ಕಾವ್ಯ ಸಂಗಾತಿ
ಶಂಕರರಾವ ಉಭಾಳೆ ದೇವದುರ್ಗ
” ಯಾರದು?”


ಒಲೆ ಮಣ್ಣಿನದು
ಮಣ್ಣು ಕೆರೆಸಾಲಿನದು
ಕೆರೆ ಗೌಡನದು
ಹಸಿವಿಗಾಗಿ ರೊಟ್ಟಿ
ರೊಟ್ಟಿಗಾಗಿ ಜೋಳ
ಜೋಳಕ್ಕಾಗಿ ಹೊಲ
ಹೊಲ ಗೌಡನದು
ಎತ್ತು ಗೌಡನದು
ಬಂಡಿ ಗೌಡನದು
ಉತ್ತಿ ಬಿತ್ತಿದ ಹೊಲದ ಶ್ರಮ ನನ್ನದು
ಬೆಳೆಯ ಅಧಿಕಾರ ಗೌಡನದು
ಬಾವಿ ಗೌಡನದು
ನೀರು ಗೌಡನದು
ಹೊಲ ಗದ್ದೆ ಗೌಡನದು
ಓಣಿ ಕೇರಿಗಳೆಲ್ಲ ಗೌಡನದು
ಗ್ರಾಮ
ಹೋಬಳಿ
ತಾಲೂಕು
ಜಿಲ್ಲೆ
ರಾಜ್ಯ
ಗೌಡನದು
ಹಾಗಾದರೆ
ನನ್ನದೇನಿದೆ…?
ಶಂಕರರಾವ ಉಭಾಳೆ ದೇವದುರ್ಗ



