ನಿನ್ನನಾ ಹೋಲಿಸಲೆ ಮಧುವಸಂತ ಬೇಸಿಗೆಗೆ?

ಅನುವಾದಿತ ಕವಿತೆ

ಮೂಲ: ವಿಲಿಯಂ ಷೇಕ್ಸ್ ಪಿಯರ್

ಕನ್ನಡಕ್ಕೆ:ವಿ.ಗಣೇಶ್

ನಿನ್ನನಾ ಹೋಲಿಸಲೆ ಮಧು ವಸಂತ ಬೇಸಿಗೆಗೆ?

ಅದಕಿಂತ ಮಿಗಿಲಾದ ಸ್ಥಿತಪ್ರಜ್ಞ ಸುಂದರನು ನೀನು

ಬೇಸಿಗೆಯ ಬಿರುಗಾಳಿಗೆ ಮೊಗ್ಗು ಮುದುಡಬಹುದು

ಮಳೆಗಾಲದ ಆರ್ಭಟಕೆ ವಸಂತ ನಾಶಿಸಬಹುದು

ಕೆಲವೊಮ್ಮೆ ಸೂರ್ಯನೂ ಉರಿಗಣ್ಣ ಬಿಡಬಹುದು

ಬಂಗಾರದ ಕಾಂತಿಯು ಮಸುಕು ಮಸುಕಾಗಬಹುದು

 ಆ ಪ್ರಕೃತಿಯ ಕೋಪಕ್ಕೆ ಕಾಲಚಕ್ರದ ಏರಿಳಿತಗಳಿಗೆ

ಚೆಲುವರಲಿ ಚೆಲುವನೂ ಸಹ ಕಳೆಗುಂದಬಹುದು.

ಆದರೆ ಚೆಲುವರಲಿ ಚೆಲುವಾದ ಈ ನಿನ್ನ ಚೆಲುವು

ಎಂದೆಂದೂ ಮಾಸದೆ ಚಿರವಾಗಿ ಉಳಿಯುವುದು

 ನಾಶವಾಗದೆ ಅದು ಚಿಗುರೊಡೆದು ಬೆಳೆಯುವುದು

ಬೆಳೆಯುತ್ತ ಬೆಳೆಯುತ್ತ ಹೆಮ್ಮರವಾಗಿ ಹರಡುವುದು

 ನಯನಗಳ ನೋಟ ಕಿವಿಗಳ ಶ್ರವಣ ಉಳಿದಿರುವವರೆಗೆ

ಉಳಿವ ಈ ಕಾವ್ಯವು ನೀಡುವುದು ನಿನಗೆ ಅಮರತ್ವವನು

5 thoughts on “ನಿನ್ನನಾ ಹೋಲಿಸಲೆ ಮಧುವಸಂತ ಬೇಸಿಗೆಗೆ?

Leave a Reply

Back To Top