ಅಂಕಣ ಬರಹ-14 `ಸಣ್ಣ’ಸಂಗತಿ ನರಸಿಂಹಸ್ವಾಮಿಯವರ ಪುಟ್ಟ ಕವಿತೆಯೊಂದಿದೆ-ಹೆಸರು `ಸಣ್ಣಸಂಗತಿ’. ಅದು ಸಾಹಿತ್ಯ ವಿಮರ್ಶೆಯಲ್ಲಿ ಶ್ರೇಷ್ಠ ಕವನವೆಂದೇನೂ ಚರ್ಚೆಗೊಳಗಾಗಿಲ್ಲ. ಆದರೆ ಮತ್ತೆಮತ್ತೆ ಕಾಡುತ್ತದೆ. ಅದರ ವಸ್ತು ತಾಯೊಬ್ಬಳ ದುಡಿತ. ಅಲ್ಲೊಂದು ಸನ್ನಿವೇಶವಿದೆ: ನಡುರಾತ್ರಿ. ಕುಟುಂಬದ ಸಮಸ್ತ ಸದಸ್ಯರೂ ಗಾಢನಿದ್ದೆಯಲ್ಲಿದ್ದಾರೆ. ಅವರಲ್ಲಿ ಎಳೆಗೂಸಿನ ತಾಯಿಯೂ ಸೇರಿದ್ದಾಳೆ. ಆಕೆಯ ಮಂಚದ ಪಕ್ಕದಲ್ಲಿರುವ ತೊಟ್ಟಿಲಲ್ಲಿ ಕೂಸಿದೆ. ಅದು ಗಾಳಿಯಲ್ಲಿ ಕಾಲು ಅಲುಗಿಸುತ್ತ ಹೊದಿಕೆಯನ್ನು ಕಿತ್ತೆಸೆಯುತ್ತಿದೆ. ಎಲ್ಲರಂತೆ ಆಕೆಯೂ ನಿದ್ದೆಯಲ್ಲಿ ಮುಳುಗಿರುವಳು. ಆದರೆ ಅವಳ ಕೈ ಮಗುವಿನ ಹೊದಿಕೆಯನ್ನು ಸರಿಪಡಿಸುತ್ತಿದೆ. `ನಿದ್ದೆ ಎಚ್ಚರಗಳಲಿ ಪೊರೆವ […]
ಗಝಲ್
ಗಝಲ್ ರತ್ನರಾಯ ಮಲ್ಲ ಅಕ್ಕಸಾಲಿಗನಲ್ಲಿ ಕಾಲ್ಗೆಜ್ಜೆ ತಂದಿರುವೆನು ಪ್ರೀತಿಯಿಂದಬಲಗಾಲು ಮುಂದೆಯಿಡು ತೊಡಿಸುವೆನು ಪ್ರೀತಿಯಿಂದ ಮಯೂರವು ವಿಹರಿಸಿದಂತಾಗುತಿದೆ ಈ ಹೃದಯದಲ್ಲಿಹಂಸದ ನಡಿಗೆಯನು ಪ್ರೀತಿಸುತಿರುವೆನು ಪ್ರೀತಿಯಿಂದ ಹಕ್ಕಿಗಳ ಕಲರವವು ಆಲಂಗಿಸುತಿದೆ ಈ ಮೈ-ಮನಗಳನ್ನುಶಕುಂತಲೆಯ ನಾಟ್ಯದಿ ಮೈ ಮರೆತಿರುವೆನು ಪ್ರೀತಿಯಿಂದ ಗೆಜ್ಜೆ ಎದೆ ಬಡಿತದೊಂದಿಗೆ ಪ್ರೇಮ ರಾಗವ ನುಡಿಸುತಿದೆನಿದ್ದೆ ಮರೆತು ನಿನ್ನನ್ನೆ ಕನವರಿಸುತಿರುವೆನು ಪ್ರೀತಿಯಿಂದ ‘ಮಲ್ಲಿ’ ನಿನ್ನ ಹೆಜ್ಜೆಯಲ್ಲಿ ಗೆಜ್ಜೆಯನು ಹುಡುಕುತಿರುವನುನಿನ್ನ ಪಾದಗಳನ್ನು ಅಲಂಕರಿಸುತಿರುವೆನು ಪ್ರೀತಿಯಿಂದ **********************************
ಬಾಲ್ಯ
ಕವಿತೆ ಬಾಲ್ಯ ತಿಲಕ ನಾಗರಾಜ್ ಹಿರಿಯಡಕ ಅರೆ! ಎಷ್ಟು ಚೆನ್ನಾಗಿತ್ತಲ್ಲ?ಅಲ್ಲಿ ಯಾವ ನೋವಿನಹಂಗಿರಲಿಲ್ಲ….ಚಿಂತೆಗಳ ಬರೆಯಿರಲಿಲ್ಲಮುದವೀಯುತ್ತಿದ್ದವಲ್ಲಕಾಡು ಮೇಡುಗಳ ಅಲೆದಾಟಗದ್ದೆ ಬಯಲುಗಳ ಓಡಾಟ…ಲಗೋರಿ ಕಣ್ಣಾಮುಚ್ಚಾಲೆಚಿನ್ನಿದಾಂಡು ಉಯ್ಯಾಲೆಕ್ರಿಕೇಟು ಕುಂಟೆಬಿಲ್ಲೆಆಟಗಳಾಡಿ ರಾತ್ರಿಯಲ್ಲಿಕಾಲಿಗೆ ಚುಚ್ಚಿದ ಮುಳ್ಳುಗಳನೋವಿನ ಜೊತೆಹಿರಿಯರ ಬೈಗುಳದ ಜೋಗುಳಒಂದಷ್ಟು ಹಾಯಾದ ನಿದ್ದೆಮರವೇರಿ ಕೊಯ್ದಮಾವಿನ ಕಾಯಿಗಳಬಚ್ಚಿಟ್ಟು ಹಣ್ಣಾಗಿಸಿ ತಿಂದಸ್ವಾದ ನಾಲಗೆಯಲ್ಲಿ ಸದಾ ಅಮರಹಚ್ಚಿಟ್ಟ ಚಿಮಣಿ ದೀಪದಆಚೆಗೆ ಬೀಡಿ ಎಲೆಗಳ ಸುರುಳಿಸುತ್ತುತ್ತಿದ್ದ ಅಮ್ಮನ ಬೆರಳುಗಳುಈಚೆಗೆ ಪುಸ್ತಕಗಳ ಮೇಲೆಕಣ್ಣಾಡಿಸುತ್ತಿದ್ದ ನಾವುಗಳುಒಮ್ಮೊಮ್ಮೆ ಬೇಸರೆನಿಸಿದಾಗಪಠ್ಯ ಪುಸ್ತಕಗಳ ನಡುವೆಇರಿಸಿ ಓದುತ್ತಿದ್ದ ಕತೆ ಪುಸ್ತಕಗಳಮುಖಾಂತರ ಕಲ್ಪನಾ ಲೋಕದಲ್ಲಿಒಂದು ಸಣ್ಣ ವಿಹಾರ..ಮರೆಯಲಾಗದ್ದು, ಮರಳಿ ಬಾರದ್ದುಎಷ್ಟು […]
ಪ್ರತಿಮೆಯೂ ಕನ್ನಡಿಯೂ..
ಸ್ವಗತ ಪ್ರತಿಮೆಯೂ ಕನ್ನಡಿಯೂ.. ಚಂದ್ರಪ್ರಭ.ಬಿ. ಪ್ರತಿಮೆಯೂ ಕನ್ನಡಿಯೂ “ತೋರಾ ಮನ ದರಪನ ಕೆಹಲಾಯೆಭಲೆ ಬುರೆ ಸಾರೆ ಕರಮೊಂ ಕೊ ದೇಖೆ ಔರ ದಿಖಾಯೆ..………….. ………… ……….. …………… ………… ಸುಖ ಕಿ ಕಲಿಯಾಂ ದುಃಖ ಕಿ ಕಾಟೇಂ ಮನ ಸಬ್ ಕಾ ಆಧಾರ / ಮನ ಸೆ ಕೋಯಿ ಬಾತ ಛುಪೆ ನಾ ಮನ ಕೆ ನೈನ ಹಜಾರ/ ಜಗ ಸೆ ಚಾಹೆ ಭಾಗ ಲೆ ಕೋಯಿ ಮನ ಸೆ ಭಾಗ ನ ಪಾಯೆ…..” “ಕಾಜಲ್” ಹಿಂದಿ […]
ಆಹುತಿ
ಕವಿತೆ ಆಹುತಿ ಅನಿಲ ಕಾಮತ ದೇಹ ಹಿಂಡಿಹಿಪ್ಪೆಯಾಗಿಸಿದೆಕಾರಿನಲ್ಲಿ ಬಸ್ಸಿನಲ್ಲಿಹಗಲಲ್ಲಿ ನಸುಕಿನಲ್ಲಿಕಾನನದಲ್ಲಿನೀರವ ಅಹನಿಯಲ್ಲಿ ಬೆಳಕು ಸೀಳುವ ಮುನ್ನಬ್ರೇಕಿಂಗ್ ನ್ಯೂಸ್‌ಗಳಿಗೆಆಹಾರಭುವನ ಸುಂದರಿಸ್ಪರ್ಧೆಯಲ್ಲಿದೇಹ ಸೌಂದರ್ಯದ ಬಗ್ಗೆತೀರ್ಪುಗಾರರತಾರೀಪು ಹೆಣ್ಣು ಭ್ರೂಣಪತ್ತೆ ಮಾಡುವತವಕದಲ್ಲಿಸ್ಕೆನ್ನಿಂಗ್ಮಿಷನ್ ಗಳಿಗೆಪುರುಸೊತ್ತಿಲ್ಲ ನದಿಯ ತಟದಲ್ಲಿರೇಲ್ವೆ ಸೇತುವೆಯಕೆಳಗೆಅರೆಬೆಂದ ಶವವಾಗಿಖಾಕಿಗಳಿಗೆ ಮಹಜರುಮಾಡಲು…. ****************
ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ
ಅನುಭವ ಶಿಕ್ಷಣ ಕ್ಷೇತ್ರ ಮತ್ತು ಎರಡು ದಶಕಗಳ ಪ್ರಯಾಣ ಮಮತಾ ಅರಸೀಕೆರೆ ಬಯಸಿ ಬಂದದ್ದಲ್ಲ. ಹಂಬಲಿಸಿ ಪಡೆದದ್ದಲ್ಲ. ಒಂದು ಬಗೆಯ ಓರೆ ನೋಟದ ಕಸಿವಿಸಿಯ ಬಿಗುವಿನೊಡನೆ ಅನಿಚ್ಛಾಪೂರ್ವಕವಾಗಿ ಇಲಾಖೆಗೆ ಕಾಲಿಟ್ಟದ್ದು. ನಂತರ ಜರುಗಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ಅನಿಯಮಿತ ಅಡೆತಡೆಯಿಲ್ಲದ ಪ್ರಯಾಣ. ಇದೇ ಅಕ್ಟೋಬರ್ ೨೫ ಕ್ಕೆ ನಾನು ಶಿಕ್ಷಣ ಇಲಾಖೆಯ ಸದಸ್ಯಳಾಗಿ ಎರಡು ದಶಕಗಳೇ ಆಗುತ್ತಿದೆ. ನನ್ನಮ್ಮ ಕೂಡ ಇದೇ ಇಲಾಖೆಯಲ್ಲಿದ್ದವರು.ಅಪ್ಪ ಅಂಚೆ ಇಲಾಖೆ ಉದ್ಯೋಗಿ.ಅದೇಕೋ ತನ್ನ ಇಲಾಖೆ ಬಗ್ಗೆ ಅಸಡ್ಡೆಯಿದ್ದಬಅಪ್ಪನ ಉದ್ಯೋಗಕ್ಕಿಂತ ಸುಲಭವಾಗಿ ಸರಳವಾಗಿ […]
ಕಾಗೆ ಮುಟ್ಟಿದ ನೀರು
ಪುಸ್ತಕ ಪರಿಚಯ ಕಾಗೆ ಮುಟ್ಟಿದ ನೀರು ಪುಸ್ತಕ:- ಕಾಗೆ ಮುಟ್ಟಿದ ನೀರುಲೇಖಕರು:-ಡಾ.ಪುರುಷೋತ್ತಮ ಬಿಳಿಮಲೆಪ್ರಕಾಶನ:-ಅಹರ್ನಿಶಿ ಪ್ರಕಾಶನ,ಶಿವಮೊಗ್ಗ ಕಾಗೆ ಮುಟ್ಟಿದ ನೀರು ಪುಸ್ತಕ ಅನೇಕ ಓದುಗ ಪ್ರಭುಗಳ ಉತ್ತಮ ಅನಿಸಿಕೆಗಳ ಓದಿ ತೀರಾ ಮನಸ್ಸಾಗಿ ಓದಲು ಹಂಬಲ ಹೆಚ್ಚಾಗಿ,ತೀರಾ ಕಡಿಮೆ ರಿಯಾಯತಿಯಲ್ಲಿ ಪುಸ್ತಕ ಕೊಡುವುದಾದರೆ ಕಳಿಸಿ ಎಂದು ಪ್ರಕಾಶಕರಿಗೆ ಸಂದೇಶವನ್ನು ಕಳಿಸಿದ ಕೂಡಲೇ, ಆಯ್ತು ವಿಳಾಸ ಬರಲಿ ಎಂದು ಅತ್ತಕಡೆಯಿಂದ ಕಳುಹಿಸಿ ಕೊಟ್ಟರು.ಆತ್ಮಕತೆ ನನ್ನಿಷ್ಟದ ಒಂದು ಓದುವಿನ ವಿಭಾಗ. ಪುಸ್ತಕವೂ ಕೈಸೇರಿತು, ಸಿಕ್ಕಗಳಿಗೆ ಮೊದಲು ಬೆನ್ನುಡಿ-ಮುನ್ನುಡಿ ಓದುವ ಹವ್ಯಾಸ ನನ್ನದಾಗಿದೆ. […]
ಮಳೆಗಾಲದ ಬಿಸಿಲುಕವಿತೆ
ಕವಿತೆ ಮಳೆಗಾಲದ ಬಿಸಿಲು ಅಬ್ಳಿ,ಹೆಗಡೆ ಹಗಲ ಶಿಶು ಶಶಿಯೊಡನೆಆಟದಲಿ ಸೋತು.ಮುಗಿಲುಗಳ ಮರೆಯಲ್ಲಿಅಳುತಿಹನು ಕೂತು.ಮಗುವ ಕಾಣದ ತಾಯಿರಮಿಸಿ ತಾ ಕರೆಯೆ-ಕಣ್ಣೊರೆಸಿ ಹೊರ ಬಂದಮಗು-ನಗುವ ‘ಹೊಳೆಯೆ’. ******************************
ಬದುಕು- ಬವಣೆ
ಕವಿತೆ ಬದುಕು- ಬವಣೆ ಸಹನಾ ಪ್ರಸಾದ್ ಗಂಡ ಹೆಂಡಿರ ಸಂಬಂಧಸಂಸಾರಕ್ಕೆ ಇದೇ ಮೆರಗುಉಫ಼್ಫ಼್ ಹೇಳಲಾಗದು ಅನುಬಂಧಜತೆಗಿರುವರು ಸಾಯುವವರೆಗೂ ಆದರೆ ಇರಲೇಬೇಕಿಲ್ಲ ಪ್ರೀತಿವ್ಯಾವಹಾರಿಕವಾದರೂ ನಡೆದೀತುಇದ್ದರೆ ಸಮಾಜದ ಭೀತಿಪ್ರೀತಿಯೂ ಗಿಲೀಟು ಬತ್ತಿ ಹೋದ ಮೇಲೆ ಪ್ರೀತಿಯ ಚಿಲುಮೆಜತೆಗಿರುವುದೂ ಅನಿವಾರ್ಯವಾದಾಗಮುದುಡಿದ ಮನಸ್ಸುಗಳಿಗೆ ಎಲ್ಲಿದೆ ಒಲುಮೆಕಿತ್ತೇ ಹೋಯಿತೇನೋ ಅನಿಸುತ್ತೆ ಹೃದಯದ ಭಾಗ ನಮ್ಮ ಸಮಾಜದಲ್ಲಿ ಇಲ್ಲ ವಿಚ್ಚೇದನಒಮ್ಮೆ ಜತೆಗೂಡಿದರೆ ಮುಗಿಯಿತು ಬದುಕುಒಳ್ಳೆ ಜನ ಸಿಗದಿದ್ದರೆ ಬದುಕೇ ವೇದನಸಹಿಸಿಕೊಳ್ಳಬೇಕು ಖಾಲಿಯಾಗುವವರೆಗೂ ಸರಕು! *************************
ಬದಲಾದ ಕಾಲಕ್ಕೆ ಹಳ್ಳಿಯ ಬದುಕು
ಲೇಖನ ಬದಲಾದ ಕಾಲಕ್ಕೆ ಹಳ್ಳಿಯ ಬದುಕು ಸರಿತಾ ಮಧು ಹಳ್ಳಿಗಳ ದೇಶವೇ ನಮ್ಮದು. ಮೊದಲಾದರೆ ಸುಂದರ ಸ್ವರ್ಗದಂತೆ ಇದ್ದವು. ಕೂಡು ಕುಟುಂಬ, ಅದಕ್ಕೆ ಹೊಂದಿಕೊಂಡಂತೆ ಗದ್ದೆ- ತೋಟಗಳು, ರಕ್ತ ಸಂಬಂಧಗಳು ಹಾಗೂ ಮಾನವೀಯ ನೆಲೆಯಲ್ಲಿ ಒಟ್ಟಿಗೆ ಸೇರಿ ನಲಿಯುತ್ತಿದ್ದ ಸಂದರ್ಭಗಳು. ಮೂರು – ನಾಲ್ಕು ತಲೆಮಾರಿನ ಅನುಭವಗಳ ಬೆರೆತ ಸಂಸಾರ. ಮನೆಗಳಲ್ಲಿ ಆಡಂಬರವಿರಲಿಲ್ಲ ಮನಸಿನಲ್ಲಿ ಆತ್ಮೀಯತೆ ಇತ್ತು. ಅವಿಭಕ್ತ ಭಾವ ರಕ್ತಗತವಾಗಿ ಮುಂದುವರೆಯುತ್ತಿತ್ತು. ಹಣಕಾಸಿಗೆ ಅಡಚಣೆಯಿತ್ತು ಅದರ ಹೊರತು ಪರಿಶುದ್ಧವಾದ ಬದುಕಿಗಲ್ಲ. ನಗರ ಜೀವನಕ್ಕೆ ಮನಸೋತ ಕೆಲವು […]