ಕವಿತೆ
ಅಬ್ಬರ
ಪ್ರೊ.ಕವಿತಾ ಸಾರಂಗಮಠ
ಹರಿದ ಗುಡಿಸಲಲ್ಲಿ
ಮುರಿದ ಛಾವಣಿಗಳಲ್ಲಿ
ಹರಿದ ಬಟ್ಟೆಯುಟ್ಟು
ಹಸಿವು ಇಂಗಿದೆ!
ನಿರಾಶ್ರಿತರು ಮುಗಿಲಿಗೆ
ಮುತ್ತಿಗೆ ಹಾಕಿದ್ದಾರೆ
ತುತ್ತು ಅನ್ನ ಬಟ್ಟೆಗಾಗಿ
ಹೆಣಗುತ್ತಿದ್ದಾರೆ
ಇಲ್ಲೊಬ್ಬನಿಗೆ ಹೊರಗೆ
ತಿರುಗುವ ಚಿಂತೆ!
ಸೀಲ್ ಡೌನ್,ಲಾಕ್ ಡೌನ್
ಆಯ್ತು
ಪ್ರೀತಿ-ಪ್ರೇಮ ಸೀಲ್ ಡೌನ್ ಆಯಿತಾ?
ಇಲ್ಲೊಬ್ಬ ಪ್ರೇಮಿ ಉಸುರುತ್ತಿಅದ್ದಾನೆ!
ನೆಕ್ಕಲು ಹಳಸಿದ ಅನ್ನ ಸಿಕ್ಕರೆ
ಸಾಕು ಬದುಕುತ್ತೇನೆ
ಎನ್ನುತ್ತಿದ್ದಾನೆ
ಹಸಿವಿನ ಬೆಲೆ ತಿಳಿದವ
ಭಿಕ್ಷುಕನೂ ಇರಬಹುದು?!
ಕೀಟಗಳ ಕಾಟವಿನ್ನೂ ಮುಗಿಯದೇ
ಅಕಟಕಟಾ
ನಿದ್ದೆಮಾಡಿ ಮಾಸಗಳೇ ಉರುಳಿವೆ
ಎನುತಿರುವ ಇಲ್ಲೊಬ್ಬ
ಹಾಸಿಗೆ ಪ್ರೇಮಿ!
ಆಸೆ ಬಿಡದ ಜೀವ
ಬೇಕೆಂದು ಹೊರಟೇ ಇದೆ
ಅರಿವಿಲ್ಲ
ಮಸಣಕೋ
ವ್ಯಸನಕೋ?
*****************************