ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿರಂತರ ಪ್ರಕಾಶನಕ್ಕೊಂದು ಹೆಮ್ಮೆಯ ಗರಿ
ಸಖಿ ಸೂಸಿದ ಸೌಗಂಧ ಸಂಕಲನ ಕ್ಕೆ ದಿ.ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ .



ಗದಗ- 13 ಅಕ್ಷರ ಸಂಸ್ಕೃತಿ ಉಳಿಸಿ ಪುಸ್ತಕ ಸಂಸ್ಕೃತಿ ಬೆಳೆಸುತ್ತಿರವ ಸ್ಥಳೀಯ ನಿರಂತರ ಪ್ರಕಾಶನ ಸಂಸ್ಥೆ ಯುವ ಮತ್ತು ಅವಕಾಶ ವಂಚಿತ ಬರಹಗಾರರ ಕೃತಿಗಳನ್ನು  ಕಳೆದ 22ವರ್ಷ ಗಳಿಂದ ಪ್ರಕಟಿಸುತ್ತ ಬರುತ್ತಿದ್ದು, ಎಲೆ ಮರೆಯ ಕಾಯಿಯಂತಿರುವ ಸಾಹಿತಿಗಳ ಚೊಚ್ಚ ಲ ಕೃತಿಗಳನ್ನು ಪ್ರಕಟಿಸಿದ ಹಿರಿಮೆ ನಿರಂತರ ಪ್ರಕಾಶನಕ್ಕೆ ಸಲ್ಲುತ್ತದೆ.

2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಶಿಕ್ಷಕಿ, ಅನುವಾದಕಿ, ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ಪ್ಪುತ್ತೂರ್ ಅವರ *”ಸಖಿ ಸೂಸಿದ ಸೌಗಂಧ”* ಕವನ ಸಂಕಲನಕ್ಕೆ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಪುರಸ್ಕಾರ ಲಭಿಸಿದೆ.
25 ಸಾವಿರ ರೂಪಾಯಿ ನಗದು, ಸ್ಮರಣಿಕೆಒಳಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವು ಜೂನ್ ಮಾಹೇಯಾನದ ಎರಡನೇ ವಾರದಲ್ಲಿ  ದಿ. ಫ್ರಾನ್ಸಿಸ್ ದಾಂತಿ ಸ್ಮಾರಕ ಪ್ರತಿಷ್ಠಾನ ಮತ್ತು ಕೆಥೋಲಿಕ್ ಸಭಾ ಉಡುಪಿ ಪ್ರದೇಶ ಜಂಟಿ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ವಾರ್ಷಿಕ ಮಹಾಸಭೆ ಕಾರ್ಯಕ್ರಮದಲ್ಲಿ ವಿತರಿಸಲಾಗುವದೆಂದು ಕಾರ್ಯಕ್ರಮದ ಸಂಚಾಲಕ ಅಲೋನ್ಸ ಡಿ ಕೋಸ್ಟ್  ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪುರಸ್ಕಾರಕ್ಕೆ ಭಾಜನರಾದ ಕವಯತ್ರಿ ಫ್ಲಾವಿಯಾ ಅಲ್ಬು ಕರ್ಕ್ ರಿಗೆ  ಮಕಾನದಾರ ಸಾಹಿತ್ಯ ಪ್ರತಿಷ್ಠಾನ ಮತ್ತು ನಿರಂತರ ಪ್ರಕಾಶನದ
ವತಿಯಿಂದ ನಿರಂತರ ಪುರಸ್ಕಾರ ಕೂಡ ಲಭಿಸಿದ್ದು ಮಾತ್ರವಲ್ಲ ನಿರಂತರ ಪ್ರಕಾಶನದಿಂದ ಪ್ರಕಟಣೆಯಾದ ನಾಡಿನ ವಿವಿಧ ಲೇಖಕರ ಕೃತಿಗಳಿಗೆ ಪ್ರತಿಷ್ಠಿತ ಪುರಸ್ಕಾರ ಲಭಿಸಿದ್ದು, ಪ್ರಕಾಶನ ಸಂಸ್ಥೆ ಗೆ ಬೀದರ್ ಜಿಲ್ಲೆಯ ಬೇಲೂರ ಗ್ರಾಮದ ಉರಿಲಿಂಗ ಪೆದ್ದಿ ಸಾಹಿತ್ಯ ಸಂಸ್ಕೃತಿ ಕ ವೇದಿಕೆಯ ಉರಿಲಿಂಗ ಪೆದ್ದಿ ಮತ್ತು ಕಾಳವ್ವೆ ಉತ್ಸವ ದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಪ್ರಕಾಶಕರ ಸಮ್ಮೇಳನದಲ್ಲಿ ಉತ್ತಮ ಪ್ರಕಾಶನ ಪ್ರಶಸ್ತಿ ಲಭಿಸಿದ್ದನ್ನಿಲ್ಲಿ ಸ್ಮರಿಸಬಹುದು.

ಹಿರಿಯ ಸಾಹಿತಿ ಎ. ಎಸ್. ಮಕಾನದಾರ. ವೇದಾಂತ ಕ್ರಿಯೆಷನ್, ಭವಾನಿ ಪ್ರಿಂಟರ್ಸ ನ ಮಾಲೀಕ ಮುದ್ರಕ, ಗಣೇಶ್ ಪವಾರ, ಸಾಹಿತಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ, ಸಮಾಜ ಸೇವಾ ಕಾರ್ಯಕರ್ತ ಕೆ. ಆರ್.ಸುಣಗಾರ ಮುಂತಾದವರು ಕವಯತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


About The Author

Leave a Reply

You cannot copy content of this page

Scroll to Top