ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


v
ಕೊರಿಯರ್ ಪಾರ್ಸಲ್
ಮೇಲಕ್ಕೆ ತಂದುಕೊಡು
ಟಿಫನ್ ತಂದುಕೊಡು
ದಿನಸಿ ಸರಕುಗಳನ್ನು ತಂದುಕೊಡು
ಕನ್ನಡಕ ಮೇಲಿಟ್ಟು ಮರೆತಿರುವೆ
ತೆಗೆದುಕೊಂಡು ಬಾ
ಬಸ್ ನಿಲ್ದಾಣದ ಬಳಿ ಬಿಟ್ಟಿರುವ
ಗಾಡಿಯನ್ನು ಹಾಕಿಕೊಂಡು ಬಾ
ಇದನ್ನು ಒರೆಸು, ಅಲ್ಲಿಗೆ ಹೋಗು…
ಒಮ್ಮೊಮ್ಮೆ ಒಂದೊಂದು ಕೆಲಸ
ಒಮ್ಮೊಮ್ಮೆ ಒಂದೊಂದು ಗದರಿಕೆ
ಪ್ರೀತಿಯಿಂದ ಹೇಳುವವರು ಕೆಲವರು
ಒದರುವಂತೆ ಹೇಳುವವರು ಕೆಲವರು

ಡ್ಯೂಟಿ ಅಂತಾರೆ
ಆದರೆ…
ಇವೆಲ್ಲಾ ಡ್ಯೂಟಿಯನ್ನು ಮೀರಿದ ಕೆಲಸಗಳು
ಮಾಡಬೇಕನಿಸುತ್ತದೆ
ಆಗಾಗ ಮಾಡಬಾರದನಿಸುತ್ತದೆ
ಮೈಕೈ ನುಜ್ಜುಗುಜ್ಜಾಗುತ್ತದೆ
ಜೀವ ದಣಿದು ಹೋಗುತ್ತದೆ
ಹೇಳಿದ ರೀತಿಗೆ ಚುರುಕ್ ಅನ್ನುತ್ತದೆ
“ಈಗ ಆಗುವುದಿಲ್ಲ ಸರ್
ಗೇಟಿನ ಬಳಿ ಯಾರೂ ಇಲ್ಲ ಸರ್”
ತಡಬಡಿಸುತ್ತ ನಾನು ಹೇಳಿದೊಡನೆ
ಅವರು ಹೇಳುವರು…
“ಅಫ್ಟ್ರಾಲ್ ವಾಚ್ಮನ್
ನಮ್ಮ ಮಾತಿಗೇ ಎದುರು ಮಾತಾಡುವೆಯಾ
ನಿನ್ನ ಕೆಲಸ ಕಿತ್ತುಹಾಕುವೆ”

ಎಷ್ಟು ಸಲ ಎಷ್ಟೆಲ್ಲಾ ಮಾಡಿದೆನಲ್ಲ
ಎಷ್ಟೋ ಸಲ ನಿದ್ದೆಯನ್ನೇ ತೊರೆದನಲ್ಲ
ಇದೇನಿದು…
ಒಂದು ಸಲ ಆಗುವುದಿಲ್ಲ ಎಂದರೆ
ಅಫ್ಟ್ರಾಲ್ ವಾಚ್ಮನ್ ಆಗಿಬಿಡುವೆ
ಎಲ್ಲರನ್ನೂ ಕಾಯುವ ನಾನು
 ಅಫ್ಟ್ರಾಲ್ ವಾಚ್ಮನ್ ಹೇಗಾಗುವೆ!


ತೆಲುಗು : ಉಪ್ಪುಲ ಲಿಂಗಯ್ಯ
ಕನ್ನಡಕ್ಕೆ : ಧನಪಾಲ ನಾಗರಾಜಪ್ಪ

About The Author

1 thought on ““ಅಫ್ಟ್ರಾಲ್ ವಾಚ್ಮನ್” ತೆಲುಗು ಮೂಲ ಉಪ್ಪುಲ ಲಿಂಗಯ್ಯ ಕನ್ನಡಕ್ಕೆ ಧನಪಾಲ ನಾಗರಾಜಪ್ಪ”

Leave a Reply

You cannot copy content of this page

Scroll to Top