ಕಾವ್ಯಯಾನ

ಕಾವ್ಯಯಾನ

ಗುಪ್ತಗಾಮಿನಿ ವಿದ್ಯಾ ಶ್ರೀ ಎಸ್ ಅಡೂರ್. ಸಾಗರವ ಸೇರುವ ನದಿಯಾಗಿದ್ದೆ ನಾನು ಬಳುಕುತ್ತಿದ್ದೆ,ಕುಲು ಕುಲು ನಗುತ್ತಿದ್ದೆ. ನದಿಯೆಲ್ಲ ಬತ್ತಿ ನೀರೇ ಇಲ್ಲ ಈಗ ಯಾರಿಗೂ ಕಾಣದಂತೆ ಗುಪ್ತಗಾಮಿನಿ ಯಾಗಿದ್ದೇನೆ. ರೆಕ್ಕೆ ಬಿಚ್ಚಿ ಎತ್ತರೆತ್ತರಕ್ಕೆ ಹಾರುವ ಹಕ್ಕಿ ಯಾಗಿದ್ದೆ ನಾನು ಹಾಡುತ್ತಿದ್ದೆ,ನಲಿನಲಿದಾಡುತ್ತಿದ್ದೆ ಹಾರಾಡಲು ರೆಕ್ಕೆಗಳೇ ಇಲ್ಲ ಈಗ ಅನಂತ ದಿಗಂತ ವನ್ನು ಕಂಡು ,ಮೂಕವಾಗಿ ರೋಧಿಸುತ್ತಿದ್ದೇನೆ. ಅಂದಚೆಂದದಿ ಕಂಪಬೀರುವ ಹೂವಾಗಿದ್ದೆ,ನಾನು ಬೀಸುವ ತಂಗಾಳಿಗೆ ತೊಯ್ದಾಡುತ್ತಿದ್ದೆ ಕಂಪ ಬೀರಲು ಹೂವುಗಳೇ ಇಲ್ಲ ಈಗ ತಂಗಾಳಿಗೆ ಮೈ ಒಡ್ಡುವ ಮನಸಿಲ್ಲದೇ ನೋಯುತಿದ್ದೇನೆ. […]

ಪ್ರಶಸ್ತಿ-ಪುರಸ್ಕಾರ

ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ ಪ್ರಶಸ್ತಿ -2019 ಕನ್ನಡದ ಸಣ್ಣ ಕತೆಗಾರರಿಗೆ ಉತ್ತೇಜನ ನೀಡಲು ಪ್ರತಿ ವರ್ಷ ನೀಡುತ್ತಿರುವ ಡಾ . ಬೆಸಗರಹಳ್ಳಿ ರಾಮಣ್ಣ ಕಥಾ ಸಂಕಲನ 2019 ರ ಪ್ರಶಸ್ತಿ ಚನ್ನಪ್ಪ ಕಟ್ಟಿ ಅವರ ” ಏಕತಾರಿ ” ಕಥಾ ಸಂಕಲನಕ್ಕೆ ಸಂದಿದೆ . ಡಾ. ಎಸ್ ಜಿ ಸಿದ್ದರಾಮಯ್ಯ , ಅರುಣ್ ಜೋಳದ ಕೂಡ್ಲಗಿ ಮತ್ತು ವಿನಯಾ ವಕ್ಕುಂದ ಅವರುಗಳಿದ್ದ ಸಮಿತಿ ಈ […]

ಪ್ರಸ್ತುತ

ವಿಶ್ವಾಸದ್ರೋಹಿ ನೇಪಾಳ ಸಂಗಮೇಶ ಎನ್ ಜವಾದಿ ವಿಶ್ವಾಸದ್ರೋಹಿ ನೇಪಾಳದಲ್ಲಿ ಭಯಂಕರ ಪ್ರಕೃತಿ ವಿಕೋಪ ಆದಾಗ ಇದರ ಸಂಕಷ್ಟಕ್ಕೆ ಕೈಜೋಡಿಸಲು ಮೊದಲು ಬಂದಿದ್ದು ಮತ್ತು ನೆರವಾಗಿದ್ದು ಭಾರತ ದೇಶ. ನೇಪಾಳಕ್ಕೆ ಭಾರತದ ಸಹಾಯ, ಸಹಕಾರ ಬೇಕು ಜೊತೆಗೆ ಆರ್ಥಿಕ ಸಹಾಯ ಸಹ ಬೇಕೇ ಬೇಕು, ಇವರ ಯುವಕ ಯುವತಿಯರಿಗೆ ದುಡಿಯಲು ಭಾರತ ಬೇಕು.ಇವರ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಭಾರತ ದೇಶ ಬೇಕು.ಭಾರತದಲ್ಲಿ ಸೀಗುವ ಪ್ರತಿಯೊಂದು ವಸ್ತುಗಳ ಸಹಾಯದ ಅಗತ್ಯತೆ ನೇಪಾಳ ಜನರಿಗೆ ಬೇಕು ಹಾಗೂ ಭಾರತದ ಸಹಾಯ ಇವರಿಗೆ […]

ಕಾವ್ಯಯಾನ

ಭಾವನೆಗಳು ಮಾತನಾಡುತ್ತಿವೆ ಕಲ್ಪನೆಗಳ ಸಾಗರದಲಿ ಹುದುಗಿ ಹೊಕ್ಕಿದ್ದ ಶಿಲ್ಪವನು ಹೆಕ್ಕಿ ನನಸಾಗಿಸುವಾಸೆಯಲಿ ನೂರೂರಗಳ ಸುತ್ತಿ ಸುತ್ತಿ ಮೌನಿಯಾದ ಶಿಲ್ಪಿಯೊಬ್ಬ ಬಾಯಾರಿ ದಣಿದಿರಲು ತಿರುಕನ ಕನಸು ಹಾರೈಸಿದಂತೆ ಚಂದಿರನ ಬೆಳದಿಂಗಳ ಮೀರಿ ಅಮೃತ ಸಮಾನ ಶಿಲೆಯೊಂದು ಹರ್ಷದಾ ವರವಾಗಿ ಗೋಚರಿಸಿ ವನವಾಸದಲಿಹ ಲಕ್ಷ್ಮಣನ ಕಾಯ್ದು ಕನವರಿಸಿ ಕಲ್ಲಾಗಿ ತಪಗೈವಂತೆ ಊರ್ಮಿಳೆ, ಹಸಿವು ನಿದ್ದೆಗಳ ಗೆದ್ದು ಕಾಲನ ಕುಣಿಕೆಯ ಮರೆತು ಹಗಲಿರುಳು ಹವಣಿಸುತಲಿ ಶಿಲೆಯನು ದೃಷ್ಟಿಸುತಲಿ ಅಂತರಾತ್ಮದಿ ಅಡಗಿಹ ಅರಿವನು ಹದಗೊಳಿಸಿ ಕಲ್ಪನೆ ಶಿಲ್ಪವನೆ ಉಸಿರಾಡಿ ಇಂದ್ರಿಯಗಳ ನಿಗ್ರಹಿಸಿ ಅತೀಂದ್ರಿಯ […]

ಲಹರಿ

ಆತ್ಮಸಾಕ್ಷಿಯಾಗಿ… ಸುರೇಶ ಎನ್ ಶಿಕಾರಿಪುರ. ಸತ್ತ ವ್ಯಕ್ತಿಯನ್ನು ಶ್ರೀಗಂಧ, ಒಣ ಕೊಬ್ಬರಿ, ತುಳಸಿಯನ್ನು ರಾಶಿ ಒಟ್ಟಿ, ಮೇಲೆ ತುಪ್ಪವ ಸುರಿದು ಸುಟ್ಟರೆ ಅದು ಕಡೆಯ ಪಕ್ಷ ಹೆಣದ ವಾಸನೆಯನ್ನು ಮರೆ ಮಾಚಬಹುದು ಇಲ್ಲವೇ ಸತ್ತ ವ್ಯಕ್ತಿಯ ಶ್ರೀಮಂತಿಕೆಯ ಪ್ರದರ್ಶನ ವಾಗಬಹುದು ಅಷ್ಟೆ. ಅದು ಗುಣದ ಮಾನದಂಡವಲ್ಲ. ಅದರಿಂದ ಮೃತ ವ್ಯಕ್ತಿಯ ಗುಣ ಮಾತ್ರ ಸುಡುವುದಿಲ್ಲ. ಅದು ಒಳ್ಳೆಯ ಗುಣವಾಗಿದ್ದರೂ ಕೆಟ್ಟ ಗುಣವಾಗಿದ್ದರೂ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ… ಸದ್ಗುಣವಾಗಿದ್ದರೆ ಜನತೆಯ ನಾಲಗೆಯ ಮೇಲೆ ಸ್ತುತಿಯಾಗಿಯೂ ದುರ್ಗುಣವಾಗಿದ್ದರೆ ಅದೇ […]

ಪುಸ್ತಕ ಸಂಗಾತಿ

ಜಾಂಬ್ಳಿ ಟುವಾಲು ಜಾಂಬ್ಳಿ ಟುವಾಲು ಕಥಾಸಂಕಲನ ಲೇಖಕರು- ರಾಜು ಹೆಗಡೆ ಪ್ರಕಾಶನ – ಅಂಕಿತ ಪುಸ್ತಕ ಶಿರಸಿಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಪ್ರೊ.ರಾಜು ಹೆಗಡೆ ಉತ್ತರ ಕನ್ನಡದ ಪ್ರಮುಖ ಕವಿ ಮತ್ತು ಕಥೆಗಾರ.ಉ.ಕದ ಗಡಿರೇಖೆಯೊಳಗೆ ತಮ್ಮ ಕಥಾಲೋಕ ಸೃಷ್ಟಿಸಿಕೊಂಡು ಇಲ್ಲಿಯೇ ನೆಲೆಸಿರುವ ಬರಹಗಾರ. ಜಾಂಬ್ಳಿ ಟುವಾಲು ಎಂಬ ಹೆಸರಿನ ಯಾವುದೇ ಕಥೆ ಇಲ್ಲಿಲ್ಲ. ಆದರೆ ‘ಕುರುರಾಯ ಇದನೆಲ್ಲ ಕಂಡು..’ ಎಂಬ ಕಥೆಯಲ್ಲಿ ಟವೆಲ್ ಇಟ್ಟು ಹೋದವರ ಜಗಳದ ಪ್ರಸಂಗ ಬರುತ್ತದೆ. ಕಥೆಗಳನ್ನು ಜಾಂಬ್ಳಿ – ಇಲ್ಲಿ ಆರು ಕಥೆಗಳು […]

ಕಾವ್ಯಯಾನ

ರೆಕ್ಕೆ ಮುರಿದಾಗ… ಚೇತನಾ ಕುಂಬ್ಳೆ ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ಉರುಳಿ ಬಿದ್ದು ಅಸುನೀಗಿದ್ದು ಬರೇ ಜೀವಗಳು ಮಾತ್ರ ಆಗಿರಲಿಲ್ಲ. ಹಲವು ಕುಟುಂಬಗಳ ಆಧಾರಸ್ತಂಭಗಳಾಗಿತ್ತು. ಅಲ್ಲಿ ಕಳೆದುಕೊಂಡದ್ದು ಸ್ನೇಹ ಸಂಬಂಧಗಳ ಕೊಂಡಿಯಾಗಿತ್ತು. ಒಬ್ಬರಿಗೆ ಪ್ರೀತಿಯ ಒಡಹುಟ್ಟಿದವರು ಮತ್ತೊಬ್ಬರಿಗೆ ಸ್ನೇಹಿತರು ಮಗದೊಬ್ಬರಿಗೆ ಬಾಳಿಗೆ ಬೆಳಕಾಗಿದ್ದ ಹೆತ್ತವರು ಕೆಲವರಿಗೆ ಜೀವದುಸಿರಾಗಿದ್ದ ಬಾಳಸಂಗಾತಿಗಳು, ಕರುಳಬಳ್ಳಿಗಳು ಮತ್ತೂ ಕೆಲವರಿಗೆ ಸಂಬಂಧಿಕರು ಲೋಹದ ಹಕ್ಕಿಯೊಂದು ರೆಕ್ಕೆ ಮುರಿದುಕೊಂಡು ಪ್ರಪಾತಕ್ಕೆ ಬಿದ್ದಾಗ, ಅಲ್ಲಿ ನುಚ್ಚುನೂರಾದದ್ದು ಕೇವಲ ದೇಹಗಳೂ ಎಲುಬುಗಳೂ ಮಾತ್ರವಾಗಿರಲಿಲ್ಲ ಹೆಣೆದಿಟ್ಟ […]

ಕಾವ್ಯಯಾನ

ತಂಗಾಳಿ! ಕೆ.ಬಿ.ವೀರಲಿಂಗನಗೌಡ್ರ ಅವಳೆಂದರೆ.. ತೊರೆದವನಿಗೆ ಅರಳಿಮರವಾದವಳು ಅವಳೆಂದರೆ.. ಕೂಡಬೇಕೆಂದವನಿಗೆ ಅನುಭವಮಂಟಪವಾದವಳು ಅವಳೆಂದರೆ.. ಹೋರಾಟಗಾರನಿಗೆ ಊರುಗೋಲಾಗಿ ನಿಂತವಳು ಅವಳೆಂದರೆ.. ಸಮತೆಯೆಂದವನಿಗೆ ತಕ್ಕಡಿ ಹಿಡಿದು ನಿಂತವಳು ಅವಳೆಂದರೆ.. ಎದೆಯದನಿಗೆ ಸ್ವಾತಿ ಹನಿಯಾದವಳು ಅವಳೆಂದರೆ.. ಬೆಳೆಸಲೆಂದೇ ಬೇರಾಗಿ ಕೆಳಗಿಳಿದವಳು ಅವಳೆಂದರೆ.. ಕಾಣದ ತಂಗಾಳಿ ಅರ್ಥವಾಗದ ಅಮೂರ್ತ. *******

ಕವಿತೆ ಕಾರ್ನರ್

ಕಣ್ನೀರಾಗುತ್ತೇನೆ! ಕಗ್ಗತ್ತಲ ಇರುಳೊಳಗೆ ಬೀದಿ ದೀಪಗಳ ನೆರಳುಗಳಾಟದೊಳಗೆ ಮುಸುಕೊದ್ದು ಮಲಗಿದ ನಿನ್ನ ಶಹರದೊಳಗೆ ಅಡ್ಡಾಡುತ್ತೇನೆ ನಿಶಾಚರನಂತೆ ಹಗಲು ಕಂಡ ಬೀದಿಯ ಹುಡುಕಿ ಇರುಳು ಅಲೆಯುತ್ತೇನೆ ಎತ್ತರದ ನಿನ್ನ ಮನೆಯ ಮಹಡಿಯಮೇಲೆ ಕವಿದ ಕಪ್ಪು ಮೋಡಗಳಾಚೆ ಇಣುಕುತ್ತಿರುವ ಚಂದ್ರನ ನಿದ್ದೆಗಣ್ಣಿನ ನಗುವಿಗೆ ಹೋಲಿಸಿ ನಿನ್ನ ಮಂದಹಾಸವ ನಾಚುತ್ತೇನೆ! ಮೂಡಿದ ಸೂರ್ಯನ ಎಳೆ ಕಿರಣಗಳು ನಿನ್ನಂಗಳದಲ್ಲಿ ಚಿತ್ತಾರ ಬಿಡಿಸುವ ದಿವ್ಯ ಮುಂಜಾವದಲ್ಲಿ ಮೈಮುರಿಯುತ್ತ ಹೊರಬಂದ ನಿನ್ನ ಮುದುಡಿದ ಸೀರೆಯ ನಿರಿಗೆಗಳಲ್ಲಿ ಅಡಗಿರಬಹದಾದ ಹಿಂದಿನ ರಾತ್ರಿಯ ಕನಸುಗಳಲ್ಲಿ ನನ್ನ  ಹುಡುಕುತ್ತೇನೆ! ಕಾಣದ […]

ಪುಸ್ತಕ ಸಂಗಾತಿ

ನಾನು ಅಘೋರಿಯಲ್ಲ “ನಾನು ಅಘೋರಿಯಲ್ಲ”” – Santoshkumar Mehandale 10 ವರ್ಷದ ಹಿಂದೆಯೇ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ರಾಜ್ಯಮಟ್ಟದ ಜನಪ್ರಿಯ ಕಾದಂಬರಿ ಎಂದೆನಿಸಿಕೊಂಡ, (ಬಹುಶ ಹಲವು ಪ್ರಶಸ್ತಿಯೂ ) ಪುಸ್ತಕ….    ನನ್ನ ಬಹುದೊಡ್ಡ ಹೊಟ್ಟೆಯುರಿ ಅಂದ್ರೆ ಈ ಲೇಖಕರು,  ಇವರ ಬರಹಗಳು ನಂಗೆ ಪರಿಚಯವಾದದ್ದು ತೀರ ಇತ್ತೀಚಿಗೆ, ಇಷ್ಟು ವರ್ಷ ನಾನೀ ಲೇಖಕರ ಪುಸ್ತಕ ಬರಹ ಎಲ್ಲಾ ಮಿಸ್  ಮಡ್ಕೊಂಡೇ ಅಂತನ್ನಿಸೋದು ಇವರ ಕೆಲವು ಪುಸ್ತಕಗಳು ಸಿಗದಿದ್ದಾಗ, ಅವನು ಗಂಧರ್ವ….  ಯಾವ ಪ್ರೀತಿಯೂ…. ಓದಿದ ನಂತರ […]

Back To Top