ಕಾವ್ಯ ಸಂಗಾತಿ
ಶ್ರೀದೇವಿ .ಮ.ಗುಮ್ಮಗೋಳ
“ಅಪ್ಪನಿಲ್ಲದ ಮನೆಯೊಳಗೆ ಅಮ್ಮ”


ಅಪ್ಪನಿಲ್ಲದ ಮನೆಯೊಳಗೆ
ನೋವು ನುಂಗಿ ಕಷ್ಟಸಹಿಸಿ
ದೈರ್ಯ ವಹಿಸಿ…..
ಮಕ್ಕಳನ್ನು ಸಾಕಿಬೆಳಸಿದಳಮ್ಮ
ಮಕ್ಕಳೆಲ್ಲ ಬೆಳದು ಹೆಮ್ಮರವಾಗಿದ್ದಾರೆ
ಮಕ್ಕಳೆಲ್ಲ ತಮ್ಮದೆಂಬ ನೆಲೆಯಲ್ಲಿ
ಅಮ್ಮನಿಗ ಜೇಡರಬಲೆಯಲ್ಲಿ…
ಹೆಗಲ ಮೇಲೆ ಹೊತ್ತು ಅಪ್ಪ ತಿರುಗುವಾಗ
ನನ್ನ ಕೂಗು ಮುಗಿಲು ಮುಟ್ಟುತ್ತಿತ್ತು
ಅಪ್ಪಿನಿಲ್ಲದೇ ತಬ್ಬಲಿಗಳಾಗಿ….
ಪ್ರಭಲ ಶಕ್ತಿಗಳ ಬಲಿಗಳಾಗಿ….
ನಮ್ಮ ಕೂಗು ಕೇಳುವರಿರಲಿಲ್ಲ
ತುತ್ತು ಕೂಳಿಗಾಗಿ ಅಮ್ಮ
ಮುಸುರಿ ತಿಕ್ಕುತ ಅಲೆದಿದ್ದಳಲ್ಲ…..
ಅಪ್ಪನಿಲ್ಲದ ಮನೆ ಈಗ
ಉಪ್ಪರಗಿಯಲ್ಲಿದ್ದೂ ಅನಾಥಭಾವ….
ಅಮ್ಮ ಕೇವಲ ಅಣ್ಣ-ಅತ್ತಿಗೆಯರ ಕೈಗೊಂಬೆ
ಮರದಿಂದ ಬೇರ್ಪಟ್ಟ ರಂಬೆಕೊಂಬೆ
ಜೀವವಿದ್ದು ನಿರ್ಜಿವದ ತೊಗುಲುಗೊಂಬೆ
ಮನೆಗೆ ಬಂದಾಗಲೆಲ್ಲ
ನೀ ಕುಳಿತ ಕುರ್ಚಿ, ಚಸ್ಮ, ಪೆನ್ನು, ಪುಸ್ತಕ ಬಣಗುಡುತ್ತಿವೆ
ಕಣ್ಣಂಚಿನಲ್ಲಿ ಆರ್ದತೆ ತುಂಬಿಕೊಂಡು
ಮರೆಮಾಚುತ್ತೇನೆ ನೋವ….
ಮಾತಿಗಿಳಿಯುತ್ತೇನೆ ಮಾತು ಒಣಗುತ್ತದೆ
ನನ್ನ ಅಂತಾರಾಳದಲ್ಲಿ ಕುಳಿತು
ಅಪ್ಪ ಬಂದು ಗುಣಗಣಸಿದ ಭಾವ…..
ಅಪ್ಪನಿದ್ದಾಗ ಅಮ್ಮನ ಮಾತು ವಟವಟ…
ಅಪ್ಪನ ಮೌನದಲ್ಲೂ ಇತ್ತು ಒಂದು ದಿಟ….
ಈಗ ಅಮ್ಮನ ಮಾತುಗಳಿಗೆ ಭಾವವಿಲ್ಲ
ಬರಿ ಮೌನ….
ಅವಳ ಶಬ್ಧಗಳಿಗೆ ಕಿವಿಗಳಿಲ್ಲ…
ರಕ್ಷಣೆಯೇ ಗೌಣ….
ಯಾವ ಆಸರೆಯಿಲ್ಲದ ಅಮ್ಮ
ಗೋಡೆಯಾದರೂ ಆಸರೆಯಾದಿತೆಂದು
ಗೋಡೆಯ ಮೂಲೆಯೊಂದರಲ್ಲಿ ಕುಳಿತುಕೊಳ್ಳುತ್ತಾಳೆ….
ಈಗ ಗೋಡೆಯೂ ಅಭದ್ರ
ಅದಕ್ಕೂ ಕಾಡುತ್ತದೆ ನಿನ್ನ ನೆನಪು….
ಶ್ರೀದೇವಿ .ಮ.ಗುಮ್ಮಗೋಳ



