ಪುಸ್ತಕ ಸಂಗಾತಿ

ನಾನು ಅಘೋರಿಯಲ್ಲ

“ನಾನು ಅಘೋರಿಯಲ್ಲ”” – Santoshkumar Mehandale

10 ವರ್ಷದ ಹಿಂದೆಯೇ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ, ರಾಜ್ಯಮಟ್ಟದ ಜನಪ್ರಿಯ ಕಾದಂಬರಿ ಎಂದೆನಿಸಿಕೊಂಡ, (ಬಹುಶ ಹಲವು ಪ್ರಶಸ್ತಿಯೂ ) ಪುಸ್ತಕ….

   ನನ್ನ ಬಹುದೊಡ್ಡ ಹೊಟ್ಟೆಯುರಿ ಅಂದ್ರೆ ಈ ಲೇಖಕರು,  ಇವರ ಬರಹಗಳು ನಂಗೆ ಪರಿಚಯವಾದದ್ದು ತೀರ ಇತ್ತೀಚಿಗೆ, ಇಷ್ಟು ವರ್ಷ ನಾನೀ ಲೇಖಕರ ಪುಸ್ತಕ ಬರಹ ಎಲ್ಲಾ ಮಿಸ್  ಮಡ್ಕೊಂಡೇ ಅಂತನ್ನಿಸೋದು ಇವರ ಕೆಲವು ಪುಸ್ತಕಗಳು ಸಿಗದಿದ್ದಾಗ,

ಅವನು ಗಂಧರ್ವ….  ಯಾವ ಪ್ರೀತಿಯೂ….

ಓದಿದ ನಂತರ ಸರ್ ನಿಮ್ಮ ಯಾವ್ಯಾವ ಬುಕ್ಸ್ ಲಭ್ಯ ಇದೇ ಕಳಿಸಿಬಿಡಿ ಅಂತಾ ತರಿಸಿಕೊಂಡಿದ್ದೆ ಆದರೇ ಮಿಸ್ ಆದ ಪುಸ್ತಕಗಳಲ್ಲೊಂದು “”ನಾನು ಅಘೋರಿಯಲ್ಲ “”

  ನನ್ನದೊಂದು (ದುರ )ಅಭ್ಯಾಸ ಅಂದ್ರೆ ನಂಗೆ ಯಾವುದೇ ಬುಕ್ ಬೇಕಂದ್ರೂ ಇನ್ನೊಬ್ರತ್ರ ಇಸ್ಕೊಳೋದು ಲೈಬ್ರರಿಲಿ ತರೋದು ಆಗೋಲ್ಲ, ಆದ್ರೆ ಮಾರ್ಕೆಟ್ ನಲ್ಲಿ ಸಿಗದಿದ್ದಾಗ ಲೈಬ್ರರಿ ಮೊರೆ ಅನಿವಾರ್ಯ, ಹೀಗೇ ಯಾವ್ದೋ ಬುಕ್ ತರೋದಿತ್ತು ಹಾಗೂ ಈ ಮೆಹಂದಳೆ ಸರ್ ದು, ನಂದೂ ಬುಕ್ಸ್ ಅಲ್ಗೆ ತಳ್ಪಸೋಣಾ ಅಂತಾ ಹೋದಾಗ ಕಣ್ಣಿಗೆ ಬಿದ್ದದ್ದು ಈ ನಾನು ಅಘೋರಿಯಲ್ಲ, ಒಂದ್ಸಲ ಆದ ಖುಷಿಗೆ ಪಾರವಿರಲಿಲ್ಲ, ನಿನ್ನೆ ಇಡೀ ದಿನ ಮಾಡಬೇಕಾದ ಎಲ್ಲಾ ಕೆಲ್ಸ ಬಿಟ್ಟು ಕೂತು ಓದಿ ಮುಗ್ಸಿದ್ದೀನಿ, ನನ್ನನಿಸಿಕೆ ಕೇವಲ ಅನಿಸಿಕೆ ನಿಮ್ಮ ಮುಂದೆ…

  ಈ ಅಘೋರಿ ಅನ್ನೋ ಪದಾನೇ ನನ್ನ ವಿಚಿತ್ರವಾಗಿ ಸೆಳೆಯತ್ತೆ, ಇದರ ಬಗ್ಗೆ ಓದಿಲ್ಲ ಕೇಳಿಲ್ಲ ಅಂತಲ್ಲ, ಬಹುಶ: ಅಘೋರಿ ಅಂದ್ರೆ ಒಂಥರಾ ಭಯ ಗಾಬರಿ ಏನೋ ಮುಜುಗರದಂತಹ ಫೀಲಿಂಗ್, ಅವ್ರೇನೋ ಬೇರೇ ಗ್ರಹದವರ ಎಂಬ ಅಸ್ಪೃಶ್ಯ ಅಲ್ದೇ ಸರಿಯಾಗಿ ಹೇಳ್ಬೇಕಂದ್ರೆ ಅಸಹ್ಯ ಅನ್ನೋ ಭಾವನೇನೇ ಜಾಸ್ತಿ, ಆದರೇ ಈ ಪುಸ್ತಕದ ವಿಶೇಷ ಅಂದ್ರೆ ಇದನ್ನ ಓದಿದರೆ ಸರಿಯಾಗಿ ಅರ್ಥೈಸಿಕೊಂಡರೆ ಲೇಖಕರು “”ಅಘೋರಿಗಳ “” ಬಗೆಗಿನ ಎಲ್ಲಾ ಪೂರ್ವಗ್ರಹಗಳನ್ನೂ ನಿವಾರಿಸಿಬಿಡುತ್ತಾರೆ ಮಾತ್ರವಲ್ಲ ಅವರೊಂದಿಗೆ ಒಂದು ಮಾನವೀಯ ಗೌರವ ಭಾವವೂ ಹುಟ್ಟಿಕೊಳ್ಳುತ್ತೆ, ಮತ್ತೆಂದೂ ಪೂರ್ವಾಪರ ವಿವೇಚನೆ ಇಲ್ದೆ ಅಘೋರಿಗಳನ್ನ ನೀವು ನಿರಾಕರಿಸಲಾರಿರಿ ಡ್ಯಾಮ್ ಶ್ಯೂರ್…..

   ಸಾಮಾಜಿಕ ವ್ಯವಸ್ಥೆಯ ಮೂರ್ನಾಲ್ಕು ರಂಗಗಳನ್ನು ಒಂದಕ್ಕೊಂದು ಕೊಂಡಿಗಳನ್ನ ಜೋಡಿಸೋದನ್ನು ಪರಸ್ಪರ ಒಬ್ರಿಗೊಬ್ರು ದ್ರೋಹವೆಸಗೋದನ್ನೂ , ಅದರೊಳಗೂ ಹರಡಿ ಘಮಿಸುವ ನಿರ್ಮಲ ನಿಷ್ಕಲ್ಮಶ ಪ್ರೀತಿಯನ್ನು ಅದ್ಬುತವಾಗಿ ಎಲ್ಲೂ ಕಿಂಚಿತ್ತು ಬೇಸರವಾಗದಂತೆ ಎಲ್ಲಿಯೂ ಯಾವ ಚಿಕ್ಕ ಲೋಪವೂ ಬಾರದಂತೆ,  ಬೇಸರವಾಗದoತೆ ಕಥೆ ಹೆಣೆದಿರುವ ಲೇಖಕರ ಕೌಶಲ್ಯ ಮನಸೆಳೆಯುತ್ತದೆ..

ವೈಜ್ಞಾನಿಕಥೆಗೆ  ಅಧ್ಯಾತ್ಮದ,  ವಾಮಲೋಕದ ಅಘೋರ ವಿಜ್ಞಾನ, ಹೇಗೆ ಒಂದಕ್ಕೊಂದು ತಳುಕು ಹಾಕಿಕೊಳ್ಳಬಲ್ಲದು ಹಾಗೂ ಪರಸ್ಪರರ ಅವನತಿಗೂ ಕಾರಣವಾಗಬಲ್ಲದು ಎಂಬುದನ್ನು ಮಾರ್ತಾಂಡ ಬಾಬಾ ಹಾಗೂ ಅಧ್ವೈತ ಸ್ವಾಮಿ ಮೂಲಕ ಅರಿವನ್ನು ನೀಡಿದ್ದಾರೆ ಹಾಗೂ ಅಘೋರಿಗಳೂ ತಮ್ಮ ಸಿದ್ಧಿಯನ್ನು ಲೋಕ ಕಲ್ಯಾಣಕ್ಕೆ ಉಪಯೋಗಿಸುವ ಬಗ್ಗೆ ಖಂಡಿತವಾಗಿಯೂ ಸಾಮಾನ್ಯ ಜನಕ್ಕೆ ತಿಳುವಳಿಕೆ ಇರಲಾರದು, ಅಘೋರ ವಿಜ್ಞಾನ ಕೂಡ ವೈಜ್ಞಾನಿಕ ಆಧಾರಿತ ಅನ್ನೋದನ್ನೂ ಸರಳವಾಗಿ ಅರ್ಥವಾಗುವಂತೆ ಬಿಡಿಸಿಟ್ಟಿದ್ದಾರೆ, ನಮ್ಮ  ಆಡಳಿತ ವೈಖರಿ ಅಧಿಕಾರಿ ವರ್ಗದ ಕೆಲವು ವಿಫಲತೆ, ಭ್ರಷ್ಟಾಚಾರ, ಧರ್ಮವನ್ನು ದುರುಪಯೋಗ ಪಡಿಸಿಕೊಳ್ಳುವ ದುರವಸ್ಥೆ ಖೇದವೆನಿಸುತ್ತದೆ, ಮನುಷ್ಯನ ದುರಾಸೆಯಿಂದ ಸಮಾಜಕ್ಕಾಗುವ ಹಾನಿ ನಷ್ಟವನ್ನು ಅಗ್ನಿಹೋತ್ರಿ ಎಂಬ ವಿಜ್ಞಾನಿ ತನ್ನ ಅದ್ಬುತ ಪಾಂಡಿತ್ಯದಾಚೆಗೂ ಪ್ರಯೋಗವನ್ನು ಅಧೂರಿಯಾಗಿ ಬಿಟ್ಟು ತನ್ನನ್ನು ತನ್ನ ದಶಕಗಳ ಶ್ರಮವನ್ನು ಬೂದಿ ಮಾಡಿಕೊಳ್ಳುವ ಅಸಾಹಾಯಕತೆ ಗಲಿಬಿಲಿಗೊಳಿಸತ್ತೆ, ಅಘೋರಿಗಳ ವಾಮಮಾರ್ಗದ  ಭೀಭಿತ್ಸ  ಭೀಕರ ಆಚರಣೆಯ ಬಗ್ಗೆ ಮಾತ್ರಾ ತಿಳಿದವರಿಗೆ ಅದರ  ಹಿಂದಿನ ಸಾಮಾಜಿಕ ಕಳಕಳಿ, ಹಿತದೃಷ್ಟಿ ಅರಿವಿಗೆ ಬಂದ್ರೆ ಅಘೋರ ಲೋಕ ಹಾಗೂ ಅಘೋರಿಗಳ ಬಗೆಗಿನ ತಪ್ಪು ತಿಳುವಳಿಕೆ ಅಂತರ ಕಡಿಮೆಯಾಗಿ ಅವರೊಂದಿಗೆ ಒಂದು ಮಾನವೀಯ ಸಂವಹನ ಸಾದ್ಯವಾಗಬಲ್ಲದು, ಇದು  ಇನ್ನೊಮ್ಮೆ ಪ್ರತಿಲಿಪಿಯಲ್ಲಾದರೂ ಬರಲಿ ಎಂಬುದು ನನ್ನ ಕೋರಿಕೆ, ಇಲ್ಲಿನದೇ ಒಂದಷ್ಟು ಓದುಗರು ಓದಲು ಅನುಕೂಲ ಆಗಬಹುದೆಂಬುದು ನನ್ನಾಶಯ,

  ಇನ್ನು ರೇಶಿಮೆ ಜರತಾರಿನ ಸೀರೆಯಲ್ಲಿ ಬೆಳ್ಳಿ ಝರಿಯಂತೆ ನಿಕ್ಷಿಪ್ತವಾಗಿ ಎಲ್ಲರಲ್ಲಿಯೂ ಸೇರಿಕೊಂಡಿರೋದು,

“”ಪ್ರೇಮ ಎಂದರೆ ಆಕಾರಕ್ಕೆ ನಿಲುಕದ….

   ಕಲ್ಪನೆಗೆ ನಿಲುಕದ……. ಮನಸ್ಸು… !!

      ಒಂದು   “”ಪ್ರಚ್ಚನ್ನ ಮೌನ “””

ಆದಿ ಪುರಾಣ ಕಾಲದಿಂದಲೂ ಇಂದಿನವರೆಗೂ ಸಾವಿರಾರು ಪ್ರೇಮ ಕಥೆಗಳು ಆಗಿಹೋಗಿವೆ, ಒಂದಷ್ಟು ಸುಖಾಂತ ಒಂದಷ್ಟು ದುಃಖಾಂತ, ಎರಡರ ಬಯಕೆಯೂ ನಿಸ್ವಾರ್ಥ… ತ್ಯಾಗ…. ಅದೆಲ್ಲಕಿಂತ ತಾದ್ಯಾತ್ಮತೆಯನ್ನ…. ಎಂದು ಇತಿಹಾಸಗಳಿಂದ ಅರಿತವರು ತುಂಬಾ ಕಡಿಮೆ ಮಂದಿ….

ಈ  ಲೇಖಕ ಮಹಾನುಭಾವರ ಪ್ರೇಮದ ಪ್ರೀತಿಯ ವ್ಯಾಖ್ಯಾನಗಳು ಅತೀ ಸುಂದರ ಚೇತೋಹಾರಿ ಮನೋಲ್ಲಾಸಗೊಳಿಸುವಂತದ್ದು, ನಮ್ಮಂತ ಆಡಲಾರದ ಅನುಭವಿಸಲಾರದ ಬಿಸಿತುಪ್ಪದಂತೆ ನುಂಗಲಾರದೆ ಉಗುಳಲಾರದೇ ಸಂಕಟ ಪಡುವ ಮನಗಳಿಗೆ ಕೊಂಚ ಧೈರ್ಯ ತುಂಬಿ ಅಗತ್ಯವಾದದ್ದನ್ನು ಕೇಡಿಲ್ಲದ, ಅನ್ಯಾಯವಲ್ಲದ ರೀತಿಯಲ್ಲಿ ಎಟುಕಿಸಿಕೊಳ್ಳುವ, ಮನಃಸ್ಥಿತಿಗೆ ತಂದು ಬದುಕಿಗೆ ಅಲ್ಪ ಸ್ವಲ್ಪ  ನೆಮ್ಮದಿ ಚೈತನ್ಯ ತುಂಬುವಂತಹುದು, ಹೌದು ಇನ್ನೊಬ್ಬರಿಗೆ ಕೇಡೆಣಿಸದಂತ ಯಾವ ಪ್ರೀತಿಯೂ ಅನೈತಿಕವಲ್ಲ ಎಂದೇ ಸಾರಿದವರಲ್ಲವೇ….??

ಮನಸ್ಸಿನ ಅನುಭೂತಿಗೊಂದು ಆಯಾಮ ಕಲ್ಪಿಸುವುದೇ ಪ್ರೇಮವಾ??

ಇದ್ದಷ್ಟೂ ಮತ್ತಷ್ಟು ಬೇಕೆಂದುಕೊಳ್ಳುವುದು ಪ್ರೇಮವಾ?? ಜಾಜಿ ಮಲ್ಲೆಯ ಘಮಲಾ??

 ಮುಂಜಾವಿನ ಇಬ್ಬನಿಯ ಮೃದುತ್ವವಾ??

ನಗುವ ಗಾಳಿಯ ಸಣ್ಣಸುಳಿಯ ಕಲರವವಾ??

ಮೊದಲ ಮಳೆಯ ಮಣ್ಣಿನ ವಾಸನೆಯ ಗಾಢತೆಯಾ??

ಪ್ರೇಮವೊಂದು ನೆರವೇರುವುದಕ್ಕಿಂತ ಅದು ನೆರವೇರಲಿರುವ ನಿರೀಕ್ಷೆ ತುಂಬಾ ಹಿತವಾಗಿರುತ್ತದೆಂದು ಯಾಕೆನಿಸುತ್ತದೆಯೋ…

ಮಲ್ಲಿಗೆ ಬಳ್ಳಿಯ ತೂಗುವಿಕೆಯ  ಲಾಸ್ಯವಾಗಿ

ಮನದಲ್ಲಿ ಬೆಳದಿಂಗಳಾಗಿ, ಇಂಧ್ರಧನುಸ್ಸಾಗಿ,,

ಚಿನ್ನದ ಮೋಡಗಳ ಗರಿಗಳಾಗಿ… ಇದಕ್ಕಿಂತ ಹಿತವಾದುದು ಖಂಡಿತಾ ಇದರ ಮೀರಿದ ಹಿತವಿಲ್ಲ ಎಂದೇ ನಮ್ಮನಿಸಿಕೆಯೂ ಲೇಖಕರೇ…

ಮೈನವಿರೇಳಿಸುವ ಅಘೋರ ಲೋಕದ ವಿದ್ಯಮಾನಗಳಾಗಲಿ…., ಹಿಪ್ನಾಟೈಸ್…., ಆರತ್ಯುಂಗ…. ವರ್ಣಗೋಲ….  ಕಡೆಗೆ ಕಾನ್ಫಿಡೆನ್ಸ್ ಏನೇ ಇರಲಿ, ಯಾವುದೇನು ಮಾಡಿದರೂ ಮನಸ್ಸನ್ನು ಕಂಡು ಹಿಡಿಯುವ ತಂತ್ರಜ್ಞಾನ ಮಾತ್ರಾ ಎಟುಕಲಾರದೇನೋ…???  ಅಂತದ್ದೊಂದು ಎಟುಕಬಾರದು ಕೂಡಾ… ಅದೇ ಈ ಸಕಲ ಜೀವಗಳಿಗೂ ಜಗತ್ತಿಗೂ ಶುಭ……

  ಹೌದು ಪ್ರೇಮವೆಂದರೆ ಅಪೂರ್ವ ಶಾಂತಿ….

       “”””ಪ್ರಚ್ಚನ್ನ ಮೌನ  “”””

ಅದ್ಬುತ ಪ್ರೇಮ ರಾಸಾಯನದೊಂದಿಗೆ ಅಘೋರಿಗಳ ಹೊಸಮುಖ ಪರಿಚಯಿಸಿದ, ಒಂದು ನಿಗೂಢವನ್ನ ಅನಾವರಣಗೊಳಿಸಿದ ಲೇಖಕರಿಗೆ ವಂದನೆ ಅಭಿನಂದನೆಗಳು… ಹೀಗೇ ಬರೀತಾ ಇರಿ… ನಮ್ಮೆಲ್ಲ ಅಭಿಮಾನಿಗಳ ಪ್ರೀತಿಯ ಕಸುವು ನಿಮಗಿರಲಿ…

************

ಪದ್ಮಜಾ ಜೋಯಿಸ್

One thought on “ಪುಸ್ತಕ ಸಂಗಾತಿ

  1. ಅಘೋರಿಗಳೆಂದರೆ ಮನದಲ್ಲಿ ಭಯ..,! ಅವರ ವೇಷಭೂಷಣ, ಆಚಾರ ವಿಚಾರಗಳೆಲ್ಲವು ವಿಸ್ಮಯವೇ…..ಲೇಖರ ಪ್ರಸ್ತುತ ಪಡಿಸುವಿಕೆ ಮೆಚ್ಚುಗೆ ಗೆ ಪಾತ್ರ…….ಜೂಲೇ..

Leave a Reply

Back To Top