ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

*ಫಲವತ್ತಾದ ಭೂಮಿ ರಿಯಲ್ ಎಸ್ಟೇಟ್ ಮಾಡಿವಿ*
*ಹೊಲ ಗದ್ದೆ ಮುಚ್ಚಿ ಬಂಗಲೆ ,ಬಾರ್ ಕಟ್ಟಿವಿ*
*ಕೆರೆ,ಬಾವಿ ಮುಚ್ಚಿ ಮೆಟ್ರೋಮಾಲ್ ಕಟ್ಟಿವಿ*
*ಇನ್ವೆಸ್ಟ್ ಕರ್ನಾಟಕ ಹೆಸರಲ್ಲಿ ಬಂಡವಾಳ ಶಾಹಿಗಳಿಗೆ 

ಸಾವಿರಾರು ಎಕರೆ ಭೂಮಿ ಕೊಟ್ಟಿವಿ ಹಿಂಗಿದ್ದಾಗ*
*ನಮಗ ಮಳೆ ಯಾಕೆ ಬೇಕು?*

 *ವಿಂಡ್ ಪ್ಯಾನ್ , ಸೋಲಾರ್*,
*ರಿಯಲ್ ಎಸ್ಟೇಟ್ , ರೇಸಾಲ್ಟ್ ಫ್ಯಾಕ್ಟರಿಗಳ ಹೆಸರಲಿ ಹೊಲ ಬರಡು ಮಾಡಿವಿ*
*ಅಭಿವೃದ್ಧಿ ಹೆಸರಲ್ಲಿ ಸಿಕ್ಕ ಸಿಕ್ಕಂಗ ಗಿಡ ಮರಗಳ ಕಡದಿವಿ*
*ಹಿಂಗಿದ್ದಾಗ 

ನಮಗ ಮಳೆ ಯಾಕೆ ಬೇಕು?*

*ಹಳ್ಳಿ ಯಾರಿಗೆ ಬೇಕಾಗೈತಿ?*
*ಊರು ಗೌಡನಿಗೆ ನಗರದಲ್ಲಿ ಸೆಕ್ಯೂರಿಟಿ ಗಾರ್ಡ ನೌಕರಿ ಸಿಕ್ಕೈತಿ*
*ನಾಯಕರು ನೀರಾವರಿ ಇಲಾಖೆ ಬೇಡ , 

ನಗರಾಭಿವೃದ್ಧಿ ಇಲಾಖೆ ಬೇಕು ಅಂತಾರ ಹಿಂಗಿದ್ದಾಗ 

ನಮಗ ಮಳೆ ಯಾಕ ಬೇಕು?*

*ದನ ಕರು , ಹೈನದ ಚಿಂತಿಯಾಕ*,
*ಹಾಲು ಮೊಸರು ತುಪ್ಪ  ಪ್ಯಾಕೇಜ್ ನಲ್ಲಿ ಸಿಗತೈತೆ*
*ಹಬ್ಬದಾಗ ಸೆಗಣಿ ಬೇಕೆಂದರೆ online ನಲ್ಲಿ ಸಿಗತೈತೆ*
*ಒಕ್ಕಲುತನ ಎಲ್ಲರಿಗೂ ಬ್ಯಾಡ ಆಗೈತೆ ಹಿಂಗಿದ್ದಾಗ 

ನಮಗ ಮಳೆ ಯಾಕೆ ಬೇಕು?*

*ಯೋಚಿಸುವುದಕ್ಕೆ AI ,ChatGPT ಐತೆ*
*ಕೆಲಸ ಮಾಡಾಕ Robots ಅದಾವು*
*ಬದುಕಲು ಸರಕಾರ ಉಚಿತ ಭಾಗ್ಯಗಳ ಕೊಟ್ಟೈತೆ*,
*ಮಹಿಳೆಯರು ತಿರಿಗ್ಯಾಡಲು ಬಸ್ ಫ್ರೀ ಬಿಟ್ಟೈತೆ*
*ಅಡಿಗೆ ಮಾಡೋದೆ ಬೇಕಿಲ್ಲ , Zomato ,Swiggy ಹೊಟ್ಟೆ ತುಂಬಿಸಿ ಬಿಡತಾವು*
*ಹಿಂಗಿದ್ದಾಗ 

ನಮಗ ಮಳೆ ಯಾಕ ಬೇಕು?*

*ಕುಡಿಯಾಕ ನೀರು ಬೇಕೆಂದರೆ*
*ಖಗ್ರಾಸ ಹಳ್ಯಾಗು  ಬಾಟಲ್ ನೀರು ಸಿಗತೈತೆ*
*ನೀರ ಸಿಗದಿದ್ದರೂ ಬೀರಂತು ಸಿಕ್ಕ ಸಿಗತೈತೆ*
*ಸರಕಾರ ಮುಜರಾಯಿ , ಸರಾಯಿ ಹಣ ಮೇಲೆ ನೆಡಿತೈತೆ ಅಂದರೆ 

ನಮಗ ಮಳೆ ಯಾಕ ಬೇಕು?*

*ರೊಕ್ಕ ಬೇಕೆಂದರೆ ಪೊನ್ ಪೇ , ಗೂಗಲ್ ಪೇ ಐತೆ*
*ಟೈಮ್ ಪಾಸ್ ಮಾಡಾಕ* *WhatsApp ,FB , Instagram ಐತೆ ,reels ಮಾಡಿ ಬಿಡಾಕ social media ಐತೆ*
 
*ಜನರು ಜಗಳಾಡಾಕ ಜಾತಿ ಧರ್ಮ ಅದಾವು*
*ಹಸಿರು , ಕೆಸರಿನಲ್ಲಿ ನಾಯಕರಿಗೆ ಅಧಿಕಾರ ಸಿಗತೈತೆ*
*ಬರಗಾಲ ಬಂದರೂ ಅನುದಾನ ಸಿಗತೈತೆ ಹಿಂಗಿದ್ದಾಗ 

ನಮಗ ಮಳೆ ಯಾಕ ಬೇಕು?*


About The Author

Leave a Reply

You cannot copy content of this page

Scroll to Top