ಕಬ್ಬಿಗರ ಅಬ್ಬಿ -9 ಕನಸು ಕಲಿಸುವ ಕವಿತೆಗಳು ಆಫೀಸ್‌ನಲ್ಲಿ ದಿನವಿಡೀ ದುಡಿದು, ಚಿಂತೆಯ ಗೆರೆಗಳು ಹಣೆಯಲ್ಲಿ ಮೂಡಿ ಮನೆಗೆ ಬಂದಾಗ, ಬಿಸಿ ಬಿಸಿ ಕಾಫಿಯ ಜತೆಗೆ ಭಾವ ಗೀತೆ ಕೇಳುತ್ತೇನೆ. ಕುದಿದು ಕೆನೆಗಟ್ಟಿದ ಮನಸ್ಸನ್ನು ತಣಿಸಿ, ತಂಪು ಐಸ್ ಕ್ರೀಂ ಮಾಡುವ ಶಕ್ತಿ ಈ ಕವಿತೆಗಳಿಗೆ. ಹಾಡು ಕೇಳುತ್ತಾ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಅಂತ ಸ್ಮೃತಿ ಪಟಲದಿಂದ ಅಕ್ಷಿಪಟಲಕ್ಕೆ ಚಿತ್ರಗಳು ಪ್ರೊಜೆಕ್ಟ್ ಆಗಿ, ಕನಸುಗಳಿಗೆ ರೆಕ್ಕೆ ಮೂಡುತ್ತವೆ. ಬದುಕಿನಲ್ಲಿ ವೈಫಲ್ಯಗಳು ಹಲವು. ಆದರೂ ನೂರರಲ್ಲಿ […]
ಅಬ್ಬರ
ಕವಿತೆ ಅಬ್ಬರ ಪ್ರೊ.ಕವಿತಾ ಸಾರಂಗಮಠ ಹರಿದ ಗುಡಿಸಲಲ್ಲಿಮುರಿದ ಛಾವಣಿಗಳಲ್ಲಿಹರಿದ ಬಟ್ಟೆಯುಟ್ಟುಹಸಿವು ಇಂಗಿದೆ! ನಿರಾಶ್ರಿತರು ಮುಗಿಲಿಗೆಮುತ್ತಿಗೆ ಹಾಕಿದ್ದಾರೆತುತ್ತು ಅನ್ನ ಬಟ್ಟೆಗಾಗಿಹೆಣಗುತ್ತಿದ್ದಾರೆಇಲ್ಲೊಬ್ಬನಿಗೆ ಹೊರಗೆತಿರುಗುವ ಚಿಂತೆ! ಸೀಲ್ ಡೌನ್,ಲಾಕ್ ಡೌನ್ಆಯ್ತುಪ್ರೀತಿ-ಪ್ರೇಮ ಸೀಲ್ ಡೌನ್ ಆಯಿತಾ?ಇಲ್ಲೊಬ್ಬ ಪ್ರೇಮಿ ಉಸುರುತ್ತಿಅದ್ದಾನೆ! ನೆಕ್ಕಲು ಹಳಸಿದ ಅನ್ನ ಸಿಕ್ಕರೆಸಾಕು ಬದುಕುತ್ತೇನೆಎನ್ನುತ್ತಿದ್ದಾನೆಹಸಿವಿನ ಬೆಲೆ ತಿಳಿದವಭಿಕ್ಷುಕನೂ ಇರಬಹುದು?! ಕೀಟಗಳ ಕಾಟವಿನ್ನೂ ಮುಗಿಯದೇಅಕಟಕಟಾನಿದ್ದೆಮಾಡಿ ಮಾಸಗಳೇ ಉರುಳಿವೆಎನುತಿರುವ ಇಲ್ಲೊಬ್ಬಹಾಸಿಗೆ ಪ್ರೇಮಿ! ಆಸೆ ಬಿಡದ ಜೀವಬೇಕೆಂದು ಹೊರಟೇ ಇದೆಅರಿವಿಲ್ಲಮಸಣಕೋವ್ಯಸನಕೋ? *****************************
ಮುಖಗಳು
ಕವಿತೆ ಮುಖಗಳು ಡಾ. ಅರಕಲಗೂಡು ನೀಲಕಂಠ ಮೂರ್ತಿ ವೃತ್ತಿಯಲ್ಲಿ ಎಷ್ಟೊಂದು ಮುಖಗಳುಎದುರಾಗುತ್ತವೆ…ಭಿನ್ನ ಭಿನ್ನ ಭಾವಗಳುಕವಚಗಳು ಅದೇ ಒಂದೊಮ್ಮೆ ಯಾವುದೋರಸ್ತೆಯ ಪಕ್ಕ ಕಾಯುತ್ತಿರಿಒಂದೇ ಒಂದೂ, ಕೊಸರಿಗೂ ಕಾಣದುಪರಿಚಯದ ಮುಖ!ಎಷ್ಟೊಂದು ಸೋಜಿಗ…! ಜಗತ್ತು ತುಂಬಿದೆತುಂಬಿ ತುಳುಕುತ್ತಿದೆ –ಜನರಿಂದ ಮತ್ತುಜನರನ್ನು!ಇಲ್ಲಿ ಅನಾಥರಿಗೂಇನ್ನಿತರ ಅಂಥದೇ ಅನಾಥರ ಗುರುತೂಸಿಗದು…ಬಹುಶಃ… ಇದರಿಂದಲೇ ಇಲ್ಲಿ ಎಲ್ಲವೂನಾನು, ನನ್ನದು ಮತ್ತುನನ್ನವರು…ಬಹುಶಃ… ಗೋಡೆಯ ಮೇಲೆ ಈ ದಿನದಹೊಚ್ಚ ಹೊಸ ಹೂಮಾಲೆಯಿರುವನನ್ನಪ್ಪನ ಅಮ್ಮನ ಫೋಟೋನನ್ನ ನಂತರ ಎಲ್ಲಿರುವುದೋ ಏನೋ…?ಹಾಗೆಯೇ ಎಲ್ಲ ಮುಖಗಳುನೆನಪುಗಳು… ಬಣ್ಣದ ಬ್ರಶ್ ಒಂದುಬಳಿಬಳಿದು ನಿತ್ಯ ನಿರಂತರಉದುರಿ ಮರೆಯಾಗುವ ಮುಖವಾಡಗಳು…ಮತ್ತು […]
ಅಮ್ಮನ ಸೆರಗ ಬಿಡಿಸಿದ ಬೆರಳುಗಳು
ಅಮ್ಮನ ಸೆರಗ ಬಿಡಿಸಿದ ಬೆರಳುಗಳು ಶಿಶುವಿಹಾರ ಮತ್ತು ಅಂಗನವಾಡಿಗಳ ಅಮ್ಮನಂತಹ ಶಿಕ್ಷಕಿಯರಿಗೊಂದು ಸೆಲ್ಯೂಟ್ ಪ್ರಜ್ಞಾ ಮತ್ತಿಹಳ್ಳಿ ಎಳೆಬಿಸಿಲು ಹಾಕಿದ ರಂಗೋಲಿಯ ಚಿತ್ತಾರಗಳು ಅಂಗಳ ತುಂಬಿದ ಹೂಬಳ್ಳಿಗಳೊಂದಿಗೆ ಪೈಪೋಟಿಗಿಳಿದಿದ್ದಾವೆ. ಎಸಳು ಮೊಗ್ಗಿನಂತಹ ಪುಟಾಣಿಗಳ ದಂಡೊಂದು ಗೇಟಿನ ಬಳಿ ಬಂದು ರಾಗವಾಗಿ ಕರೆಯುತ್ತಿದೆ. “ಪುಟ್ಟೂ ಶಾಲೀಗ್ ಬಾ” ನಿದ್ದೆ ಬಿಟ್ಟೇಳದ ಕಣ್ಣಿನ ಮಗುವೊಂದನ್ನು ಅಳುವಿನ ರಾಗಾಲಾಪದ ಹಿನ್ನೆಲೆ ಸಂಗೀತದೊಂದಿಗೆ ಎತ್ತಿಕೊಂಡು ತಂದರು. “ಯಾಕೆ ಅಳೂದ್ಯಾಕೆ? ಜಾಣಲ್ಲ ನೀನು” ಎನ್ನುತ್ತ ಅಮ್ಮನ ಸೆರಗ ಬಿಗಿಯಾಗಿ ಹಿಡಿದುಕೊಂಡ ಬೆರಳುಗಳ ಮೆತ್ತಗೆ ಬಿಡಿಸುತ್ತ ಪುಸಲಾಯಿಸುವ […]
ಅನುವಾದ ಸಂಗಾತಿ
ಕವಿತೆ ಸಾವಿಗೊಂದು ಪತ್ರ ಸಾವೇ, ನೀನು ಹುಟ್ಟಿನಿಂದಜೊತೆಗೇ ಬಂದಿರುವೆತಿಳುವಳಿಕೆ ಬಂದಂತೆಭಯದಿಂದ ದೂರವಿರಿಸಿದೆನೆನಪಿಸದೆ, ವಿಳಾಸವೂ ಹುಡುಕದೆ. ವಿಳಾಸ ಬೇಕಿರಲಿಲ್ಲ ಬದುಕಿನುದ್ದಕ್ಕೂ….ನಿರುಮ್ಮಳ ಉಸಿರೆಳೆಯುವಾಗಸ್ವಚ್ಛಂದವಾಗಿ ಸಾಗುವಾಗಪ್ರತೀ ದಿನವು ನೆರಳಂತೆಹೊತ್ತು ಜೀವಿಸುವಾಗಅದಕೇ ನೆನೆಯಲಿಲ್ಲ ನಿನ್ನ. ದೇಹದ ಚಿತ್ರಣ ಬದಲಾಗಿದೆಮುಪ್ಪೆರಗಿ ಕುಂದಿದೆಉಸಿರಿಗೂ ಅಳುಕೇಆಹಾರಕೂ ನಳಿಕೆಶಸ್ತ್ರಕ್ರಿಯೆಗೆಂದು ಅರಿವಳಿಕೆಸಹಜಕ್ರಿಯೆಗಳೆಲ್ಲ ನಿಲ್ಲುತ್ತಿವೆನಿನ್ನನೇ ಬಲವೆಂದು ಕಾಯ್ದಿರುವೆ. ಪರಸೇವೆಗೆ ದೇಹ ಬೀಳದಂತೆನೋವಿಲ್ಲದಂತೆ ನಸುನಕ್ಕೇಫಕ್ಕನೆ ಆರುವ ದೀಪದಂತೆನನ್ನನ್ನೊಮ್ಮೆ ತಬ್ಬುವಿಯಂತೆಬಂದು ಬಿಡು ನೀ ಬಂಧುಸಹಜ ಸವಿನಿದ್ರೆಗೆ ಜಾರಿದಂತೆ..! ————ಕನ್ನಡ ಮೂಲ- ಅಜಿತ ಹೆಗಡೆ, ಹರೀಶಿ A letter to the death Death,you are […]
ಭರವಸೆಯ ಹೊರತು ಬೇರೇನೂ ಉಳಿದಿಲ್ಲ’
ಲಹರಿ ಭರವಸೆಯ ಹೊರತು ಬೇರೇನೂ ಉಳಿದಿಲ್ಲ’ ವಸುಂಧರಾ ಕದಲೂರು ಕವಚಿ ಹಾಕಿದ್ದ ಖಾಲಿ ಮಂಕರಿಯನ್ನು ಬೋರಲಾಕಿದಂತೆ, ಎಲ್ಲಾ ಖಾಲಿಖಾಲಿಯಾದ ಭಾವ. ಹಾಗೆಂದು ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುತ್ತಿದೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ… […]
ಕಾದಿಹೆ ಬಂದುಬಿಡು
ಕವಿತೆ ಕಾದಿಹೆ ಬಂದುಬಿಡು ಪ್ರೇಮಾ ಟಿ.ಎಂ. ಆರ್ ನಡೆದಿದ್ದೇನೆ ದಂಡೆಯುದ್ದಕ್ಕೆಹೆದ್ದೆರೆಗಳಬ್ಬರದ ಭಯ ಬಂದುಬಿಡುಸೊಕ್ಕಿದಲೆ ನನ್ನ ಕೊಚ್ಚಿಕೊಂಡೊಯ್ಯುವ ಮೊದಲೇ ಬಂದುಬಿಡು ಮೋಡ ಮುಕ್ಕಿದ ತುಂಡು ಸೂರ್ಯದ್ವಾದಶಿಯ ಮುರುಕು ಚಂದ್ರಎದುರುಬದುರು ನಿಂತಿರುವಾಗಲೇಬಂದುಬಿಡು ನನ್ನಹೆಜ್ಜೆಯ ಹೊಂಡದೊಳಗೆಉಪ್ಪುನೀರು ನೆಲೆನಿಂತಿದೆಅಲೆಯೊಳಗೆ ನಾಸುಳಿದು ಹೋಗುವ ಮುನ್ನಬಂದುಬಿಡು ಪಶ್ಚಿಮದಂಚಿಗೆ ಕೆನ್ನೆತ್ತರದ ಹಸೆಮುಗಿಲು ಹಾಡು ಹರಿಯುತಿದೆಕನಸು ಕೆನೆಗಟ್ಟುವದಕ್ಕೂ ಮೊದಲೇಬಂದುಬಿಡು ಸೂರ್ಯ ತಲೆಮರೆಸಿಕೊಳ್ಳುತ್ತಿದ್ದಾನೆತಾರೆಗಳೆದೆಗೆ ಸೊಕ್ಕು ಹೊಕ್ಕಿದೆದಂಡೆ ಮೌನವ ಹೊದ್ದು ಮಲಗುವ ಮುಂಚೆಬಂದುಬಿಡು ಇರುಳು ಜಾರುತಿದೆ ಮುಷ್ಠಿಯೊಳಗಿನ ಮರಳಂತೆ ಸುಳುಸುಳುಕನಸು ಕರಗುವ ಮೊದಲೇ ಮಧುಶಾಲೆಬಿಟ್ಟುಬಂದುಬಿಡು ಎಲ್ಲೋ ಗಾಳಿ ಮರದಮೇಲೆಒಂಟಿಹಕ್ಕಿಯ ಎದೆಕೊರೆವ ಹಾಡುತಟ್ಟಿ […]
ಬದಲಾವಣೆ
ಕಥೆ ವಿಜಯಶ್ರೀ ಹಾಲಾಡಿಯವರ ಹೊಸ ಕತೆ ಬದಲಾವಣೆ ಕುದಿಸಿ ಆರಿಸಿದ ನೀರಿಗೆ ತಂಪಿನ ಬೀಜವನ್ನು ಹಾಕಿ ರುಚಿಗೊಂಚೂರು ಬೆಲ್ಲ ಸೇರಿಸಿ ಚಮಚದಲ್ಲಿ ಕಲಕುತ್ತ ಕುಳಿತಿದ್ದಾಳೆ ಜುಬೇದಾ. ಫ್ಯಾನ್ ತಿರುಗುತ್ತಿದ್ದರೂ ಸೆಖೆಯೇನೂ ಕಮ್ಮಿಯಿಲ್ಲ, ಅಲ್ಲದೇ ಫ್ಯಾನಿಂದ ಬರುವುದೂ ಬಿಸಿಗಾಳಿಯೇ: ಏನೂ ಸುಖವಿಲ್ಲ. “ನೀನು ಕೆಲಸ ಎಂತ ಮಾಡುವುದು ಬೇಡ, ಸುಮ್ಮನೇ ರೆಸ್ಟ್ ತಕೋ. ಹೊತ್ತುಹೊತ್ತಿಗೆ ಸರಿಯಾಗಿ ತಿನ್ನು. ಪುನಃ ಆಸ್ಪತ್ರೆ ಸೇರಿದರೆ ನನ್ನಿಂದಾಗಲಿಕ್ಕಿಲ್ಲ” ಬೆಳಿಗ್ಗೆ ಅಂಗಡಿಗೆ ಹೋಗುವ ಮುಂಚೆ ಎಚ್ಚರಿಸಿ ಹೋಗಿದ್ದಾನೆ ರಹೀಮ. ಅದಲ್ಲದೆ “ಉಮ್ಮ, ನೀವು ಪೂರ್ತಿ […]
ಗುರುವಿನ ಋಣ
ಗುರುವಿನ ಋಣ ಜಯಶ್ರೀ ಜೆ.ಅಬ್ಬಿಗೇರಿ ಆಗ ನಾನಿನ್ನೂ ಪುಟ್ಟ ಫ್ರಾಕು ಧರಿಸಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದ ಕಾಲ. ಸದಾ ನನ್ನ ಕೈಯಲ್ಲಿ ಬಿಳಿ ಚೌಕಟ್ಟಿನ ಕರಿ ಪಾಟಿ ಹಿಡಿದು, ಬೆರಳಲ್ಲಿ ಪೆನ್ಸಿಲ್ ಸಿಕ್ಕಿಸಿಕೊಂಡು ದೊಡ್ಡ ಪಂಡಿತರಂತೆ ಗಂಭಿರವಾಗಿ ಬರೆಯುವದನ್ನು ಕಂಡು ನನ್ನಪ್ಪ, ನಮ್ಮವ್ವ ಎಷ್ಟು ಶ್ಯಾನೆ ಅದಾಳ ನೋಡು ಎನ್ನುತ್ತ ಪ್ರೀತಿಯಿಂದ ಹಣೆಗೆ ಹೂ ಮುತ್ತನ್ನಿಕ್ಕಿ ಅಕ್ಷರವನ್ನು ತೀಡಿಸುತ್ತಿದ್ದರು.ಆಗಿನಿಂದ ನನ್ನ ಅಕ್ಷರದ ಹುಚ್ಚು ಮತ್ತಷ್ಟು ಹೆಚ್ಚಿತು. ಅಣ್ಣನ ಜೊತೆ ನಾನೂ ಶಾಲೆಗೆ ಹೋಗಲೇಬೇಕು ಎಂಬ […]
ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ
ಓ ನಮ್ಮ ಶಿಕ್ಷಕ ನೀ ನಮ್ಮ ರಕ್ಷಕ ವಿಭಾ ಪುರೋಹಿತ್ ಓ ನಮ್ಮ ಶಿಕ್ಷಕನೀ ನಮ್ಮ ರಕ್ಷಕ ಮರೆಯಲೆಂತು ನಿನ್ನ ಸೇವೆಕರೆವ ಜ್ಞಾನ ಹಾಲ ಗೋವೆನಿನಗೆ ನಮ್ಮ ನಮನವುನಿನ್ನ ಅಡಿಗೆ ಸುಮನವು————ಧಾರವಾಡದ ಜಿ. ಎಸ್. ಕುಲಕರ್ಣಿ ಧಾರವಾಡದ ಜಿ.ಎಸ್ . ಕುಲಕರ್ಣಿ ಅವರ ಸಾಲುಗಳು ಇಲ್ಲಿ ನೆನೆಯಬಹುದು ಮನಃಪಟಲಕ್ಕೆ ಬಂದು ಅಚ್ಚೊತ್ತಿದ ಕೆಲವು ಘಟನೆಗಳನ್ನು ಬರೆಯದೇ ಇರಲಾಗುವುದಿಲ್ಲ.ಎಲ್ಲಿಂದಲೋ ಬಂದ ದಿವ್ಯ ಚೇತನ ಬೆನ್ನುತಟ್ಟಿ ಬರೆಯಲಾರಂಭಿಸಿತು.ಮೂವತ್ತು ವ ರ್ಷಗಳ ಹಿಂದೆ ಓಡಾಡಿದ ಜಾಗ,ಆಟವಾಡಿದ ಸ್ಥಳ,ಮಣ್ಣಿ ಗೆ,ಕಲ್ಲಿಗೆ ಅಕ್ಕರೆಯಿಂದ ಮುತ್ತಿಟ್ಟು […]