ಕಾವ್ಯ ಸಂಗಾತಿ
ಎ ಎಸ್ ಮಕಾನದಾರ ಗದಗ
“ಶಾಯಿರಿಗಳು”

ಶಾಯಿರಿಗಳು
ಧರ್ಮ ದೇವರ ಹೆಸರಿನ್ಯಾಗ
ಹಿಡಿಬ್ಯಾಡ್ರಿ ಕೈಯಾಗ ಕಲ್ಲು
ಕಲ್ಲು ಮಣ್ಣಿನ್ಯಾಗ
ಹುಟ್ಟಿಲ್ಲ ದೇವರೆಲ್ಲೂ
***
ಪ್ರೀತಿ ಅನ್ನೂ ದೇವರಮುಂದ
ಯಾವ ದೇವರೂ ದೊಡ್ಡವಲ್ಲ
ಸತ್ಯ ಅನ್ನೂ ತತ್ವದ ಮುಂದ
ಯಾವ ಗ್ರಂಥವೂ ದೊಡ್ಡದಲ್ಲ
***
ಉಸಿರಾಡುವವರು ಜೀವಂತ
ಅದಾರಂತ ಎನ್ ಗ್ಯಾರಂಟಿ
ಸತ್ತವರಲ್ಲಿ ಕೆಲವರು
ಇನ್ನೂ ಜೀವಂತ ಅದಾರಲ್ಲ
ಇದಕೆ ನೀ ಏನಂತೀ
***

ಎ ಎಸ್ ಮಕಾನದಾರ ಗದಗ



