
      ನಾವು ಯಾವುದೇ ಮಂದಿಯನ್ನು ಈ ಭೂಮಿಯಲ್ಲಿ  ಕಣ್ಣು ಮುಚ್ಚಿ ನಂಬಬಾರದು…!ನಮ್ಮ ‘ ನಂಬಿಕೆ’ಯೂ ರಾಜಕೀಯ ಪಕ್ಷಗಳ ಆಶ್ವಾಸನೆಗಳಂತೆ ಢಮಾರ್ ವಾಗ   ಬಹುದು…! ಆಗ ಸುಮ್ಮನೆ ದುಃಖಿಸಿ ಪ್ರಯೋಜನ ಇಲ್ಲ…! ಕೆಲವೊಂದು ವಿಚಾರಗಳಲ್ಲಿ ನಮ್ಮ ಕಣ್ಣುಗಳನ್ನು ಸಹ ನಂಬು ವಂತೆ ಇಲ್ಲ….! ಈ ವಿಚಾರ ಕುರಿತು ಒಂದು ಕಥೆಯನ್ನು ಪ್ರಿಯಾ ನನಗೆ ಕೆಲ ದಿನಗಳ ಹಿಂದೆ ಹೇಳಿದ್ದಳು…! ಆ ಕಥೆ ಈಗ ನಿಮಗಾಗಿ…. !!

       ಒಂದು ಏಡಿ ಸಮುದ್ರ ತೀರದ ಮರಳಿನಲ್ಲಿ ಹೆಜ್ಜೆ ಹಾಕುತ್ತಿತ್ತು…. ಸುಮಾರು ದೂರ ಸಾಗಿದ ಮೇಲೆ ಏಡಿ ಒಮ್ಮೆ ತಿರುಗಿ ನೋಡಿದಾಗ, ಮರಳಿನಲ್ಲಿ ತನ್ನ ಕಾಲಿನ ಗುರುತುಗಳಿಂದ ರಚನೆಯಾಗಿರುವ ‘ಕಲಾಕೃತಿ’ಯನ್ನು ನೋಡಿ ಮನಸ್ಸಿಗೆ ಬಹಳ ಖುಷಿ ಮತ್ತು ಹೆಮ್ಮೆ ಎನ್ನಿಸಿತ್ತು..! ತಾನು ಒವ೯ ‘ಕಲಾವಿದ ‘ ಎಂದು ಏಡಿ ಭಾವಿಸಿತ್ತು…! ಆದರೆ ಈ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ..!ಏಕೆಂದರೆ ದೊಡ್ಡ ಸಮುದ್ರ ಅಲೆಯೊಂದು ಅಪ್ಪಳಿಸಿ , ಈ ಏಡಿಯ ಸುಂದರವಾದ ಹೆಜ್ಜೆ ಗುರುತುಗಳ ಕಲಾಕೃತಿಯನ್ನು ಮಾಯ ಮಾಡಿಯೇ ಬಿಟ್ಟಿತ್ತು…!ಆಗ ಏಡಿಯೂ ಬಹಳ ಮನನೊಂದು ಸಮುದ್ರದ ಬಳಿ ಕೇಳಿಯೇ ಬಿಟ್ಟಿತ್ತು.
     “ನಾನು ನಿನ್ನನ್ನು ಬಹಳ ಪ್ರೀತಿಸುತ್ತಿದ್ದೆ…. ನಾನು ನಿನಗೆ ಯಾವುದೇ ದ್ರೋಹಗಳನ್ನು ಮಾಡಿಯೇ ಇಲ್ಲ….! ನೀನು ಇಂತಹ   ‘ಅನ್ಯಾಯ’ವನ್ನು, ನನಗೆ ಮಾಡಬಹುದು   ಎಂದು ಮನಸ್ಸಿನಲ್ಲಿ ಒಮ್ಮೆಯೂ ಕಲ್ಪನೆ ಸಹ ಮಾಡಿಕೊಂಡಿರಲಿಲ್ಲ.. ಆದರೆ ನನ್ನ ಕಲಾಕೃತಿಗಳನ್ನು ನೋಡಿ ನಿನಗೆ ‘ಅಸೂಯೆ’ ಬರಲು ಕಾರಣ ಏನು….?”.
     ಆಗ ಸಮುದ್ರ ನಗುತ್ತಾ ಸರ್ವ ಪ್ರಶ್ನೆಗಳಿಗೂ ಶಾಂತವಾಗಿ ಉತ್ತರಿಸ ತೊಡಗಿತ್ತು…!
     “ನೀನು ನನ್ನನ್ನು ತಪ್ಪಾಗಿ ತಿಳಿದುಕೊಂಡಿರುವೆ…. ನನಗೆ ನಿನ್ನ ಮೇಲೆ ಯಾವುದೇ ಅಸೂಯೆ- ಕೋಪ ಇಲ್ಲ..! ನೀನು ಮರಳಿನಲ್ಲಿ ನಿನ್ನ ಕಾಲುಗಳಿಂದ ರಚಿಸಿರುವ ಕಲಾಕೃತಿಯನ್ನು ನೋಡಿ, ಬೇರೆಯೊಂದು ಪ್ರಾಣಿ ನಿನ್ನನ್ನು ಹಿಡಿದು, ತಿಂದು ಮುಗಿಸಲು ಬರುವುದನ್ನು ನೋಡಿ, ನಿನ್ನ ಹೆಜ್ಜೆ ಗುರುತುಗಳನ್ನ ಅಳಿಸಿ, ನಿನ್ನ ಜೀವವನ್ನು ಉಳಿಸಿದೆ ಅಷ್ಟೇ…!” ಎಂದು ಸಮುದ್ರ ಹೇಳಿದನ್ನು ಕೇಳಿದಾಗ, ಏಡಿಗೆ ತನ್ನ ಅಜ್ಞಾನ ಮತ್ತು ತಪ್ಪಿನ ಅರಿವು ತಿಳಿಯಿತ್ತು… ಕೃತಜ್ಞತೆ ಭಾವದಿಂದ ಏಡಿಯೂ ಸಮುದ್ರಕ್ಕೆ ಕೈ ಮುಗಿದು ಮುಂದಕ್ಕೆ ಸಾಗಿತ್ತು…!
  ಈ ಭೂಮಿಯಲ್ಲಿ ಬದುಕು ಸಾಗಿಸುತ್ತಿರುವ ಪ್ರತಿಯೊಂದು ಜೀವಿಗಳಿಗೂ ಒಂದು ‘ನಗ್ನ ಸತ್ಯ’ ಗೊತ್ತಿರಲೇಬೇಕು….!
      “ನಮ್ಮ ಕಣ್ಣುಗಳು ಕಾಣುವುದು ಎಲ್ಲಾ ಸತ್ಯವಾಗಿರುವುದಿಲ್ಲ…..! ಸತ್ಯವಾಗಿರುವುದು ಎಲ್ಲಾ ಕಾಣುವುದು ಸಹ ಇಲ್ಲ….!!!.”.


About The Author

Leave a Reply

You cannot copy content of this page

Scroll to Top