ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು

ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು

ಗಾಂಧಿ ವಿಶೇಷ ಗಾಂಧಿ ಮತ್ತಷ್ಟು ಕಾಲ  ಇರಬೇಕಿತ್ತು ಬುದ್ಧ , ಬಸವ ಗಾಂಧಿ ಎಮದು ಮಹಾತ್ಮರ ಸಾಲಿಗೆ ಸೇರಿರುವ ನಮ್ಮ ನಾಯಕರು  ನಿತ್ಯವೂ ನೆನಪಾಗುತ್ತಾರೆಯೇ? ಖಂಡಿತಾ ಇಲ್ಲ! ಕೆಲವರಿಗೆ ಮಾತ್ರನೆನಪಾಗುತ್ತಾರೆ.ಆದರೆ ಎಲ್ಲರಿಗೂ ನೆನಪಾಗುವುದು ಅವರ ಜನ್ಮದಿನಗಳಂದು ಮಾತ್ರ.  ಇದೊಂದು ಅಪಸವ್ಯ ಕಾರಣ ನಮ್ಮಲ್ಲಿ ಮಹಾತ್ಮರ ಜಯಂತಿಗೆ ಸರ್ಕಾರಿ ರಜೆಗಳಿವೆ.  ಮಹಾತ್ಮರ ಸಾಲಿಗೆ ಸೇರಿರುವ ಗಾಂಧಿ ಸ್ವಾತಂತ್ರ್ಯ ಬಂದು ಕೆಲವೇ  ದಿನಗಳಲ್ಲಿ ಇಲ್ಲವಾದರು. ಛೇ! ಹೀಗಾಗಬಾರದಿತ್ತು ಇನ್ನೂ ಇರಬೇಕಿತ್ತು ಅಲ್ವೇ! ಜಗತ್ತಿನಲ್ಲಿ ಕಾಲಕಾಲಕ್ಕೆ ಜಗದ ಕೊಳೆ ತೆಗೆಯಲು ಮಹಾನ್ […]

ಗಾಂಧಿ ಬೀಜ

ಗಾಂಧಿ ವಿಶೇಷ ಗಾಂಧಿ ಬೀಜ ಸರ್ಕಲ್ ಗಳಲಿ ನಿಲ್ಲಿಸಿದ ಪಂಚಲೋಹದ ಪುತ್ಥಳಿ ಕಂಡು ಧೂಳು ಮೆತ್ತಿದ ಕೋಲು ಕನ್ನಡಕ ಊದಲು ಉಸಿರಿಲ್ಲದೆನಿತ್ರಾಣಗೊಂಡ ಮುದುಕ ಮಮ್ಮಲ ಮರುಗಿದ್ದಾನೆ ಶತಮಾನದ ಹಿಂದೆ ಉಪವಾಸ ಸತ್ಯಾಗ್ರಹ ಕೈಗೊಂಡರೂ ದೇಶವಾಸಿಗಳನೆತ್ತಿಗೆ ನೆರಳು ಹೊಟ್ಟಿಗೆ ಕೂಳು ಸಿಗದಿದ್ದಕ್ಕಾಗಿ ಲೊಚಗುಡುತ್ತಿದ್ದಾನೆ ಗಲ್ಲಿ ಗಲ್ಲಿಗಳಲ್ಲಿ ಮಚ್ಚು-ಲಾಂಗುಗಸ್ತು ತಿರುಗುವುದನ್ನು ಕಂಡು ಬೊಚ್ಚು ಬಾಯಿಯ ಮುದುಕ ಬೆಚ್ಚಿಬಿದ್ದಿದ್ದಾನೆ ಅರಮನೆ ಗುರುಮನೆ ಸೆರೆಮನೆಗಳಲೂಕಿಡಿನುಡಿ ಕೆನ್ನಾಲಿಗೆ ಚಾಚಿ ಝೇಂಕಾರ ವಾಡುತ್ತಿರುವು ದನು ಕಂಡು ದಿಗ್ಭ್ರಾಂತರಾಗಿದ್ದಾನೆ ಅಗಸಿ ಬಾಗಿಲಲ್ಲಿ ಜಾತಿಯತೆಯ ಹೆಬ್ಬಾವು ಬಾಯಿ ತೆರೆದಿರುವುದನ್ನು […]

ನಮ್ಮ ಭಾಪು

ಗಾಂಧಿ ವಿಶೇಷ ನಮ್ಮ ಭಾಪು ಮುಟ್ಟದವರ ಅಪ್ಪಿಮೇಲು ಕೀಳು ಎಂಬದನ್ನುಕಾಲಡಿಯಲಿ ಮೆಟ್ಟಿಮೌನದಲೇ ಸಂವಹನಮಾಡಿ ಮಹಾತ್ಮರಾದರು ಗಡಿಗಡಿಗಳ ದಾಟಿಮನಮನಗಳ ತಲುಪಿಸರಳತೆಯಲಿ ಬದುಕಿಅಹಿಂಸೆಯ ಹಾದಿಯಲ್ಲಿ ನಡೆದರುದೀನರಿಗೆ ದೀವಿಗೆಯಾದರು ಜನನಾಯಕರಾದರುಅಧಿಕಾರದ ಹತ್ತಿರ ಸುಳಿಯದೆಉಳಿದರು , ಉಚ್ಚ ಪಂಥದವಾರದರೂತಳಸಮುದಾಯದವರಿಗಾಗಿ ಬಾಳಿದರು ಹಗಲು ಇರುಳು ಸತ್ಯವನ್ನೇಪ್ರತಿಪಾದಿಸಿದರುತಮ್ಮ ಬದುಕನ್ನೆ ಒರೆಹಚ್ಚಿತಾವೇ ನೋಡಿದರುಮಾಡು ಇಲ್ಲವೇ ಮಡಿ ಎಂದರುಅನ್ಯರ ದೋಷಿಸುವ ಬದಲುನಿನ್ನ ನೀ ಅರಿ ಎಂದರು ಆದರ್ಶ ತತ್ವಗಳು ಪಠಣದಮಂತ್ರವಲ್ಲ ಎಂದುಜೀವಿಸಿ ತೋರಿಸಿದರುಬಹುತ್ವ ಭಾರತಕ್ಕೆ ಭಾತೃತ್ವದಮಡಿಲು ನೀಡಿದರು ಅನೇಕತೆಯಲ್ಲಿ ಏಕತೆಯಭಾರತವ ಕನಸ ಕಂಡರುನಮ್ಮ ರಾಷ್ಟ್ರ ಪಿತ ಎಂಬಹೆಮ್ಮೆ ಇವರುಇಂದಿಗೂ […]

ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ

ಗಾಂಧಿ ವಿಶೇಷ ಗಾಂಧೀಜಿಯವರ ‘ಹಿಂದ್ ಸ್ವರಾಜ್’ನ ಶತಮಾನೋತ್ತರ ಪ್ರಸ್ತುತತೆ “ಈ ಭೂಮಿ ಪ್ರತಿಯೊಬ್ಬ ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಂಪನ್ಮೂಲಗಳನ್ನು ಒದಗಿಸುತ್ತದೆ.  ಆದರೆ ಆತನ ಆಸೆಗಳನ್ನು ಪೂರೈಸುವಷ್ಟಲ್ಲ” –           ಎಂ.ಕೆ. ಗಾಂಧೀ ಗಾಂಧೀಜಿಯವರ ‘ಹಿಂದ್ ಸ್ವರಾಜ್’ಗೆ ನೂರಾ ಹನ್ನೊಂದು ವರ್ಷಗಳಾದರೂ ಅದರ ಪ್ರಸ್ತುತತೆ ಕುರಿತಂತೆ ಜಿಜ್ಞಾಸೆ ಇದೆ. ೧೯೦೮ ರಲ್ಲಿ ಬರೆದ “ಹಿಂದ್ ಸ್ವರಾಜ್” ಮೇಲ್ನೋಟಕ್ಕೆ ಸಣ್ಣ ಪುಸ್ತಕ. ಹಿಂದ್ ಸ್ವರಾಜ್ ಕೃತಿಯನ್ನು ಅಂದಿನ ಸಂದರ್ಭಕ್ಕನುಗುಣವಾಗಿ ವಿಶ್ಲೇಷಿಸಬೇಕೇ ಅಥವಾ ಇಂದಿನ ಸಂದರ್ಭದಲ್ಲೂ ಅದು ಸುಸಂಗತವೇ ಎಂಬ ಕುರಿತು ಜಿಜ್ಞಾಸೆ […]

ಮನೋಗತ

ಗಾಂಧಿ ವಿಶೇಷ ಮನೋಗತ ಗಾಂಧೀ,ನೀನು ಮಹಾತ್ಮನಂತೆ ನಿಜ –ವಿರಬಹುದು ನೂರಕ್ಕೆ ನೂರುಅದಕ್ಕೆಂದು ಎಲ್ಲರಂತೆ ನಾನೂಆಳೆತ್ತರದ ಕಲ್ಲು ಕಂಬದ ಮೇಲೆನಿನ್ನ ಪ್ರತಿಮೆಯನಿಟ್ಟು;‘ಗಾಂಧೀ ಚೌಕ’ ಎಂಬ ನಾಮಫಲಕ ಕಟ್ಟಿನಿನ್ನ ಜಯಂತಿ – ಪುಣ್ಯ ತಿಥಿಗಳಿಗೊಮ್ಮೆಆಡಂಬರ ಮಾಡಿ,ನಿನ್ನ ನೀತಿ – ತತ್ವಾದರ್ಶಗಳನ್ನುಪೊಳ್ಳು ಭರವಸೆ ಭಾಷಣದಲಿ ತುರುಕಿಆಚರಣೆಯನು ಗಾಳಿಯಲಿ ತೂರಿಚಪ್ಪಾಳೆ ಗಿಟ್ಟಿಸುವ ವ್ಯಕ್ತಿಯಾಗಲಾರೆ!ಯಾಕೆಂದರೆ,ಬೀದಿ ನಾಯಿ, ಬಿಡಾಡಿ ದನ, ಭಿಕಾರಿ ಮಂದಿಹಸಿವಿನಿಂದ ನರಳುತ್ತಾ…ನಿನ್ನ ಪ್ರತಿಮೆಯ ಕೆಳಗೇನೆರಳ ಬಯಸಿ ಅಂಗಾತ ಬಿದ್ದಿರುವಾಗನಾನ್ಹೇಗೆ ನಿನ್ನ ಹಾಡಿ ಹೊಗಳಿ ಷೋಕಿ ಮಾಡಲಿ? ******************************** ಬಾಲಕೃಷ್ಣ ದೇವನಮನೆ

ಕವಿತೆ ಬಾಪೂಜಿ ಮಮತೆಯ ಬಾಪೂಜಿಸತ್ಯಾಗ್ರಹಕೆ ನೀನಾದೆ ರಾಜಿ ಧೀಮಂತ ನೇತಾರಸತ್ಯ ಶಾಂತಿಯ ಮೂರ್ತಿವರ್ಣಾತೀತ ನಿಲುವುಸ್ವಾತಂತ್ರ್ಯದ ಉಷಾಕಿರಣ ದೇಶ ಪ್ರೇಮ ಹುರಿದುಂಬಿಸಿಬ್ರಿಟಿಷರಿಗಾದೆ ಕಂಟಕಬರೆದೆ ನವಯುಗದ ಭಾಷ್ಯನ್ಯಾಯ ಪರತೆಗೆ ಸ್ಪೂರ್ತಿ ದಾಸ್ಯದಿಂದ ಬಿಡುಗಡೆಗೆ ನಿನ್ನ ಕರೆತ್ಯಾಗ ಬಲಿದಾನಕೆ ವರದಾನಮೂಲಶಿಕ್ಷಣದ ಪರತೆಸ್ವಚ್ಛತಾ ಆಂದೋಲನಕೆ ರುವಾರಿ ಮೂಡಿಸಿದೆ ಸಂಚಲನಭಾರತಾಂಬೆಯ ಕುಡಿಯಲಿಬಡವನ ಅಂತಃಕರಣದ ಪ್ರತಿಇದೋ ಮಹಾತ್ಮ ನಿನಗೆ ಒಂದನ‌. ******************************

ಗಾಂಧಿ ವಿಶೇಷ ಮಹಾತ್ಮನಿಗೆರಡು ಕವಿತೆಗಳು ಕವಿತೆ-ಒಂದು ನಿನ್ನ ಜಯಂತಿಯ ದಿನನಿನ್ನ ನೆನೆಸುವುದು ಕಮ್ಮಿಯಾಗಿಚರ್ಚೆಗಳೇ ಜಾಸ್ತಿಯಾಗಿದ್ದರುಬೇಸರಿಸಬೇಡ ಮಹಾತ್ಮಾಸತ್ಯ ಅಹಿಂಸೆಗಳ ಜೊತೆಉಪವಾಸವೂ ಆಯುಧವಾಗಿಸಿದ್ದುಹೊರಗಿನವರಿಗೆ ಸ್ಫೂರ್ತಿಯಾದರೂನಮಗದು ಹಿಡಿಸಲಿಲ್ಲನಿನ್ನ ಹುಟ್ಟು ಹಬ್ಬದ ದಿನಕಕ್ಕಸುಗಳ ಉದ್ಘಾಟನೆಕಡ್ಡಾಯವಾಗಿ ಹೆಂಡ ನಿಷೇಧಮಕ್ಕಳ ಕಿವಿ ಹಿಂಡಿ ಆಚರಣೆ ಇಷ್ಟೇನಿನ್ನ ’ಅರ್ಧರಾತ್ರಿಯ ಹೆಣ್ಣೊಬ್ಬಳ’ ಹೇಳಿಕೆಯನ್ನುಪರೀಕ್ಷಿಸಲು ಹೋಗಿಬೀದಿ ಕಾಮುಕರ ತೆಕ್ಕೆಯಲ್ಲಿಅದೆಷ್ಟು ಹೆಣ್ಣುಗಳು ಸತ್ತಿರುವರೋಎಪ್ಪತ್ಮೂರು ವರ್ಷವಾಯಿತುಎರಡು ಹೊಸ ತಲೆಮಾರು ಬಂತುಪಡೆಪಾಟಲು ಇವರಿಗೇನು ಗೊತ್ತುವಿಪರೀತ ಸ್ವತಂತ್ರ ಇವರ ಸ್ವತ್ತುಈಗಲೂ ಸರಕಾರ ಕೊಡುವ ರಜೆಟಿವಿಗಳಲ್ಲಿ ಪತ್ರಿಕೆಗಳಲ್ಲಿ ಬರುವ ಸುದ್ದಿನಿನ್ನನ್ನು ನೆನಪಿಸುತ್ತವೇ ಆಗಲಿಸವಲೆನಿಸುತ್ತಿರುವ ನಿನ್ನ ಸೂಕ್ತಿಗಳಲ್ಲನಾವಿಷ್ಟೇ ಮಹನೀಯರನ್ನುಅತಿ […]

ಗಾಂಧಿ ವಿಶೇಷ ಆಶಯ ಪಾಪು ಅಲ್ಲಿದೆ ಬಾಪುವಿನ ಚಿತ್ರ ಅದರ ಕಣ್ಣ ಹೊಳಪು ನಿನ್ನದಾಗಲಿ ಅದರಲ್ಲಿದೆ ಶ್ವೇತ ಬಣ್ಣ, ಹತ್ತಿರ ಹೋಗು ನಿನಗೂ ಸಿಗಬಹುದು… ಆಪ್ತತೆಯ ಮೃದು ಹೃದಯ ಅದು ನಿನ್ನದೂ ಆಗಲಿ… ಒಂದಿಷ್ಟು ಹೊತ್ತು ಅಲ್ಲೇ ಕುಳಿತಿರು ಆಲೋಚಿಸು… ಬೆಳಕು ಆವರಿಸಿ ಕಣ್ಣು ತುಂಬೀತು ಬಂದೀತು ಹೊಸ ದೃಷ್ಟಿ ಅಳಿಯಬಹುದು ಪಾಪ ಸೃಷ್ಟಿ. ************************************ ಚಿತ್ರ-ಕವಿತೆ ತಮ್ಮಣ್ಣ ಬೀಗಾರ.

ಗಾಂಧಿ ವಿಶೇಷ ಬಾಪೂ ಸತ್ಯಸಂಧ ಸರಳ ಗಾಂಧಿ ಮೋಹನಸತ್ಯಾಗ್ರಹದಿಂದ ಜಯವ ತಂದವನಅತಿಮೋಸದಿಂದ ಕೊಂದರಲ್ಲ ಬಾಪೂ ಗುಂಡು ತುಂಡುಗಳ ಮುಟ್ಟದವನಗುಂಡಿನಿಂದಲೇ ನಿನ್ನ ದೇಹವನುತುಂಡುಮಾಡಿ ಕೊಂದರಲ್ಲ ಬಾಪೂ ಅಹಿಂಸೆಯೇ ಪರಮಧರ್ಮವೆಂದವನರಕ್ತಪಾತವಿಲ್ಲದೆ ಸ್ವಾತಂತ್ರ್ಯ ತಂದವನಹಿಂಸೆಯಿಂದಲೇ ಕೊಂದರಲ್ಲ ಬಾಪೂ ಸಾಟಿಯಿಲ್ಲದ ಪ್ರಾಮಾಣಿಕ ಅವಧೂತನನೋಟಿಗಳ ಮೇಲೆ ಹಾಕಿ ನಿನ್ನ ಚಿತ್ರಣಅಟ್ಟಹಾಸದ ಭ್ರಷ್ಟಾಚಾರಗೈದರಲ್ಲ ಬಾಪೂ ದೇವದೂತನಂತ ಶಾಂತ ಜೀವನದ ಸಂತನಜೀವಂತವಿರುವಾಗ ಕಡೆಗಣಿಸಿ ರಾಮಭಕ್ತನಸಾವಿನ ನಂತರ ನಿನ್ನ ಪೂಜಿಸಿದರಲ್ಲ ಬಾಪೂ ಸ್ವಚ್ಛತಾ ಅಭಿಯಾನದ ಸುಳ್ಳು ಹೆಸರಿನಲಿನಿಶ್ಚಲ ನಿರ್ಮಲ ನಿನ್ನ ಸಾತ್ವಿಕ ತತ್ವಗಳನೆಲ್ಲಕೊಚ್ಚೆಯಂತೆ ಗುಡಿಸಿ ಒಗೆದರಲ್ಲ ಬಾಪೂ ರಾಮರಾಜ್ಯದ […]

ಗಾಂಧಿ ವಿಶೇಷ ಗಾಂಧಿ ಸ್ಮರಣೆ ಕೆಟ್ಟದ್ದನ್ನು ………. ಆಡುವುದಿಲ್ಲ, ಕೇಳುವುದಿಲ್ಲ, ನೋಡುವುದಿಲ್ಲ ಎನ್ನುತ್ತಲೇ ‘ಮಾಡುತ್ತೇವೆ’ ಅನ್ನುತ್ತಾರಲ್ಲ                 ಮಹತ್ಮಾ ನೀ ಮೆಚ್ಚಿದ ಮೂರರ ಜೊತೆ                 ಕೈಕಾಲುಕಟ್ಟಿದ ಮಂಗನ ಗೊಂಬೆ ಬೇಕಲ್ಲ !                 ತಂದರೂ ನಡೆನುಡಿ ಹೊಂದಬೇಕಲ್ಲ ! ಜನನಿ ಪ್ರೇಮದ ಪುತ್ಥಳಿ ಮಡದಿ ತ್ಯಾಗದ ಮೂರುತಿ ಸರ್ವಜನಾಂಗ ಬಂದsÄ ಬಳಗ ಕನಸಿನ ರಾಮರಾಜ್ಯ ನನಸೇ ?                 ನೀನಿಂದು ಇಲ್ಲಿಗೆ ಬಂದುದಾದರೆ                 ಗುಂಡೇಟು ಇಲ್ಲದೇ ಗುಂಡಿಗೆ ಒಡೆವುದು                 ನಡುರಾತ್ರಿಯಲ್ಲಿ ಹೆಣ್ಣು ನಡೆವಂದು […]

Back To Top