ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು

ಗಾಂಧಿ ವಿಶೇಷ

ಗಾಂಧಿ ಮತ್ತಷ್ಟು ಕಾಲ  ಇರಬೇಕಿತ್ತು

ಬುದ್ಧ , ಬಸವ ಗಾಂಧಿ ಎಮದು ಮಹಾತ್ಮರ ಸಾಲಿಗೆ ಸೇರಿರುವ ನಮ್ಮ ನಾಯಕರು  ನಿತ್ಯವೂ ನೆನಪಾಗುತ್ತಾರೆಯೇ? ಖಂಡಿತಾ ಇಲ್ಲ! ಕೆಲವರಿಗೆ ಮಾತ್ರನೆನಪಾಗುತ್ತಾರೆ.ಆದರೆ ಎಲ್ಲರಿಗೂ ನೆನಪಾಗುವುದು ಅವರ ಜನ್ಮದಿನಗಳಂದು ಮಾತ್ರ.  ಇದೊಂದು ಅಪಸವ್ಯ ಕಾರಣ ನಮ್ಮಲ್ಲಿ ಮಹಾತ್ಮರ ಜಯಂತಿಗೆ ಸರ್ಕಾರಿ ರಜೆಗಳಿವೆ.  ಮಹಾತ್ಮರ ಸಾಲಿಗೆ ಸೇರಿರುವ ಗಾಂಧಿ ಸ್ವಾತಂತ್ರ್ಯ ಬಂದು ಕೆಲವೇ  ದಿನಗಳಲ್ಲಿ ಇಲ್ಲವಾದರು. ಛೇ! ಹೀಗಾಗಬಾರದಿತ್ತು ಇನ್ನೂ ಇರಬೇಕಿತ್ತು ಅಲ್ವೇ! ಜಗತ್ತಿನಲ್ಲಿ ಕಾಲಕಾಲಕ್ಕೆ ಜಗದ ಕೊಳೆ ತೆಗೆಯಲು ಮಹಾನ್ ಪುರುಷರ ಅವತಾರವಾಗಿದೆ. ಅವರು ಇರುವಷ್ಟು ಕಾಲ ಜಗತ್ತಿನಲ್ಲಿ ಕ್ರಾಂತಿಯೋಪಾದಿಯಲ್ಲಿ ಬದಲಾವಣೆಗಳಾಗುತ್ತಿರುತ್ತವೆ.  ಅವರು ಅಳಿದ ನಂತರ ಕ್ರಾಂತಿಯ ಗತಿ ಅಧೋಗತಿಯೇ ಸರಿ!

 ಗುಜರಾತ್ನ ಪೋರ್ಬಂದರ್ನಲ್ಲಿ ಅಕ್ಟೋಬರ್ 2,1869 ರಲ್ಲಿ ಜನಿಸಿದ  ಮೋಹನ್ ದಾಸ್ ಕರಮ್ಚಂಧ್ ಗಾಂಧಿ ಪೋರ್ಬಂದರಿನ ದಿವಾನರಾಗಿರುತ್ತಾರೆ.  ತಾಯಿ ಪುಥಲೀಬಾಯಿ ಧಾರ್ಮಿಕ ಚಿಂತನೆಯನ್ನು ಗಾಂಧಿಯಲ್ಲಿ ಮೂಡಿಸಿರುತ್ತಾರೆ.ನಮಗೆ ಸ್ವರಾಜ್ಯ, ಸ್ವಾತಂತ್ರ್ಯ ಬೇಕಾಗಿತ್ತು  ಹಿರಿಯರ ಪರಿಶ್ರಮದಿಂದ ಅದು ಸಿಕ್ಕಿದೆ..ಆಂಗ್ಲರ ಹೊಡೆತ, ಜೈಲು,ಕಿರುಕುಳಸಹಿಸಿದವರು ನಮಗೆ ಸ್ವಾತಂತ್ರ್ಯ ಎಂಬ ಸಿಹಿಯನ್ನು ಬಿಟ್ಟು ಹೋಗಿದ್ದಾರೆ.ಸ್ವಾತಂತ್ರ್ಯ ದೊರಕಿಸಿಕೊಳ್ಳುವುದು ಸುಲಭವಲ್ಲ. ಆ ಸ್ವಾತಂತ್ರ್ವನ್ನು ನಿಭಾಯಿಸುವುದು  ನಿಜವಾದ ಜವಾಬ್ದಾರಿ ಅಲ್ಲವೇ?

ಸ್ವಾತ್ಂತ್ರ್ಯ ಪೂರ್ವದಲ್ಲಿ ನಮ್ಮಲ್ಲಿದ್ದ ಒಗ್ಗಟ್ಟು ಇಂದು ನಮ್ಮಲ್ಲಿ ಇಲ್ಲವಾಗಿದೆ. ನಾವಿಕನಿಲ್ಲದ ಹಡಗು ಹೇಗೆ ಬಿರುಗಾಳಿಗೆ ತೊನೆದಾಡುತ್ತದೆಯೋ ಹಾಗೆ ದಕ್ಷ ನಾಯಕನಿಲ್ಲದ ದೇಶ ಕೂಡ ಹಾಗೆ ಹೊಯ್ದಾಡುತ್ತದೆ. ಅರಾಜಕತೆ, ಅನಿಶ್ಚಿತತೆ ಅಸಹಿಷ್ಣುತೆಗಳಂಥ ಬಿರುಗಾಳಿಗೆ ನಮ್ಮ ದೇಶ ಸಿಲುಕಿದೆ. ಹಾಗಾಗಿ ಯುವಜನತೆಗೆ ಮಾರ್ಗದರ್ಶನ  ಮಾಡುವಂಥ ನಾಯಕರ ಅವಶ್ಯಕತೆ ಇದೆ. ಅಹಿಂಸೆ, ಸತ್ಯಾಗ್ರಹ, ಸ್ವದೇಶಿ ಅಸಹಕಾರ, ಗ್ರಾಮ  ರಾಜ್ಯ, ಹರಿಜನೋದ್ಧಾರ ಇತ್ಯಾದಿ ಪದಗಳು ಗಾಂಧೀಯಿಂದಲೆ ಹುಟ್ಟಿಕೊಂಡವು. ಉದನ್ನೆ “ಗಾಂಧಿಗಿರಿ’’ ಎಂದು ಕರೆಯುವುದು. ಆದರೆ ಗಾಂಧಿ ಪದವೇ ವ್ಯಂಗ್ಯಕ್ಕೆ   ಪರ್ಯಾಯವಾಗಿ ಬಳಕೆಯಾಗುತ್ತಿದೆ.

 ಯಾವ  ಊರಿನಲ್ಲಿ ನೋಡಿದರೂ ಗಾಂದಿ ವೃತ್ತಗಳು ಇರುತ್ತವೆ. ಗಾಂಧಿ ಬಜಾರ್ ಹೆಸರಿನ ವಾಣಿಜ್ಯ ಕೇಂದ್ರಗಳನ್ನು ಕಾಣಬಹುದು.ಎಂ.ಜಿ ರಸ್ತೆಗಳನ್ನು ಕಾಣಬಹುದು. ಆದರೆ ಆ ರಸ್ತೆ ಗಾಂಧಿಯ ತತ್ವಗಲಿಗೆ ಬಹುಪಾಲು  ಇರುತ್ತದೆ. ಗಾಂಧಿನಗರ ಎಂಬ ಜನವಸತಿ ಪ್ರದೇಶಗಳನ್ನೂ ಕಾಣಬಹುದು. ಆದರೆ ಅವೆಲ್ಲ ಹೆಸರಿಗಷ್ಟೇ. ಅವರ ಆದರ್ಶಗಳನ್ನು ಸ್ವೀಕರಿಸುವುದಿರಲಿ, ಅಲ್ಲ್ಲಲ್ಲಿ ಹಾಕಿದ ಅವರ ಫೊಟೋಗಳಿಗೂ ಅವಮಾನ ಮಾಡುತ್ತೇವೆ. ಯಾವಾಗಲೋ ಹಾಕಿದ ಹೂವಿನ ಹಾರ ಬಾಡಿ ಹೂವಿನ ಎಸಳುಗಳೆಲ್ಲಾ ಉದುರಿ ಕೇವಲ ದಾರ ಮಾತ್ರ ನೇತಾಡುತ್ತಿರುತ್ತದೆ.  ಅದನ್ನೇ ನೋಡಿಕೊಂಡು ನಾವುಗಳು  ಓಡಾಡುವುದು. ಇನ್ನು ಕೆಲವು ತಿಳಿಗೇಡಿಗಳು ಮೂಲ ಫೊಟೊವನ್ನೇ ವಿಕಾರ ಮಾಡಿರುತ್ತಾರೆ.

 ದೇಶದ ಬಗ್ಗೆ ಗಾಂಧಿಗಿದ್ದ ಕನಸು, ನಂಬಿಕೆ ಭವಿಷ್ಯದ ಬಾಳ್ನೋಟ ನಮ್ಮಲ್ಲಿ   ಈಗ ಇಲ್ಲ. ಮೃಗಿಯ ನಡೆವಳಿಕೆಗಳೇ ವೈಭವಿಕರಣಗೊಂಡಿವೆ. ಉಪಕಾರ ಮಾಡುವವರಿಗೆ ಉಪದ್ರವ  ಕೊಡುವ ಜನ ನಾವು. ಗಾಂಧಿಯ ಕನಸುಗಳು  ಸಾಕಾರಗೊಳ್ಳಬೇಕಾದರೆ ಅವರ ತತ್ವಗಳೇ ಕಾನೂನುಗಳಾಗಬೇಕಿದೆ. ಗಾಂಧಿಗೆ  ನಾವು ಕೊಟ್ಟಿರುವ ಗೌರವೆಂದರೆ  ಬರಿ ಹೆಸರಿನ ಕಡೆಗೆ”ಜಿ”(ಗಾಂಧೀಜಿ) ಎಂಬ ಗೌರವ ಸಂಭೋಧನೆಯಷ್ಟೇ, ನೋಟುಗಳಲ್ಲಿ ಅವರ ನಗುವಿನ ಚಿತ್ರವನ್ನು ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ಸಂಖೇತವಾಗಿ ಅವರು ಧರಿಸುತ್ತಿದಸ್ದ ಉರುಟು ಕನ್ನಡಕದ ಮಾದರಿಯನ್ನು ಅಚ್ಚು ಹಾಕಿದ್ದೇವೆ ಅಷ್ಟೇ.

  ರಾಷ್ಟ್ರೀಯ ನಾಯಕರ ಪಟ್ಟಿಯನ್ನು ಮಕ್ಕಳಿಗೆ ಹೇಳಿಕೊಡುವಾಗ ಗಾಂಧೀಜಿ”ಫಾದರ್ ಆಫ್ ನೇಷನ್” ಎಮದು ಹೇಳಿಕೊಟ್ಟು, ಫೊಟೊ ತರಿಸಿ ತೋರಿಸಿ ಸುಮ್ಮನಾಗುತ್ತೇವೆ.. ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ದಲಿ ಗಾಂಧಿವೇಷಧಾರಿಗಳು ಬಣ್ನ ಹಾಕಿಕೊಂಡು ಮೆರವಣಭಿಗೆಯಲ್ಲಿ ಮುನ್ನಡೆಯುತ್ತಾರೆ. ಗಾಂಧಿ ತತ್ವ, GANDHISM ಎಂದು ದೊಡ್ಡದಾಗಿ ಕೊಚ್ಚಿಕೊಳ್ಲುವ ನಮಗೆ ಇಷ್ಟು ಸಾಕೇ/

 ನಮ್ಮ ಸರ್ಕಾರಿ ಗಾಂಧಿ ಜಯಂತಿಯಂದು ಹಿಂಸಾಚಾರ ಬೇಡ ಎಂದು ಮಾಂಸ, ಮದ್ಯಮಾರಾಟ ನಿಷೇಧ  ಮಾಡಿ ಫರ್ಮಾನು ಹೊರಡಿಸುತ್ತದೆ. ಆ ಒಂದು ದಿನಕ್ಕೆ ಮಾತ್ರ  ಈ ಕಾನೂನು ಸಾಕೆ? ಗಾಂಧೀಜಿಯ ಆಶ್ರಮದಲ್ಲಿದ್ದ ಮೂರು ಕೋತಿಗಳ ಕತೆ ಗೊತ್ತಿರುವಂಥದ್ದೆ.  ಆ ಮೂರೂ ಗೊಂಬೆಗಳನ್ನು ತಂದು ಶೋಕೇಸ್ನಲ್ಲಿ ಇಟ್ಟುಕೊಂಡು ಧೂಳೂ ತೆಗೆಯುತ್ತೇವೆಯೇ ವಿನಃ ಗೊಂಬೆಗಳು ಬಿಂಬಿಸುವ ಆಶಯಗಳನ್ನು ಖಂಡಿತಾ ಪಾಲನೆ ಮಾಡುವುದಿಲ್ಲ. “ಹೇರಾಮ್” ಎಂಬ ಶಬ್ದ “ವೈಷ್ಣವೋ ಜನತೊ”ಗೀ ತೆ ಕೇವಲ ಆಚರಣೆಯ ಒಂದು ಭಾಗವೇ. ಗಾಂಧಿ ಜಯಂತಿಯಂದು  ಸರ್ವಧರ್ಮ ಸಮ್ಮೇಳನ ಮಾಡುತ್ತೇವೆ. ಅಕ್ಷರಶಃ ಆಚರಣೆಯಲ್ಲಿ ಯವ್ಯಾವುದೂ ಇರುವುದಿಲ್ಲ.

 ಗಾಂದೀಜಿಯನ್ನು ಸಬರಮತಿ ಆಶ್ರಮದಲ್ಲಿ ಯಾರೋ ಭೇಟಿಯಾಗಬೇಕೆಂದು ಬೆಳಗ್ಗೆ 5.30ಕ್ಕೆ ಸಮಯ ನಿಗದಿ ಮಾಡಿಕೊಂಡು ಅದೇ ಸಮಯಕ್ಕೆ ಬರುತ್ತಾರೆ. ಅಲ್ಲೆ ಕಸ ತೆಗೆಯುತ್ತಿದ್ದವರನ್ನು ಗಾಂಧಿ ಯಾವಾಗ ಬರುತ್ತಾರೆ ಎಂದು ಕೇಳುತ್ತಾನೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಬರುತ್ತಾರೆ ಎಂಬ ಉತ್ತರ ಸಿಗುತ್ತದೆ.  ಭೇಟಿಗೆಂದು ತೆರಳಿದ ವ್ಯಕ್ತಿಗೆ ಇಷ್ಟು ಹೊತ್ತಾದರೂ ಗಾಂಧಿ ಬರಲಿಲ್ಲವಲ್ಲ ಹೇಳೋಕೆ ಅಷ್ಟು ದೊಡ್ಡ ವ್ಯಕ್ತಿ   ಹೀಗೆ  ತಡಮಾಡುವುದೇ ಎಂದು ತಿಳಿಯುತ್ತಿರಬೇಕಾದರೆ ಎಲ್ಲಾ ಕೆಲಸ ಮುಗಿಸಿ ಬಂದ ಗಾಂಧಿ  ನಾನೆ ಏನಾಗಬೇಕೆಂದು ಕೇಳುತ್ತಾರೆ. ಆಗ ಸಮಯ ನಿಗದಿ ಮಾಡಿಕೊಂಡು ಹೋಗಿದ್ದ ವ್ಯಕ್ತಿಗೆ ದಿಗ್ಭ್ರಮೆಯಾಗುತ್ತದೆ. ಇಂತಹ ಸರಳತೆ ಮಾಹಾತ್ಮರಿಗೆ ಮಾತ್ರ ಬರುತ್ತದೆ.  ಇಂತಹ ಸರಳತೆ ಮಹಾತ್ಮರಿಗೆಡ ಮಾತ್ರ ಬರುತ್ತದೆ.  ಹಿಂಬಾಲಕರೊಂದಿಗೆ  ಮುಂಚೂಣಿಯಲ್ಲಿ ಹೆಜ್ಜೆ ಹಾಕುವ ಗಾಂಧಿಯ ಚಿತ್ರ ನಮ್ಮನ್ನು ಬಹುವಾಗಿ ಕಾಡುತ್ತದೆ. ಸಭೆ ಸಮಾರಂಭಗಳಲ್ಲಿ ಆಯೋಜಕರು ಅತಿಥಿಗಳು” ಸತ್ಯಾನ್ವೇಷಣೆಯ ಹೆಸರಿನ ಪುಸ್ತಕಗಳನ್ನು ಕಾಣಿಕೆಯಾಗಿ ಕೊಡುತ್ತಾರೆ ಅಷ್ಟಕ್ಕೆ ಅದು ಸೀಮಿತವಾಗಬಾರದು. ಗಾಂಧಿ ಎಂಬುದೇ ತತ್ವವಾದರೆ, ಒಂದು ಧರ್ಮವಾದರೆ ಅವರ ಪರಿಶ್ರಮಕ್ಕೆ  ನ್ಯಾಯ ಒದಗಿಸಿದಂತೆ ಎಂಬ ಅನಿಸಿಕೆಯನ್ನು ಕಂಠೋಷ್ಟಿತವಾಗಿ ವ್ಯಕ್ತಪಡಿಸಬಹುದು.

******************************

  ಸುಮಾವೀಣಾ

2 thoughts on “ಗಾಂಧಿ ಮತ್ತಷ್ಟು ಕಾಲ ಇರಬೇಕಿತ್ತು

  1. ಸೊಗಸಾಗಿ ಮೂಡಿಬಂದಿದೆ ಮೇಡಂ
    ಅಭಿನಂದನೆಗಳು ತಮಗೆ

Leave a Reply

Back To Top