ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಮರೆಯದೇ ಬರೆದು ಬಿಡು ಪ್ರೀತಿ ನಿನ್ನ ಕಂಗಳ ಕಾಂತಿ ಮತ್ತು ನಿನ್ನ
ಮರೆಗುಳಿತನದ ಶಾಂತಿ
ಡಿಮೆನ್ಷಿಯಾ ಎಂದಾಗುವ ಮುನ್ನ
 
ಬರೆದು ಬಿಡು ಪ್ರೀತಿ,
ಪ್ರೀತಿ ಮಾಸುವಾ ಮುನ್ನ
ಹೇಳಿಬಿಡು ಪ್ರೀತಿಯ ರೀತಿ!

ಒಂದಾನೊಂದು ಕಾಲದ ಕಥೆಗಳು ಕಳೆದು ಹೋಗುವ ಮುನ್ನ,ಕಳೆದ ಕಥೆಗಳು ಧಾರಾವಾಹಿಯಾಗದೇ
ಮಿದುಳ ಬಳ್ಳಿಯಿಂದ ಚಾಚಿ
ಹೃದಯದಿಂದ ಚಿಮ್ಮುತ್ತ
ಕಾಲಾಂತರ್ಗತವಾಗುವ ಮುನ್ನ.

ಪ್ರೀತಿ ,
ಕಾಲನ ತುಳಿತಕ್ಕೆ ನುಚ್ಚಾಗುವ ಮುನ್ನ ಸೋಸಿ ಬಿಡು
ನುಚ್ಚಿನ ನೆಚ್ಚಿನ ಪಾಯಸದ ಘಮ ನಾಸಿಕಕ್ಕೆ ತಲುಪುವ ಸುಮುಹೂರ್ತದ ಒಳಗೆ ನೀ ಹೊಗೆಯಾಗಿ ಬಿಡು

ಹಬೆಯಾಗಿ ಬಿಡು
ಕಾಲ ಚಕ್ರನ ವೇಗಕ್ಕೆ ಸಿಲುಕಿ ಸೊಗಸಿ ಬಿಡು ಪ್ರೀತಿ ಇರುವಷ್ಟು ದಿನ ರಾತ್ರಿ ಸಮಯ!!


About The Author

Leave a Reply

You cannot copy content of this page

Scroll to Top