ಯಡ್ರಾಮಿಯ ಉಡುಪಿ ಹೋಟೆಲ್
ಪ್ರಬಂಧ ಮಲ್ಲಿಕಾರ್ಜುನ ಕಡಕೋಳ ಹಾಗೆ ನೋಡಿದರೆ ನಮ್ಮ ಯಡ್ರಾಮಿಗೆ ಬೆಳ್ಮಣ್ಣು ಶಂಕರಭಟ್ಟರ ಉಡುಪಿ ಹೋಟೆಲ್ ಬರುವ ಪೂರ್ವದಲ್ಲೇ ನಿಯತ್ತಿನ ನಾಯಿಗುರುತು ಬ್ಯಾಂಕ್ ಬಂದಿತ್ತು. ಸುಂಬಡ ಹಾದಿಬದಿಯ ಬಹುಪಾಲು ಬೆಳಕಿಲ್ಲದ ಬ್ಯಾಂಕಿಗೂ ಭಟ್ಟರ ಹೋಟೆಲಿಗೂ ಕೂಗಳತೆ ದೂರ. ಅಜಮಾಸು ಮುವತ್ತು ವರ್ಷಗಳ ಹಿಂದಿನ ಮಜಕೂರವಿದು. ಹಣಮಂದೇವರ ಗುಡಿ ಬಳಿಯ ಹಳೆಯ ಬಸ್ ನಿಲ್ದಾಣದಲ್ಲಿ ಉಡುಪಿ ಹೋಟೆಲ್. ಆಗೆಲ್ಲ ರುದ್ರಯ್ಯ ಮುತ್ಯಾನ ಹೋಟೆಲ್ ಹಾಗೂ ಹಲಕರ್ಟಿ ಶಿವಣ್ಣನವರ ಹೋಟೆಲಗಳದ್ದೇ ಸ್ಟಾರ್ ಹೋಟೆಲ್ ಹವಾ. ಯಥೇಚ್ಛ ಹೊಗೆಯುಂಡು ಮಸಿಬಟ್ಟೆ ಬಣ್ಣಕ್ಕಿಳಿದ […]
ನಿನ್ನನಾ ಹೋಲಿಸಲೆ ಮಧುವಸಂತ ಬೇಸಿಗೆಗೆ?
ಅನುವಾದಿತ ಕವಿತೆ ಮೂಲ: ವಿಲಿಯಂ ಷೇಕ್ಸ್ ಪಿಯರ್ ಕನ್ನಡಕ್ಕೆ:ವಿ.ಗಣೇಶ್ ನಿನ್ನನಾ ಹೋಲಿಸಲೆ ಮಧು ವಸಂತ ಬೇಸಿಗೆಗೆ? ಅದಕಿಂತ ಮಿಗಿಲಾದ ಸ್ಥಿತಪ್ರಜ್ಞ ಸುಂದರನು ನೀನು ಬೇಸಿಗೆಯ ಬಿರುಗಾಳಿಗೆ ಮೊಗ್ಗು ಮುದುಡಬಹುದು ಮಳೆಗಾಲದ ಆರ್ಭಟಕೆ ವಸಂತ ನಾಶಿಸಬಹುದು ಕೆಲವೊಮ್ಮೆ ಸೂರ್ಯನೂ ಉರಿಗಣ್ಣ ಬಿಡಬಹುದು ಬಂಗಾರದ ಕಾಂತಿಯು ಮಸುಕು ಮಸುಕಾಗಬಹುದು ಆ ಪ್ರಕೃತಿಯ ಕೋಪಕ್ಕೆ ಕಾಲಚಕ್ರದ ಏರಿಳಿತಗಳಿಗೆ ಚೆಲುವರಲಿ ಚೆಲುವನೂ ಸಹ ಕಳೆಗುಂದಬಹುದು. ಆದರೆ ಚೆಲುವರಲಿ ಚೆಲುವಾದ ಈ ನಿನ್ನ ಚೆಲುವು ಎಂದೆಂದೂ ಮಾಸದೆ ಚಿರವಾಗಿ ಉಳಿಯುವುದು ನಾಶವಾಗದೆ ಅದು ಚಿಗುರೊಡೆದು […]
ಪ್ರೀತಿಯ ಸಾಲುಗಳು
ಕವಿತೆ ಬಾಲಕೃಷ್ಣ ದೇವನಮನೆ ಮುಗುಳು ನಗೆಯಲ್ಲಿಹದಗೊಳಿಸಿದಎದೆಯ ಹೊಲದಲ್ಲಿಒಂದೊಂದೇವಾರೆ ನೋಟದಲಿನಾಟಿ ಮಾಡಿದ ಪೈರುತೊನೆದಾಡಿದ ಮಧುರ ಕ್ಷಣ..! ಪ್ರೀತಿಯನ್ನುಮುಲಾಜಿಲ್ಲದ ಹಾಗೆಅವಳು ಒದ್ದು-ಹೋದ ಎದೆಯ ದಾರಿಯಲ್ಲಿಮೂಡಿದ ನೋವಿನ ಹೆಜ್ಜೆಗಳುಯಾವ ಮುಲಾಮಿಗೂಅಳಿಸಲಾಗದೇ ಸೋತರೂಮತ್ತೆ ಮತ್ತೆ ನೆನಪ ಲೇಪಿಸಿಕೊಂಡುಸುಖಿಸುವ ವ್ಯಸನಿ ನಾನು. ಮನಸ್ಸುಗಳು ಉರಿಯುವಈ ರಾತ್ರಿಯಲ್ಲಿಬೀಸುವ ಗಾಳಿಯೂಬೆಂಕಿ ನಾಲಿಗೆ ಸವರುವಾಗಇಷ್ಟಿಷ್ಟೇ… ಇಷ್ಟಿಷ್ಟೇ…ಜಾರಿದ ಗಳಿಗೆಸುಟ್ಟ ನಿದಿರೆಯನ್ನೆಲ್ಲಾಹಗಲಿಗೆ ಗುಡ್ಡೆ ಹಾಕಿದಎಚ್ಚರದ ಬೂದಿಯಲ್ಲಿರೆಪ್ಪೆ ಮುಚ್ಚದ ಇರುಳುಉದುರಿಸಿದ ಕಂಬನಿಒದ್ದೆ ಮಾಡಿದಎದೆಯ ರಂಗಸ್ಥಳದಲ್ಲಿನಿನ್ನ ನೆನಪುಗಳ ಹೆಜ್ಜೆ ಹೂತುಚುಚ್ಚಿ ಚುಚ್ಚಿ ಕೊಲ್ಲುವ ಸಂತಾಪ…!! ನೀನುಹುಕ್ಕುಂ ಕೊಟ್ಟ ಮೇಲೇನಾನುನಿನ್ನೊಲವ ಗದ್ದೆಯಲಿ ಹೆಜ್ಜೆ ಊರಿದ್ದುಮತ್ಯಾಕೆ ಸುಳ್ಳು […]
ನನಗೂ ನಿನ್ನಂತಾಗ ಬೇಕಿತ್ತು!
ಕವಿತೆ ಅನಿತಾ ಪಿ. ತಾಕೊಡೆ ನನಗೂ ನಿನ್ನಂತಾಗಬೇಕಿತ್ತುಅದೆಷ್ಟೋ ಸಲ ನಾನೂ ನಿನ್ನಂತಾಗಲು…ಎದೆಯಾಳದ ಕನಸಿನ ಕಣ್ಣಿಗೆಕಪ್ಪು ಪಟ್ಟಿ ಬಿಗಿಯುತಿದ್ದೆತೀವ್ರವಾದ ಭಾವಗಳು ಎಲ್ಲೆ ಮೀರದಂತೆಇತಿಮಿತಿಯ ರೇಖೆಯನೆಳೆಯುತಿದ್ದೆ ಕೆಲವೊಮ್ಮೆ ಮಾತುಗಳು ಹಳಿ ತಪ್ಪಿದಾಗಕರಾಳ ಮೌನ ಎದೆಯನ್ನು ಸುಡುತಿತ್ತುಅಭದ್ರತೆಯ ನೆಲೆಯೊಳಗೆ ಓಲಾಡಿಸುತಿತ್ತು ಅಂದುಕೊಂಡಂತೆ ಇರಲಾಗದೆಸಣ್ಣ ತಪ್ಪು ವಿರಾಟ ರೂಪ ತಳೆದುಮೂರ್ತರೂಪಕ್ಕಿಳಿಸುವ ಛಲದಿನಕಳೆದಂತೆ ಇಳಿಯುತ್ತಲೇ ಇತ್ತು ನಿನ್ನ ಸಖ್ಯವಾದ ಮೇಲೆನಾನೆನುವ ಅಹಂಭಾವ ಬಿಗುಮಾನಎಲ್ಲವೂ ದೂರ ಸರಿದುನಿನ್ನ ಅನುನಯದೊಳು ಹೂವಾಗಿದ್ದು ಸುಳ್ಳಲ್ಲ ಬೇಕು ಬೇಡಗಳ ನಡುವಿನ ಒಳಪಂಥದಲಿಅದೆಷ್ಟೋ ಬಾರಿ ನಾನೂ ನೀನೂಸೋತು ಗೆಲ್ಲುತಿದ್ದೆವು ಕೆಲವೊಮ್ಮೆ ಮಾತು […]
ಕಲಿಗಾಲದ ಫಲ
ಕವಿತೆ ಅರುಣ್ ಕೊಪ್ಪ ಅಂದು ಖುಷಿಯನ್ನೆಲ್ಲ ಉಸುರಿಹಿಡಿದು ಮುಟ್ಟಿದ್ದಕ್ಕೂತಂತ್ರಜ್ಞಾನದ ಗುಲಾಬು ಜಾಮೂನಿನ ಚಪಲದಲ್ಲಿದ್ದೆವು.ಸ್ವಾರ್ಥದ ಕುದುರೆಯನ್ನೇ ಏರಿ ಸವಾರಿಕಾಂಚಾಣದ ಕರವಸ್ತ್ರವನ್ನೇ ಬಳಸುತ್ತಿದ್ದೆವು. ಪಾದ ಊರದ ನೆಲ ಮೌನದಲ್ಲಿಕಾಲು ದಾರಿಗಳನ್ನು ನುಂಗಿ ಹಾಕಿತ್ತುಬೀದಿ ದೀಪದಲ್ಲೂ ಕಣ್ಣು ಕಾಣದಮೋಜು ಮಸ್ತಿಯಲಿ ರಾತ್ರಿಯನ್ನುಹಗಲಿನಂತೆ ಅನುಭವಿಸುತ್ತಿದ್ದೆವು.ಸಮಯವನ್ನು ಹರಾಜು ಮಾಡಿಅಹಂ ಅಂಗಡಿಯಲ್ಲಿ ಮಾರಾಟಮಾಡುತ್ತಿದೆವು. ಹುಟ್ಟಿದ ಕಿಮ್ಮತ್ತಿಗೆ ಬೀದಿ ವಾಪಾರಿಗಳಮಂತ ಉರಿಸುತ್ತಿದ್ದೆವು.ನಾವೇ ಅನುಭೋಗಿಗಳುಎಂಬ ಸರ್ವ ಜಂಬದಲಿವೃದ್ಧರನ್ನು ಹೇಸಿಗೆಯಾಗಿ ನೋಡುತ್ತಿದ್ದೆವು. ವ್ಯಾಪಾರ ಜಗತ್ತಿನಲ್ಲಿಸಂಬಂಧಕ್ಕೂ ಮಾಪು ಹಿಡಿದುತಾವೇ ಸರಿ ಎಂದೆನುತಕಾಣುವ ಸೊಗದೊಳಗೆಭೂತಗನ್ನಡಿಯ ಹಿಡಿದುಮೊಸರಲ್ಲಿ ಕಲ್ಲು ಹುಡುಕುತ್ತಿದ್ದೆವು ಆದರೆ ಇಂದು ಎಲ್ಲಕಲಿಗಾಲದ […]
ಬಿಟ್ಟು ಬಿಡಿ ಹೋಲಿಕೆ ಬೆಳೆಸಿಕೊಳ್ಳಿ ಸ್ವಂತಿಕೆ
ಅಂಕಣ ‘ಪಕ್ಕದ ಮನೆ ಪದ್ಮ ಕೋಗಿಲೆ ತರ ಹಾಡುತ್ತಾಳೆ. ನೀನೂ ಇದ್ದಿಯಾ. ನಿನ್ನ ಗೆಳೆಯ ರವಿ ನೋಡು ಭಾಷಣ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದವರೆಗೂ ಬಹುಮಾನ ಪಡೆದಿದ್ದಾನೆ. ಹಾಡು ಭಾಷಣ ಇರದಿದ್ದರೆ ಅಷ್ಟೇ ಹೋಯ್ತು ರಜನಿ ತರಹ ಕ್ಲಾಸಿಗೆ ರ್ಯಾಂಕ್ ಬರೋಕೆ ಆಗಲ್ಲ ಯಾವಾಗ ನೋಡಿದರೂ ಮನೆ ಮುಂದೆ, ಮೈದಾನದಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು ಆಡ್ತಿಯಾ ನಾಯಿ ಬಾಲ ಯಾವಾಗಲೂ ಡೊಂಕು ಅದನ್ನು ನೇರ ಮಾಡಲು ಸಾಧ್ಯವಿಲ್ಲ. ನಾ ಹೇಳಿದಾಗ ಮಾತ್ರ ಅಭ್ಯಾಸ ಮಾಡುತ್ತಿಯಾ.’ ಇದು ರಾಜುವಿನ ಅಪ್ಪ […]
ಮನದೊಳಗಣ ತಾಕಲಾಟವೇ ಅಭಿವ್ಯಕ್ತಿ
ಅಂಕಣ ಬರಹ ಕವಿಯಿತ್ರಿ ನೂತನ ಎಂ.ದೋಶೆಟ್ಟಿ ಉತ್ತರ ಕನ್ನಡದ ಸಿದ್ದಾಪುರದವರು. ಮೃತ್ಯುಂಜಯ ದೋಶೆಟ್ಟಿ , ಪ್ರೇಮಾ ದೋಶೆಟ್ಟಿ ಅವರ ಮಗಳು.ಅವರ ಪತಿ ಶಾಮ ಸುಂದರ ಕದಂ ಕಾರವಾರ ಬಳಿಯ ಸದಾಶಿವಗಡದವರು. ಆಕಾಶವಾಣಿಯಲ್ಲಿ ಎಂಜಿನಿಯರ್. ಕವಯಿತ್ರಿ ಕತೆಗಾರ್ತಿ ನೂತನ ದೋಶೆಟ್ಟಿ ಸಮೂಹ ಸಂವಹನ , ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕ ಹುದ್ದೆ ನಿಭಾಯಿಸುತ್ತಿದ್ದಾರೆ. ಕಾರವಾರ ಆಕಾಶವಾಣಿ, ಬೆಂಗಳೂರು ಆಕಾಶವಾಣಿಯಲ್ಲಿ ಸೇವೆ ಮಾಡಿ, ಇದೀಗ ಹಾಸನ ಜಿಲ್ಲಾ ಆಕಾಶವಾಣಿಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ೨೦೦೯ರಲ್ಲಿ ಕಾಲವೆಂಬ ಮಹಾಮನೆ ಕಾವ್ಯ […]
ಜ್ಞಾನೋದಯದ ನಿದ್ದೆ
ಕವಿತೆ ವಸುಂಧರಾ ಕದಲೂರು ನಡುರಾತ್ರಿಗಳಲಿ ಒಮ್ಮೊಮ್ಮೆ ನಿದ್ದೆಸುಳಿಯದೇ ನರಳಿ,ನರಳಾಡಿಹೊರಳಾಡುವಾಗ ಮನಕೆ ಜಗದಚಿಂತೆಯೂ ಹಿಡಿದು ಚಿಂತನೆಗೆಶುರುವಾಗುತ್ತದೆ. ಇಂತಿಪ್ಪ ಅಶಾಂತಿಗೆ ಶಾಂತಿಯಹುಡುಕುವ ಮನಸ್ಸಾಗುತ್ತದೆ. ಜ್ಞಾನೋದಯಕ್ಕೆ ಮನೆಬಿಟ್ಟುಹೋದವ ನೆನಪಾಗಿ, ನಾನೂ ಎದ್ದುಹೊರಡಿಬಿಡಬೇಕೆಂಬ ತುಡಿತ ಹೆಚ್ಚಾಗಿಪರಿತ್ಯಾಗದ ವೇದಿಕೆ ಹತ್ತಲು ಮನಇನ್ನಿಲ್ಲದಂತೆ ಸಿದ್ಧವಾಗುತ್ತದೆ. ಏಳಬೇಕೆಂದವಳ ನಡು ಬಳಸಿ,ಕೊರಳ ಸುತ್ತಿ ಅಪ್ಪಿರುವ ‘ನಾಲ್ಕುಕೈಗಳ ಬಂಧನ ಬಿಡಿಸಿಕೊಳ್ಳುವುದುಹೇಗೆ?’ ಪ್ರಶ್ನೆ ಧುತ್ತೆಂದು ಕಾಡುತ್ತದೆ. ಲೋಕೋದ್ಧಾರಕ್ಕೆ ಹೊರಡಲಾಗದೆಭವಬಂಧನಕೆ ಸಿಲುಕಿರುವ ನಾನು,ಬದ್ಧತೆಯೇ ಇಲ್ಲದ ಬುದ್ಧಿಗೇಡಿಯೇ?!ಭಯವೂ ಸುಳಿದಾಡುತ್ತದೆ. ‘ಛೇ, ಬಿಡು ಇದನ್ನೆಲ್ಲಾ ಎದ್ದು ನಡೆ’……ಕಳ್ಳ ಮನಸ್ಸಿನ ಚಿತಾವಣೆ. ನಾನೇನೋ ಹೋಗಿಬಿಡುವೆ. ನಾಳೆಇವರೆಲ್ಲಾ ಹುಡುಕಾಡಿದರೆ, […]
ತುಟಿಗಳ ಮೇಲೆ ನಿನ್ನಿಯದೇ ಹೆಸರು
ಕವಿತೆ ನಾಗರಾಜ ಹರಪನಹಳ್ಳಿ ತಲೆಗೂದಲ ಮುದ್ದಿಸಬೇಕುಅವುಗಳ ಒಂದೊಂದೇ ಎಣೆಸುತಪ್ರೀತಿಸಬೇಕು ನಿನಗೆ ಊಹಿಸಲು ಅಸಾಧ್ಯಉಸಿರಲ್ಲಿ ಹೆಸರು ಬೆರೆಸುವಕಲೆ ನನಗೆ ಮಾತ್ರ ಗೊತ್ತು ಪ್ರೀತಿ ಅಂದರೆ ಹುಡುಗಾಟವಲ್ಲಅದು ಕಣ್ಬೆಳಕುಹಾಗಾಗಿಪ್ರತಿನೋಟದಲ್ಲಿ ನನ್ನ ಬಿಂಬ ದೂರ ತಳ್ಳಲಾಗದು ಒಲವುಅದು ಹಠಮಾರಿನಿನ್ನ ತುಟಿಗಳ ಮೇಲೆನಿನ್ನಿನಿಯದೇ ಹೆಸರು ಯಾರು ಏನೇ ಹೇಳಲಿಎಷ್ಟೇ ಹತ್ತಿರದವರಿರಲಿಪ್ರೇಮದ ಮುಂದೆಅವು ನಿಲ್ಲಲಾರವು ಹೃದಯದ ಬಡಿತವೇ ನಿಲ್ಲುವಕ್ಷಣ ಬಂದರೂಕೊನೆಯಲ್ಲಿ ನೆನಪಾಗುವುದುಇನಿಯ ದನಿಯೇ ಒಲವು ಮಳೆಅದನ್ನೆಂದೂ ಭೂಮಿ ನಿರಾಕರಿಸದುನದಿಯ ಎಷ್ಟೇ ಹಿಡಿದಿಟ್ಟರು ಅದರ ಚಲನೆ ಕಡಲಕಡೆಗೆ ನೀ ನಿನ್ನ ಮನಸ ಜೊತೆ ಮಾತಾಡುವುದೇ ಇನಿಯಎದುರಿಟ್ಟುಅದೇ […]
ಬೆಕ್ಕು -ನಾಯಿಗಳ ಹುಲ್ಲಿನೌಷಧ!
ಅನುಭವ ಕಥನ(ಮಕ್ಕಳಿಗಾಗಿ) ವಿಜಯಶ್ರೀ ಹಾಲಾಡಿ ‘ಮುದೂರಿ’ ಒಂದು ಸಣ್ಣ ಹಳ್ಳಿ. ಅಲ್ಲಿ ವಿಜಿಯ ಮನೆ . ಅವರ ಊರಿನಲ್ಲಿ ಫರ್ಲಾಂಗು ದೂರಕ್ಕೊಂದೊಂದು ಮನೆಗಳು. ಆ ಊರು ಕಾಡು-ಗುಡ್ಡಗಳ ನಡುವೆ ಅವಿತುಕೊಂಡಿತ್ತು. ಜನರ ಸಂಖ್ಯೆಯೂ ಕಡಿಮೆ. ಅಲ್ಲಿಂದ ವಾಹನ ಓಡಾಡುವ ರಸ್ತೆ ತಲುಪಲು ಎರಡೂವರೆ ಮೈಲು ನಡೆದುಹೋಗಬೇಕಿತ್ತು. ಹಾಗೆ ಹೋದಾಗ ಸಿಗುವುದೇ ಹಾಲಾಡಿ. ಅಲ್ಲಿ ಕೆಲವು ಅಂಗಡಿಗಳು, ಪೋಸ್ಟ್ ಆಫೀಸ್, ಶಾಲೆ, ಹಾಲಿನ ಡೈರಿ, ಬ್ಯಾಂಕು ಇದ್ದವು . ಬಸ್ಸುಗಳು ಓಡಾಡುತ್ತಿದ್ದವು. ಡಾಕ್ಟರರನ್ನು ಕಾಣಬೇಕಾದರೆ ಅಲ್ಲಿಂದ ಬಸ್ಸು […]