ಮುಖಗಳು

ಕವಿತೆ

ಮುಖಗಳು

ಡಾ. ಅರಕಲಗೂಡು ನೀಲಕಂಠ ಮೂರ್ತಿ

ವೃತ್ತಿಯಲ್ಲಿ ಎಷ್ಟೊಂದು ಮುಖಗಳು
ಎದುರಾಗುತ್ತವೆ…
ಭಿನ್ನ ಭಿನ್ನ ಭಾವಗಳು
ಕವಚಗಳು

ಅದೇ ಒಂದೊಮ್ಮೆ ಯಾವುದೋ
ರಸ್ತೆಯ ಪಕ್ಕ ಕಾಯುತ್ತಿರಿ
ಒಂದೇ ಒಂದೂ, ಕೊಸರಿಗೂ ಕಾಣದು
ಪರಿಚಯದ ಮುಖ!
ಎಷ್ಟೊಂದು ಸೋಜಿಗ…!

ಜಗತ್ತು ತುಂಬಿದೆ
ತುಂಬಿ ತುಳುಕುತ್ತಿದೆ –
ಜನರಿಂದ ಮತ್ತು
ಜನರನ್ನು!
ಇಲ್ಲಿ ಅನಾಥರಿಗೂ
ಇನ್ನಿತರ ಅಂಥದೇ ಅನಾಥರ ಗುರುತೂ
ಸಿಗದು…ಬಹುಶಃ…

ಇದರಿಂದಲೇ ಇಲ್ಲಿ ಎಲ್ಲವೂ
ನಾನು, ನನ್ನದು ಮತ್ತು
ನನ್ನವರು…ಬಹುಶಃ…

ಗೋಡೆಯ ಮೇಲೆ ಈ ದಿನದ
ಹೊಚ್ಚ ಹೊಸ ಹೂಮಾಲೆಯಿರುವ
ನನ್ನಪ್ಪನ ಅಮ್ಮನ ಫೋಟೋ
ನನ್ನ ನಂತರ ಎಲ್ಲಿರುವುದೋ ಏನೋ…?
ಹಾಗೆಯೇ ಎಲ್ಲ ಮುಖಗಳು
ನೆನಪುಗಳು…

ಬಣ್ಣದ ಬ್ರಶ್ ಒಂದು
ಬಳಿಬಳಿದು ನಿತ್ಯ ನಿರಂತರ
ಉದುರಿ ಮರೆಯಾಗುವ ಮುಖವಾಡಗಳು…
ಮತ್ತು ಟಿಕ್ ಟಿಕ್ ಮುಳ್ಳಿನ ಸದ್ದುಗಳು, ನಡಿಗೆಗಳು…

*******************************************

.

24 thoughts on “ಮುಖಗಳು

  1. ತುಂಬಾ ಚೆನ್ನಗಿದೆ sir,,, ಮತ್ತಷ್ಟು ಕವನಗಳು ನಿಮ್ಮಿಂದ ಮೂಡಿಬರಲಿ

  2. ತುಂಬಾ ಚೆನ್ನಗಿದೆ sir,,, ಮತ್ತಷ್ಟು ಕವನಗಳು ನಿಮ್ಮಿಂದ ಮೂಡಿಬರಲಿ

  3. ಕವಿತೆಯ ಕಿಡಿ ಆರಲು ಸಾಧ್ಯವೇ ಇಲ್ಲ!

    ಮತ್ತೆ ಮೂಡಿ ಬಂದಿದೆ ಸೊಗಸಾದ ಕವನ ನಿಮ್ಮಿಂದ
    ಅಕ್ಷರಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹ ಅಗಾಧ
    ಹೀಗೇ ನೀವು ಓದಿಗೆ
    ಸಿಕ್ಕುತ್ತಲೇ ಇರಬೇಕು ಸದಾ

    ಮಿಠಾಯಿಯ ಸವಿಯ ಬಲ್ಲವ
    ಅದಕೇ ಹಾತೊರೆವ
    ನಿಮ್ಮ ಬರಹ ಸೂಜಿಗಲ್ಲು,
    ಜೋನಿಬೆಲ್ಲ ಸವಿಯಲೆಣಿಸುವ ಎಲ್ಲ!

    Wonderful lines from you sir. As usual, stays longer time in the minds. It’s a scintilla of life. Expect more and more from you

    1. ತುಂಬ ತುಂಬ ಧನ್ಯವಾದಗಳು, ನಿಖಿತ. ಪ್ರಯತ್ನಿಸುತ್ತೇನೆ.

  4. Really wonderful… ಮನಸನ್ನು ಕರಗಿಸೋ ಪದಗಳು…ಕವನಗಳಿಂದ. ಧನ್ಯವಾದಗಳು

Leave a Reply

Back To Top