ಕಾವ್ಯ ಸಂಗಾತಿ
ಎಮ್ಮಾರ್ಕೆ
ಗಜಲ್


ಬಾಳ ಸಂತೆಯೊಳಗೆ ಭಾವಗಳನ್ನು ಬಿಕರಿಗಿಡಲಾಗಿದೆ
ಮೋಸ ಹೋದ ಹೃದಯಗಳನ್ನು ಹರಾಜಿಗಿಡಲಾಗಿದೆ
ಪ್ರೀತಿ ಪ್ರೇಮಗಳೆಲ್ಲವೂ ಸಹಿತ ಆಟದ ವಸ್ತುಗಳಾಗಿವೆ
ಹಾರೋ ಹಕ್ಕಿಗಳ ಪಂಜರದೊಳಗೆ ಬಂಧಿಸಿಡಲಾಗಿದೆ
ದೂರಾದವರ ಬಗ್ಗೆ ದೂರನು ಕೊಡವುದಾದರೂ ಹೇಗೆ?
ಸುತ್ತಿದ ಗಿಡಮರ ಬೆಟ್ಟಗುಡ್ಡದ ಸಾಕ್ಷಿ ನಿರಾಕರಿಸಲಾಗಿದೆ
ಮುಖಕ್ಕಷ್ಟೇ ಅಲ್ಲ ಮನಸಿಗೂ ಬಣ್ಣವ ಬಳಿಯಲಾಗಿದೆ
ದೋಸೆಯಷ್ಟೇ ಸಲೀಸಾಗಿ ಮಾತನು ತಿರುಚಿಡಲಾಗಿದೆ
ಕುಂಬಾರನ ಎದೆಕಲಶದ ತುಂಬಾ ಪರಿಶುದ್ಧ ಪ್ರೀತಿಯಿದೆ
ಸುಖಾಸುಮ್ಮನೆ ಅನುಮಾನದ ಬೀಜ ಎದೆಗಿಳಿಸಲಾಗಿದೆ
ಎಮ್ಮಾರ್ಕೆ



