ಕಾವ್ಯಯಾನ
ಗೆಳೆಯನೊಬ್ಬನ ಸ್ವಗತ ನಟರಾಜು ಎಸ್. ಎಂ. ಊರ ಮಾರಿ ಗುಡಿಯ ಮುಂದೆಆಡುತ್ತಿದ್ದ ಗೆಳೆಯರ ಜೊತೆಗೂಡಿಆಟದ ಮಧ್ಯೆ ಟೈಂ ಪಾಸ್ ಎಂದಾಗಬಸವೇಶ್ವರ ಗುಡಿಯ ಜಗುಲಿಯ ಮೇಲೆಗೆಳೆಯರ ಮಧ್ಯೆ ಕಾಲು ಇಳಿಬಿಟ್ಟು ಕುಳಿತ್ತಿದ್ದ ತಮ್ಮ ಹುಡುಗರ ಜೊತೆ ಕುಳಿತಆ ಹುಡುಗನ ನೋಡಿ‘ಯಾರ್ ಮಗಾನ್ಲಾ ನೀನುನೋಡ್ದಾ ನಿನ್ ದೈರ್ಯಾನಾ?’ಗದರಿದ್ದರು ಅವನ ಗೆಳೆಯನೊಬ್ಬನ ತಾಯಿತನ್ನ ಗೆಳೆಯರ ಜೊತೆ ಆಟವಾಡೋದು ತಪ್ಪಾ?ಅವರ ಪಕ್ಕ ಕುಳಿತುಕೊಳ್ಳೋದು ತಪ್ಪಾ?ಎಂದೆಣಿಸುತಾ ಎದ್ದು ಮೌನವಾಗಿಆ ಹುಡುಗ ಮನೆ ಕಡೆಗೆ ನಡೆದಿದ್ದ ಸ್ಕೂಲಿನಲಿ ಮಧ್ಯಾಹ್ನದ ಬಿಸಿಯೂಟಕೆಗೆಳೆಯರೊಡಗೂಡಿ ಮಿಲ್ಲಿನಲಿಗೋಧಿ ನುಚ್ಚು ಮಾಡಿಸಿದಗೋಧಿ ನುಚ್ಚಿನ […]
ಆಗಂತುಕ ಮಳೆ ಬಾಲಕೃಷ್ಣ ದೇವನಮನೆ ಧೋ… ಧೋ… ಸುರಿವಇಂಥದೇ ಧಾರಾಕಾರ ಮಳೆ ಬಂದಾಗಹೃದಯದಲಿ ನೋವು ಹೆಪ್ಪುಗಟ್ಟಿಹನಿಯುವ ಕಂಬನಿ ಮಳೆಯ ಜೊತೆ ತೋಯ್ದು ಮರೆಯಾಗುತ್ತದೆ. ಕಳೆದ ಸಲಮಳೆ ಸುರಿದು ನದಿ ಉಕ್ಕಿ,ನುಗ್ಗಿದ ಪ್ರವಾಹ ಮನೆ ಹೊಸಿಲು ದಾಟಿಹಿಂಬಾಗಿಲಲಿ ಹೊರಟಾಗಮನೆಯೊಳಗಿನ ದವಸ-ಧಾನ್ಯ,ದುಡ್ಡು-ಬಂಗಾರ, ಪಾತ್ರೆ-ಪಗಡೆ,ಅರಿವೆಯಷ್ಟೇ ಅಲ್ಲಕೊಟ್ಟಿಗೆಯ ದನಕರುಅಂಗಳದಲ್ಲಿ ಮಲಗುತ್ತಿದ್ದ ನಾಯಿಮನೆಯೊಳಗೆ ಆಡುತ್ತಿದ್ದ ಬೆಕ್ಕುಮುಂಜಾವದಲಿ ಎಬ್ಬಿಸುತ್ತಿದ್ದ ಕೋಳಿಆಸೆ ಕನಸುಗಳೆಲ್ಲವೂರಾತ್ರೋರಾತ್ರಿತೇಲಿ ಹೋಗುವಾಗ ಉಳಿದದ್ದುಗಂಜಿಕೇಂದ್ರದಲ್ಲಿದ್ದ ಜೀವ ಮಾತ್ರ! ಮೇಲ್ಛಾವಣಿ ಕುಸಿದುಅಡ್ಡಡ್ಡ ಮಲಗಿದ ಗೋಡೆಗಳ ನಡುವೆಕ್ಷಣಮಾತ್ರದಲಿ ಕೊಚ್ಚಿಹೋದ ಕನಸುವಿಲವಲ ಒದ್ದಾಡುವಾಗಭಾವನೆಗಳು ಮಡುವುಗಟ್ಟಿಉಮ್ಮಳಿಸುವ ದುಃಖಮುರಿದ ಬದುಕುಕಂಬನಿಯಾಗಿ ಮಳೆಯೊಂದಿಗೆ ಹರಿದದ್ದುಯಾರಿಗೂ […]
ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ […]
ಕನಸು ಪ್ರೊ.ಸುಧಾ ಹುಚ್ಚಣ್ಣವರ ಕಾಣುವ ಕನಸುಗಳಿಗೆಲ್ಲಾದಾರಿ ತೋರಿದವರು ಯಾರೋ!ಬಂದೆ ಬಿಡುವವುನಮ್ಮ ಭಾವನೆಗಳ ಅರಸಿ. ಇತಿಮಿತಿಗಳ ಅರಿವಿಲ್ಲ ಸಾಗಿದಷ್ಟು ದೂರಬಹುದೂರ ಚಲಿಸುವವು ಪ್ರಯಾಸವಿಲ್ಲದ….ಪಯಣಿಗನಂತೆ. ಹೊತ್ತು ಸಾಗುವವು ಸುಂದರ ಅತಿ ಸುಂದರ…ಕಲ್ಪನೆಗಳ ಹೂರಣವ ಪರಿಮಿತಿಯೆ ಇರದ ಬಜಾರಿನಲ್ಲಿ . ಬಯಕೆಗಳ ಭಾರವ ಹಗುರಗೊಳಿಸಲೆ೦ದೆ….. ಕಲ್ಪನಾ ಲೋಕದಲ್ಲಿ ವಿಹರಿಸುತಿಹವು ಬಂಧನದಿ ಹೊರಬಂದ ಪಕ್ಷಿಗಳಂತೆ. ಕೆಲವೊಂದು ವಾಸ್ತವಕ್ಕೆ ಹತ್ತಿರವಾಗುತ್ತಾ ಮತ್ತೆ ಕೆಲವು ಭ್ರಮೆಯಲ್ಲಿಯೇ ಉಳಿದು ಭಾವನೆಗಳ ಅರಳಿಸಿ.. ಕೆರಳಿಸಿ.. ಕನಸಿನ ಸಾಮ್ರಾಜ್ಯಕ್ಕೆ ಅಧಿಪತಿಯಾಗಿಹವು. ********
ವಿರಹಾಂತರಂಗ ಸಂತೋಷಕುಮಾರ ಅತ್ತಿವೇರಿ ನಿನ್ನ ಕಾಣದೆ ಮಾತನಾಡದೆಕ್ಷಣವೇ ಯುಗವು ಅನುದಿನಕಡಲೇ ಇರದ ಬರಿಯ ಮರಳುಬೆಂಗಾಡು ಬದುಕು ಪ್ರತಿಕ್ಷಣ ಆಲಿಸುವ ದನಿಗಳಲೆಲ್ಲ ಬರಿನಿನದೆ ಸೊಲ್ಲಿನ ಹೊಳಲಿದೆಎಲ್ಲ ಲೋಹದ ಝಣಕೃತಿಯಲುನಿನದೆ ನೂಪುರ ದನಿಯಿದೆ ಕೊರಳ ಕಾರ್ಮೋಡ ಬಿಗಿದಿದೆಹೊತ್ತು ಕಂಬನಿಯಾಗರನಿನ್ನವಜ್ಞೆಯ ತಂಪು ತಾಗಿಹನಿಗೂಡಿತೆಂಬುದೆ ಬೇಸರ ಸುರಿದ ಮೇಲಿನ್ನೇನಿದೆಖಾಲಿ ಆಗಸ ಈ ಮನನಿನ್ನ ಪ್ರೀತಿಯ ಮಳೆಯಬಿಲ್ಲಿಗೆಕಾದು ಗುನುಗಿದೆ ತಾನನ ***********
ಒಳ ಮನಸು ವಿಸ್ತರಿಸಿದ ಕತೆಗಾರ್ತಿ
ಒಳ ಮನಸು ವಿಸ್ತರಿಸಿದ ಕತೆಗಾರ್ತಿ “ಬರವಣಿಗೆ ಮೂಲಕ ಅಸಹನೀಯ ಮೌನವೊಂದನ್ನು ಮುರಿಯುತ್ತಿದ್ದೇನೆ ಅನಿಸುತ್ತಿದೆ’ ಸುನಂದಾ ಕಡಮೆ ಕತೆಗಾರ್ತಿ ಸುನಂದಾ ಕಡಮೆ 1967 ರಲ್ಲಿ ಉತ್ತರಕನ್ನಡದ ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ಜನಿಸಿದ್ದು. ಪಕ್ಕದ ಭಾವಿಕೇರಿಯಲ್ಲಿ ಪ್ರೌಢ ಶಿಕ್ಷಣ, ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿಯ ನಂತರ ಕರ್ನಾಟಕ ವಿ.ವಿಯಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಕವಿ ಪ್ರಕಾಶ ಕಡಮೆಯವರೊಂದಿಗೆ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಕಾವ್ಯಾ ಮತ್ತು ನವ್ಯಾ ಎಂಬಿಬ್ಬರು ಮಕ್ಕಳು. 1997ರಲ್ಲಿ ಬರವಣಿಗೆ ಆರಂಭಿಸಿದರು. ಕನ್ನಡ ಸಾಹಿತ್ಯದಲ್ಲಿ ತಮ್ಮದೇ […]
ದಿಕ್ಸೂಚಿ
ಯೋಜನೆಯ ಮೇಲೆ ದೃಷ್ಟಿ ಇರಿಸಿ ದೊಡ್ಡ ಗೆಲುವು ಸಾಧಿಸಿ ಜಯಶ್ರೀ ಜೆ.ಅಬ್ಬಿಗೇರಿ ಇದೀಗ ನಾ ಹೇಳ ಹೊರಟಿರುವುದು ಜಗತ್ಪ್ರಸಿದ್ಧ ತೇನ್ ಸಿಂಗನ ಕಥೆ ಆಗ ಆತ ಇನ್ನೂ ಚಿಕ್ಕವ. ಮನೆಯಂಗಳದಲ್ಲಿ ಕುಳಿತು ಸದಾ ಎವರೆಸ್ಟನ್ನೇ ದಿಟ್ಟಿಸುತ್ತಿದ್ದ. ಪುಟ್ಟ ಬಾಲಕನನ್ನು ಎವರೆಸ್ಟ್ ಪ್ರತಿದಿನವೂ ಪುಳಕಗೊಳಿಸುತ್ತಿತ್ತು. ಆತನನ್ನು ಕಂಡ ತಾಯಿ’ಅದೇಕೋ ದಿನವೂ ಎವರೆಷ್ಟನ್ನೇ ದಿಟ್ಟಿಸಿ ನೋಡುತ್ತಿಯಾ?’ ಎಂದು ಕೇಳಿದಳು.’ಅಮ್ಮಾ ಈ ನನ್ನ ಪುಟ್ಟ ಕಾಲುಗಳಿಂದ ಆ ದೊಡ್ಡ ಹಿಮಪರ್ವತದ ತುದಿಯನ್ನು ಮುಟ್ಟಬಲ್ಲೆನೆ? ಎಂದು ಯೋಚಿಸುತ್ತಿದ್ದೇನೆ.’ ಅದಕ್ಕೆ ತಾಯಿ ‘ಮಗೂ,ಅದು ಯಾವ […]
ಹರಟೆ
ಮರೆವು ಅನುಪಮಾ ರಾಘವೇಂದ್ರ ಅರಿತೋ…ಮರೆತೋ…ಒಂದೊಮ್ಮೆ ದಾರಿ ತಪ್ಪಿದರೂ ಕೂಡ ಮತ್ತೆ ಎಚ್ಚರಗೊಂಡು ಮೈಕೊಡವಿ ನಿಲ್ಲಬೇಕು. ಆಗ ಮರೆವು ಮರೆಯಾಗಿ ಅರಿವಿನ ಜ್ಯೋತಿ ಬೆಳಗುತ್ತದೆ ಎಂದಿದ್ದಾರೆ ವಿದ್ವಾಂಸರು. ಮರೆವು ದೇವರು ಕೊಟ್ಟ ವರ. ಆದರೆ ಯಾವುದನ್ನು ಮರೆಯಬೇಕು, ಯಾವುದನ್ನು ಮರೆಯಬಾರದು ಎಂಬ ಅರಿವು ನಮ್ಮಲ್ಲಿರಬೇಕು. ಅದೇನೋ ಸರಿ…….. ಆದರೆ ಮೊನ್ನೆ ನಾನು ಅಡಿಗೆ ಮಾಡುತ್ತಿರುವಾಗ ಬೇರೇನೋ ನೆನಪಾಗಿ ಸ್ಟೋರ್ ರೂಮಿನ ಒಳ ಹೊಕ್ಕಾಗ ಯಾವ ಕಾರಣಕ್ಕೆ ಅಲ್ಲಿಗೆ ಹೋದೆ ಎಂಬುದೇ ಮರೆತು ಹೋಗಿತ್ತು. ಮತ್ತೆ ಮೊದಲಿದ್ದಲ್ಲಿಗೇ […]
ಕಾವ್ಯಯಾನ
ಅವಳು ನೆನಪಾದಾಗ ಎಂ.ಜಿ.ತಿಲೋತ್ತಮೆ ಹೀಗೆ ಕಾಡುವುದಾದರೆ ನಿತ್ಯನಿನ್ನ ಸ್ವರಗಳು ಮೊದಲುನನ್ನ ಎದೆಗೆ ಇಳಿದ ದಿನದ ಕ್ಷಣದಾಚೆಪರಿಪೂರ್ಣವಾಗಿದ್ದುಪರಿತಪಿಸುತ್ತಿದ್ದ ಸಂಗಾತಿ ನಿನ್ನ ಬಿಂಬ ಬಿಗಿದ ತಂತಿಗೆ ಬೆರಳುಗಮನಿಸದೆ ತಗುಲಿ ನುಡಿಸಿದ ರಾಗಕ್ಕೆಯಾವ ಭಾಯಾನದ ಹೋಲಿಕೆ?ಸಾಟಿಯಿಲ್ಲದ ಹಂಬಲವು ಹೆಮ್ಮರವಾಗಿನುಗ್ಗುವ ಪರಿಗೆ ಕೊನೆಯೆಲ್ಲಿ?ಅಧೃಶ್ಯವಾದ ನಿನ್ನ ಚಿತ್ತಾರಹುಡುಕುತ್ತಾ ಹೊರಟ ನಯನದ ಹಟಕ್ಕೆಕಡಿವಾಣವೇ ಬೇಡ ಮರಳೇ ಸೂಸಿ ಹಾಸಿರಲಿವರುಣನು ನಿನ್ನ ಹೆಜ್ಜೆಗೆ ಸುತ್ತುಗಟ್ಟಲಿಪಾದ ಮೂಡಿದಲೆಲ್ಲಾ ನಾ ಓಡಿ ಬರುವೆನಿನ್ನಲಿ ಸೆರೆಯಾಗುವೆ ಎಂದರೆಹುಸಿಯಾಗಿ ನಗುವುದು ಹೂ ಗಿಡ ಬಳ್ಳಿ ಮುಖಾಮುಖಿಯಾದರೆ ನಿನ್ನ ನೆರಳು ನಾನುನನ್ನ ಕಣ್ಣೊಳಗೆ ನಿನ್ನ […]
ಕಾವ್ಯಯಾನ
ಮಳೆಯ ಹಾಡು ಚೈತ್ರಾ ಶಿವಯೋಗಿಮಠ ನೆಲದ ಮೇಲೆ ಪುಟಿದುಚಿಮ್ಮುವ ಸ್ಫಟಿಕದ ಮಣಿಗಳೋ?ಬಾನು ಉಲಿಯುವ ಪ್ರೀತಿಪ್ರೇಮದ ದನಿಗಳೋ! ಹನಿ ಹನಿಯ ಪೋಣಿಸಿಹೆಣೆದ ರತ್ನ ಖಚಿತ ಹಾರವೋ?ಭುವಿಯ ಒಡಲ ಹಸಿವತಣಿಸುವ ಆಹಾರವೋ? ಮೇಘ ಮಾಲೆಯ ಒಡಲತುಂಬಿ ತುಳುಕುವ ಜೀವಕಳೆಯೋ?ಭೂರಮೆಯ ಗರ್ಭಕ್ಕಿಳಿದು ಜೀವಚಿಗುರಿಸೊ ಜೀವನ ಸೆಲೆಯೋ? ಕವಿಯ ಮನದಿ ಭಾವಸ್ಫುರಿಸುವ ದಿವ್ಯ ಸಿಂಚನವೋ?ಜೀವ-ಭಾವಗಳೆರಡು ತಣಿಸಲುಮಳೆಯ ಹಾಡಿನ ರಿಂಗಣವು ******