ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವರ ನೆನಪ ಜೋಕಾಲಿಯಲ್ಲಿ
ಒಲವ ಗೀತೆ ಆಗಾಗ ಸರ್ರನೇ ಜೀಕುತ್ತದೆ|

ಒಮ್ಮೆಲೇ….
ಹೂ ತೋಟವ ಸುತ್ತಿ ಬಂದ
ಗಾಳಿಯ ಘಮದಿ ಮಿಂದ
ಪಲ್ಲವಿಯ ಸಾಲುಗಳು
ಮನವನು ಚಿಟ್ಟೆಯಾಗಿಸಿಬಿಡುತ್ತವೆ|

ಆದರೆ….
ಚರಣಗಳು ನೀರವ ಧ್ಯಾನದಿ ಬಂಧಿ
ಏಕೆ? ಹೇಗೆ? ಪ್ರಶ್ನೆಗಳು
ಉತ್ತರಕ್ಕಾಗಿ ಕಾಯ್ದರೂ
ಇಬ್ಬರ ಅಹಮ್ಮಿನ ಕೋಟೆಯನ್ನು
ಬೇಧಿಸಲಾರವು|

ಬದುಕಿನ ಎಲ್ಲ ಹಾಡುಗಳಲ್ಲಿ
ಚರಣಗಳಿರಬೇಕೆ?
ಆದಿ, ಅಂತ್ಯಾಕ್ಷರ, ಮುಕ್ತಾಯದ ಸಾಲೊಂದಿರಬೇಕೆ?
ಹೂಂ..ಗುಡುತ್ತದೆ ಕವಿಹೃದಯ|

ವಿಚಿತ್ರವೆಂದರೆ…
ಬಹುತೇಕ ಒಲವಿನ ಹಾಡು
ಪಲ್ಲವಿಗಷ್ಟೇ ಸೀಮಿತವಾದಾಗಲೂ
ಜೀವನದುದ್ದಕ್ಕೂ ಮನದಿ
ಜೀಕುತ್ತಲೇ ಇರುತ್ತದೆ
ಬೇಸರಿಕೆಯ ಪೋಷಾಕು ತೊಡದೇ…


About The Author

1 thought on “ಗಂಗಾ ಚಕ್ರಸಾಲಿ ಅವರ ಕವಿತೆ “ಒಲವ ಗೀತೆ””

Leave a Reply

You cannot copy content of this page

Scroll to Top