ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದು ಗೆರೆ ಕಡಿಮೆಯಿದೆ..ನಿನ್ನ ಪಡೆಯುವ ನಸೀಬಿಗೆ
ಒಂದು ಹನಿ ಕಡಿಮೆಯಿದೆ..ನಿನ್ನ ಮರೆಸುವ ಮಧುಬಟ್ಟಲಿಗೆ..!!

ನೋವಿಗೆ ಹಳೆಯ ಗಿರಾಕಿಯ ಹುಸಿನಗುವ ಮನಕೆ…
ಒಂದು ಉನ್ಮಾದ ಬೇಕಿದೆ,ಪುನಃ: ನಿನ್ನ ಪ್ರೀತಿಸುವ ಚಾಳಿಗೆ!!

ದಿನದ ಲೆಕ್ಕಹಚ್ಚಿಟ್ಟೆನಗೆ ಹೋದೆ ದೂರಯಾನಕೆ..
ಒಂದು ಶರಧಿ ಬಾಕಿಯಿದೆ,ನಿನ್ನ ಸೇರುವ ಪರಿಧಿಗೆ..!!

ಸಿಕ್ಕ ಘಳಿಗೆಯನ್ನು ಸಂಭ್ರಮಿಸಲು ಬಿಡಲಿಲ್ಲ ಬದುಕು..
ಒಂದು ಏಕಾಂತ ಬೇಕಿದೆ,ನಿನ್ನ ಸ್ಮರಿಸುವ ಮನಸ್ಸಿಗೆ..!!

ಸೀತಾ,ರಾಮ,ಲಕ್ಷ್ಮಣರ ವನವಾಸಕ್ಕಿಂತ ದೀರ್ಘವಾಯ್ತು ನೋವು
ಒಂದು ವಿರಾಮ ಬೇಕಿದೆ,ನಿನ್ನ ಕಾಡುವ ಮೌನಪಾಳಿಗೆ..!!

ಬಂಧನಕ್ಕೆ ಬೆನ್ನು ಮಾಡಿ ತುದಿನಗುವ ಕದ್ದವನೇ,,
ಒಂದು ನೂಲಿನ ಅಂತರವಿದೆ…ನಿನ್ನ ಕೂಡುವ ಹಾದಿಗೆ..!!

ಕಂಬನಿ ಕುಡಿದು ಸಾಕಾಯ್ತು ಜಯಾ,ಕೇಳಿಲ್ಲಿ ಗೆಳೆಯಾ..
ಒಂದು ಕಿಡಿ ಕಡಿಮೆಯಿದೆ,ನನ್ನ ನಿನ್ನ ಒಂದಾಗಿಸುವಅಗ್ನಿಸಾಕ್ಷಿಗೆ…!!


About The Author

Leave a Reply

You cannot copy content of this page

Scroll to Top