ಕವಿತೆ
ಅರುಣ್ ಕೊಪ್ಪ
ಅಂದು ಖುಷಿಯನ್ನೆಲ್ಲ ಉಸುರಿ
ಹಿಡಿದು ಮುಟ್ಟಿದ್ದಕ್ಕೂ
ತಂತ್ರಜ್ಞಾನದ ಗುಲಾಬು ಜಾಮೂನಿನ ಚಪಲದಲ್ಲಿದ್ದೆವು.
ಸ್ವಾರ್ಥದ ಕುದುರೆಯನ್ನೇ ಏರಿ ಸವಾರಿ
ಕಾಂಚಾಣದ ಕರವಸ್ತ್ರವನ್ನೇ ಬಳಸುತ್ತಿದ್ದೆವು.
ಪಾದ ಊರದ ನೆಲ ಮೌನದಲ್ಲಿ
ಕಾಲು ದಾರಿಗಳನ್ನು ನುಂಗಿ ಹಾಕಿತ್ತು
ಬೀದಿ ದೀಪದಲ್ಲೂ ಕಣ್ಣು ಕಾಣದ
ಮೋಜು ಮಸ್ತಿಯಲಿ ರಾತ್ರಿಯನ್ನು
ಹಗಲಿನಂತೆ ಅನುಭವಿಸುತ್ತಿದ್ದೆವು.
ಸಮಯವನ್ನು ಹರಾಜು ಮಾಡಿ
ಅಹಂ ಅಂಗಡಿಯಲ್ಲಿ ಮಾರಾಟ
ಮಾಡುತ್ತಿದೆವು.
ಹುಟ್ಟಿದ ಕಿಮ್ಮತ್ತಿಗೆ ಬೀದಿ ವಾಪಾರಿಗಳ
ಮಂತ ಉರಿಸುತ್ತಿದ್ದೆವು.
ನಾವೇ ಅನುಭೋಗಿಗಳು
ಎಂಬ ಸರ್ವ ಜಂಬದಲಿ
ವೃದ್ಧರನ್ನು ಹೇಸಿಗೆಯಾಗಿ ನೋಡುತ್ತಿದ್ದೆವು.
ವ್ಯಾಪಾರ ಜಗತ್ತಿನಲ್ಲಿ
ಸಂಬಂಧಕ್ಕೂ ಮಾಪು ಹಿಡಿದು
ತಾವೇ ಸರಿ ಎಂದೆನುತ
ಕಾಣುವ ಸೊಗದೊಳಗೆ
ಭೂತಗನ್ನಡಿಯ ಹಿಡಿದು
ಮೊಸರಲ್ಲಿ ಕಲ್ಲು ಹುಡುಕುತ್ತಿದ್ದೆವು
ಆದರೆ ಇಂದು ಎಲ್ಲ
ಕಲಿಗಾಲದ ಫಲ
***********************