ಕಾವ್ಯ ಸಂಗಾತಿ
ಜಯಶ್ರೀ ಭ. ಭಂಡಾರಿ
“ನಿತ್ಯ ನಿಯಾಮಕ”


ನಿತ್ಯ ನಿರಂತರ ಕಾಯಕಯೋಗಿ
ಅಂಬರದ ನೇಸರ ಪೂರ್ವದ ದಾರಿಯಲಿ ಬೆಳ್ಳಿಯ ಬೆಳಕ
ಚಲ್ಲುತಾ ಮೆಲ್ಲನೆ ಮೆಘಗಳ
ಮಧ್ಯ ನುಸುಳುತಾ ಬರುತಿಹ
ಏಳಿರಯ್ಯ ಎನ್ನ ಬಾಂಧವರೆ
ಬರಿಬೆಳಕಲ್ಲವಿದು ಸತ್ಯದರ್ಶನ
ಲೋಕಬೆಳಗುವ ನಿತ್ಯನಿಯಾಮಕ
ಜಗದಕರೆಗೆ ಸದ್ದಿಲ್ಲದ ಬರುವವ
ನಿತ್ಯನಿರಂತರ ಕಾಯಕಯೋಗಿ
ಸಮಯದ ಪರಿಪಾಲಕ ಪರಂಜ್ಯೊತಿ…
ಬೆಳಕಬೆಳಗಿಗೆ ಜಗವೇತೂಗುವದು
ಏರುಪೇರಿಲ್ಲದ ರಾಯಭಾರಿ ತೇಜ
ಸೃಷ್ಟಿಗೆ ಜೀವದಾತ ಮನುಕುಲದ ಮನ್ವಂತರನೀತ ಮೈಮರೆಯದವ
ಕ್ಷಣ ಕ್ಷಣ ಅನುಕ್ಷಣ ಆದರನೀಯ
ಚರಾಚರ ಜೀವರಾಶೀಗಳ ಜೀವ
ದಣಿವರಿಯದ ಭೂಮ್ಯಾಕಾಶ ಬೆಳಗುವ ಭಾಸ್ಕರ ಬಾನಲೀಲೆ
ತರುಲತೆಗಳ ಹಸಿರ ಸಿಂಚನ
ಭೂಮಾತೆಯ ಮಡಿಲತುಂಬುವ ಚೇತನ…
ನಿಸ್ವಾರ್ಥ ಸೇವೆಯ ನಿತ್ಯನೂತನೀತ
ಸ್ವಾರ್ಥಿ ಮನುಜ ಕಲಿಯಬೇಕಿದೆ
ತಮಸೋಮಾ ಜ್ಯೊತಿರ್ಮಯ…
ಸತ್ ಚಿಂತನ ಸತ್ ದರ್ಶನ ಅಡಗಿಹುದು ಬೆಳಕೆಂಬ ದೇವಲೀಲೆಯಲಿ….
ಸತ್ಯವೇ ದೇವರು ಸತ್ಯವೇ ಬೆಳಕು
ಹೇ! ಮನುಜಾ ಬೆಳಕ ದಾರಿಯಲಿ
ನಡೆ,ಬೆಳಕಿನಲಿ ಬೆರೆತು ಬೆಳಕಾಗು….
ಜಯಶ್ರೀ ಭ. ಭಂಡಾರಿ.



