ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಅನುರಾಗ”


ಗೆಳತಿ…
ನಾನೇಗೆ ನಿನ್ನ ಮರೆಯಲಿ
ಮರೆಯಾಗಿ ನಿಂತರೂ ದೂರದಲಿ
ಅದೇಕೋ ಮೋಹ ಅಂತರಾಳದಲಿ,!!
ನೆನಪುಗಳು ಸುಳಿಯಾಗಿ
ಆಸೆಗಳೆಲ್ಲ ಸವಿ ಸವಿ ಮಾತಾಗಿ
ಬಯಕೆಗಳೆಲ್ಲ ಮನಸ್ಸಿನಲ್ಲಿ ಕನಸಾಗಿ,!!
ನನ್ನೊಳಗೆ ನಿನ್ನದೇ
ಪ್ರತಿಕ್ಷಣ ಮಧುರ ಚಿತ್ರಣ
ನೆನೆಪಿನಾಂಗಳ ಅನುದಿನವು,!!
ಮನವು ಕುಣಿಯಿತು
ಆಸೆಯ ಮುಗಿಲೇರಿಸಿ ಅನುಕ್ಷಣ
ಭರವಸೆ ಮೂಡಿಸಿತು ಅನುರಾಗದಲಿ.!!
ಹಮೀದ್ ಹಸನ್ ಮಾಡೂರು.



